ಗುಂಡ್ಲುಪೇಟೆ: ಗಂಧದ ಮರಗಳನ್ನು ಕದ್ದೊಯ್ಯುತ್ತಿದ್ದ ವ್ಯಕ್ತಿಯೊಬ್ಬ ಹಳ್ಳದಲ್ಲಿ ಕಾಲುಜಾರಿ ಬಿದ್ದು ಸಾವಿಗೀಡಾಗಿರುವ ಘಟನೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಭೀಮನಬೀಡು ಗ್ರಾಮದ ದಾಸಶೆಟ್ಟಿ(45) ಎಂಬಾತ ಹುಂಡೀಪುರ ಗ್ರಾಮ ಪಂಚಾಯಿತಿ ಸದಸ್ಯ ಯೋಗೇಶ್ ಎಂಬುವರ ಜಮೀನಿನಲ್ಲಿ ಬೆಳೆದಿದ್ದ ಗಂಧದ ಮರ ಗಳನ್ನು ಕತ್ತರಿಸಿ ತಲೆಯ ಮೇಲೆ ಹೊತ್ತೊಯ್ಯುತ್ತಿದ್ದ. ಈ ವೇಳೆ ಚೌಡಹಳ್ಳಿ ಗ್ರಾಮದ ಬಳಿ ಬಂದಾಗ ಸಮೀಪದ ಹಳ್ಳದಲ್ಲಿ ಜಾರಿಬಿದ್ದ ಎನ್ನಲಾಗಿದೆ. ಈ ವೇಳೆ ತಾನು ಹೊತ್ತು ಕೊಂಡಿದ್ದ ಮರವೇ ತಲೆಯ ಮೇಲೆ ಬಿದ್ದ ಪರಿಣಾಮ ಆತ ಸ್ಥಳದಲ್ಲಿಯೇ ಸಾವಿಗೀಡಾ ಗಿದ್ದಾನೆ. ಮುಂಜಾನೆ ಜಮೀನಿಗೆ ಹೋಗುತ್ತಿದ್ದ ರೈತರು ಕಳೇಬರವನ್ನು ಕಂಡು ಪಟ್ಟಣ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಸರ್ಕಲ್ ಇನ್ಸ್‍ಪೆಕ್ಟರ್ ಎಚ್.ಎನ್. ಬಾಲಕೃಷ್ಣ, ಪಿಎಸ್‍ಐ ಲತೇಶ್‍ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.