ಸಖಿ’ ಮತಗಟ್ಟೆ
ಹಾಸನ

ಸಖಿ’ ಮತಗಟ್ಟೆ

April 17, 2019

ಹಾಸನ: ಜಿಲ್ಲೆಯಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 2ರಂತೆ 14 ಕಡೆಗಳಲ್ಲಿ ಮಹಿಳಾ ಸಿಬ್ಬಂದಿಗಳೇ ಕಾರ್ಯನಿರ್ವಹಿಸುವ ‘ಸಖಿ’ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

ಅರಸೀಕೆರೆ ನಗರದ ಹೊಯ್ಸಳ ನಗರದಲ್ಲಿರುವ ಗೌರಮ್ಮ ಪ್ರೌಢಶಾಲೆ ಮತಗಟ್ಟೆ ಸಂಖ್ಯೆ 131ನ್ನು ಸಖಿ ಮತಗಟ್ಟೆ ಎಂದು ಹೆಸರಿಸಲಾಗಿದೆ.

ಈ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಗಳನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಿಸಲಿದ್ದಾರೆ. ಈ ಮತಗಟ್ಟೆಯಲ್ಲಿ ಮತ ಚಲಾಯಿಸುವವರು, ಹಾಸನ ಜಿಲ್ಲಾ ಚುನಾವಣಾ ರಾಯಭಾರಿಯಾದ ಚಂದನ್ ಶೆಟ್ಟಿ ರವರ ಭಾವಚಿತ್ರದ ಜೊತೆ ಸೆಲ್ಫಿ ತೆಗೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ.

ಅದಲ್ಲದೆ ‘ವಿಶೇಷ ಚೇತನರು’ ಕಾರ್ಯ ನಿರ್ವಹಿಸುವ 01 ಮತಗಟ್ಟೆಯನ್ನು ಹಾಸನ ನಗರದಲ್ಲಿ ಸ್ಥಾಪಿಸಲಾಗಿದೆ. ಹಾಗೆಯೇ ಹಗರೆ ಬಳಿಯ ಅಂಗಡಿಹಳ್ಳಿಯಲ್ಲಿ ‘ಪರಂಪರೆ’ ಮತಗಟ್ಟೆಯನ್ನು ಸ್ಥಾಪಿಸಲಾಗಿದೆ.

Translate »