ಗುಂಡ್ಲುಪೇಟೆ ಬಳಿ ಸಾಲಬಾಧೆಗೆ ರೈತ ಆತ್ಮಹತ್ಯೆ
ಚಾಮರಾಜನಗರ

ಗುಂಡ್ಲುಪೇಟೆ ಬಳಿ ಸಾಲಬಾಧೆಗೆ ರೈತ ಆತ್ಮಹತ್ಯೆ

November 13, 2018

ಗುಂಡ್ಲುಪೇಟೆ: ಸಾಲಬಾಧೆ ತಾಳದೇ ರೈತನೋರ್ವ ಸಾವಿಗೆ ಶರಣಾಗಿರುವ ಘಟನೆ ತಾಲೂಕಿನ ಕೆಲಸೂರು ಪುರ ಗ್ರಾಮದಲ್ಲಿ ಸೋಮವಾರ ನಡೆದಿದೆ.

ಗ್ರಾಮದ ಮಹದೇವಪ್ಪ (65) ಎಂಬು ವವರೇ ಸಾವಿಗೆ ಶರಣಾದ ರೈತರಾಗಿದ್ದು, ಇವರಿಗೆ ಪತ್ನಿ ಮಂಗಳಮ್ಮ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ. ಇವರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಚಿಕ್ಕತುಪ್ಪೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು 5.50 ಲಕ್ಷ ರೂಪಾಯಿಗಳ ಸಾಲ ಪಡೆದಿದ್ದರು.

ಗ್ರಾಮದಲ್ಲಿ ಇವರು ಹೊಂದಿದ್ದ 4.5 ಎಕರೆ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿಯಲ್ಲಿ ಸಾಕಷ್ಟು ನೀರು ದೊರಕದೆ ಸಾಲ ಮಾಡಿ ಬೆಳೆದ ಬೆಳೆಗಳನ್ನು ಉಳಿಸಿ ಕೊಳ್ಳಲು ಮತ್ತೊಂದು ಕೊಳವೆ ಬಾವಿ ಕೊರೆಸಲು ಕೈ ಸಾಲವನ್ನೂ ಮಾಡಿಕೊಂಡಿ ದ್ದರು. ರಾಜ್ಯ ಸರ್ಕಾರವು ರೈತರ ಸಾಲ ಮನ್ನಾ ಮಾಡುತ್ತದೆ ಎಂಬ ನಿರೀಕ್ಷೆಯ ಲ್ಲಿದ್ದ ರೈತ ಮಹದೇವಪ್ಪ ಕಳೆದ 6 ತಿಂಗಳ ಹಿಂದೆ ಸಾಲ ಮರುಪಾವತಿಸುವಂತೆ ಬ್ಯಾಂಕಿನಿಂದ ನೊಟೀಸ್ ಬಂದಿದ್ದರಿಂದ ತೀವ್ರವಾಗಿ ಮನನೊಂದಿದ್ದರು. ಇದರಿಂದ ಹತಾಶರಾದ ಮಹದೇವಪ್ಪ ಸೋಮವಾರ ಮುಂಜಾನೆ ತಮ್ಮ ಜಮೀನಿನಲ್ಲಿರುವ ಗುಡಿಸಿಲಿನಲ್ಲಿ ನೇಣುಹಾಕಿಕೊಂಡು ಸಾವಿ ಗೀಡಾದ್ದಾರೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಎಂದಿನಂತೆ ಬೆಳಗ್ಗೆ ಮನೆ ಬರುತ್ತಿದ್ದ ಮಹದೇವಪ್ಪ ಎಷ್ಟು ಹೊತ್ತಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಜಮೀನಿಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಪಟ್ಟಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಸಕ ನಿರಂಜನ್ ಭೇಟಿ, ಸಾಂತ್ವನ: ವಿಷಯ ತಿಳಿದ ಶಾಸಕ ಸಿ.ಎಸ್.ನಿರಂಜನ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಮೃತ ರೈತನ ಕುಟುಂಬದವರಿಗೆ ಸಾಂತ್ವನ ಹೇಳಿದರು. ನಂತರ ಕುಟುಂಬದವರಿಂದ ರೈತರ ಮಹದೇವಪ್ಪ ಪಡೆದ ಸಾಲದ ವಿವರ ಪಡೆದುಕೊಂಡರು. ಈ ಸಂದರ್ಭದಲ್ಲಿ ನೆರೆದಿದ್ದ ರೈತರು ಸರ್ಕಾರ ಸಾಲಮನ್ನಾ ಮಾಡುವುದಾಗಿ ಹೇಳುತ್ತಿದ್ದರೂ ಇನ್ನೂ ಮಾಡಿಲ್ಲ. ಇದರಿಂದ ರೈತರಿಗೆ ಹೊಸ ಸಾಲವೂ ದೊರಕದೆ ಹತಾಶರಾಗುವಂತಾ ಗಿದೆ. ಸಾಲಮನ್ನಾ ಜಾರಿಗೊಳಿಸಲು ಇನ್ನೂ ಎಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳ ಬೇಕು. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ನೀವು ಮಾತನಾಡಿ ಎಂದು ಆಗ್ರಹಿಸಿದರು.
ಕೃಷಿ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು ಕಾರಣಾಂತರದಿಂದ ವಿಳಂಬವಾಗಿದೆ. ಆದ್ದರಿಂದ ಯಾವುದೇ ರೈತರು ಧೃತಿಗೆಡದೆ ಬ್ಯಾಂಕಿನಿಂದ ನೋಟೀಸ್ ಬಂದರೆ ನಮ್ಮ ಗಮನಕ್ಕೆ ತನ್ನಿ. ಯಾವುದೇ ಕಾರಣಕ್ಕೂ ಜೀವ ಕಳೆದುಕೊಳ್ಳಬಾರದು ಎಂದು ಶಾಸಕರು ಧೈರ್ಯ ತುಂಬಿದರು.

ರೈತರ ಕುಟುಂಬಕ್ಕೆ ಕೂಡಲೇ ಸರ್ಕಾರ ದಿಂದ ದೊರಕುವ ಎಲ್ಲ ರೀತಿಯ ನೆರವನ್ನೂ ನೀಡಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್ ಭಾರತಿ ಅವರಿಗೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಶಿವಪುರ ಮಹ ದೇವಪ್ಪ ಮತ್ತಿತರರು ಭೇಟಿ ನೀಡಿದ್ದರು. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರ ವಶಕ್ಕೆ ನೀಡಲಾಯಿತು. ನಂತರ ಗ್ರಾಮದಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

Translate »