ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ
ಮಂಡ್ಯ

ಸಾಲಮನ್ನಾಕ್ಕೆ ಆಗ್ರಹಿಸಿ ಮಿನಿ ವಿಧಾನಸೌಧಕ್ಕೆ ಮುತ್ತಿಗೆ

June 1, 2018

ಕೆ.ಆರ್.ಪೇಟೆ:  ಸ್ತ್ರೀಶಕ್ತಿ ಸಂಘ ಗಳ ಸಾಲಮನ್ನಾ ಮಾಡಬೇಕೆಂದು ಆಗ್ರಹಿಸಿ ಪಟ್ಟಣದ ಸ್ತ್ರೀಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರು ಪಟ್ಟಣದ ಮಿನಿ ವಿಧಾನ ಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ವಿಶ್ವಭಾರತಿ ಮಹಿಳಾ ಸಂಘದ ಅಧ್ಯಕ್ಷೆ ವನಜಾಕ್ಷಿ ಮಾತನಾಡಿ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾ ವಣೆಗೂ ಮುನ್ನಾ ಪ್ರಚಾರದ ವೇಳೆ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ತಾವು ಮುಖ್ಯಮಂತ್ರಿ ಯಾದ 24 ಗಂಟೆಯೊಳಗೆ ರಾಜ್ಯದ ಎಲ್ಲಾ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡು ವುದಾಗಿ ತಿಳಿಸಿದ್ದರು. ಹೀಗಾಗಿ ಅವರ ಮಾತು ನಂಬಿ ನಾವೆಲ್ಲಾ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿ ಅವರ ಗೆಲುವಿಗೆ ಶ್ರಮಿಸಿ ದ್ದೇವೆ. ಇದರ ಫಲವಾಗಿ ಜಿಲ್ಲೆಯ ಏಳೂ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಿ ದ್ದು, ಹೆಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಮಹಿಳಾ ಸಂಘಟನೆಗಳ ಮಹಿಳೆಯರು ಮಾಡಿರುವ ಸಾಲ ಮನ್ನಾ ಬಗ್ಗೆ ಯಾವುದೇ ಮಾತುಗಳನ್ನು ಕುಮಾರಸ್ವಾಮಿ ಆಡುತ್ತಿಲ್ಲ ಇದು ಖಂಡನೀಯ ಎಂದರು.

ಕುಟುಂಬ ನಿರ್ವಹಣೆಗಾಗಿ ನಾವು ಸಾಲ ಮಾಡಿ, ಪ್ರಸ್ತುತ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ ವಚನದಂತೆ ನಮ್ಮ ಸಾಲ ಮನ್ನಾ ಮಾಡಬೇಕು. ಒಂದು ವೇಳೆ ಮಹಿಳೆ ಯರೆಂದು ನಿರ್ಲಕ್ಷ್ಯ ವಹಿಸಿ ಸಾಲ ಮನ್ನಾ ಮಾಡದಿದ್ದರೇ ರಾಜ್ಯದ ಎಲ್ಲಾ ಮಹಿಳಾ ಸಂಘಟನೆಗಳು ರಾಜ್ಯ ವ್ಯಾಪ್ತಿ ಪ್ರತಿಭಟನೆ ನಡೆಸುತ್ತವೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ತಹಶೀಲ್ದಾರ್ ಗುರುಸಿದ್ದಯ್ಯ ಹಿರೇಮಠ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ರವಾನಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಪುರಸಭಾ ಸದಸ್ಯೆ ಸುವರ್ಣಮ್ಮ, ಮಹಿಳಾ ಸಂಘದ ಪದಾಧಿಕಾರಿಗಳಾದ ಮಂಗಳಾ, ಪುಷ್ಪ, ಪಲ್ಲವಿ, ಲತಾ, ವಸಂತ, ಶಾಂತ, ಜಾನಕಮ್ಮ, ಭಾರತಿ, ರಿಹಾನ, ಮಣ , ಅನಿತಾ, ಶಿವಮ್ಮ, ಭಾಗ್ಯ, ನಾಗಮ್ಮ, ಲೋಲಾಕ್ಷಿ, ಸುಮಿತ್ರ, ಶಾಂತಮ್ಮ ಪುಟ್ಟಮ್ಮ, ನಿಂಗಮ್ಮ, ಶಿವಮ್ಮ ಮತ್ತಿತರರಿದ್ದರು.

Translate »