Tag: HD Kumaraswamy

ಉಪಸಮರ ಸಾಧನೆ ಹಿಂದೆಯೇ ‘ಆಪರೇಷನ್ ದೋಸ್ತ್’
ಮೈಸೂರು

ಉಪಸಮರ ಸಾಧನೆ ಹಿಂದೆಯೇ ‘ಆಪರೇಷನ್ ದೋಸ್ತ್’

November 9, 2018

ಬೆಂಗಳೂರು: ಉಪ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಬಿಜೆಪಿಯ ಐವರು ಶಾಸಕರು ಮೈತ್ರಿ ಸರ್ಕಾರದ ಪಕ್ಷಗಳಿಗೆ ಸೇರ್ಪಡೆಗೊಳ್ಳಲು ಮುಂದಾಗಿದ್ದಾರೆ. ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ವನ್ನು ಉರುಳಿಸಲು ಆಪರೇಷನ್ ಕಮಲಕ್ಕೆ ಮುಂದಾಗಿದ್ದ ಬಿಜೆಪಿಗೆ ಭಾರೀ ಹೊಡೆತ ನೀಡಲು ಆಪರೇಷನ್ ಜೆಡಿಎಸ್-ಕಾಂಗ್ರೆಸ್ ಜಂಟಿ ಕಾರ್ಯಾಚರಣೆ ಮೊದಲ ಹಂತದಲ್ಲೇ ಯಶಸ್ವಿಯಾ ಗುವ ಸಾಧ್ಯತೆ ಇದೆ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವಿಸ್ತರಣೆಗೂ ಮುನ್ನವೇ ಬಿಜೆಪಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀ ನಾಮೆ ನೀಡಿ, ತಮಗೆ ಅನುಕೂಲವಾಗುವ ಪಕ್ಷಗಳಿಗೆ ಸೇರ್ಪಡೆ ಯಾಗುತ್ತಿದ್ದಾರೆ….

ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ
ಮೈಸೂರು

ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ

October 28, 2018

ಮೈಸೂರು: ನಾನು ವೈಯಕ್ತಿಕವಾಗಿ ಭಾವನಾತ್ಮಕ ಜೀವಿ. ಹಾಗಾಗಿ ಉದ್ದೇಶಪೂರ್ವಕವಾಗಿ ನನ್ನನ್ನು ಎಮೋಷನಲ್ ಬ್ಲಾಕ್‍ಮೇಲ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಬೇಸರ ಹೊರಹಾಕಿದರು. ಮೈಸೂರಿನ ಕೆಪಿಎನಲ್ಲಿ ಪ್ರೊಬೆಷನರಿ ಡಿವೈಎಸ್‍ಪಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಮಂಡ್ಯದ ಸಭೆಯಲ್ಲಿ ಹೇಳಿರೋದು ಆರೋಗ್ಯ ಪರಿಸ್ಥಿತಿ ಸರಿ ಇಲ್ಲದಿದ್ದರೂ ಜನರ ರಕ್ಷಣೆಗಾಗಿ ಬದುಕಿರುವವರೆಗೂ ದುಡಿಯುತ್ತೇನೆ ಎಂದು ಎಂದರು. ನಾನು ಎಲ್ಲಾ ವಿಚಾರಗಳನ್ನೂ ಭಾವನಾತ್ಮಕವಾಗಿ ನೋಡುತ್ತೇನೆ. ನನ್ನದು ಮೊಸಳೆ ಕಣ್ಣೀರು ಎಂಬುವವರಿಗೆ ಮಾನವೀಯತೆ…

ನಾನು ಬದುಕಿರುವುದೇ ಹೆಚ್ಚು, ಬದುಕಿರುವವರೆಗೆ ಬಡವರ ಬದುಕಿಸುವ ಕೆಲಸ ಮಾಡುತ್ತೇನೆ
ಮೈಸೂರು

ನಾನು ಬದುಕಿರುವುದೇ ಹೆಚ್ಚು, ಬದುಕಿರುವವರೆಗೆ ಬಡವರ ಬದುಕಿಸುವ ಕೆಲಸ ಮಾಡುತ್ತೇನೆ

October 27, 2018

ಮಂಡ್ಯ: ನಾನು ಈಗಾಗಲೇ ಸಾಯ ಬೇಕಾಗಿತ್ತು… ಇನ್ನು ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ… ಬದುಕಿರುವವರೆಗೂ ಬಡವರನ್ನು ಬದುಕಿಸುವ ಕೆಲಸ ಮಾಡುತ್ತೇನೆ… ಇದು ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಸಭೆಗಳಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಆಡಿದ ಭಾವುಕ ನುಡಿಗಳು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಜೆಡಿಎಸ್‍ನ ಎಲ್.ಆರ್.ಶಿವ ರಾಮೇಗೌಡ ಪರವಾಗಿ ಇಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜಿಲ್ಲೆಯ ಮಳವಳ್ಳಿ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣದಲ್ಲಿ ಪ್ರಚಾರ ನಡೆಸಿದರು. ಅವರು ಪ್ರಚಾರ ನಡೆಸಿದ ಎಲ್ಲಾ ಕಡೆಯೂ ತಮ್ಮ ಸಾವಿನ ಬಗ್ಗೆ…

ಲೋಡ್ ಶೆಡ್ಡಿಂಗ್ ಮಾಡಕೂಡದು: ಹೆಚ್.ಡಿ.ಕುಮಾರಸ್ವಾಮಿ
ಮೈಸೂರು

ಲೋಡ್ ಶೆಡ್ಡಿಂಗ್ ಮಾಡಕೂಡದು: ಹೆಚ್.ಡಿ.ಕುಮಾರಸ್ವಾಮಿ

October 25, 2018

ಬೆಂಗಳೂರು: ವಿದ್ಯುತ್ ಅಭಾವ ವಿದ್ದರೂ ಲೋಡ್‍ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂಧನ ಇಲಾಖಾಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾತ್ಕಾಲಿಕ ವಿದ್ಯುತ್ ಅಭಾವ ಸೃಷ್ಟಿಯಾಗಿದ್ದು, ಲೋಡ್ ಶೆಡ್ಡಿಂಗ್ ಮಾಡಲು ಐದು ವಿತರಣಾ ಸಂಸ್ಥೆಗಳು ತೀರ್ಮಾನ ಕೈಗೊಂಡಿದ್ದವು. ಇದರ ಮಾಹಿತಿ ತಲುಪುತ್ತಿದ್ದಂತೆ ನಿಮ್ಮ ನಿರ್ಲಕ್ಷ್ಯಕ್ಕೆ ಗ್ರಾಹಕರು ಕಷ್ಟ ಅನುಭವಿಸುವುದು ಬೇಡ. ಇರುವ ವಿದ್ಯುತ್‍ನ್ನೇ ಸಮರ್ಪಕವಾಗಿ ವಿತರಣೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ. ಅಷ್ಟೇ ಅಲ್ಲ ಯಾವುದೇ ಕಾರಣಕ್ಕೂ ರಾಜ್ಯದ ಯಾವುದೇ ಭಾಗದಲ್ಲಿ ಲೋಡ್‍ಶೆಡ್ಡಿಂಗ್ ಮಾಡ ಕೂಡದು. ಕೃಷಿ…

ನನ್ನ ಶವವೂ ಬಿಜೆಪಿಗೆ ಹೋಗಲ್ಲ, ಬಿಜೆಪಿ ಮುಗಿಸಿಯೇ ತೀರುತ್ತೇನೆ ಎಂದ ಬಿಎಸ್‍ವೈ, ಶ್ರೀರಾಮುಲು ಈಗೆಲ್ಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್
ಮೈಸೂರು

ನನ್ನ ಶವವೂ ಬಿಜೆಪಿಗೆ ಹೋಗಲ್ಲ, ಬಿಜೆಪಿ ಮುಗಿಸಿಯೇ ತೀರುತ್ತೇನೆ ಎಂದ ಬಿಎಸ್‍ವೈ, ಶ್ರೀರಾಮುಲು ಈಗೆಲ್ಲಿದ್ದಾರೆ: ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್

October 24, 2018

ಬೆಂಗಳೂರು: ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸಮಯ ಸಾಧಕತನ, ದೇವೇಗೌಡ-ಸಿದ್ದರಾಮಯ್ಯ ಹಗಲುವೇಷ ಹಾಕುತ್ತಿದ್ದಾರೆ ಎಂದು ಟೀಕಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಹಿಂದೆ ತಮ್ಮ ಪಕ್ಷದ ನಾಯಕರಿಂದಲೇ ಟೀಕೆಗೆ ಗುರಿಯಾಗಿದ್ದನ್ನು ನೆನಪಿಸಿಕೊಳ್ಳಲಿ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿರುಗೇಟು ನೀಡಿದ್ದಾರೆ. ಪ್ರೆಸ್‍ಕ್ಲಬ್-ಬೆಂಗಳೂರು ವರದಿಗಾರರ ಕೂಟ ಆಯೋ ಜಿಸಿದ್ದ ಸುದ್ದಿಗಾರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ ಸಂದರ್ಭದಲ್ಲಿ, ನನ್ನ ಶವವೂ ಬಿಜೆಪಿ ಬಾಗಿಲಿಗೆ ಹೋಗುವುದಿಲ್ಲ ಎಂದಿದ್ದರು. ನಂತರ ಆಗಿದ್ದೇನು? ಎಂದು ಪ್ರಶ್ನಿಸಿದರು. ಶ್ರೀರಾಮುಲು…

ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಮುಖ್ಯಮಂತ್ರಿ ಕುಮಾರಸ್ವಾಮಿ ಅಬ್ಬರ
ಮೈಸೂರು

ಉಪ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ: ಮುಖ್ಯಮಂತ್ರಿ ಕುಮಾರಸ್ವಾಮಿ ಅಬ್ಬರ

October 16, 2018

ಬೆಂಗಳೂರು:  ಮೈತ್ರಿ ಸರ್ಕಾರ ಪತನದ ಕನಸು ಕಾಣುತ್ತಿರುವ ಬಿಜೆಪಿಗೆ ರಾಜ್ಯದಲ್ಲಿ ಈಗ ನಡೆಯುತ್ತಿರುವ ಉಪಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಮುಖ್ಯ ಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಇದು ಸೆಮಿಫೈನಲ್ ಆಗಿದ್ದು ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇದು ಕೈಗನ್ನಡಿ. ತಮ್ಮ ಸರ್ಕಾರವನ್ನು ಅಪವಿತ್ರ ಮೈತ್ರಿ ಅಂತ ಟೀಕಿಸುತ್ತಿ ರುವವರಿಗೆ ಫಲಿತಾಂಶ ಪ್ರಜಾಪ್ರಭುತ್ವದಲ್ಲಿ ಜನ ಕೊಡುವ ನಿರ್ಧಾರವಾಗಿರುತ್ತದೆ. ಜೆಡಿಎಸ್ ಪಕ್ಷದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸಲು…

ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೋಣ: ಸಿಎಂ
ಮೈಸೂರು

ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೋಣ: ಸಿಎಂ

October 12, 2018

ಬೆಂಗಳೂರು: -ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜೀನಾಮೆ ನೀಡಿರುವುದು ಅವರ ಪಕ್ಷದ ಆಂತರಿಕ ವಿಚಾರವಾಗಿದ್ದು, ಸಚಿವರಾಗಿದ್ದರೆ ಪಕ್ಷ ಸಂಘಟನೆ ಸಾಧ್ಯವಿಲ್ಲವೆಂದು ಅವರು ರಾಜೀನಾಮೆ ಕೊಟ್ಟಿರಬಹುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ವಿಧಾನಸೌಧ ದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಹೇಶ್ ಅವರ ರಾಜೀನಾಮೆ ಅಂಗೀಕರಿಸುವ ವಿಚಾರ ಆಮೇಲೆ ನೋಡೊಣ ಎಂದ ರಲ್ಲದೆ, ಬಿಎಸ್‍ಪಿ ಮುಖಂಡರು ತಮ್ಮ ಸಂಪರ್ಕದಲ್ಲಿರುವುದಾಗಿ ತಿಳಿಸಿದರು. ಕೆಲ ವಿಷಯಗಳನ್ನು ಬಹಿರಂಗವಾಗಿ ಕೇಳಲು ಸಾಧ್ಯವಿಲ್ಲ. ಸೂಕ್ತ ಸಮಯ ದಲ್ಲಿ ಎಲ್ಲಾ ವಿಚಾರ ಕುರಿತು…

ಅಕ್ಟೋಬರ್ 3ರಂದು  ಮಂತ್ರಿಮಂಡಲ ವಿಸ್ತರಣೆ
ಮೈಸೂರು

ಅಕ್ಟೋಬರ್ 3ರಂದು  ಮಂತ್ರಿಮಂಡಲ ವಿಸ್ತರಣೆ

September 30, 2018

ಬೆಂಗಳೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲವನ್ನು ಅಕ್ಟೋಬರ್ 3ರಂದು ವಿಸ್ತರಿಸಲು ನಿರ್ಧರಿಸಿದ್ದಾರೆ. ಮೈತ್ರಿ ಪಕ್ಷ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಲಹೆಯಂತೆ ತಮ್ಮ ಮಂತ್ರಿ ಮಂಡಲವನ್ನು ವಿಸ್ತರಿಸಿ ಐದರಿಂದ ಆರು ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿ ಕೊಳ್ಳಲಿದ್ದಾರೆ. ಬಹುತೇಕ ಕಾಂಗ್ರೆಸ್‍ಗೆ ನಿಗದಿಯಾಗಿ ಸಂಪುಟದಲ್ಲಿ ಖಾಲಿ ಉಳಿ ದಿರುವ ಎಲ್ಲಾ ಸ್ಥಾನಗಳನ್ನು ಭರ್ತಿ ಮಾಡ ಲಿದ್ದು, ಕಾಂಗ್ರೆಸ್ ವರಿಷ್ಠರು ಹೆಸರಿಸುವವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರ್ಪಡೆ ಮಾಡಿಕೊಳ್ಳ ಲಿದ್ದಾರೆ. ಇದೇ ಕಾರಣಕ್ಕಾಗಿ ತಮ್ಮ ಚಿಕ್ಕಬಳ್ಳಾಪುರ ಪ್ರವಾಸವನ್ನು ರದ್ದುಪಡಿಸಿ…

ಸಿಎಂ ಹೆಚ್‍ಡಿಕೆ ಭೇಟಿ ಮಾಡಿದ ಪ್ರತಾಪ್‍ಸಿಂಹ
ಮಂಡ್ಯ

ಸಿಎಂ ಹೆಚ್‍ಡಿಕೆ ಭೇಟಿ ಮಾಡಿದ ಪ್ರತಾಪ್‍ಸಿಂಹ

September 27, 2018

ಮಂಡ್ಯ:  ನಗರದ ಪ್ರವಾಸಿ ಮಂದಿರಕ್ಕೆ ಬುಧವಾರ ದಿಢೀರ್ ಭೇಟಿ ನೀಡಿದ ಮೈಸೂರು-ಕೊಡಗು ಸಂಸದ ಪ್ರತಾಪಸಿಂಹ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಅಚ್ಚರಿ ಮೂಡಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಭೇಟಿ ನೀಡಿದಾಗ ಮೈಸೂರು-ಬೆಂಗಳೂರು ಎಕ್ಸ್‍ಪ್ರೆಸ್ ಹೈವೆಗೆ ಅನುಮತಿ ನೀಡಿದ್ದರು. ಆದರೆ, ಇದಕ್ಕಾಗಿ ಕೆಲ ಮರಗಳನ್ನು ತೆರವುಗೊಳಿಸಬೇಕು ಎಂಬುದರ ಬಗ್ಗೆ ವರದಿ ಆಗಿತ್ತು. ಈ ಸಂಬಂಧ ಮರಗಳ ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಇದು…

`ಕಾಂಪೀಟ್ ವಿತ್ ಚೈನಾ’ ಯೋಜನೆಗೆ ಪ್ರಸಕ್ತ ವರ್ಷ 500 ಕೋಟಿ ರೂ. ಅನುದಾನ
ಮೈಸೂರು

`ಕಾಂಪೀಟ್ ವಿತ್ ಚೈನಾ’ ಯೋಜನೆಗೆ ಪ್ರಸಕ್ತ ವರ್ಷ 500 ಕೋಟಿ ರೂ. ಅನುದಾನ

September 26, 2018

ಬೆಂಗಳೂರು: ರಾಜ್ಯ ಸರ್ಕಾರವು sಕಾಂಪೀಟ್ ವಿತ್ ಚೈನಾ ಯೋಜನೆ ಯಡಿ 9 ಜಿಲ್ಲೆಗಳಲ್ಲಿ ವಿವಿಧ ಕೈಗಾರಿಕಾ ಕ್ಲಸ್ಟರ್‌ಗಳನ್ನು ಸ್ಥಾಪಿಸುತ್ತಿದ್ದು, ಇದಕ್ಕಾಗಿ ಈ ವರ್ಷ 500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ಮುಂದಿನ ವರ್ಷ 2000 ಕೋಟಿ ರೂ. ಗಳನ್ನು ಒದಗಿಸಲಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಇಂದು ತಿಳಿಸಿದರು. ಅವರು ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕಾಂಪೀಟ್ ವಿತ್ ಚೈನಾ ಯೋಜನೆಯಡಿ ಸ್ಥಾಪಿಸಲಾದ ವಿವಿಧ ವಲಯಗಳ ಉದ್ಯಮಿಗಳನ್ನೊಳಗೊಂಡ 6 ವಿಷನ್ ಗ್ರೂಪ್‍ಗಳ ಸದಸ್ಯರೊಂದಿಗೆ ಸಂವಾದ…

1 2 3 4 19
Translate »