ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ

June 25, 2018

ಮೈಸೂರು: ಕಿಕ್ಕಿರಿದ ತುಂಬಿದ್ದ ಸಭಾಂಗಣದಲ್ಲಿ ಸಾಧನೆ ಎಂದರೆ ಪ್ರಶಸ್ತಿಯನ್ನು ಸ್ವೀಕರಿಸುವಂತಿರಬೇಕು. ಇನ್ನು ಮುಂದೆ ಪ್ರತೀ ವರ್ಷ ಪ್ರಥಮ ರ್ಯಾಂಕ್‍ಗಳಿಸಿ ಸನ್ಮಾನ ಸ್ವೀಕರಿಸುತ್ತೇನೆ. ಎನ್ನುವ ಮಕ್ಕಳ ಮನಸ್ಸುಗಳು ಪ್ರಶಸ್ತಿ ಪ್ರಧಾನವನ್ನೇ ಎದುರು ನೋಡುತ್ತಿದ್ದವು.

ನಗರದ ಜೆ.ಎಲ್.ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕರ ಒಕ್ಕೂಟ ಮೈಸೂರು ಘಟಕದ ವತಿಯಿಂದ ನಡೆದ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇಕಡ 85ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

ಈ ಸಮಾರಂಭವನ್ನು ಮೈಸೂರು ನಗರಪಾಲಿಕೆಯ ಉಪ ಮೇಯರ್ ಇಂದಿರಾ ಮಹೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳ ಉತ್ಸಾಹಕ್ಕೆ ಪ್ರೋತ್ಸಾಹವನ್ನು ನೀಡುವ ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಸನ್ಮಾನಿತ ವಿದ್ಯಾರ್ಥಿಗಳನ್ನು ಕಂಡು ಬೇರೆ ವಿದ್ಯಾರ್ಥಿಗಳು, ನಾವು ಪ್ರಶಸ್ತಿಯನ್ನು ಸ್ವೀಕರಿಸಬೇಕು ಎಂದು ವಿದ್ಯಾಬ್ಯಾಸದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುವಂತಾಗಬೇಕು.

ಪ್ರಶಸ್ತಿ ಪುರಸ್ಕಾರ ವಿದ್ಯಾರ್ಥಿಗಳ ಭವಿಷ್ಯದ ಉಜ್ವಲ ಸಂಕೇತವಾಗಿದ್ದು, ನಗರಪಾಲಿಕೆಯಲ್ಲಿ ದೊರೆಯುವ ಪ್ರೋತ್ಸಾಹ ಧನವನ್ನು ಬಳಸಿಕೊಂಡು ಅದರ ಅನುಕೂಲಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿ, ಪರಿಶಿಷ್ಟವರ್ಗ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ. ದೇವರಾಜು, ಜಿಲ್ಲಾ ಕಾರ್ಯದರ್ಶಿ ದ್ವಾವಪ್ಪನಾಯಕ, ರಾಜ್ಯಾಧ್ಯಕ್ಷ ಹನುಮಂತಪ್ಪ, ಎನ್.ಸಿ ಬಸವರಾಜು, ಕೇಂದ್ರ ರೇಷ್ಮೆ ಸಂಶೋಧನಾ ನಿರ್ದೇಶಕ ತಳವಾರ್, ಸನ್ಮಾನಿತರಾದ ಜಿ.ಎಸ್ ದೊರೆಸ್ವಾಮಿ, ಅಯೂಬ್ ಹಮೀದ್, ಅಣ್ಣಯ್ಯ ಸ್ವಾಮಿ, ಬಂಗಾರ ನಾಯಕ್, ನಾರಾಯಣಸ್ವಾಮಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Translate »