ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ
ಮೈಸೂರು

ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಅಹ್ವಾನ

June 1, 2018

ಮೈಸೂರು: ಮೈಸೂರಿನ ಕುರುಹೀನಶೆಟ್ಟಿ ಸಾಂಸ್ಕೃತಿ ಕ ಪ್ರತಿಷ್ಠಾನ ಹಾಗೂ ಕೆಕೆಜಿಎಸ್ ಸಂಧ್ಯಾ ಸೋಮಶೇಖರ್ ಟ್ರಸ್ಟ್, ಹೊಸಹೊಳಲು ವತಿಯಿಂದ ಮೈಸೂರು ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಕುರುಹೀನಶೆಟ್ಟಿ ಜನಾಂಗದ ವಿದ್ಯಾರ್ಥಿನಿಯರಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಕಳೆದ ಬಾರಿ ನಡೆದ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಕುರುಹೀನಶೆಟ್ಟಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿಗಳು ಅರ್ಜಿಯೊಂದಿಗೆ ಎರಡು ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ, ದೃಢೀಕೃತ ಅಂಕಪಟ್ಟಿ ನಕಲು, ಜಾತಿ ದೃಢೀಕರಣ ಪತ್ರ, ಪೂರ್ಣ ವಿಳಾಸ ಮತ್ತು ದೂರವಾಣ ಸಂಖ್ಯೆಯೊಂದಿಗೆ ಜೂ. 25 ರೊಳಗೆ ತಲುಪಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ. 9741697370, 9035621555 ಅನ್ನು ಸಂಪರ್ಕಿಸಬಹುದು.

Translate »