ಸೋಲುವ ಭೀತಿಯಿಂದ ನನ್ನನ್ನು ಡಾನ್ ಎಂದಿದ್ದಾರೆ: ಎ.ಮಂಜು
ಹಾಸನ

ಸೋಲುವ ಭೀತಿಯಿಂದ ನನ್ನನ್ನು ಡಾನ್ ಎಂದಿದ್ದಾರೆ: ಎ.ಮಂಜು

April 17, 2019

ಹಾಸನ: ಲೋಕಸಭೆ ಚುನಾ ವಣೆಯಲ್ಲಿ ತನ್ನ ಪುತ್ರ ಪ್ರಜ್ವಲ್ ಸೋಲುವ ಭೀತಿಯಲ್ಲಿ ಹತಾಶರಾಗಿ ನನ್ನನ್ನು ಡಾನ್ ಎಂದಿದ್ದು, ಇದು ರಾಜಕೀಯ ಯುದ್ಧ, ಇಲ್ಲಿ ಅವರ ಸಾಮಥ್ರ್ಯದಲ್ಲಿ ಗೆಲ್ಲಬೇಕೇ ಹೊರತು ಇಲ್ಲ ಸಲ್ಲದ ಸುಳ್ಳು ಆರೋಪ ಮಾಡುವುದರ ಮೂಲಕ ಗೆಲ್ಲಲು ಸಾಧ್ಯ ವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಎ. ಮಂಜು ತಿರುಗೇಟು ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 1991ರಲ್ಲಿ ಹೆಚ್.ಡಿ.ದೇವೇಗೌಡರು ಸೋತು ಮನೆಯಲ್ಲಿ ಇದ್ದಾಗ ಕೆ.ಹೆಚ್. ಹನುಮೇಗೌಡ ಮತ್ತು ನನ್ನ ಸಹಕಾರ ಪಡೆದು, ಕ್ಷೇತ್ರದಲ್ಲಿ ಹೆಚ್ಚು ಮತ ಪಡೆದು ಗೆದ್ದರು. ರೇವಣ್ಣಗೆ ಡಾನ್ ಎಂದರೆ ತಿಳಿದಿಲ್ಲವೇ. ಡಾನ್ ಎಂದರೆ ಕ್ರಿಮಿನಲ್ ಕೇಸ್ ಇರಬೇಕು, ರೌಡಿ ಶೀಟರ್ ಆಗಿರ ಬೇಕು. ನಾನು ಅವರ ಹಾಗೆ ರಣಹೇಡಿ ಅಲ್ಲ, ನೇರವಾಗಿ ಹೋರಾಡುವವನು, ಪೊಲೀಸ್ ಠಾಣೆಯಲ್ಲಿ ನನ್ನ ಹೆಸರಿನಲ್ಲಿ ಯಾವುದಾದರೂ ಒಂದು ಪ್ರಕರಣ ದಾಖಲಾಗಿದ್ದರೆ ಆಗಲೇ ರಾಜಕೀಯ ನಿವೃತ್ತಿ ಪಡೆಯುವೆ ಎಂದು ಸಚಿವ ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಇದು ರಾಜಕೀಯ ಯುದ್ಧ. ಹೆಚ್.ಡಿ. ರೇವಣ್ಣ ಹಿನ್ನೆಲೆ ಏನಿದೇ ಅದನ್ನು ಗುಪ್ತವಾಗಿ ಐಟಿ ದಾಳಿ ಮೂಲಕ ಮಾಡಿ ದ್ದಾರೆ. ನಿನ್ನೆ ನಮ್ಮ ಸಂಬಂಧಿಕರ ಮನೆಗೂ ಐಟಿ ಅಧಿಕಾರಿಗಳು ಹೋಗಿದ್ದಾರೆ. ಅವ ರಿಗೆ ಸ್ವಾತಂತ್ರ್ಯವಿದೆ. ಯಾವ ಮನೆಗಾ ದರೂ ಹೋಗಿ ಪರಿಶೀಲನೆ ಮಾಡ ಬಹುದು. ಕಾನೂನಿಗಿಂತ ಯಾರೂ ದೊಡ್ಡವರಲ್ಲ ಎಂದು ತಿಳಿಸಿದರು.

ಜಿಲ್ಲೆಯ ಎಲ್ಲಾ ತಾಲೂಕಿನಲ್ಲೂ ಪ್ರಚಾರ ಮಾಡಲಾಗಿದ್ದು, ಮೋದಿ ಪ್ರಧಾನಿ ಆಗಬೇಕು, ಜಿಲ್ಲೆಯಲ್ಲಿ ಬದ ಲಾವಣೆ ತರುವ ನಿಟ್ಟಿನಲ್ಲಿ ಎ.ಮಂಜುಗೆ ಮತ ಹಾಕಬೇಕು. ಈ ಮೂಲಕ ಕುಟುಂಬ ರಾಜಕಾರಣ ಕೊನೆಗೊಳಿಸ ಬೇಕು ಎಂಬುದು ಜಿಲ್ಲೆಯ ಬಹುತೇಕ ಮತದಾರರು ಕಾರ್ಯಕರ್ತರ ಆಸೆಯಾ ಗಿದೆ. ಈ ಬಾರಿ ಲೋಕಸಭಾ ಚುನಾವಣೆ ಯಲ್ಲಿ 7 ಲಕ್ಷ ಮತದಾನ ಆಗಲಿದೆ. ಅದರಲ್ಲೂ ದಲಿತ ಸಮುದಾಯವು ನಮ್ಮ ಪರವಾಗಿ ಇದ್ದಾರೆ. ಈ ಚುನಾವಣೆ ಆಶ್ಚರ್ಯಕರ ರೀತಿ ಫಲಿತಾಂಶ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೊಟ್ಟೆ ಪಾಡಿಗಾಗಿ ಸೈನ್ಯಕ್ಕೆ ಸೇರಿ ಕೊಳ್ಳುತ್ತಾರೆ ಎಂದಿರುವುದು ಖಂಡನೀಯ. ಇಂತಹ ಅವಹೇಳನಕಾರಿ ಹೇಳಿಕೆ ನೀಡಿ ರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಇಡೀ ರಾಜ್ಯದ ಜನರಲ್ಲಿ ಕ್ಷಮೆ ಕೇಳಲಿ.

ಪತ್ರಿಕಾಗೋಷ್ಠಿಯಲ್ಲಿ ಕ್ಷೇತ್ರದ ಶಾಸಕ ಪ್ರೀತಂ ಜೆ.ಗೌಡ, ಬಿಜೆಪಿ ಪಕ್ಷದ ಜಿಲಾ ್ಲಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡ ಹೆಚ್. ಎಂ. ಸುರೇಶ್ ಕುಮಾರ್ ಹಾಗೂ ಶೋಭನ್ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಇತರರು ಇದ್ದರು.

Translate »