ರೈತರ ಸಾಲ ಮನ್ನಾ ಮಾಹಿತಿಗೆ ಪ್ರತ್ಯೇಕ ವೆಬ್‍ಸೈಟ್
ಮೈಸೂರು

ರೈತರ ಸಾಲ ಮನ್ನಾ ಮಾಹಿತಿಗೆ ಪ್ರತ್ಯೇಕ ವೆಬ್‍ಸೈಟ್

December 4, 2018

ಬೆಂಗಳೂರು: ಕೃಷಿ ಸಾಲ ಮನ್ನಾ ಯೋಜನೆಯಡಿ ತಮ್ಮ ಸಾಲ ಮನ್ನಾ ಆದ ಬಗ್ಗೆ ರೈತರು ವಿವರ ಪಡೆಯಲು ರಾಜ್ಯ ಸರ್ಕಾರ ಪ್ರತ್ಯೇಕ ವಿಶೇಷ ವೆಬ್‍ಸೈಟ್ ಆರಂಭಿಸಿದೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕೃಷಿ ಸಾಲ ಮನ್ನಾ ಯೋಜನೆ ರೈತರಿಗೆ ತಲುಪಬೇಕು ಹಾಗೂ ಕೃಷಿಕರು ಸಾಲದಿಂದ ಋಣಮುಕ್ತರಾಗಬೇಕು ಎನ್ನುವುದು ಮುಖ್ಯ ಉದ್ದೇಶವಾಗಿದೆ. ಅಂತರ್ಜಾಲ ತಾಣದ (ವೆಬ್‍ಸೈಟ್) ಮೂಲಕ ರೈತರು ತಮ್ಮ ಬೆಳೆ ಸಾಲ ಮನ್ನಾ ಆಗಿದೆಯೇ ಎಂಬ ವಿವರವನ್ನು ಸುಲಭವಾಗಿ ತಿಳಿಯಬಹುದಾಗಿದೆ. http://clws.karnataka.gov.in/clws/pacs/pacsreports/Pending Bankverification.aspx ಲಿಂಕ್ ಬಳಸಿ, ಸಾಲ ಮನ್ನಾ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ.

ಈ ಲಿಂಕ್ ಕ್ಲಿಕ್ ಮಾಡಿ, ಜಿಲ್ಲೆ ಹೆಸರು, ಸಾಲ ಪಡೆದ ಬ್ಯಾಂಕ್ ಹೆಸರು, ಬ್ಯಾಂಕ್ ಶಾಖೆ ನಮೂದಿಸಿ, Export To ಎಂಬುದರ ಮೇಲೆ ಪ್ರೆಸ್ ಮಾಡಿದರೆ, ಕೆಲವೇ ಕ್ಷಣಗಳಲ್ಲಿ, ಆ ಶಾಖೆಯಲ್ಲಿ ಯಾವ ಯಾವ ರೈತರ ಸಾಲ ಮನ್ನಾ ಆಗಿದೆ ಎಂಬುದರ ಪೂರ್ಣ ಪಟ್ಟಿ ಕಾಣಿಸಿಕೊಳ್ಳುತ್ತದೆ. ನಂತರ ಸರ್ಚ್‍ಗೆ ಹೋಗಿ ನಿಮ್ಮ ಹೆಸರು ಟೈಪ್ ಮಾಡಿ, ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂಬುದನ್ನು ಪರಿಶೀಲಿಸಬಹುದು. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ಸಾಲ ಮನ್ನಾ ಆಗಿದೆ ಎಂದೂ ಹಾಗೂ ಈ ವಿಷಯವನ್ನು ಇತರರೊಂದಿಗೂ ಶೇರ್ ಮಾಡಿ ಎಂದು ವೆಬ್‍ಸೈಟ್ ತಿಳಿಸುತ್ತದೆ.

Translate »