ಕೃಷಿ ಸಾಲ ಮನ್ನಾಕ್ಕೆ ಆಧಾರ್ ಲಿಂಕ್ ಸಿಕ್ಕಿಬಿದ್ದ ಶ್ರೀಮಂತರು
ಮೈಸೂರು

ಕೃಷಿ ಸಾಲ ಮನ್ನಾಕ್ಕೆ ಆಧಾರ್ ಲಿಂಕ್ ಸಿಕ್ಕಿಬಿದ್ದ ಶ್ರೀಮಂತರು

December 26, 2018

ಬೆಂಗಳೂರು: ಕೃಷಿ ಸಾಲ ಮನ್ನಾ ಸೌಲಭ್ಯ ಪಡೆಯಲು ನೀಡಿದ ಆಧಾರ್ ಸಂಖ್ಯೆಯಿಂದ ಉಳ್ಳವರು ಸಿಕ್ಕಿಬಿದ್ದು ಸರ್ಕಾರಕ್ಕೆ 2,500 ಕೋಟಿ ರೂ. ಉಳಿತಾಯವಾಗಿದೆ.

ಆಧಾರ್ ಸಂಖ್ಯೆಯನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ಮಾಹಿತಿಗಳೊಂದಿಗೆ ಹೋಲಿಕೆ ಮಾಡಿದಾಗ ಶ್ರೀಮಂತರು, ಆದಾಯ ತೆರಿಗೆ ಪಾವತಿದಾರರು, ಕೈಗಾರಿ ಕೋದ್ಯಮಿಗಳು, ಸರ್ಕಾರಿ ಅಧಿಕಾರಿಗಳು ಸಾಲ ಮನ್ನಾ ಸೌಲಭ್ಯ ಪಡೆಯಲು ಪ್ರಯತ್ನಿಸಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ರಾಜ್ಯ ಸಹಕಾರಿ ಮತ್ತು ಪತ್ತಿನ ಬ್ಯಾಂಕ್‍ಗಳಲ್ಲಿ ಲಕ್ಷಾಂತರ ಮಂದಿ ಉಳ್ಳವರು ಕೃಷಿ ಸಾಲ ಪಡೆದಿರುವುದು ಬಹಿರಂಗ ಗೊಂಡಿದೆ. ಹಿಂದೆಲ್ಲಾ 25,000 ರೂ. ಹಾಗೂ 50,000 ರೂ. ಸಾಲ ಮನ್ನಾ ಆದಾಗ ಕೋಟ್ಯಾಧೀಶರುಗಳೂ ಇದರ ಸೌಲಭ್ಯ ಪಡೆದು ಸರ್ಕಾರಕ್ಕೆ ನಾಮ ಹಾಕಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಸಾಲ ಮನ್ನಾ ಪ್ರಕಟಣೆಗೆ ಮುನ್ನ, ಗೌಪ್ಯವಾಗಿರಿಸಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಮಾಹಿತಿಯೊಂದಿಗೆ ಆಧಾರ್ ಸಂಖ್ಯೆ ಸಂಪರ್ಕಿ ಸುವ ತೀರ್ಮಾನ ಕೈಗೊಂಡಿದ್ದರು. ಮಧ್ಯವರ್ತಿಗಳು ಮತ್ತು ಉಳ್ಳವರಿಗೆ ಈ ಸೌಲಭ್ಯ ದೊರೆಯಬಾರದು, ಅರ್ಹರಿಗೆ ಅನ್ಯಾಯವಾಗಬಾರದು ಎಂಬ ಉದ್ದೇಶದಿಂದ ಬೆಳೆ ಸಾಲ ಪಡೆದ ರೈತರು ಸರ್ಕಾರ ಸಿದ್ಧಪಡಿಸಿದ ಅರ್ಜಿ ನಮೂನೆ ತುಂಬಿ ಕಡ್ಡಾಯವಾಗಿ ಆಧಾರ್ ಸಂಖ್ಯೆ ಪ್ರತಿ ಲಗತ್ತಿಸಬೇಕಿತ್ತು.

ರೈತರು ತಮ್ಮ ಪಂಚಾಯಿತಿ ಅಥವಾ ಸ್ಥಳೀಯ ರೈತ ಕೇಂದ್ರ, ಇಲ್ಲವೇ ಜಿಲ್ಲಾ ಸಹಕಾರ ಬ್ಯಾಂಕ್‍ಗಳಿಗೆ ದಾಖಲೆ ಗಳ ಸಹಿತ ಅರ್ಜಿ ಸಲ್ಲಿಸಬೇಕಿತ್ತು. ಅರ್ಜಿ ಸಲ್ಲಿಕೆಗೂ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಿತ್ತು. ಈ ಷರತ್ತು ಹಿಂದೆ ಸಾಲ ಪಡೆದು ಸರ್ಕಾರಕ್ಕೆ ವಂಚಿಸಿದವರಿಗೆ ಈ ಬಾರಿ ದೊಡ್ಡ ಆಘಾತ ತಂದಿತು. ಕೆಲವರು ಷರತ್ತುಗಳಿಗೆ ಬೆದರಿ ದೂರ ಸರಿದರೆ, ಮತ್ತೆ ಕೆಲವರು ಇದಕ್ಕೂ ಒಂದು ಕೈನೋಡಿಯೇ ಬಿಡೋಣ ಎಂಬ ಭಂಡ ಧೈರ್ಯದಿಂದ ಸಾಲ ಮನ್ನಾಕ್ಕೆ ಅರ್ಜಿ ಸಲ್ಲಿಸಿಯೇ ಬಿಟ್ಟರು. ಸಂಬಂಧಪಟ್ಟ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲಿಸಿದಾಗ ಈ ದೋಖಾ ವ್ಯಕ್ತಿಗಳು ಸಿಕ್ಕಿಬಿದ್ದಿದ್ದಾರೆ. ಇದರಿಂದ ಒಟ್ಟಾರೆ ಸರ್ಕಾರಕ್ಕೆ 2,500 ಕೋಟಿ ರೂ. ಉಳಿತಾಯ ಆಗಿದೆ.

Translate »