ಚಾಮರಾಜನಗರ ಜಿಲ್ಲೆಯ ನಾನಾ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಅನಂತಕುಮಾರ್
ಚಾಮರಾಜನಗರ

ಚಾಮರಾಜನಗರ ಜಿಲ್ಲೆಯ ನಾನಾ ಕಾರ್ಯಕ್ರಮಗಳಿಗೆ ಆಗಮಿಸಿದ್ದ ಅನಂತಕುಮಾರ್

November 13, 2018

ಚಾಮರಾಜನಗರ: ಅನಾರೋಗ್ಯಕ್ಕೆ ಒಳಗಾಗಿ ಸೋಮವಾರ ಬೆಳಗಿನ ಜಾವ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಜಿಲ್ಲೆಗೆ ಹಲವು ಬಾರಿ ಭೇಟಿ ನೀಡಿದ್ದರು. ಆಗಸ್ಟ್ 13 ರಂದು ಕೇಂದ್ರೀಯ ವಿದ್ಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂ ಡಿದ್ದು ಜಿಲ್ಲೆಯ ಅವರ ಕೊನೆಯ ಕಾರ್ಯಕ್ರಮವಾಗಿದೆ.

ಹಿರಿಯ ರಾಜಕಾರಣಿ ಆಗಿರುವ ಅನಂತ ಕುಮಾರ್ ಚಾಮರಾಜನಗರ ಜಿಲ್ಲೆಗೆ ಅನೇಕ ಬಾರಿ ಭೇಟಿ ನೀಡಿದ್ದಾರೆ. ಚುನಾವಣೆ ಸಂದರ್ಭಗಳಲ್ಲಿ ಹಾಗೂ ಪಕ್ಷದ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿ ಸಿದ್ದರು. 2018ರ ವಿಧಾನಸಭಾ ಚುನಾವಣೆಗೂ ಮುನ್ನ ಮೇ 1 ರಂದು ಸಂತೇ ಮರಹಳ್ಳಿಯಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರ ಸಭೆಯಲ್ಲಿ ಅನಂತಕುಮಾರ್ ಭಾಗವಹಿಸಿದ್ದರು. ಇದಾದ ಬಳಿಕ ಚಾಮರಾಜನಗರದ ಮಾದಾಪುರದ ಬಳಿ 16 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿದ್ದ ಕೇಂದ್ರೀಯಾ ವಿದ್ಯಾಲಯದ ಉದ್ಘಾಟನಾ ಕಾರ್ಯಕ್ರಮ ಆಗಸ್ಟ್ 13 ರಂದು ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಸಹ ಅನಂತ ಕುಮಾರ್ ಪಾಲ್ಗೊಂಡು ಶಾಲೆಯನ್ನು ಲೋಕಾರ್ಪಣೆಗೊಳಿಸಿದ್ದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದವನ್ನೂ ಸಹ ನಡೆಸಿ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡಿ ಸತ್ಪ್ರಜೆಗಳಾಗಿ ರೂಪು ಗೊಳ್ಳುವಂತೆ ಕರೆ ನೀಡಿದ್ದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂಸದ ಆರ್. ಧ್ರುವನಾರಾಯಣ್, ಕೇಂದ್ರೀಯ ವಿದ್ಯಾಲಯ ಉತ್ತಮ ವ್ಯಾಸಂಗಕ್ಕೆ ಹೆಸರುವಾಗಿ ಆಗಿದೆ. ಜಿಲ್ಲೆಯಲ್ಲಿ ಉತ್ತಮ ರೀತಿಯ ಪ್ರತಿಕ್ರಿಯೆ ದೊರೆತಿದ್ದು, 1 ರಿಂದ 4ನೇ ತರಗತಿವರೆಗೆ ಹೆಚ್ಚುವರಿ ತರಗತಿ ಪ್ರಾರಂಭಕ್ಕೆ ಅನುಮತಿ ಕೊಡಿಸುವಂತೆ ಸಚಿವ ಅನಂತಕುಮಾರ್ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಅನಂತಕುಮಾರ್ ಸಮ್ಮತಿ ಸೂಚಿಸಿ, ಆದಷ್ಟು ಬೇಗ ಹೆಚ್ಚುವರಿ ತರಗತಿಗೆ ಕೇಂದ್ರ ಸರ್ಕಾರ ದಿಂದ ಅನುಮತಿ ದೊರಕಿಸುವ ಭರವಸೆ ನೀಡಿದ್ದರು. ಈ ಕಾರ್ಯಕ್ರಮ ನಡೆದ 1 ತಿಂಗಳೊಳಗೆ ಹೆಚ್ಚುವರಿ ತರಗತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದು ಅವರ ಜಿಲ್ಲೆಯ ಕೊನೆಯ ಕಾರ್ಯಕ್ರಮವಾಗಿದೆ.

Translate »