ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನ ನಡೆಸಿ
ಮಂಡ್ಯ

ತಂಬಾಕು ತ್ಯಜಿಸಿ ಆರೋಗ್ಯಯುತ ಜೀವನ ನಡೆಸಿ

June 1, 2018

ಮದ್ದೂರು: ತಂಬಾಕು ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಿಂದ, ತಂಬಾಕು ತ್ಯಜಿಸಿ ಆರೋಗ್ಯ ಯುತ ಜೀವನ ನಡೆಸುವಂತೆ ಹಿರಿಯ ಸಿವಿಲ್ ನ್ಯಾ.ಆರ್.ಪಿ.ಗೌಡ ಸಲಹೆ ನೀಡಿದರು.

ಪಟ್ಟಣದ ವಕೀಲರ ಭವನದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ತಂಬಾಕು ಸೇವಿಸುವ ವ್ಯಕ್ತಿ ತಾನು ಆರೋಗ್ಯ ಹಾಳು ಮಾಡಿಕೊಳ್ಳುವ ಜೊತೆಗೆ ತನ್ನ ಜೊತೆ ಗಿರುವ ವ್ಯಕ್ತಿಗಳ ಹಾಗೂ ಪರಿಸರದ ಮೇಲೂ ಕೆಟ್ಟ ಪರಿ ಣಾಮ ಬೀರುತ್ತಾನೆ. ತಂಬಾಕು ಸೇವಿಸುವ ವ್ಯಕ್ತಿ ತನ್ನ ಚಟ ಬಿಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಮತ್ತು ಸಾರ್ವಜನಿಕ ವಾಗಿ ತಂಬಾಕು ಸೇವನೆ ಮಾಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗು ವುದು. ಜೊತೆಗೆ ಸಾರ್ವಜನಿಕರು ಇದನ್ನು ವಿರೋಧಿಸಬೇಕು ಎಂದು ತಿಳಿಸಿದರು.
ತಂಬಾಕು ಸೇವನೆಯಿಂದಾಗುವ ದುಷ್ಟಪರಿಣಾಮದ ಬಗ್ಗೆ ಬಿ.ಶಿವಾನಂದ್ ವಿಶೇಷ ಉಪನ್ಯಾಸ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಎಂ.ಸಿ. ಅಶೋಕ್‍ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಸಿವಿಲ್ ನ್ಯಾ. ಪಿ.ಎಂ.ಬಾಲಸುಬ್ರಮಣ , 1ನೇ ಅಪರ ಸಿವಿಲ್ ನ್ಯಾ. ಕೆ.ಎನ್.ಶಿವಕುಮಾರ್, 3ನೇ ಅಪರ ಸಿವಿಲ್ ನ್ಯಾ.ಸೋಮನಾಥ್, 4ನೇ ಅಪರ ಸಿವಿಲ್ ನ್ಯಾ.ತೃಪ್ತಿಧರಣ , ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ, ವಕೀಲರ ಸಂಘದ ಕಾರ್ಯದರ್ಶಿ ಎನ್. ಪುಟ್ಟಸ್ವಾಮಿ ಹಾಜರಿದ್ದರು.

Translate »