ಪಿಎಫ್‍ಐನಿಂದ ಈದ್‍ಮಿಲನ್ ಕ್ರೀಡೆ
ಚಾಮರಾಜನಗರ

ಪಿಎಫ್‍ಐನಿಂದ ಈದ್‍ಮಿಲನ್ ಕ್ರೀಡೆ

July 7, 2018

ಚಾಮರಾಜನಗರ: ರಂಜಾನ್ ಹಬ್ಬದ ಪ್ರಯುಕ್ತ ನಗರದ ಗಾಳೀಪುರದಲ್ಲಿ ಪಾಪ್ಯು ಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ಈದ್ ಮಿಲನ್ ಕ್ರೀಡೆ ನಡೆಯಿತು.

ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರ ವೇರಿಸಿದ ಸಂಘಟನೆಯ ಜಿಲ್ಲಾಧ್ಯಕ್ಷ ಅಜೀಂ ಷರೀಫ್ ಮಾತನಾಡಿ, ರಂಜಾನ್ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವೂ ಸಂಘಟನೆಯ ವತಿಯಿಂದ ಈದ್ ಮಿಲನ್ ಕ್ರೀಡಾ ಕಾರ್ಯಕ್ರಮವನ್ನು ಅಯೋಜನೆ ಮಾಡಲಾಗುತ್ತದೆ. ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ, ಮಾನಸಿಕ ಸದೃಢರಾಗು ವಂತೆ ಮಾಡಲಾಗುವುದು. ಕ್ರೀಡೆಯಲ್ಲಿ ವಿದ್ಯಾ ರ್ಥಿಗಳು, ಸಂಘಟನೆಯ ಕಾರ್ಯಕರ್ತರು ಭಾಗವಹಿಸುತ್ತಾರೆ. ಕ್ರೀಡೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶುಹೇಬ್‍ಖಾನ್ ಮಾತನಾಡಿ, ಸಂಘಟನೆಯ ಎಲ್ಲ ಕಾರ್ಯಕ ರ್ತರು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿ ರುವ ವ್ಯಾಯಾಮ ಮಾಡಬೇಕು. ದುಶ್ಚಟ ಗಳಿಂದ ದೂರವಿದ್ದು, ಸಮಾಜದಲ್ಲಿ ನಡೆಯುವ ಹಲ್ಲೆ, ದೌರ್ಜನ್ಯಗಳನ್ನು ತಡೆಯುವಲ್ಲಿ ಸದಾ ಮಂಚೂಣೆಯಲ್ಲಿರಬೇಕು ಎಂದರು.ಕಾರ್ಯಕ್ರಮದಲ್ಲಿ ಸಂಘಟನೆ ಜಿಲ್ಲಾ ಸಮಿತಿ ಸದಸ್ಯರಾದ ಸೈಫುಲ್ಲಾ, ಕಪಿಲ್‍ಅಹಮ್ಮದ್, ಅಜಾಮ್‍ಪಾಷ, ಜುಬೇರ್‍ವುಲ್ಲಾ ಹಾಗೂ ಕಾರ್ಯಕರ್ತರು ಇದ್ದರು.

Translate »