ಅನಂತಕುಮಾರ್ ನಿಧನದಿಂದ ರಾಷ್ಟ್ರಕ್ಕೆ ಭಾರೀ ನಷ್ಟ
ಚಾಮರಾಜನಗರ

ಅನಂತಕುಮಾರ್ ನಿಧನದಿಂದ ರಾಷ್ಟ್ರಕ್ಕೆ ಭಾರೀ ನಷ್ಟ

November 13, 2018

ಗುಂಡ್ಲುಪೇಟೆ: ಅಜಾತಶತ್ರು ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನದಿಂದ ರಾಷ್ಟ್ರಕ್ಕೆ ಭಾರೀ ನಷ್ಟ ವಾಗಿದೆ ಎಂದು ಶಾಸಕ ಸಿ.ಎಸ್.ನಿರಂಜನ ಕುಮಾರ್ ಸಂತಾಪ ವ್ಯಕ್ತಪಡಿಸಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಆಯೋ ಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅನಂತ ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತ, ರಾಜ್ಯದಲ್ಲಿ ಬಿಜೆಪಿ ಕಟ್ಟಲು ಯಡಿಯೂರಪ್ಪನವರೊಂದಿಗೆ ಶ್ರಮಿ ಸಿದ್ದ ಅನಂತಕುಮಾರ್ ರಾಜ್ಯದ ಯಾವುದೇ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಯಾವುದೇ ಕೆಲಸಗಳನ್ನು ಮಾಡಿಕೊಡಲು ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು.
ತಮಗೆ ವಹಿಸಿದ ಯಾವುದೇ ಜವಾ ಬ್ದಾರಿಯನ್ನೂ ಅಚ್ಚುಕಟ್ಟಾಗಿ ಮಾಡಿ ಪಕ್ಷದ ನಾಯಕರ ಮೆಚ್ಚುಗೆಗೂ ಪಾತ್ರವಾಗಿದ್ದರು. ದೇಶದ ಯಾವುದೇ ಭಾಗದಲ್ಲಿ ರಸಗೊಬ್ಬರ ಕೊರತೆಯಾಗದಂತೆ ಕ್ರಮ ಕೈಗೊಂಡು, ಬಡರೋಗಿಗಳ ಅನುಕೂಲಕ್ಕೆ ಜನರಿಕ್ ಔಷಧ ಮಳಿಗೆ ತೆರೆಯಲು ಕಾರಣರಾಗಿ ದ್ದರು ಎಂದು ಅವರ ಸಮಾಜಸೇವಾ ಕಾರ್ಯಗಳನ್ನು ಕೊಂಡಾಡಿದರು.

ಈ ವೇಳೆ ಬಿಜೆಪಿ ಮಂಡಲಾಧ್ಯಕ್ಷ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ನಾಗೇಶ್, ಯುವಘಟಕದ ಜಿಲ್ಲಾಧ್ಯಕ್ಷ ಪ್ರಣಯ್, ಪುರಸಭೆ ಸದಸ್ಯ ಎಸ್.ಗೋವಿಂದರಾಜನ್, ರಾಜ್ಯ ಸಮಿತಿಯ ಸದಸ್ಯರಾದ ಸಿದ್ದರಾಮಪ್ಪ, ಹುಚ್ಚೇಗೌಡ, ಕೆ.ಆರ್.ಲೋಕೇಶ್ ಸೇರಿ ದಂತೆ ವಿವಿಧ ಘಟಕಗಳ ಪದಾಧಿಕಾರಿ ಗಳು ಮತ್ತು ಕಾರ್ಯಕರ್ತರು ಭಾಗವಹಿಸಿ ತಮ್ಮ ಸಂತಾಪ ವ್ಯಕ್ತಪಡಿಸಿದರು.

Translate »