ಟೀಮ್ ಮೋದಿಯಿಂದ ಬೃಹತ್ ರ್ಯಾಲಿ, ಬಿಜೆಪಿ ಪರ ಮತ ಯಾಚನೆ
ಹಾಸನ

ಟೀಮ್ ಮೋದಿಯಿಂದ ಬೃಹತ್ ರ್ಯಾಲಿ, ಬಿಜೆಪಿ ಪರ ಮತ ಯಾಚನೆ

April 17, 2019

ಅರಸೀಕೆರೆ: ಟೀಮ್ ಮೋದಿಯಿಂದ ನಗರದಲ್ಲಿ ಮಂಗಳ ವಾರ ನಡೆದ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಯುವಕರು ಭಾಗವಹಿಸುವುದರ ಮೂಲಕ ಮೋದಿ, ಬಿಜೆಪಿ ಪರವಾಗಿ ಮತ ಕೇಳಿದರು.

ನಗರದ ಎಪಿಎಂಸಿ ಮಹಾ ದ್ವಾರದಿಂದ ಪ್ರಾರಂಭಗೊಂಡ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಟೀಮ್ ಮೋದಿ ತಾಲೂಕು ಘಟಕದ ಸಂಚಾಲಕ ಕಣಕಟ್ಟೆ ಮಂಜು ನಾಥ್ ಮಾತನಾಡಿ, ದೇಶದಲ್ಲಿ ಉಂಟಾ ಗಿರುವ ಪ್ರಧಾನಿ ನರೇಂದ್ರ ಮೋದಿ ಅಲೆ ಯಿಂದ ಕಾಂಗ್ರೆಸ್ ಮುಖಂಡರು ಥರಗು ಟ್ಟುತ್ತಿದ್ದರೆ. ಜೆಡಿಎಸ್ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದೆ ಎಂದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಮೋದಿ ವಿರುದ್ಧ ವಾಗಿ ಅಪಪ್ರಚಾರ ಮಾಡಿದರೂ, ಆ ಬೆಳವಣಿಗೆಗಳೆಲ್ಲ ಪ್ರಧಾನಿ ಮೋದಿಗೆ ಲಾಭವಾಗುತ್ತಿದೆ. ಚೌಕಿದಾರ್ ಚೋರ್ ಎನ್ನುವ ಪದವನ್ನು ಉಪಯೋಗಿಸಿ ಪ್ರಧಾನಿ ಯಾಗುವ ಹಗಲುಗನಸು ಕಾಣುತ್ತಿರುವ ರಾಹುಲ್ ಗಾಂಧಿಗೆ ಸುಪ್ರೀಂ ಕೋರ್ಟ್ ನೋಟಿಸ್ ನೀಡುವುದರ ಮೂಲಕ ಚಾಟಿ ಏಟು ಬೀಸಿದೆ ಎಂದು ತಿಳಿಸಿದರು.

ಹಿಂದಿನ ಹಿರಿಯರು ಮಾಡಿರುವ ತಪ್ಪನ್ನು ಇಂದಿನ ಯುವ ಜನಾಂಗ ಮಾಡದೇ ದೇಶ ರಕ್ಷಣೆಗಾಗಿ ಜೀವನವನ್ನೇ ಮುಡಿಪಾಗಿ ಟ್ಟಿರುವ ನರೇಂದ್ರ ಮೋದಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ದೇಶದ ಯುವ ಜನತೆ ನೀಡಿದ್ದಾರೆ. ಯಾವುದೇ ಕ್ಷೇತ್ರದಲ್ಲೂ ತಾರತಮ್ಯವಿಲ್ಲದೇ ಪ್ರತಿಭಾ ವಂತರಿಗೆ ಸೂಕ್ತ ಅವಕಾಶಗಳ ಬಾಗಿಲನ್ನು ತೆರದಿಟ್ಟಿರುವ ಮೋದಿಯವರಿಗೆ ದೇಶದ ಕೋಟ್ಯಾಂತರ ಯುವ ಪಡೆ ಇಂದು ಸಾಥ್ ನೀಡಲು ಮುಂದಾಗಿದೆ ಎಂದರು.

ವಿದೇಶಗಳಲ್ಲಿ ಉದ್ಯೋಗಗಳನ್ನು ಹುಡುಕಿಕೊಂಡು ಹೋಗುತ್ತಿದ್ದ ನಮ್ಮ ದೇಶದ ಯುವಕರಿಗೆ ಆತ್ಮಸ್ಥೈರ್ಯವನ್ನು ತುಂಬಿ ಸ್ವದೇಶದಲ್ಲೇ ಉದ್ಯೋಗವನ್ನು ಮಾಡುವಂತೆ ವಿವಿಧ ಅವಕಾಶಗಳನ್ನು ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೀಡಿದೆ. ಐದು ವರ್ಷಗಳ ಅವಧಿಯಲ್ಲಿ ನರೇಂದ್ರ ಮೋದಿ ಮಾಡಿರುವ ಸಾಧನೆಗಳನ್ನು ಕಂಡು ಅಸೂಯೆ ಪಡುತ್ತಿರುವ ವಿರೋಧ ಪಕ್ಷಗಳು ಇಂದು ಇಲ್ಲ ಸಲ್ಲದ ಆರೋಪ ಗಳನ್ನು ಮಾಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಬಹುತೇಕ ಈ ಎಲ್ಲ ವಿರೋಧ ಪಕ್ಷಗಳು ಕಣ್ಣಿಗೆ ಕಾಣದಂತೆ ಮಾಯ ವಾದರೂ ಆಶ್ವರ್ಯವಿಲ್ಲ. ಒಟ್ಟಿನಲ್ಲಿ ಚೌಕಿ ದಾರ್ ನರೇಂದ್ರ ಮೋದಿ ಬಗ್ಗೆ ಈ ದೇಶವೇ ಬೆಂಬಲವಾಗಿ ನಿಂತಿದ್ದು ವಿಶ್ವಕ್ಕೆ ಮಾದರಿ ಯಾಗುವುದರಲ್ಲಿ ಯಾವುದೇ ಸಂಶಯ ನಮ್ಮ ಯುವ ಜನಾಂಗಕ್ಕೆ ಬೇಡ ಎಂದರು.

ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ. ಪ್ರಸಾದ್ ಮಾತನಾಡಿ, ಹೆಚ್‍ಎಂಟಿ ಎಂದೇ ಬಿಂಬಿತವಾಗಿರುವ ತುಮಕೂರು, ಮಂಡ್ಯ ಮತ್ತು ಹಾಸನದಲ್ಲಿ ಮೈತ್ರಿ ಪಕ್ಷಗಳ ಬೆಂಬ ಲಿತ ಅಭ್ಯರ್ಥಿ ಎಂದು ಬಿಂಬಿಸಿಕೊಂಡಿ ರುವ ಜೆಡಿಎಸ್ ಅಭ್ಯರ್ಥಿಗಳ ಸೋಲು ಕಟ್ಟಿಟ್ಟ ಬುತ್ತಿ. ಒಂದು ವೇಳೆ ರಾಹುಲ್ ಗಾಂಧಿ ಪ್ರಧಾನಮಂತ್ರಿ ಆಗಬೇಕಾದರೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕೃಪಾ ಕಟಾಕ್ಷ ಬೇಕೆಂದು ಹೇಳಿಕೆ ಕೊಡು ತ್ತಿರುವ ಸ್ಥಳೀಯ ನಾಯಕರ ಹೇಳಿಕೆ ಗಳನ್ನು ನೋಡಿದಾಗ ಕುಟುಂಬ ರಾಜ ಕಾರಣದ ಸರ್ವಾಧಿಕಾರಿ ಧೋರಣೆ ಕಾಣುತ್ತಿದೆ ಎಂದರು.

ರ್ಯಾಲಿಯು ನಗರದ ಅಯ್ಯಪ್ಪ ಸ್ವಾಮಿ ದೇವಾಲಯದಿಂದ ಪ್ರಾರಂಭಗೊಂಡು ವಿವಿಧ ರಸ್ತೆಗಳಲ್ಲಿ ಸಾಗುವುದರ ಮೂಲಕ ಅಂಬೇಡ್ಕರ್ ವೃತ್ತದಲ್ಲಿ ಕೊನೆಗೊಂಡಿತು. ರ್ಯಾಲಿಯಲ್ಲಿ ನಗರಸಭೆ ಸದಸ್ಯ ಗಿರೀಶ್, ಮುಖಂಡರಾದ ಮನೋಜ್‍ಕುಮಾರ್, ನವರತನ್ ಜೈನ್, ಕರಗುಂದ ದಿನೇಶ್, ಕೊಟ್ರೇಶ್, ಕಿರಣ್, ನಿರ್ಮಲ್ ಜೈನ್, ವಕೀಲ ಶರತ್, ಪೂಲ್‍ಚಂದ್, ಮೀನಾಕ್ಷಿ, ಚಂದ್ರ ಶೇಖರ್, ಪ್ರವೀಣ್, ರಾಘವೇಂದ್ರ, ಕುಟ್ಟಿ, ಕಾಟೀಕೆರೆ ಸಂತೋಷ್ ಸೇರಿದಂತೆ ಮೋದಿ ಅಭಿಮಾನಿಗಳು ಭಾಗವಹಿಸಿದ್ದರು.

Translate »