ರೈತರ ಕೃಷಿ ಉತ್ಪನ್ನ ದಾಸ್ತಾನಿಗೆ ಸರ್ಕಾರದಿಂದ ಸುಲಭ ಸೌಕರ್ಯ
ಮೈಸೂರು

ರೈತರ ಕೃಷಿ ಉತ್ಪನ್ನ ದಾಸ್ತಾನಿಗೆ ಸರ್ಕಾರದಿಂದ ಸುಲಭ ಸೌಕರ್ಯ

December 4, 2018

ಬೆಂಗಳೂರು: ಕೃಷಿ ಉತ್ಪನ್ನಗಳ ಬೆಲೆ ಕುಸಿದಾಗ ಅಗ್ಗದ ದರ ದಲ್ಲಿ ದಾಸ್ತಾನು ವ್ಯವಸ್ಥೆ ಕಲ್ಪಿಸುವುದಲ್ಲದೆ, ಮಧ್ಯವರ್ತಿಗಳ ಹಾವಳಿಯಿಂದ ರೈತರನ್ನು ಮುಕ್ತ ಮಾಡುವ ಎಲ್ಲ ರೀತಿಯ ಬೆಳೆಗಳ ದಾಸ್ತಾನು ಯೋಜನೆಯನ್ನು ಸರ್ಕಾರ ಜಾರಿಗೆ ತರಲು ಮುಂದಾಗಿದೆ.

ದಾಸ್ತಾನು ಯೋಜನೆಯಡಿ ರೈತರು ಉಗ್ರಾಣಗಳಲ್ಲಿಡುವ ಕೃಷಿ ಉತ್ಪನ್ನಗಳ ಸಂಗ್ರಹಕ್ಕೂ ಸರ್ಕಾರ ಮಾರುಕಟ್ಟೆ ದರದ ಶೇಕಡ 75ರಷ್ಟನ್ನು ಮುಂಗಡವಾಗಿ ನೀಡ ಲಿದೆ, ಅಲ್ಲದೆ, ದಾಸ್ತಾನು ಶುಲ್ಕವನ್ನೂ ಭರಿಸಲಿದೆ. ಕೃಷಿ ಉತ್ಪನ್ನಗಳ ದರ ಹೆಚ್ಚಳ ವಾಗುತ್ತಿದ್ದಂತೆ ರೈತ ಇಚ್ಛಿಸಿದಾಗ ತನ್ನ ಕೃಷಿ ಉತ್ಪನ್ನ ದಾಸ್ತಾನು ಮಾರಾಟ ಮಾಡಿ ದಾಗ, ಸರ್ಕಾರ ನೀಡಿದ್ದ ಮುಂಗಡ ಮತ್ತು ಅಲ್ಪ ಪ್ರಮಾಣದ ದಾಸ್ತಾನು ದರವನ್ನು ಕಡಿತ ಮಾಡಿಕೊಳ್ಳಲಿದೆ. ಸಣ್ಣ ಹಾಗೂ ಅತೀ ಸಣ್ಣ ರೈತರಿಗೆ ದಾಸ್ತಾನು ಶುಲ್ಕ ದಿಂದ ರಿಯಾಯಿತಿ ನೀಡುವ ಉದ್ದೇಶವೂ ಈ ಯೋಜನೆಯಲ್ಲಿದೆ. ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಳವಾಗುತ್ತಿ ದ್ದಂತೆ ಉಗ್ರಾಣಗಳಲ್ಲಿನ ರೈತರ ಬೆಳೆಗಳ ಮಾರಾಟಕ್ಕೆ ಅನುವು ಮಾಡಿಕೊಟ್ಟು, ಕೃಷಿಕನಿಗೆ ಉತ್ತಮ ಬೆಲೆ ದೊರಕಿಸಿಕೊಡು ವುದು ಈ ಯೋಜನೆಯ ಉದ್ದೇಶವಾಗಿದೆ.

ಕೊಯ್ಲು ಸಂದರ್ಭದಲ್ಲಿ ಮಧ್ಯವರ್ತಿ ಗಳು ಅತೀ ಕಡಿಮೆ ದರಕ್ಕೆ ಬೆಳೆಗಳನ್ನು ಪಡೆಯುವುದರಿಂದ ರೈತ ನಷ್ಟಕ್ಕೆ ಒಳಗಾಗು ವುದಲ್ಲದೆ, ಸಾಲದ ಸುಳಿಗೂ ಸಿಲುಕುತ್ತಾನೆ. ಈ ಪರಿಸ್ಥಿತಿಯಿಂದ ರೈತರನ್ನು ಪಾರು ಮಾಡಲು ರಾಜ್ಯ ಸರ್ಕಾರ ಬೆಳೆಗಳ ದಾಸ್ತಾನಿಗೆ ಇನ್ನೂ ಹೆಚ್ಚಿನ ಉಗ್ರಾಣಗಳನ್ನು ಒದಗಿಸಲು ಮುಂದಾಗಿದೆ.

ಸೂಕ್ತ ದಾಸ್ತಾನು ವ್ಯವಸ್ಥೆ ಇಲ್ಲದೆ ರೈತರು ಕೊಯ್ಯಲು ಸಂದರ್ಭದಲ್ಲಿ ತಮ್ಮ ಕೃಷಿ ಉತ್ಪನ್ನಗಳನ್ನು ಮಧ್ಯವರ್ತಿಗಳು ಕೇಳುವ ಅತೀ ಕಡಿಮೆ ದರಕ್ಕೆ ಮಾರಾಟ ಮಾಡುವಂತಹ ಸ್ಥಿತಿ ಇದೆ. ಬೆಳೆಗೆ ಸೂಕ್ತ ಬೆಲೆ ದೊರಕದಿರುವುದಲ್ಲದೆ, ಕೃಷಿ ಉದ್ದೇಶಕ್ಕಾಗಿ ಮಾಡಿದ ಸಾಲವನ್ನೂ ತೀರಿಸದಂತಹ ಪರಿಸ್ಥಿತಿಗೆ ರೈತರು ಸಿಲುಕುತ್ತಾರೆ.

ಎಣ್ಣೆಕಾಳುಗಳು, ಕೊಬ್ಬರಿ, ಭತ್ತ, ರಾಗಿ, ಜೋಳ ಸೇರಿದಂತೆ ಎಲ್ಲಾ ರೀತಿಯ ಆಹಾರ ಧಾನ್ಯಗಳನ್ನು ರೈತರು ತಮ್ಮ ತಾಲೂಕು ಕೇಂದ್ರಗಳಲ್ಲಿರುವ ಉಗ್ರಾಣಗಳಲ್ಲಿ ಸಂಗ್ರಹಿಸಿಡಬಹುದಾಗಿದೆ. ಇದಕ್ಕಾಗಿ ರಾಜ್ಯ ಸರ್ಕಾರ ಈಗಿರುವ ಉಗ್ರಾಣಗಳನ್ನು ರಾಜ್ಯಾದ್ಯಂತ ನಿರ್ಮಿಸಲು ಅಗತ್ಯ ನೆರವನ್ನು ಕೇಂದ್ರ ಕೃಷಿ ಇಲಾಖೆ ನೀಡಲಿದೆ. ರೈತರಿಗೆ ಅತೀ ಕಡಿಮೆ ದರದಲ್ಲಿ ದಾಸ್ತಾನು ವ್ಯವಸ್ಥೆ ಕಲ್ಪಿಸಿ, ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಆಗುತ್ತಿದ್ದಂತೆ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಸಹಜವಾಗಿ ಕೃಷಿಕ ಉತ್ತಮ ಬೆಲೆ ಪಡೆಯುತ್ತಾನೆ ಎಂಬುದು ಯೋಜನೆ ಮಹದುದ್ದೇಶವಾಗಿದೆ.

Translate »