ಬೆಳೆ ಸಾಲ ಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು 15 ದಿನ ಕಾಲಾವಕಾಶ ನೀಡಿ
ಮೈಸೂರು

ಬೆಳೆ ಸಾಲ ಪೂರ್ಣ ಮನ್ನಾ ಮಾಡಿ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು 15 ದಿನ ಕಾಲಾವಕಾಶ ನೀಡಿ

May 31, 2018

ಬೆಂಗಳೂರು:  ಬೆಳೆ ಸಾಲ ಸಂಪೂರ್ಣ ಮನ್ನಾ ಮಾಡಿ ರೈತರ ಮನೆ ಬಾಗಿಲಿಗೆ ಋಣಮುಕ್ತ ಪತ್ರ ತಲುಪಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಘೋಷಣೆ ಮಾಡಿದ್ದಾರೆ. ಅಲ್ಲದೆ ಹೀಗೆ ಋಣಮುಕ್ತ ಪತ್ರ ನಿಮ್ಮ ಮನೆ ಬಾಗಿಲಿಗೆ ತಲುಪಿಸಲು ನನಗೆ 15 ದಿನ ಕಾಲಾವಕಾಶ ನೀಡಿ ಎಂದು ರೈತರಿಗೆ ಮನವಿ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಸರ್ಕಾರ ಸಂಪೂರ್ಣವಾಗಿ ಕೃಷಿ ಸಾಲ ಮನ್ನಾಮಾಡಿದ ನಂತರ, ಏಪ್ರಿಲ್ 1, 2009 ರಿಂದ ಡಿಸೆಂಬರ್ 31, 2017 ರವರೆಗೆ ಯಾವ ರೈತರು ಬೆಳೆ ಸಾಲ ಪಡೆದಿದ್ದರೋ ಅಂತಹ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವ ಭರವಸೆ ಇತ್ತಿದ್ದಾರೆ.

ಸಾಲ ಮನ್ನಾ ಮತ್ತು ರೈತರನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಕೃಷಿಕರ ಅಭಿಪ್ರಾಯ ಪಡೆಯಲು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಕರೆಯಲಾಗಿದ್ದ ರೈತ ಮುಖಂಡರು ಮತ್ತು ಪ್ರಗತಿ ಪರ ರೈತರ ಅಭಿಪ್ರಾಯ ಪಡೆದ ನಂತರ ಸರ್ಕಾರದ ನಿರ್ಧಾರಗಳನ್ನು ವಿವರವಾಗಿ ಪ್ರಕಟಿಸಿದರು. ರೈತರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ, ಸಣ್ಣ, ದೊಡ್ಡ ಅಂತಾ ಇಲ್ಲ, ಎಲ್ಲ ರೈತರ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ತಿಳಿಸಿದರು. ಆರ್ಥಿಕ ಶಿಸ್ತು ಕಾಪಾಡಿಕೊಂಡು ಹಂತ ಹಂತವಾಗಿ ಸಾಲ ಮನ್ನಾ ಮಾಡಲಾಗುವುದು. ಎಲ್ಲ ರೈತರನ್ನು ಸಾಲದಿಂದ ಋಣಮುಕ್ತ ಮಾಡುವುದಾಗಿ ಹೇಳಿದರು. ಎರಡು ಹಂತಗಳಲ್ಲಿ ರೈತರನ್ನು ಋಣಮುಕ್ತ ಮಾಡಲು ಯೋಚಿಸಿದ್ದೇನೆ. ಅದಕ್ಕಾಗಿ ನಿಮ್ಮೆಲ್ಲರ ಸಹಕಾರ ಬೇಕು ಎಂದರು.

ನಮ್ಮ ಪಕ್ಷದ ನೇತೃತ್ವದಲ್ಲಿ ಬಹುಮತದ ಸರ್ಕಾರ ಬಂದಿದ್ದರೆ, ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದ್ದ ಭರವಸೆಯಂತೆ ಅಧಿಕಾರ ವಹಿಸಿಕೊಂಡ 24 ಗಂಟೆಗಳಲ್ಲಿ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಿ ಆದೇಶ ಹೊರಡಿಸುತ್ತಿದ್ದೆ. ಆದರೆ, ರಾಜ್ಯದ ಜನತೆ ಮೈತ್ರಿ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ನನ್ನ ಮಿತ್ರ ಪಕ್ಷ ಕಾಂಗ್ರೆಸ್ ಸದಸ್ಯರು ಅದರಲ್ಲೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಸಮಾಲೋಚನೆ ಮಾಡಿ ನಂತರ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಬೇಕು. ಸಾಲ ಮನ್ನಾ ಮಾಡುವುದಕ್ಕೂ ಮುನ್ನ ನಾನು ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಕಾಂಗ್ರೆಸ್‍ನ ವಿವಿಧ ಮುಖಂಡರ ಜೊತೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಹಿರಿಯ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ಸಭೆ ಕರೆದು ತೀರ್ಮಾನ ಕೈಗೊಳ್ಳಬೇಕು.

ಒಂದು ಬಾರಿಗೆ ಸಾಲ ಮನ್ನಾ (ಓಟಿಎಸ್) ಅಡಿ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಸರ್ಕಾರದಿಂದಲೇ ರೈತರ ಸಾಲ ಪಾವತಿಸಿ ಅವರಿಂದ ಬಡ್ಡಿ ಮತ್ತು ಚಕ್ರಬಡ್ಡಿ ಮುಕ್ತಗೊಳಿಸುವುದಲ್ಲದೆ, ಅಸಲಿನಲ್ಲೂ ರಿಯಾಯಿತಿ ಕೇಳಲು ನಿರ್ಧರಿಸಿದ್ದೇನೆ. ಸಾಲ ಮನ್ನಾ ಮಾಡಲು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ನೋಡಲ್ ಏಜೆಸ್ಸಿ ತೆರೆಯಲಾಗುವುದು, ರೈತರು ತಾವು ಯಾವ ಬ್ಯಾಂಕ್‍ಗಳಲ್ಲಿ ಪಡೆದ ಸಾಲದ ಪೂರ್ಣ ಮಾಹಿತಿಯನ್ನು ದಾಖಲೆ ಸಹಿತ ಸಲ್ಲಿಸಬೇಕು.ಮಧ್ಯವರ್ತಿಗಳ ಹಿಡಿತ ತಪ್ಪಿಸುವ ಉದ್ದೇಶದಿಂದ ಇಂತಹ ಕ್ರಮ ಕೈಗೊಳ್ಳಲಾಗಿದೆ. ವರದಿ ಸಲ್ಲಿಸಿದ 15 ದಿನದಲ್ಲಿ ರೈತರ ಸಾಲ ಮನ್ನಾ ಆಗಿ ಅವರ ಮನೆ ಬಾಗಿಲಿಗೆ ಋಣಮುಕ್ತ ಪತ್ರವನ್ನು ಅಧಿಕಾರಿಗಳು ತಲುಪಿಸಲಿದ್ದಾರೆ ಎಂದರು.

ಮಂತ್ರಿಗಳು, ಶಾಸಕರು, ಸಂಸದರು, ರಾಜಕಾರಣ ಗಳೂ ಕೃಷಿ ಸಾಲ ಪಡೆದಿದ್ದಾರೆ, ಇವರ ಸಾಲವನ್ನೂ ಮನ್ನಾ ಮಾಡಬೇಕೇ ಎಂದು ರೈತರನ್ನು ಪ್ರಶ್ನಿಸಿದಾಗ “ಬೇಡ..ಬೇಡ” ಎಂಬ ಏಕತಾನದ ಅಭಿಪ್ರಾಯ ವ್ಯಕ್ತವಾಯಿತು. ಇದಕ್ಕೆ ನಗುತ್ತಲೇ ಮುಖ್ಯಮಂತ್ರಿಗಳು ‘ನಾವೇನು ಪಾಪ ಮಾಡಿದ್ದೇವೆ ಎಂದು’ ‘ಸರಿ..ಸರಿ’ ಎಂದರು.

ನಮ್ಮಕತೆ ಬಿಡಿ, ಟಾಟಾ, ಬಿರ್ಲಾ ಸೇರಿದಂತೆ ಕೆಲವು ಬೃಹತ್ ಉದ್ಯಮಿಗಳು ಸಾವಿರಾರು ಎಕರೆ ಕಾಫಿ ತೋಟದ ಮೇಲೆ ನೂರಾರು ಕೋಟಿ ರೂ. ಸಾಲ ಪಡೆದಿದ್ದರೆ, ಇದನ್ನೂ ಮನ್ನಾ ಮಾಡಬೇಕೇ, ನೀವೇ ಹೇಳಿ. ಸರ್ಕಾರಿ ನೌಕರರು, ವಾಣ ಜ್ಯೋದ್ಯಮಿಗಳು, ನಗರದಲ್ಲೇ ಬಿಡಾರ ಹೂಡಿ ಕೃಷಿಯ ಮೇಲೆ ಲಕ್ಷಾಂತರ ರೂ. ಸಾಲ ಪಡೆದಿದ್ದರೆ, ಇವರನ್ನೂ ರೈತರೆಂದು ಪರಿಗಣ ಸಿ ಸಾಲ ಮನ್ನಾ ಮಾಡಬೇಕೇ. ಸತತವಾಗಿ ಮೂರು ವರ್ಷಗಳ ಕಾಲ 4 ಲಕ್ಷ ರೂ.ವರೆಗೆ ಆದಾಯ ತೆರಿಗೆ ಕಟ್ಟಿರುತ್ತಾರೆ, ಇಂತಹವರಿಗೂ ಸಾಲ ಮನ್ನಾ ಅವಶ್ಯಕತೆ ಇದೆಯೇ?

ಅಧಿಕಾರಿಗಳ ಜೊತೆ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಈ ಎಲ್ಲಾ ಮಾಹಿತಿಗಳು ಲಭ್ಯವಾಗಿವೆ.

ಶ್ರೀಮಂತ ರೈತರ ಸಾಲ ಮನ್ನಾ ಮಾಡಬೇಕೇ ಎಂದು ಅಧಿಕಾರಿಗಳು ಕೇಳಿದ್ದಾರೆ, ಅವರ ನಿರ್ಧಾರವೂ ಸರಿ ಇದೆ ಎನ್ನಿಸುವುದಿಲ್ಲವೇ?

ಈ ಬಗ್ಗೆ ಸರ್ಕಾರಕ್ಕೆ ನೀವೇ ಮಾರ್ಗದರ್ಶನ ಮಾಡಿ, ನಿಮ್ಮ ಆಭಿಪ್ರಾಯಗಳನ್ನು ಲಿಖಿತರೂಪದಲ್ಲಿ ಸಲ್ಲಿಸಿ, ಅದೆಲ್ಲವನ್ನೂ ಸರ್ಕಾರ ಪರಿಗಣ ಸಿ, ನಿರ್ಣಯ ಕೈಗೊಳ್ಳಲಿದೆ.
ಆದರೆ, ಮೊದಲು ರೈತರು ಎಷ್ಟೇ ಕೋಟಿ ರೂ. ಬೆಳೆ ಸಾಲ ಪಡೆದಿದ್ದರೂ ಅದನ್ನು ಮನ್ನಾ ಮಾಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ರೈತರು ಮೇಜುಕುಟ್ಟಿ ಸ್ವಾಗತಿಸಿದರು.
ರೈತರು ಬೆಳೆದ ಬೆಳೆಗೂ ಬೆಂಬಲ ಬೆಲೆ

ರಾಜ್ಯ ಸರ್ಕಾರದ ನಿರ್ಧಾರ

ಬೆಂಗಳೂರು: ರೈತರನ್ನು ಸಾಲದಿಂದ ಋಣ ಮುಕ್ತ ಮಾಡಿ ಅವರನ್ನು ಸ್ವಾವಲಂಬಿಯಾಗಿಸಲು ಬೆಳೆದ ಬೆಳೆಗೆ ಸರ್ಕಾರವೇ ಬೆಂಬಲ ಬೆಲೆ ನಿಗದಿಪಡಿಸುವ ತೀರ್ಮಾನ ತೆಗೆದುಕೊಂಡಿದೆ. ರೈತ ಮುಖಂಡರ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಬೆಂಬಲ ಬೆಲೆ ನಿರ್ಧಾರವನ್ನು ಘೋಷಣೆ ಮಾಡಿದ್ದಲ್ಲದೆ, ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಶೀಥಲೀಕರಣ ಘಟಕ ಮತ್ತು ಉಗ್ರಾಣಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.

ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಿಗದಿಪಡಿಸಿದ ಭಾಗಗಳಲ್ಲಿ ಆಯಾಯ ಬೆಳೆಗಳನ್ನು ಬೆಳೆಯಬೇಕು. ಈ ರೀತಿ ಬೆಳೆಗೆ ಸರ್ಕಾರವೇ ಬೆಲೆ ನಿಗದಿಪಡಿಸುವುದಲ್ಲದೆ, ಕೇಂದ್ರ ಸರ್ಕಾರದ ಆದೇಶಕ್ಕೆ ಕಾಯದೆ ರಾಜ್ಯ ಸರ್ಕಾರವೇ ಬೆಲೆ ನಿಗದಿಪಡಿಸಲಿದೆ.

ಒಂದು ಬೆಳೆಗೆ ಮಾರುಕಟ್ಟೆಯಲ್ಲಿ ದರ ಹೆಚ್ಚುತ್ತಿದ್ದಂತೆ ಎಲ್ಲಾ ರೈತರು ಅದೇ ಬೆಳೆ ಮೊರೆ ಹೋಗುತ್ತಾರೆ ಇದರಿಂದ ಹೆಚ್ಚುವರಿ ಇಳುವರಿ ಮಾರುಕಟ್ಟೆ ತಲುಪುವುದರಿಂದ ದರ ಕುಸಿದು ರೈತರು ಸಾಲದ ಸುಳಿಗೆ ಸಿಲುಕಲು ಕಾರಣವಾಗುತ್ತದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಕೃಷಿ ಇಲಾಖೆಯೇ ವಲಯವಾರು ಮತ್ತು ನೀರು ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಯಾವ ಬೆಳೆ ತೆಗೆಯಬೇಕೆಂಬ ಬಗ್ಗೆ ಮಾರ್ಗದರ್ಶನ ನೀಡಲಿದೆ. ಇವರ ಮಾರ್ಗದರ್ಶನದಲ್ಲಿ ಬೆಳೆದ ಬೆಳೆಗೆ ಸೂಕ್ತ ಬೆಲೆ ದೊರೆಯಲು ಸರ್ಕಾರವೇ ಖಾತರಿ ನೀಡುತ್ತದೆ ಎಂದರು.

Translate »