ಲೋಕಸಭಾ ಚುನಾವಣೆ: ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ
ಹಾಸನ

ಲೋಕಸಭಾ ಚುನಾವಣೆ: ಜಿಲ್ಲಾದ್ಯಂತ 144 ಸೆಕ್ಷನ್ ಜಾರಿ

April 17, 2019

ಹಾಸನ: ಲೋಕಸಭಾ ಚುನಾ ವಣೆ ಹಿನ್ನೆಲೆ ಜಿಲ್ಲೆಯಾದ್ಯಂತ ಏ. 16ರ ಸಂಜೆ 6ರಿಂದಲೇ 144 ಸೆಕ್ಷನ್ ಜಾರಿಯಾ ಗಿದ್ದು, ಜಿಲ್ಲಾದ್ಯಂತ ಯಾವುದೇ ಪಕ್ಷ ಬಹಿ ರಂಗ ಪ್ರಚಾರ ನಡೆಸುವಂತಿಲ್ಲ. ಸಂಪೂರ್ಣ ವಾಗಿ ಒಣ ದಿನ ಘೋಷಣೆಯಾಗಿದೆ ಎಂದು ಜಿಲ್ಲಾಧಿಕಾರಿಯೂ ಆದ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಚೇತನ್ ಸಿಂಗ್ ರಾಥೋಡ್ ಅವರ ಉಪಸ್ಥಿತಿಯಲ್ಲಿ ಸೆಕ್ಟರ್ ಅಧಿಕಾರಿಗಳೊಂ ದಿಗೆ ವೀಡಿಯೋ ಸಂವಾದ ನಡೆಸಿ ಮಾತ ನಾಡಿದ ಅವರು, ಲೋಕಸಭಾ ಚುನಾವ ಣೆಗೆ ಕೇವಲ ಒಂದು ದಿನವಷ್ಟೇ ಬಾಕಿ ಉಳಿದಿದ್ದು, ಮತಗಟ್ಟೆಗಳಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯ ದಂತೆ ಎಚ್ಚರ ವಹಿಸಬೇಕಿದೆ. ಮನೆ ಮನೆ ಪ್ರಚಾರ ಹೊರತುಪಡಿಸಿ ಬೇರೆ ಯಾವ ಪ್ರಚಾರಗಳನ್ನು ಮಾಡದಿರುವಂತೆ ನಿಗಾ ವಹಿಸಬೇಕು ಎಂದು ತಿಳಿಸಿದರು.

ವಿಶೇಷ ಚೇತನರನ್ನು ಮತದಾನಕ್ಕೆ ಕರೆತರಲು ಜಿಲ್ಲಾ ಪಂಚಾಯಿತಿ ವತಿ ಯಿಂದ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಆಟೋ ಹಾಗೂ ಟೆಂಪೋ ವ್ಯವಸ್ಥೆ ಯನ್ನು ಕಲ್ಪಿಸಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನದನ್ವಯ ವಾಹನ ಚಾಲಕರು ಕರ್ತವ್ಯ ನಿರ್ವಹಿಸಬೇಕು. ವಿಕಲಚೇತನರಿಗೆಂದು ನಿಯೋಜನೆಗೊಂಡಿ ರುವ ವಾಹನಗಳಲ್ಲಿ ಇತರೆ ಸಾರ್ವಜನಿಕರ ನ್ನಾಗಲೀ ಅಥವಾ ಯಾವುದೇ ಪಕ್ಷದವರ ನ್ನಾಗಲೀ ಕರೆದೊಯ್ಯುವಂತಿಲ್ಲ ಹಾಗೂ ಯಾವುದೇ ಪಕ್ಷದ ಪೋಸ್ಟರ್‍ಗಳನ್ನು ಹಾಕುವಂತಿರುವುದಿಲ್ಲ ಎಂದು ಹೇಳಿದರು.
ಇನ್ನು ಮತಗಟ್ಟೆಗಳಲ್ಲಿ ಯಾವುದೇ ಸಮಸ್ಯೆಗಳಿರಬಾರದು. ಕುಡಿಯುವ ನೀರು, ಶೌಚಾಲಯಗಳಿಗೆ ನೀರಿನ ಸೌಲಭ್ಯ ಸೇರಿ ದಂತೆ ವಿದ್ಯುತ್ ವ್ಯವಸ್ಥೆ ಉತ್ತಮವಾಗಿರ ಬೇಕು. ಬೇಲೂರು ಸಕಲೇಶಪುರದಲ್ಲಿ ಮಳೆ ಬರುವ ಸಾಧ್ಯತೆ ಇದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಬೇಕು ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಮಾತನಾಡಿ, ಇಂದಿನಿಂ ದಲೇ ಸೆಕ್ಟರ್ ಪೊಲೀಸ್ ಮೊಬೈಲ್ ಕಾರ್ಯ ನಿರ್ವಹಿಸಲಿದ್ದು, ಮಸ್ಟರಿಂಗ್ ಸಮಯ ದಲ್ಲಿ ಇವಿಎಂ ಹಾಗೂ ವಿವಿ ಪ್ಯಾಟ್‍ಗಳನ್ನು ರವಾನಿಸುವಂತಹ ಬಸ್‍ಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಮುಖಾಂತರ ಮತಗಟ್ಟೆಗಳನ್ನು ತಲುಪಲಿದೆ ಎಂದರು.
ಚುನಾವಣೆ ಹಿನ್ನೆಲೆ ಮತದಾನದ ದಿನ ಬಹಳ ಸೂಕ್ಷ್ಮವಾಗಿ ಪ್ರತಿಯೊಂದನ್ನೂ ಗಮನಿಸುತ್ತಿರಬೇಕು. ಯಾವುದೇ ಅಹಿತ ಕರ ಘಟನೆಗಳು ನಡೆಯದಂತೆ ಜವಾ ಬ್ದಾರಿಯುತವಾಗಿ ಕಾರ್ಯ ನಿರ್ವಹಿಸ ಬೇಕು ಎಂದರಲ್ಲದೇ ಚೆಕ್ ಪೋಸ್ಟ್ ಬಳಿ ಕೆಲಸ ನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಎಲ್ಲಾ ವಾಹನಗಳ ತಪಾಸಣೆ ನಡೆಸಬೇಕು. ಎಲ್ಲಾ ಅಧಿಕಾರಿಗಳು, ಎಲ್ಲಾ ವಾಹನ ಗಳನ್ನು ಕಡ್ಡಾಯವಾಗಿ ತಪಾಸಣೆಗೊಳ ಪಡಿಸಬೇಕು ಸೆಕ್ಟರ್ ಅಧಿಕಾರಿಗಳು ಹೆಚ್ಚಿನ ಮುತುವರ್ಜಿವಹಿಸಿ ಕೆಲಸ ಮಾಡಬೇಕು. ಅಕ್ರಮಗಳ ಮೇಲೆ ಕಣ್ಗಾವಲು ಇಡಬೇಕು ಎಂದು ತಿಳಿಸಿದರು.

ಕೆಲವು ಹಳ್ಳಿಗಳಲ್ಲಿ ಚುನಾವಣಾ ಹಿನ್ನೆಲೆ ಗಲಾಟೆಯಾಗುವ ಸಂಭವವಿರುವುದು. ಈ ಹಿಂದೆ ಚುನಾವಣಾ ಸಂಬಂಧ ಯಾವುದಾ ದರೂ ಗಲಾಟೆಯಾಗಿದೆಯೇ ಎಂದು ಪರಿ ಗಣಿಸಿ ಅಲ್ಲಿರುವ ಪುಂಡರುಗಳ ಬಗ್ಗೆ ನಿಗಾ ವಹಿಸ ಬೇಕು ಎಂದು ಸೂಚನೆ ನೀಡಿ ದರು. ನಮ್ಮ ಜಿಲ್ಲೆಯ ಮತದಾರರಲ್ಲದವ ರನ್ನು ಗುರುತಿಸಿ ಸೂಕ್ತ ತನಿಖೆ ನಡೆಸಿ ಎಂದು ಚೇತನ್ ಸಿಂಗ್ ರಾಥೋಡ್ ತಿಳಿಸಿದರು.

ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತ ದಾನ ನಡೆಯಲು ಸೆಕ್ಟರ್ ಮೊಬೈಲ್ ಗಳನ್ನು ನಿಯೋಜಿಸಿದ್ದು ಎಲ್ಲಾ ಸೆಕ್ಟರ್ ಮೊಬೈಲ್ ಅಧಿಕಾರಿಗಳು ಮತಗಟ್ಟೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆಯು ತ್ತಾರೆ. ಯಾವುದೇ ಅಹಿತಕರ ಬೆಳವಣಿಗೆಗೆ ಆಸ್ಪದ ನೀಡದಂತೆ ಸೂಕ್ಷ್ಮವಾಗಿ ಗಮನಿಸ ಬೇಕು ಎಂದರು.

ಅಕ್ರಮಗಳಿಗೆ ಅವಕಾಶ ನೀಡದಂತೆ ಕಟ್ಟೆಚ್ಚರ ವಹಿಸಿ ತಪಾಸಣೆಗಳನ್ನು ನಡೆಸು ವಂತೆ ಸೂಚಿಸಿದರಲ್ಲದೆ, ಅನುಮಾನಗಳು ಕಂಡು ಬಂದಲ್ಲಿ ದಾಖಲೆಗಳನ್ನು ಕೂಡ ಪರಿಶೀಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಹಾಗೂ ಎಂಸಿಸಿ ನೋಡಲ್ ಅಧಿಕಾರಿ ಪ್ರಿಯಾಂಗ.ಎಂ, ತಹಸೀಲ್ದಾರ್ ಶ್ರೀನಿವಾಸಯ್ಯ ಸೇರಿದಂತೆ ಎಲ್ಲಾ ಸೆಕ್ಟರ್ ಅಧಿಕಾರಿಗಳು ಹಾಜರಿದ್ದರು.

Translate »