ಮೂಲಭೂತ ಸೌಕರ್ಯ ವಂಚಿತ ವೈದ್ಯಕೀಯ ಕಾಲೇಜು ಹಾಸ್ಟೆಲ್
ಚಾಮರಾಜನಗರ

ಮೂಲಭೂತ ಸೌಕರ್ಯ ವಂಚಿತ ವೈದ್ಯಕೀಯ ಕಾಲೇಜು ಹಾಸ್ಟೆಲ್

November 13, 2018

ಮಲಗಲು ಮಂಚವಿಲ್ಲ…. ಕುಡಿಯಲು ಶುದ್ಧ ನೀರಿಲ್ಲ…. ವಿದ್ಯಾರ್ಥಿಗಳು ಹೈರಾಣ
ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದ ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿನ ಹಾಸ್ಟೆಲ್‍ನಲ್ಲಿ ಮೂಲ ಸೌಕರ್ಯಗಳ ಕೊರತೆ ಎದುರಾಗಿ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ.

ವೈದ್ಯರಾಗಬೇಕು ಎಂದು ಕನಸು ಹೊತ್ತು ರಾಜ್ಯದ ನಾನಾ ಮೂಲೆಗಳಿಂದ ಹಾಗೂ ಹೊರರಾಜ್ಯಗಳಿಂದ ಚಾಮ ರಾಜನಗರಕ್ಕೆ ಆಗಮಿಸಿರುವ ವಿದ್ಯಾರ್ಥಿ ಗಳು ಉಳಿದುಕೊಂಡಿರುವ ಹಾಸ್ಟೆಲ್ ನಲ್ಲಿ ಶುದ್ಧ ಕುಡಿಯುವ ನೀರು ದೊರೆ ಯುತ್ತಿಲ್ಲ. ನೀಡುವ ತಿಂಡಿಯಲ್ಲಿ ಜಿರಳೆ ಇದ್ದುದ್ದನ್ನು ನೋಡಿದ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಮಲಗಲು ಮಂಚ ಇಲ್ಲದೇ ನೆಲದಲ್ಲಿ ಮಲಗುತ್ತಿದ್ದಾರೆ.

ಚಾಮರಾಜನಗರದ ಹೊರವಲಯ ಎಸ್.ಬೆಟ್ಟದ ತಪ್ಪಲಿನಲ್ಲಿ ಸರ್ಕಾರಿ ವೈದ್ಯ ಕೀಯ ಕಾಲೇಜು (ಮೆಡಿಕಲ್ ಕಾಲೇಜು) ಸ್ಥಾಪನೆ ಆಗಿದೆ. ಪ್ರಸ್ತುತ 3ನೇ ವರ್ಷದ ವಿದ್ಯಾರ್ಥಿಗಳು ಪ್ರವೇಶಾತಿ ಪಡೆದಿದ್ದಾರೆ. ವರ್ಷಕ್ಕೆ 150 ವಿದ್ಯಾರ್ಥಿಗಳಂತೆ ಒಟ್ಟು 450 ವಿದ್ಯಾರ್ಥಿಗಳು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ಸಹ ವಿದ್ಯಾರ್ಥಿಗಳು ನಗರದ ಮೆಡಿಕಲ್ ಕಾಲೇಜಿನಲ್ಲಿ ಪ್ರವೇಶ ಪಡೆದು ವಿದ್ಯಾ ಭ್ಯಾಸ ನಡೆಸುತ್ತಿದ್ದಾರೆ. ತಾವು ವೈದ್ಯರಾಗ ಬೇಕು ಎಂದು ಕನಸು ಕಟ್ಟಿಕೊಂಡು ಗಡಿ ಜಿಲ್ಲೆಯಾದ ಚಾಮರಾಜನಗರಕ್ಕೆ ಬಹಳ ದೂರದಿಂದ ಆಗಮಿಸಿರುವ ವಿದ್ಯಾರ್ಥಿಗಳು ನಾನಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಎಂದು ಎದುರು ನೋಡುತ್ತಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಇದೆ. ಪ್ರತಿ ತಿಂಗಳು ವಿದ್ಯಾರ್ಥಿ ಯೊಬ್ಬರಿಂದ 2800 ರೂ. ಸಂಗ್ರಹಿಸಿ ಊಟ-ತಿಂಡಿ ನೀಡಲಾಗುತ್ತಿದೆ. ಆದರೆ ಅಡುಗೆ ಮಾಡಲು ಶುದ್ಧ ನೀರನ್ನು ಬಳಸು ತ್ತಿಲ್ಲ. ಹಾಗೂ ಕುಡಿಯಲು ಯೋಗ್ಯವಾದ ನೀರನ್ನು ನೀಡುವುದಿಲ್ಲ ಎಂಬುದು ವಿದ್ಯಾರ್ಥಿಗಳ ಆರೋಪವಾಗಿದೆ.

ನೀಡುವ ಊಟ, ತಿಂಡಿ ರುಚಿ ಇರುವು ದಿಲ್ಲ. ಇತ್ತೀಚೆಗೆ ನೀಡಿದ್ದ ಬೋಂಡದಲ್ಲಿ ಜಿರಳೆ ಮತ್ತು ಹುಳ ಇರುವುದನ್ನು ನೋಡಿದ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಏನೇನು ಸಿಗುತ್ತದೋ ಎಂದು ಆತಂಕಗೊಂಡಿದ್ದಾರೆ.

ವಿದ್ಯಾರ್ಥಿಗಳಿಂದಲೇ ತಟ್ಟೆ, ಲೋಟ ತೊಳೆಸಲಾಗುತ್ತಿದ್ದು, ಈ ಸ್ಥಳವನ್ನೂ ಸಹ ಶುಚಿಯಾಗಿ ಇಟ್ಟಿಲ್ಲದಿರುವುದು ಬೆಳಕಿಗೆ ಬಂದಿದೆ. ಕುಡಿಯುವ ನೀರನ್ನು ಪಡೆ ಯಲು ಬಳಸುವ ವಾಟರ್ ಫಿಲ್ಟರ್‍ನಲ್ಲಿ ಕಪ್ಪೆಗಳು ಪತ್ತೆಯಾಗಿದೆ ಎನ್ನಲಾಗುತ್ತಿದೆ.

ವಿದ್ಯಾರ್ಥಿಗಳು ಊಟ-ತಿಂಡಿ ಸೇವಿ ಸಲು ಬೇಕಾಗುವಷ್ಟು ಟೇಬಲ್ ಮತ್ತು ಕುರ್ಚಿ ಇಲ್ಲದೇ ವಿದ್ಯಾರ್ಥಿಗಳು ನೆಲದಲ್ಲಿಯೇ ಕುಳಿತು ಊಟ-ತಿಂಡಿ ಸೇವಿಸುತ್ತಿದ್ಧಾರೆ. ಮಲಗಲು ಮಂಚ ಇಲ್ಲದೇ ನೆಲದ ಮೇಲೆಯೇ ಮಲಗಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆನ್ನಲಾಗಿದೆ.
ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅನುಕೂಲಕ್ಕಾಗಿ ಗ್ರಂಥಾಲಯ ತೆರೆಯ ಲಾಗಿದೆ. ಆದರೆ ಈ ಗ್ರಂಥಾಲಯವನ್ನು ರಾತ್ರಿ 8 ಗಂಟೆಗೆ ಮುಚ್ಚಲಾಗುತ್ತದೆ. ಹೀಗಾಗಿ ತಮನೆ ತೊಂದರೆ ಆಗಿದೆ. ನಮ್ಮ ಈ ಎಲ್ಲಾ ಸಮಸ್ಯೆಗಳನ್ನು ಸಂಬಂಧಪಟ್ಟವ ರಿಗೆ ತಿಳಿಸಬೇಕು ಎಂಬುದು ನಮ್ಮ ಬಯಕೆ ಆಗಿತ್ತು. ಈ ಮೂಲಕ ಸಮಸ್ಯೆಗಳಿಂದ ಮುಕ್ತಿ ಹೊಂದಬೇಕು ಎಂಬ ಆಸೆ ಇತ್ತು. ಆದರೆ ಈ ಎಲ್ಲವನ್ನು ತಿಳಿಸಿದರೆ ನಮಗೆ ಪರೀಕ್ಷೆಯಲ್ಲಿ ಅಂಕ ಕಟ್ ಮಾಡುತ್ತಾರೆ ಎಂಬ ಭಯದಿಂದ ನಾವು ನಮ್ಮ ಸಮಸ್ಯೆಯನ್ನು ತಿಳಿಸಿಲ್ಲ. ಕೆಲವು ಸಮಸ್ಯೆ ಗಳನ್ನು ವಾರ್ಡ್‍ಗೆ ತಿಳಿಸಿದ್ದೇವೆ. ಆದರೆ ಏನೂ ಪ್ರಯೋಜನ ಇಲ್ಲ ಎಂಬುದು ವಿದ್ಯಾರ್ಥಿಗಳು ದೂರಿದ್ದಾರೆ.

ತಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ಗಳು ಗಮನ ಹರಿಸಬೇಕು. ಈ ಮೂಲಕ ಉನ್ನತ ವ್ಯಾಸಂಗಕ್ಕೆ ಆಗಮಿಸಿರುವ ನಮಗೆ ಅನುಕೂಲಗಳನ್ನು ಕಲ್ಪಿಸಿಕೊಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

 ಸಿದ್ದಲಿಂಗಸ್ವಾಮಿ

Translate »