Tag: Farmer loan waiver

ಯಾವುದೇ ಷರತ್ತು ವಿಧಿಸದೇ ಎಲ್ಲಾ ರೈತರ ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ
ಮೈಸೂರು

ಯಾವುದೇ ಷರತ್ತು ವಿಧಿಸದೇ ಎಲ್ಲಾ ರೈತರ ಸಾಲ ಮನ್ನಾಕ್ಕೆ ರೈತ ಸಂಘಟನೆಗಳ ಆಗ್ರಹ

June 7, 2018

ಮೈಸೂರು:  ರಾಜ್ಯ ಸರ್ಕಾರ ರೈತರ ಬೆಳೆ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದು, ಯಾವುದೇ ಷರತ್ತುಗಳನ್ನೂ ವಿಧಿಸದೇ ಈ ಹಿಂದೆ ಘೋಷಣೆ ಮಾಡಿದಂತೆ 53 ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಬೇಕೆಂದು ಕೋರಲು ಜೂ.8ರಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘ ನಿರ್ಧರಿಸಿವೆ. ಮೈಸೂರಿನ ಗನ್‍ಹೌಸ್ ಎದುರಿನ ಕುವೆಂಪು ಉದ್ಯಾನವನದಲ್ಲಿ ಸದರಿ ಸಂಘಟನೆಗಳ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ…

ರೈತರ ಎಲ್ಲಾ ಸಾಲ ಮನ್ನಾಕ್ಕೆ ಕಬ್ಬು ಬೆಳೆಗಾರರ ಪ್ರತಿನಿಧಿ ಆಗ್ರಹ
ಮೈಸೂರು

ರೈತರ ಎಲ್ಲಾ ಸಾಲ ಮನ್ನಾಕ್ಕೆ ಕಬ್ಬು ಬೆಳೆಗಾರರ ಪ್ರತಿನಿಧಿ ಆಗ್ರಹ

June 5, 2018

ಮೈಸೂರು: ರಾಜ್ಯ ಸರ್ಕಾರ ಯಾವುದೇ ನಿರ್ಬಂಧ ವಿಧಿಸಿದೆ ರೈತರು ಮಾಡಿರುವ ಸಾಲವನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಿ, ರೈತರ ಏಳಿಗೆಗೆ ಕ್ರಮ ಕೈಗೊಳ್ಳಬೇಕು ಎಂದು ಕಬ್ಬು ಬೆಳೆಗಾರರ ಹೋರಾಟ ಸಮಿತಿ ಹಿತ ರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಹಳೆ ಮಿರ್ಲೆ ಸುನಯ್ ಗೌಡ ಒತ್ತಾಯಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಮ್ಮಿಶ್ರ ಸರ್ಕಾರ ರೈತರ ಸಾಲ ಮನ್ನಾ ಮಾಡುವ ವಿಷಯದಲ್ಲಿ ಹಲವಾರು ಷರತ್ತುಗಳನ್ನು ವಿಧಿಸಲು ಮುಂದಾಗಿದೆ. ನಿರ್ದಿಷ್ಟ…

ಸಾಲ ಮನ್ನಾ ಮಾಡದಿದ್ದರೆ ಹೆಚ್‍ಡಿಕೆ ಮತ್ತೊಮ್ಮೆ ವಚನ ಭ್ರಷ್ಟತೆ: ಮಲ್ಲೇಶ್
ಚಾಮರಾಜನಗರ

ಸಾಲ ಮನ್ನಾ ಮಾಡದಿದ್ದರೆ ಹೆಚ್‍ಡಿಕೆ ಮತ್ತೊಮ್ಮೆ ವಚನ ಭ್ರಷ್ಟತೆ: ಮಲ್ಲೇಶ್

June 5, 2018

ಚಾಮರಾಜನಗರ:  ರೈತರ ಎಲ್ಲ ರೀತಿಯ ಸಾಲವನ್ನು ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮನ್ನಾ ಮಾಡಬೇಕು. ಇಲ್ಲದಿದ್ದರೆ ಅವರು ಮತ್ತೊಮ್ಮೆ ವಚನ ಭ್ರಷ್ಟರಾಗಲಿದ್ದಾರೆ ಎಂದು ಬಿಜೆಪಿ ರೈತ ಮುಖಂಡ ಅಮ್ಮನ ಪುರ ಮಲ್ಲೇಶ ಹೇಳಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಜೆಡಿಎಸ್ ಚುನಾವಣಾ ಪೂರ್ವದಲ್ಲಿ ರೈತರ ಸಾಲವನ್ನು ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಇದನ್ನು ಹೆಚ್.ಡಿ. ಕುಮಾರಸ್ವಾಮಿ ಅವರು ಚುನಾವಣೆಯ ಎಲ್ಲ ಸಾರ್ವಜನಿಕ ಸಭೆಗಳಲ್ಲಿ…

ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ
ಮೈಸೂರು

ರೈತ ಮುಖಂಡರು ಸಾಲ ಮನ್ನಾಕ್ಕೆ ಯಾಚಿಸುವುದು ನಾಚಿಕೆಗೇಡು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ

June 4, 2018

ಸುತ್ತೂರು:  ರೈತ ಮುಖಂಡರು ಸರ್ಕಾರವನ್ನು ಸಾಲ ಮನ್ನಾ ಮಾಡಿ ಎಂದು ಕೇಳುವುದು ನಾಚಿಕೆಗೇಡಿನ ಸಂಗತಿ, ದೇಶಕ್ಕೆ ಅನ್ನ ನೀಡುವ ರೈತರು ಅನ್ನಕ್ಕಾಗಿ ಕೈ ಚಾಚಬಾರದು ಎಂದು ಪ್ರಗತಿಪರ ರೈತ ಡಾ. ನಾರಾಯಣ ರೆಡ್ಡಿ ತಿಳಿಸಿದರು. ಅವರು ನಂಜನಗೂಡು ತಾಲೂಕು ಸರಗೂರು ಗ್ರಾಮದ ರೈತ ಹಾಗೂ ಕೆಪಿಸಿಸಿ ಕಾರ್ಯದರ್ಶಿ ಎಸ್.ಸಿ. ಬಸವರಾಜುರವರು ತೋಟಕ್ಕೆ ಇಂದು ಭೇಟಿ ನೀಡಿ ಮಾತ ನಾಡುತ್ತಾ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಬರುವಂತಹ ಬೆಳೆಗಳನ್ನು ಬೆಳೆದು ಅದರಲ್ಲೂ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆದರೆ…

ರೈತರ ಪೂರ್ಣ ಸಾಲಮನ್ನಾ ಮಾಡಿಸಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಸಿ.ಟಿ.ರವಿ ಆಗ್ರಹ
ಹಾಸನ

ರೈತರ ಪೂರ್ಣ ಸಾಲಮನ್ನಾ ಮಾಡಿಸಿ: ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಶಾಸಕ ಸಿ.ಟಿ.ರವಿ ಆಗ್ರಹ

June 2, 2018

ಹಾಸನ: ಯಾವ ಷರತ್ತೂ ಹಾಕದೆ ರೈತರ ಎಲ್ಲಾ ರೀತಿಯ ಪೂರ್ಣ ಪ್ರಮಾಣದ ಸಾಲಮನ್ನಾ ಮಾಡುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿಗೆ ಬಿಜೆಪಿ ಮುಖಂಡ ಹಾಗೂ ಶಾಸಕ ಸಿ.ಟಿ.ರವಿ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪೂರ್ವದಲ್ಲಿ ರೈತರ ಎಲ್ಲಾ ಬಗೆಯ ಸಾಲ ಮನ್ನಾ ಮಾಡುವು ದಾಗಿ ಹೇಳಿದ್ದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರೈತರ ಸಾಲ ಮನ್ನಾ ವಿಚಾರ ವಾಗಿ ಕರೆದ ಸಭೆಯಲ್ಲಿ ಸಾಲಮನ್ನಾ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ಪಡೆಯುವು ದಾಗಿ ಹೇಳಿ 15 ದಿನ ಕಾಲಾವಕಾಶ ಕೇಳುವ ಮೂಲಕ…

ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಗೊಂದಲದ ಹೇಳಿಕೆ: ಮಾಜಿ ಸಚಿವ ಎಂ.ಶಿವಣ್ಣ ಆರೋಪ
ಮೈಸೂರು

ರೈತರ ಸಾಲ ಮನ್ನಾ ವಿಚಾರದಲ್ಲಿ ಸಿಎಂ ಕುಮಾರಸ್ವಾಮಿ ಗೊಂದಲದ ಹೇಳಿಕೆ: ಮಾಜಿ ಸಚಿವ ಎಂ.ಶಿವಣ್ಣ ಆರೋಪ

June 2, 2018

ಮೈಸೂರು: ಅಧಿಕಾರಕ್ಕೆ ಬಂದು 10 ದಿನಗಳಾದರೂ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರೈತರ ಸಾಲ ಮನ್ನಾ ಕುರಿತಂತೆ ಕೇವಲ ಗೊಂದಲದ ಹೇಳಿಕೆಗಳನ್ನು ನೀಡುತ್ತಾ, ಅನಗತ್ಯವಾಗಿ ಕಾಲಹರಣ ಮಾಡುತ್ತಿದ್ದಾರೆ. ಇದು ರೈತರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಎಂದು ಮಾಜಿ ಸಚಿವ, ಬಿಜೆಪಿ ಮೈಸೂರು ಜಿಲ್ಲಾಧ್ಯಕ್ಷ ಕೋಟೆ ಎಂ.ಶಿವಣ್ಣ ಇಂದಿಲ್ಲಿ ಆರೋಪಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಗೂ ಮುನ್ನ ಅಧಿಕಾರಕ್ಕೆ ಬಂದ 24 ಗಂಟೆಯೊಳಗೆ ರೈತರ 53 ಸಾವಿರ ಕೋಟಿ ಸಾಲ ಮನ್ನಾ ಮಾಡುವುದಾಗಿ ಪದೇ…

ರೈತರ ಸಾಲ ಮನ್ನಾ: ರಾಜ್ಯದ ಜನರಿಗೆ ತಕ್ಷಣ ಸ್ಪಷ್ಟನೆ ನೀಡಲು ರೈತಸಂಘ ಒತ್ತಾಯ
ಮೈಸೂರು

ರೈತರ ಸಾಲ ಮನ್ನಾ: ರಾಜ್ಯದ ಜನರಿಗೆ ತಕ್ಷಣ ಸ್ಪಷ್ಟನೆ ನೀಡಲು ರೈತಸಂಘ ಒತ್ತಾಯ

June 2, 2018

ಮೈಸೂರು:  ಸಾಲ ಮನ್ನಾ ಕುರಿತಂತೆ ಸರ್ಕಾರ ತಕ್ಷಣ ರಾಜ್ಯದ ಜನತೆಗೆ ಸ್ಪಷ್ಟನೆ ನೀಡದಿದ್ದರೆ ರೈತರನ್ನು ಬೇವರ್ಸಿಗಳಂತೆ ಸಮಾಜಕ್ಕೆ ಬಿಂಬಿಸಿದಂತಾಗಲಿದೆ ಎಂದು ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಲ ಮನ್ನಾ ಮಾಡುವುದಾಗಿ ಹೇಳಿ, ರೈತರ ಕಿವಿಗೆ ಹೂ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಯಾವ ಮಾನದಂಡದ ಮೇಲೆ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಮೊದಲು ರಾಜ್ಯದ ಜನರಿಗೆ…

ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ
ಮಂಡ್ಯ

ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ

June 1, 2018

ಕೆ.ಆರ್.ಪೇಟೆ:  ಸ್ತ್ರೀಶಕ್ತಿ ಸಂಘ ಗಳ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ವಿಶ್ವಭಾರತಿ ಮಹಿಳಾ ಸಂಘದ ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾ ವಣೆಗೂ ಮುನ್ನಾ ಪ್ರಚಾರದ ವೇಳೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಾವು ಮುಖ್ಯಮಂತ್ರಿ ಯಾದ 24 ಗಂಟೆಯೊಳಗೆ ರಾಜ್ಯದ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡು ವುದಾಗಿ ತಿಳಿಸಿದ್ದರು. ಹೀಗಾಗಿ ಅವರ…

ಬೆಳೆ ಸಾಲ ಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು 15 ದಿನ ಕಾಲಾವಕಾಶ ನೀಡಿ
ಮೈಸೂರು

ಬೆಳೆ ಸಾಲ ಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು 15 ದಿನ ಕಾಲಾವಕಾಶ ನೀಡಿ

May 31, 2018

ಬೆಂಗಳೂರು:  ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿ ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಹೀಗೆ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ನನಗೆ 15 ದಿನ ಕಾಲಾವಕಾಶ ನೀಡಿ ಎಂದು ರೈತರಿಗೆ ಮನವಿ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರ್ಕಾರ ಸಂಪೂರ್ಣವಾಗಿ ಕೃಷಿ ಸಾಲ ಮನ್ನಾಮಾಡಿದ ನಂತರ, ಏಪ್ರಿಲ್ 1, 2009 ರಿಂದ ಡಿಸೆಂಬರ್ 31,…

ಮುಖ್ಯಮಂತ್ರಿಯಿಂದ ರೈತ ಸಮುದಾಯಕ್ಕೆ ಅನ್ಯಾಯ
ಮೈಸೂರು

ಮುಖ್ಯಮಂತ್ರಿಯಿಂದ ರೈತ ಸಮುದಾಯಕ್ಕೆ ಅನ್ಯಾಯ

May 31, 2018

ಬೆಂಗಳೂರು: ರೈತರ ಸಾಲಮನ್ನಾಕ್ಕೆ 15 ದಿವಸ ಕಾಲಾವಕಾಶ ಬೇಕೆಂದು ಸಿಎಂ ಕುಮಾರಸ್ವಾಮಿ ಉಲ್ಲೇಖಿಸುತ್ತಿರುವುದು ರೈತ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯ ಮಾಜಿ ಸಿಎಂ ಯಡಿಯೂರಪ್ಪ ಆರೋ ಪಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಘೋಷಣೆ ಕುರಿತು ಸ್ಪಷ್ಟ ನಿರ್ಧಾರಕ್ಕೆ ಬರುವಲ್ಲಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮೀನಾ-ಮೇಷ ಎಣ ಸುತ್ತಿದೆ. ರೈತ ಕಲ್ಯಾಣದ ಹೆಸರು ಹೇಳಿಕೊಂಡು ಅಧಿಕಾರ ಗಿಟ್ಟಿಸಿಕೊಂಡಿರುವ ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸರ್ಕಾರ ಇಂದು ರೈತರಿಗೆ ಮೋಸ ಮಾಡಲು ಹೊರಟಿದೆ ಎಂದು ಆಪಾದಿಸಿದರು.

1 3 4 5 6
Translate »