Tag: Gundlupet

ಗುಂಡ್ಲುಪೇಟೆ ಬಳಿ ಸಾಲಬಾಧೆಗೆ ರೈತ ಆತ್ಮಹತ್ಯೆ
ಚಾಮರಾಜನಗರ

ಗುಂಡ್ಲುಪೇಟೆ ಬಳಿ ಸಾಲಬಾಧೆಗೆ ರೈತ ಆತ್ಮಹತ್ಯೆ

November 13, 2018

ಗುಂಡ್ಲುಪೇಟೆ: ಸಾಲಬಾಧೆ ತಾಳದೇ ರೈತನೋರ್ವ ಸಾವಿಗೆ ಶರಣಾಗಿರುವ ಘಟನೆ ತಾಲೂಕಿನ ಕೆಲಸೂರು ಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಮಹದೇವಪ್ಪ (65) ಎಂಬು ವವರೇ ಸಾವಿಗೆ ಶರಣಾದ ರೈತರಾಗಿದ್ದು, ಇವರಿಗೆ ಪತ್ನಿ ಮಂಗಳಮ್ಮ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಇವರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಚಿಕ್ಕತುಪ್ಪೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 5.50 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದರು. ಗ್ರಾಮದಲ್ಲಿ ಇವರು ಹೊಂದಿದ್ದ 4.5 ಎಕರೆ ಜಮೀನಿನಲ್ಲಿ…

ಶ್ರೀರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
ಚಾಮರಾಜನಗರ

ಶ್ರೀರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ

November 11, 2018

ಗುಂಡ್ಲುಪೇಟೆ: ದೀಪಾವಳಿ ಮತ್ತು ಕಾರ್ತೀಕ ಮಾಸ ಅಂಗವಾಗಿ ಪಟ್ಟಣದ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗಿತ್ತು. ಪ್ರಧಾನ ಅರ್ಚಕ ಶಂಕರನಾರಾಯಣ ಜೋಯಿಸ್ ನೇತೃತ್ವದಲ್ಲಿ ಪುರಾತನ ಶಿವಲಿಂಗಕ್ಕೆ ಅರಿಶಿನದಿಂದ ಅಲಂ ಕಾರ ಮಾಡಲಾಗಿತ್ತು. ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.ಬಿ.ಕುಮಾರಸ್ವಾಮಿ, ವಕೀಲ ಸಿದ್ದರಾಜು, ಮಹದೇವಪ್ರಸಾದ್, ನಿಜಗುಣ ರಾಜು, ವೃಷಬೇಂದ್ರ, ವಸಂತಮ್ಮ ಇತರರು ಉಪಸ್ಥಿತರಿದ್ದರು.

ಪ್ರತಿ ವ್ಯಕ್ತಿಗೂ ಕಾನೂನು ನೆರವು ದೊರಕಲಿ: ನ್ಯಾ.ಯೋಗೇಶ್
ಚಾಮರಾಜನಗರ

ಪ್ರತಿ ವ್ಯಕ್ತಿಗೂ ಕಾನೂನು ನೆರವು ದೊರಕಲಿ: ನ್ಯಾ.ಯೋಗೇಶ್

November 10, 2018

ಗುಂಡ್ಲುಪೇಟೆ: ಸಮಾಜದ ಕಟ್ಟ ಕಡೇ ವ್ಯಕ್ತಿಗೂ ಕಾನೂನು ನೆರವು ದೊರಕುವಂತೆ ಮಾಡುವ ಸಲು ವಾಗಿ ಕಾನೂನು ಸೇವೆ ನೀಡಲಾಗುತ್ತಿದೆ ಎಂದು ಜೆಎಂಎಫ್‍ಸಿ ನ್ಯಾಯಾಧೀಶ ಜೆ.ಯೋಗೇಶ್ ತಿಳಿಸಿದರು. ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀ ಲರ ಸಂಘದ ಆಶ್ರಯದಲ್ಲಿ ಆಯೋಜಿ ಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ನೆರವು ದೊರೆಯಬೇಕಾಗಿದೆ. ಆದರೆ ಇನ್ನೂ ಶ್ರೀಸಾಮಾ ನ್ಯರಿಗೆ ಕನಿಷ್ಠ ಮೂಲ ಕಾನೂನು ಬಗ್ಗೆಯೇ ತಿಳುವಳಿಕೆ…

ಬರಗಿ ಬಳಿ ವಿದ್ಯುತ್ ಉಪ ಕೇಂದ್ರ ಲೋಕಾರ್ಪಣೆ
ಚಾಮರಾಜನಗರ

ಬರಗಿ ಬಳಿ ವಿದ್ಯುತ್ ಉಪ ಕೇಂದ್ರ ಲೋಕಾರ್ಪಣೆ

October 31, 2018

ಗುಂಡ್ಲುಪೇಟೆ: ನೂತನ ವಿದ್ಯುತ್ ಉಪಕೇಂದ್ರದಿಂದಾಗಿ ಕಾಡಂಚಿನ ಗ್ರಾಮಗಳ ವಿದ್ಯುತ್ ಕೊರತೆ ನೀಗಲಿದೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದರು. ತಾಲೂಕಿನ ಬರಗಿ ಗ್ರಾಮದ ಬಳಿ 5.5 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿ ಸಲಾಗಿರುವ ನೂತನ 66 ಕೆವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರವನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು. ಈ ಅತ್ಯಾಧುನಿಕ ಉಪಕೇಂದ್ರ ಸ್ಥಾಪನೆಯಿಂದ ಸುತ್ತಲಿನ ಕಾಡಂಚಿನ ಗ್ರಾಮಗಳಾದ ಭೀಮನಬೀಡು, ಕೂತನೂರು, ಬರಗಿ, ಹೊಂಗಹಳ್ಳಿ, ಮೂಖಹಳ್ಳಿ, ಮಂಚಹಳ್ಳಿ, ಮಣಗಳ್ಳಿ, ದೇಶೀಪುರ, ಆಲತ್ತೂರು, ಸಿದ್ದಯ್ಯನಪುರ ಕಾಲೋನಿ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಈವರೆಗೆ…

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ
ಚಾಮರಾಜನಗರ

ಮದ್ಯದಂಗಡಿ ತೆರವಿಗೆ ಆಗ್ರಹಿಸಿ ಮಹಿಳೆಯರ ಪ್ರತಿಭಟನೆ

October 30, 2018

ಗುಂಡ್ಲುಪೇಟೆ:  ಗ್ರಾಮದಲ್ಲಿರುವ ಮದ್ಯದಂಗಡಿಯಿಂದಾಗಿ ಕುಡುಕರ ಹಾವಳಿ ಹೆಚ್ಚಾಗಿ ಗ್ರಾಮದಲ್ಲಿ ಅಶಾಂತಿಯ ವಾತಾವರಣ ಸೃಷ್ಠಿಯಾಗಿದ್ದು, ಈ ಮದ್ಯದಂಗಡಿಯನ್ನು ಸ್ಥಳಾಂತರಿ ಸುವಂತೆ ನೂರಾರು ಮಹಿಳೆಯರು ಮದ್ಯದಂಗಡಿ ಮುಂಭಾಗ ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಬೊಮ್ಮಲಾ ಪುರದಲ್ಲಿ ನಡೆದಿದೆ. ಗ್ರಾಮದ ಮುಖ್ಯರಸ್ತೆಯಲ್ಲಿರುವ ಮದ್ಯ ದಂಗಡಿ ಮುಂಭಾಗ ಸಮಾವೇಶಗೊಂಡ ನೂರಾರು ಮಹಿಳೆಯರು ಮತ್ತು ಗ್ರಾಮಸ್ಥರು ಗ್ರಾಮದ ಮಧ್ಯಭಾಗದಲ್ಲಿರುವ ಮದ್ಯದಂಗಡಿ ಯಿಂದ ಕುಡುಕರ ಹಾವಳಿ ಮಿತಿಮೀರಿ ಅಶಾಂತಿ ವಾತಾವರಣ ಸೃಷ್ಠಿಯಾಗಿದೆ. ತುರ್ತಾಗಿ ಈ ಮದ್ಯದಂಗಡಿಯನ್ನು ಗ್ರಾಮದ ಹೊರವಲಯಕ್ಕೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದರು. ಹಾಲಿ ಇರುವ…

ಗುಂಡ್ಲುಪೇಟೆಯಲ್ಲಿ ಕೃಷಿ ಅಭಿಯಾನ ರಥಕ್ಕೆ ಚಾಲನೆ
ಕೊಡಗು

ಗುಂಡ್ಲುಪೇಟೆಯಲ್ಲಿ ಕೃಷಿ ಅಭಿಯಾನ ರಥಕ್ಕೆ ಚಾಲನೆ

October 27, 2018

ಗುಂಡ್ಲುಪೇಟೆ: ಕೃಷಿ ಇಲಾಖೆಯಲ್ಲಿ ದೊರಕುವ ಮಾಹಿತಿ ಹಾಗೂ ಸವಲತ್ತುಗಳನ್ನು ಸದ್ಬಳಕೆ ಮಾಡಿ ಕೊಂಡು ರೈತರು ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಕೃಷಿ ಇಲಾಖೆಯ ಸಮಗ್ರ ಕೃಷಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಲೂಕಿನ 4 ಹೋಬಳಿಗಳಲ್ಲಿಯೂ ನಾಲ್ಕು ದಿನಗಳ ಕಾಲ ಸಂಚರಿಸುವ ಈ ಕೃಷಿ ಅಭಿಯಾನ ರಥವು ಆಧುನಿಕ ಹಾಗೂ ಸುಧಾರಿತ ಕೃಷಿ ಧಾನ್ಯಗಳನ್ನು ಮತ್ತು ಇಲಾಖೆಯಿಂದ ದೊರಕುವ ಸವಲತ್ತುಗಳ ಬಗ್ಗೆ ಸಮಗ್ರ ಮಾಹಿತಿ ನೀಡಲಿದೆ. ರಾಸಾಯನಿಕ…

ತೆರಕಣಾಂಬಿ ತಾಪಂ ಉಪಚುನಾವಣೆ: ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ಮನವಿ
ಚಾಮರಾಜನಗರ

ತೆರಕಣಾಂಬಿ ತಾಪಂ ಉಪಚುನಾವಣೆ: ಕಾಂಗ್ರೆಸ್ ಗೆಲುವಿಗೆ ಶ್ರಮಿಸಲು ಮನವಿ

October 26, 2018

ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ತಾಪಂ ಕ್ಷೇತ್ರಕ್ಕೆ ಭಾನುವಾರ ನಡೆಯಲಿರುವ ಚುನಾವಣೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಬಹುಮತ ನೀಡುವುದರೊಂದಿಗೆ ಜಯಶಾಲಿಯನ್ನಾಗಿ ಸಬೇಕು ಎಂದು ಮಾಜಿ ಸಚಿವೆ ಡಾ.ಗೀತಾ ಮಹದೇವಪ್ರಸಾದ್ ಹೇಳಿದರು. ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಕ್ಷೇತ್ರದ ಉಪ ಚುನಾವಣೆ ಸಂಬಂಧ ಕಾಂಗ್ರೆಸ್ ಆಯೋ ಜಿಸಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿ, ತಮ್ಮ ಪತಿ ದಿ.ಹೆಚ್.ಎಸ್. ಮಹದೇವಪ್ರಸಾದ್ ಹಾಗೂ ತಾವು ಕ್ಷೇತ್ರ ವನ್ನು ಮಾದರಿಯಾಗಿಸಲು ಶ್ರಮಿಸಿದ್ದು ತೆರ ಕಣಾಂಬಿಯ ಉಪ ಚುನಾವಣೆಯಲ್ಲಿ ಜನತೆ ಕೈ ಹಿಡಿಯಬೇಕು ಎಂದರು….

ಗುಂಡ್ಲುಪೇಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ
ಚಾಮರಾಜನಗರ

ಗುಂಡ್ಲುಪೇಟೆ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

October 20, 2018

ಗುಂಡ್ಲುಪೇಟೆ:  ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಮತ್ತಿತರೆ ಅಭಿವೃದ್ಧಿ ಕಾಮಗಾರಿ ಗಳನ್ನು ಶಾಸಕ ಸಿ.ಎಸ್.ನಿರಂಜನ ಕುಮಾರ್ ಪರಿಶೀಲನೆ ನಡೆಸಿದರು. ಪಟ್ಟಣದ ದ.ರಾ.ಬೇಂದ್ರೆನಗರದಲ್ಲಿ ನಡೆಯುತ್ತಿರುವ ರಸ್ತೆ ಮತ್ತು ಚರಂಡಿ ಕಾಮ ಗಾರಿಗಳನ್ನು ಪರಿಶೀಲನೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣ ವನ್ನು ಮಾದರಿಯನ್ನಾಗಿಸಲು ಶ್ರಮಿಸುತ್ತಿದ್ದೇನೆ. ಈಗ ಕೇವಲ 5 ತಿಂಗಳು ಮಾತ್ರ ನನ್ನ ಅಧಿಕಾರ ಕಳೆದಿದೆ. ಪಟ್ಟಣದ ಜನತೆಗೆ ಯಾವ ಯಾವ ಸೌಲಭ್ಯಗಳು ಅಗತ್ಯವಾಗಿ ಆಗಬೇಕಾಗಿದೆ ಎಂಬ ಬಗ್ಗೆ ಅಧಿಕಾರಿಗಳು ಮತ್ತು ಪುರಸಭೆ ಅಧ್ಯಕ್ಷರು ಮತ್ತು ಸದಸ್ಯ…

ಅ.25ರಿಂದ ವನವಾಸಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆ
ಚಾಮರಾಜನಗರ

ಅ.25ರಿಂದ ವನವಾಸಿ ರಾಜ್ಯಮಟ್ಟದ ಕ್ರೀಡಾಸ್ಪರ್ಧೆ

October 17, 2018

ಗುಂಡ್ಲುಪೇಟೆ: ಇದೇ 25ರಿಂದ 28ರವರೆಗೆ ಪಟ್ಟಣದಲ್ಲಿ ವನವಾಸಿ ಕಲ್ಯಾಣ ಸಂಸ್ಥೆಯಿಂದ ರಾಜ್ಯ ಮಟ್ಟದ ಬಿಲ್ಲುಗಾರಿಕೆ ತರಬೇತಿ ಹಾಗೂ ಕ್ರೀಡಾಸ್ಪರ್ಧೆ ಆಯೋಜಿಸಲಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ್‍ಕುಮಾರ್ ಹೇಳಿದರು. ಪಟ್ಟಣದ ವನವಾಸಿ ವಿದ್ಯಾರ್ಥಿ ನಿಲಯ ದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಆರ್‍ಎಸ್‍ಎಸ್‍ನ ಅಂಗ ಸಂಸ್ಥೆಯಾದ ವನವಾಸಿ ಕಲ್ಯಾಣ ಸಂಸ್ಥೆಯು ದೇಶದ ಎಲ್ಲೆಡೆ ನೆಲೆಸಿರುವ ಮೂಲವಾಸಿ ಗಳ ಅಭಿವೃದ್ಧಿಗೆ ಶ್ರಮಿಸಿ ಅವರಲ್ಲಿ ರಾಷ್ಟ್ರ ಪ್ರೇಮವನ್ನು ಬೆಳೆಸುತ್ತಿದೆ. ವನವಾಸಿ ಗಳನ್ನು ದೇಶದ ಮುಖ್ಯವಾಹಿನಿಗೆ ತರಲು ಶ್ರಮಿಸುತ್ತಿದ್ದು, ಒಲಂಪಿಕ್ ಕ್ರೀಡೆಯಲ್ಲಿ ಸ್ಪರ್ಧಿಸುವಂತೆ…

ಮರಗಳ್ಳತನ ವೇಳೆ ಮರಬಿದ್ದು ವ್ಯಕ್ತಿ ಸಾವು
ಚಾಮರಾಜನಗರ

ಮರಗಳ್ಳತನ ವೇಳೆ ಮರಬಿದ್ದು ವ್ಯಕ್ತಿ ಸಾವು

October 12, 2018

ಗುಂಡ್ಲುಪೇಟೆ:  ಗಂಧದ ಮರಗಳನ್ನು ಕದ್ದೊಯ್ಯುತ್ತಿದ್ದ ವ್ಯಕ್ತಿಯೊಬ್ಬ ಹಳ್ಳದಲ್ಲಿ ಕಾಲುಜಾರಿ ಬಿದ್ದು ಸಾವಿಗೀಡಾಗಿರುವ ಘಟನೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ. ತಾಲೂಕಿನ ಭೀಮನಬೀಡು ಗ್ರಾಮದ ದಾಸಶೆಟ್ಟಿ(45) ಎಂಬಾತ ಹುಂಡೀಪುರ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಗಂಧದ ಮರ ಗಳನ್ನು ಕತ್ತರಿಸಿ ತಲೆಯ ಮೇಲೆ ಹೊತ್ತೊಯ್ಯುತ್ತಿದ್ದ. ಈ ವೇಳೆ ಚೌಡಹಳ್ಳಿ ಗ್ರಾಮದ ಬಳಿ ಬಂದಾಗ ಸಮೀಪದ ಹಳ್ಳದಲ್ಲಿ ಜಾರಿಬಿದ್ದ ಎನ್ನಲಾಗಿದೆ. ಈ ವೇಳೆ ತಾನು ಹೊತ್ತು ಕೊಂಡಿದ್ದ ಮರವೇ ತಲೆಯ ಮೇಲೆ ಬಿದ್ದ ಪರಿಣಾಮ ಆತ…

1 2 3 4 13
Translate »