ಶಿಲ್ಪಕಲೆಗಳ ತವರೂರಿನಲ್ಲಿ ಚೆನ್ನಕೇಶವಸ್ವಾಮಿ ರಥೋತ್ಸವ
ಹಾಸನ

ಶಿಲ್ಪಕಲೆಗಳ ತವರೂರಿನಲ್ಲಿ ಚೆನ್ನಕೇಶವಸ್ವಾಮಿ ರಥೋತ್ಸವ

April 17, 2019

ಬೇಲೂರು: ವಿಶ್ವ ವಿಖ್ಯಾತ ಬೇಲೂರು ಶ್ರೀ ಚೆನ್ನಕೇಶವಸ್ವಾಮಿ ಯವರ ದಿವ್ಯ ರಥೋತ್ಸವವು ಮಂಗಳ ವಾರ ಬೆಳಿಗ್ಗೆ ದೇವಾಲಯದ ಮುಂಭಾಗ ಸೇರಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ಚೆನ್ನಕೇಶವಸ್ವಾಮಿ ದೇಗುಲದಲ್ಲಿ ಪೂಜಾ ವಿಧಿವಿಧಾನಗಳನ್ನು ಪೂರೈಸಿ ಯಾತ್ರಾದಾನ ಸೇವೆಯ ನಂತರ ಶ್ರೀ ಯವರ ಉತ್ಸವ ಮೂರ್ತಿಯನ್ನು ಅಲಂ ಕಾರಗೊಂಡ ದಿವ್ಯ ರಥದಲ್ಲಿ ಕೂರಿಸಲಾ ಯಿತು. ರಥಕ್ಕೆ ಪೂಜೆಯನ್ನು ಸಲ್ಲಿಸಿದ ನಂತರ ಬಾಳೆಕಂದನ್ನು ಕತ್ತರಿಸಿ ಬಲಿ ಯನ್ನು ಕೊಡಲಾಯಿತು. ಚಿಕ್ಕಮೇದೂರಿನ ಮೌಲ್ವಿ ರಥದ ಮುಂದೆ ಕುರಾನ್ ಗ್ರಂಥದ ಕೆಲವು ಸಾಲುಗಳನ್ನು ಪಠಣೆ ಮಾಡಿದ ನಂತರ ಭಕ್ತರ ಘೋಷದ ನಡುವೆ 10-35 ನಿಮಿಷಕ್ಕೆ ರಥವನ್ನು ಮೂಲಸ್ಥಾನ ದಿಂದ ಎಳೆಯಲಾಯಿತು.ಈ ಬಾರಿಯ ರಥೋತ್ಸವದಲ್ಲಿ ಮೈಸೂರು ಮಹಾರಾಜರ ವಂಶಸ್ಥರಾದ ಯದುವೀರ ಕೃಷ್ಣರಾಜ ಒಡೆಯರ್ ಪಾಲ್ಗೊಂಡು ಚೆನ್ನಕೇಶವ ಸ್ವಾಮಿಯ ದರ್ಶನವನ್ನು ಪಡೆದು ರಥ ವನ್ನು ಭಕ್ತರ ಜೊತೆಗೂಡಿ ಎಳೆದಿದ್ದು ರಥೋತ್ಸವಕ್ಕೆ ಮೆರಗನ್ನು ತಂದಿತ್ತು.

7ನೇ ದಿನದ ಬ್ರಹ್ಮರಥೋತ್ಸವದ ಪ್ರಯುಕ್ತ ಇಂದು ಬೆಳಿಗ್ಗೆ ಸುಪ್ರಭಾತಾ ಪೂಜೆ ಯೊಂದಿಗೆ ವಿಜೃಂಭಣೆಯಿಂದ ಯಾಗ ಶಾಲೆಯಲ್ಲಿನ ಹೋಮಕಾರ್ಯಗಳನ್ನು ಕೈಗೊಳ್ಳಲಾಯಿತು.

ನಂತರ ದಿವ್ಯರಥಕ್ಕೆ ಪೂಜೆ ಸಲ್ಲಿಸಿ ಬಲಿ ಅನ್ನವನ್ನು ನಾಲ್ಕು ಚಕ್ರಗಳಿಗೂ ಸಮರ್ಪಿಸಲಾಯಿತು. ಬಲಿ ಪ್ರಧಾನವನ್ನು ನೆರವೇರಿಸಲಾಯಿತು. ಯಾತ್ರಾದಾನದ ನಂತರ ಶ್ರೀಯವರ ಉತ್ಸವ ಮೂರ್ತಿಯನ್ನು ಕೃಷ್ಣಾಗಂಧೋತ್ಸವ ದೊಂದಿಗೆ 8 ಬೀದಿಯಲ್ಲಿ ಮೆರವಣಿಗೆ ಯನ್ನು ನಡೆಸಿ ಕೇಸರಿ ಮಂಟಪ ಪೂಜೆ ಯೊಂದಿಗೆ 10 ಗಂಟೆ ಸಮಕ್ಕೆ ದಿವ್ಯರಥ ದಲ್ಲಿ ಕುಳ್ಳರಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೂಲಸ್ಥಾನದಿಂದ ಎಳೆದ ರಥವನ್ನು ದೇಗುಲ ಗೋಪುರದ ಮುಂಭಾಗದಿಂದ ಹಾದು ಆಗ್ನೇಯ ದಿಕ್ಕಿನಲ್ಲಿರುವ ಬಯಲು ರಂಗಮಂದಿರದ ಬಳಿ ತಂದು ನಿಲ್ಲಿಸಲಾ ಯಿತು. ರಥವನ್ನು ಎಳೆಯುವ ಸಂದರ್ಭ ದಲ್ಲಿ ಭಕ್ತರು ದೇವರಿಗೆ ಬಾಳೆಹಣ್ಣು, ಧವನವನ್ನು ಎಸೆದು ಭಕ್ತಿಭಾವವನ್ನು ಮೆರೆ ದರು. ಬ್ರಹ್ಮ ರಥೋತ್ಸವ ಬಂದು ನಿಲ್ಲುವ ಜಾಗವು ಶ್ರೀ ವಿಷ್ಣು ಮೋಹಿನಿ ಅವತಾರ ವನ್ನು ತಾಳಿ ಭಸ್ಮಾಸುರನ್ನು ಕೊಂದ ಸ್ಥಳ ಎಂಬ ಪ್ರತೀತಿಯಿದೆ. ಭಾನು ವಾರ ಹಗಲು ನಾಡ ರಥೋತ್ಸವ ನಡೆಯಲಿದ್ದು ರಥ ವನ್ನು ದೇಗುಲದ ಸುತ್ತ ಪ್ರದಕ್ಷಿಣೆಯನ್ನು ಹಾಕಿಸಿ ಮೂಲಸ್ಥಾನಕ್ಕೆ ಮತ್ತೆ ಎಳೆದು ನಿಲ್ಲಿಸಲಾಗುವುದು.

ರಥೋತ್ಸವದ ವೇಳೆ ಬಿಗಿ ಬಂದೋ ಬಸ್ತನ್ನು ಏರ್ಪಡಿಸಲಾಗಿತ್ತು. ದೇಗುಲ ನಾಲ್ಕು ಮೂಲೆಯಲ್ಲಿ ಸಿಸಿ ಟಿವಿ ಮತ್ತು ಮೈಕುಗಳನ್ನು ಅಳವಡಿಸಲಾಗಿತ್ತು. ಇಲ್ಲಿ ವಿಷ್ಣುಸಮುದ್ರ ಕೆರೆಯ ಪಕ್ಕದಲ್ಲಿರುವ ಕಲ್ಯಾಣಿಯಲ್ಲಿ ಭಕ್ತರ ಅನುಕೂಲಕ್ಕಾಗಿ ಮುಡಿಕಟ್ಟೆಗಳನ್ನು ಕಟ್ಟಲಾಗಿತ್ತು.ಭಕ್ತರ ಅನುಕೂಲಕ್ಕೆ ಶಾಶ್ವತವಾಗಿ ಸ್ನಾನ ಗೃಹ ಹಾಗೂ ಶೌಚಾಲಯವನ್ನು ದೇಗುಲದ ವತಿಯಿಂದ ನಿರ್ಮಿಸಿಕೊಡಲಾಗಿದೆ. ಈ ಬಾರಿ ಜಾತ್ರಾ ಮಹೋತ್ಸವಕ್ಕೆ ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಅಲಂಕಾರ ಮಾಡ ಲಾಗಿತ್ತು. ದೇಗುಲದ ಸುತ್ತಲಿನ 8 ಬೀದಿ, ಕೆಂಪೇಗೌಡ ವೃತ್ತದಿಂದ ನೆಹರೂ ನಗರ, ಜೆ.ಪಿ ನಗರದಿಂದ ಅಂಬೇಡ್ಕರ್ ವೃತ್ತದ ವರೆಗೆ ದೀಪಾಲಂಕಾರವನ್ನು ಮಾಡಲಾಗಿತ್ತು.

ಭಕ್ತರಿಗೆ ಮೂಲಸೌಕರ್ಯವನ್ನು ಕಲ್ಪಿಸು ವಲ್ಲಿ ದೇಗುಲ ಕಾರ್ಯನಿರ್ವಹಣಾಧಿಕಾರಿ ವಿದ್ಯುಲ್ಲತಾ ಹಾಗೂ ದೇಗುಲ ಸಮಿತಿ ಅಧ್ಯಕ್ಷ ವೈ.ಟಿ ದಾಮೋದರ್ ಹಾಗೂ ಸದಸ್ಯರು ಮತ್ತು ನೌಕರ ವರ್ಗದವರು ಶ್ರಮಿಸಿದ್ದಾರೆ. ಪುರಸಭೆ ಪೌರಕಾರ್ಮಿಕರು ಮತ್ತು ಶ್ರೀ ರಾಘವೇಂದ್ರ ಯೋಗ ಕೇಂದ್ರ ದವರು ಎಲ್ಲೆಂದರಲ್ಲಿ ಎಸೆದಿದ್ದ ತ್ಯಾಜ್ಯ ವನ್ನು ತೆಗೆದು ಸ್ವಚ್ಚತೆ ಕಾಪಾಡಿದರು.

ಬುಧವಾರ ಮಧ್ಯಾಹ್ನ ಹಗಲು ನಾಡಿನ ದಿವ್ಯ ರಥೋತ್ಸವ ಮತ್ತು ಶಾಂತಿ ಉತ್ಸವ ಹನುಮಂತಾರೋಹಣ ಕಲ್ಪವೃಕ್ಷಾರೋ ಹಣ ರಾತ್ರಿ ದಿವ್ಯ ಡೋಲೋತ್ಸವ ನಡೆಯಲಿದೆ.

Translate »