Tag: Hassan

ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23,  ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ
ಮೈಸೂರು

ಮೈಸೂರು-ಕೊಡಗು ಶೇ.68.85, ಮಂಡ್ಯ ಶೇ. 80.23, ಚಾಮರಾಜನಗರ ಶೇ.74.11, ಹಾಸನದಲ್ಲಿ ಶೇ.77.28 ದಾಖಲೆ ಮತದಾನ

April 19, 2019

ಮೈಸೂರು: ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಡಿಕೇರಿ, ವಿರಾಜಪೇಟೆ, ಪಿರಿಯಾಪಟ್ಟಣ, ಹುಣಸೂರು, ಚಾಮುಂಡೇಶ್ವರಿ, ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ವಿಧಾನಸಭಾ ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 18,95,056 ಮತದಾರರಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಾದ್ಯಂತ ಸ್ಥಾಪಿಸಿದ್ದ ಒಟ್ಟು 2,187 ಮತಗಟ್ಟೆಗಳಲ್ಲೂ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ವಿದ್ಯುತ್ ಸಂಪರ್ಕ ಸೇರಿದಂತೆ ಎಲ್ಲಾ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗಿತ್ತು. ಪ್ರತೀ ಮತಗಟ್ಟೆಯ ಬಳಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಹೆಸರು, ಕ್ರಮ ಸಂಖ್ಯೆ, ಚಿಹ್ನೆಗಳನ್ನು ಬರೆದು ಅಂಟಿಸಲಾಗಿತ್ತು. ಮತಗಟ್ಟೆ…

ಲೋಕಸಭಾ ಚುನಾವಣೆ ಇಂದು ಮತದಾನ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
ಹಾಸನ

ಲೋಕಸಭಾ ಚುನಾವಣೆ ಇಂದು ಮತದಾನ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

April 17, 2019

ಹಾಸನ: ಲೋಕಸಭಾ ಚುನಾ ವಣೆ ಇಂದು ಬೆಳಿಗ್ಗೆ 7ಗಂಟೆಯಿಂದ ಸಂಜೆ 6ಗಂಟೆಯವರೆಗೆ ನಡೆಯಲಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ವಿಧಾನಸಭಾ ಕ್ಷೇತ್ರ ಸೇರಿದಂತೆ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಯಶಸ್ವಿಯಾಗಿ ನಡೆಸಲು ಜಿಲ್ಲಾ ಡಳಿತ ಸಕಲ ಸಿದ್ಧತೆ ಕೈಗೊಂಡಿದೆ. ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾ ವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ಬುಧವಾರ ಎಲ್ಲಾ ವಿಧಾನಸಭಾ ಕ್ಷೇತ್ರವಾರು ರ್ಯಾಂಡ ಮೈಜೇಷನ್ ಪ್ರಕ್ರಿಯೆ ನಡೆಯಿತು. ಎಲ್ಲಾ ಚುನಾವಣಾ ಅಧಿಕಾರಿ, ಸಿಬ್ಬಂದಿ ಗಳು ಮತಯಂತ್ರ ಹಾಗೂ ವಿ.ವಿ.ಪ್ಯಾಟ್…

ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ
ಹಾಸನ

ಮತಗಟ್ಟೆಯತ್ತ ಹೆಜ್ಜೆ ಹಾಕಿದ ಸಿಬ್ಬಂದಿ

April 17, 2019

ಅರಸೀಕೆರೆ: ಲೋಕಸಭಾ ಚುನಾವಣೆ ಗುರುವಾರ ನಡೆ ಯಲಿರುವ ಹಿನ್ನೆಲೆ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತಗಟ್ಟೆಗಳಿಗೆ ತೆರಳಲು ಅವರಿಗೆ ವಿದ್ಯುನ್ಮಾನ ಮತ ಯಂತ್ರಗಳನ್ನು ಬುಧವಾರ ವಿತರಣೆ ಮಾಡಲಾಯಿತು. ತಾಲೂಕಿನ 276 ಮತಗಟ್ಟೆಗಳಿಗೆ 1,216 ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗಳು ನಗರದ ಸಂತ ಮೇರಿಯ ಪ್ರೌಢಶಾಲೆಯಲ್ಲಿ ನಡೆಸಲಾಗುತ್ತಿರುವ ಚುನಾವಣಾ ಸಾಮಗ್ರಿ ವಿತರಣಾ ಕೇಂದ್ರಕ್ಕೆ ಆಗಮಿಸಿ ಮತಯಂತ್ರಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡಿದರು. ಕೆಲವೊಂದು ಮಾಹಿತಿ ಗೊತ್ತಿಲ್ಲದ ಹಿನ್ನೆಲೆ ಹಿರಿಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ತಮ್ಮಗೆ ನಿಯೋಜನೆಗೊಳಿಸಿದ್ದ ಸ್ಥಳಕ್ಕೆ ತೆರಳಿದರು. ಚುನಾವಣೆ…

ಹೊಯ್ಸಳರ ನಾಡಿನಲ್ಲಿ ಚಲುವಚೆನ್ನಿಗನ ವಿಜೃಂಭಣೆಯ ರಥೋತ್ಸವ
ಹಾಸನ

ಹೊಯ್ಸಳರ ನಾಡಿನಲ್ಲಿ ಚಲುವಚೆನ್ನಿಗನ ವಿಜೃಂಭಣೆಯ ರಥೋತ್ಸವ

April 17, 2019

ಬೇಲೂರು: ಹೊಯ್ಸಳರ ನಾಡಾದ ಬೇಲೂರಿನಲ್ಲಿ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಅಂಗವಾಗಿ ಬುಧ ವಾರ ಮಧ್ಯಾಹ್ನ ಸಹಸ್ರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆ ಯಿಂದ ನಾಡ ರಥೋತ್ಸವ ನೆರವೇರಿತು. ರಥವನ್ನು ದೇವಾಲಯದ ಮೂರು ದಿಕ್ಕುಗಳಲ್ಲಿಯೂ ಎಳೆದು ರಥದ ಮನೆಯ ಸ್ವಸ್ಥಾನದ ಸಮೀಪ ನಿಲ್ಲಿಸಲಾಯಿತು. ಈ ಮೂಲಕ ಸಾವಿರಾರು ಜನರು ನಾಡಿನ ರಥೋತ್ಸವಕ್ಕೆ ಸಾಕ್ಷೀಕರಿಸಿದರು. ಎರಡನೇ ದಿನವಾದ ಬುಧವಾರ ದಂದು ನಾಡ ರಥೋತ್ಸವವು ವಿಶೇಷ ವಾಗಿ ಗ್ರಾಮೀಣ ಪ್ರದೇಶದವರಿಗೆ ಮೀಸ ಲಾದ ರಥೋತ್ಸವವಾಗಿದೆ. ಪಟ್ಟಣದ ವಿಷ್ಣು ಸಮುದ್ರದ ಕಲ್ಯಾಣಿ…

ಸಂಭ್ರಮದ ಮಹಾವೀರ ಜಯಂತಿ ಆಚರಣೆ
ಹಾಸನ

ಸಂಭ್ರಮದ ಮಹಾವೀರ ಜಯಂತಿ ಆಚರಣೆ

April 17, 2019

ಶ್ರವಣಬೆಳಗೊಳ: ಪಾರಂ ಪರಿಕ ನಂಬಿಕೆಗಳನ್ನು ಇಟ್ಟುಕೊಂಡು, ತನ್ನ ಧರ್ಮದ ಸಿದ್ಧಾಂತಗಳನ್ನು ಚಾಚೂ ತಪ್ಪದೆ ಪರಿಪಾಲನೆ ಮಾಡುತ್ತ ವಿಶ್ವದ ಅನಂತ ಸತ್ಯಗಳನ್ನು ಪ್ರತಿಪಾದಿಸುತ್ತಿರುವ ಅಹಿಂಸಾ ಧರ್ಮವೇ ಜೈನ ಧರ್ಮ ಎಂದು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಶ್ರವಣಬೆಳಗೊಳದ ಜೈನ ಮಠದ ಆವರಣದಲ್ಲಿರುವ ಮಠದ ಬಸದಿಯಲ್ಲಿ ಬುಧವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈನ ಧರ್ಮದ 24ನೇ ತೀರ್ಥಂಕರರಾದ ಭಗವಾನ್ ಮಹಾವೀರರು ಮಹತ್ವದ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರು ಗೌತಮ ಬುದ್ಧನ ಸಮಕಾಲೀನರಾಗಿದ್ದು, ‘ಬದುಕು-ಬದುಕಲು ಬಿಡು’ ಎಂಬ…

ಸಖಿ’ ಮತಗಟ್ಟೆ
ಹಾಸನ

ಸಖಿ’ ಮತಗಟ್ಟೆ

April 17, 2019

ಹಾಸನ: ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ರಂತೆ 14 ಕಡೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅರಸೀಕೆರೆ ನಗರದ ಹೊಯ್ಸಳ ನಗರದಲ್ಲಿರುವ ಗೌರಮ್ಮ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 131ನ್ನು ಸಖಿ ಮತಗಟ್ಟೆ ಎಂದು ಹೆಸರಿಸಲಾಗಿದೆ. ಈ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. ಈ ಮತಗಟ್ಟೆಯಲ್ಲಿ ಮತ ಚಲಾಯಿಸುವವರು, ಹಾಸನ ಜಿಲ್ಲಾ ಚುನಾವಣಾ ರಾಯಭಾರಿಯಾದ ಚಂದನ್ ಶೆಟ್ಟಿ ರವರ ಭಾವಚಿತ್ರದ ಜೊತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಅದಲ್ಲದೆ ‘ವಿಶೇಷ ಚೇತನರು’ ಕಾರ್ಯ…

ಜೆಡಿಎಸ್ ನಾಯಕರಿಗೆ ಬ್ಯಾಕ್ ಟು ಬ್ಯಾಕ್ IT ಶಾಕ್
ಮೈಸೂರು

ಜೆಡಿಎಸ್ ನಾಯಕರಿಗೆ ಬ್ಯಾಕ್ ಟು ಬ್ಯಾಕ್ IT ಶಾಕ್

April 17, 2019

ಹಾಸನ: ಹಾಸನ ಮತ್ತು ಮಂಡ್ಯದಲ್ಲಿ ಇಂದು ಮತ್ತೆ ಐಟಿ ಆಧಿಕಾರಿಗಳು ದಾಳಿ ನಡೆಸಿದ್ದು, ಸಚಿವ ರೇವಣ್ಣ ಅವರ ಸೋದರ ಸಂಬಂಧಿ ಮನೆ ಮೇಲೆ ಮಂಗಳವಾರ ಬೆಳಿಗ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಇಂದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಇದಕ್ಕೂ ಮೊದಲೇ ಐಟಿ ಇಲಾಖೆ ದೇವೇ ಗೌಡರ ಕುಟುಂಬಕ್ಕೆ ಶಾಕ್ ನೀಡಿದೆ. ಪಾಪಣ್ಣಿ ರೇವಣ್ಣ ಸೋದರ ಸಂಬಂಧಿ. ದೇವೇಗೌಡರ ಹುಟ್ಟೂರು ಹರದನಹಳ್ಳಿಯಲ್ಲಿ ಪಾಪಣ್ಣಿ ವಾಸವಾಗಿದ್ದಾರೆ. ಇಂದು ಬೆಳ್ಳಂಬೆಳಗ್ಗೆ 3…

ಲೋಕಸಭಾ ಚುನಾವಣೆ: ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ
ಹಾಸನ

ಲೋಕಸಭಾ ಚುನಾವಣೆ: ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

April 17, 2019

ಹಾಸನ: ಲೋಕಸಭಾ ಚುನಾ ವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಏ. 16ರ ಸಂಜೆ 6ರಿಂದಲೇ 144 ಸೆಕ್ಷನ್ ಜಾರಿಯಾ ಗಿದ್ದು, ಜಿಲ್ಲಾದ್ಯಂತ ಯಾವುದೇ ಪಕ್ಷ ಬಹಿ ರಂಗ ಪ್ರಚಾರ ನಡೆಸುವಂತಿಲ್ಲ. ಸಂಪೂರ್ಣ ವಾಗಿ ಒಣ ದಿನ ಘೋಷಣೆಯಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರ ಉಪಸ್ಥಿತಿಯಲ್ಲಿ ಸೆಕ್ಟರ್ ಅಧಿಕಾರಿಗಳೊಂ ದಿಗೆ ವೀಡಿಯೋ ಸಂವಾದ ನಡೆಸಿ ಮಾತ…

ಟೀಮ್ ಮೋದಿಯಿಂದ ಬೃಹತ್ ರ್ಯಾಲಿ, ಬಿಜೆಪಿ ಪರ ಮತ ಯಾಚನೆ
ಹಾಸನ

ಟೀಮ್ ಮೋದಿಯಿಂದ ಬೃಹತ್ ರ್ಯಾಲಿ, ಬಿಜೆಪಿ ಪರ ಮತ ಯಾಚನೆ

April 17, 2019

ಅರಸೀಕೆರೆ: ಟೀಮ್ ಮೋದಿಯಿಂದ ನಗರದಲ್ಲಿ ಮಂಗಳ ವಾರ ನಡೆದ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸುವುದರ ಮೂಲಕ ಮೋದಿ, ಬಿಜೆಪಿ ಪರವಾಗಿ ಮತ ಕೇಳಿದರು. ನಗರದ ಎಪಿಎಂಸಿ ಮಹಾ ದ್ವಾರದಿಂದ ಪ್ರಾರಂಭಗೊಂಡ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಟೀಮ್ ಮೋದಿ ತಾಲೂಕು ಘಟಕದ ಸಂಚಾಲಕ ಕಣಕಟ್ಟೆ ಮಂಜು ನಾಥ್ ಮಾತನಾಡಿ, ದೇಶದಲ್ಲಿ ಉಂಟಾ ಗಿರುವ ಪ್ರಧಾನಿ ನರೇಂದ್ರ ಮೋದಿ ಅಲೆ ಯಿಂದ ಕಾಂಗ್ರೆಸ್ ಮುಖಂಡರು ಥರಗು ಟ್ಟುತ್ತಿದ್ದರೆ. ಜೆಡಿಎಸ್ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್…

ಶಿಲ್ಪಕಲೆಗಳ ತವರೂರಿನಲ್ಲಿ ಚೆನ್ನಕೇಶವಸ್ವಾಮಿ ರಥೋತ್ಸವ
ಹಾಸನ

ಶಿಲ್ಪಕಲೆಗಳ ತವರೂರಿನಲ್ಲಿ ಚೆನ್ನಕೇಶವಸ್ವಾಮಿ ರಥೋತ್ಸವ

April 17, 2019

ಬೇಲೂರು: ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿ ಯವರ ದಿವ್ಯ ರಥೋತ್ಸವವು ಮಂಗಳ ವಾರ ಬೆಳಿಗ್ಗೆ ದೇವಾಲಯದ ಮುಂಭಾಗ ಸೇರಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀ ಯವರ ಉತ್ಸವ ಮೂರ್ತಿಯನ್ನು ಅಲಂ ಕಾರಗೊಂಡ ದಿವ್ಯ ರಥದಲ್ಲಿ ಕೂರಿಸಲಾ ಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಬಲಿ ಯನ್ನು ಕೊಡಲಾಯಿತು. ಚಿಕ್ಕಮೇದೂರಿನ ಮೌಲ್ವಿ ರಥದ ಮುಂದೆ ಕುರಾನ್ ಗ್ರಂಥದ…

1 29 30 31 32 33 103
Translate »