ಹರಿದು ಬಂದ ಜನ ಸಾಗರ 600 ವೈದ್ಯರು, 2000 ಸಿಬ್ಬಂದಿ ಕರ್ತವ್ಯ ನಿರ್ವಹಣೆ ಹಾಸನ: ಗ್ರಾಮೀಣ ಭಾಗದ ಜನರ ಅನುಕೂಲ ಕ್ಕಾಗಿ ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸ ಲಾಗಿದ್ದ ಬೃಹತ್ ಆರೋಗ್ಯ ಶಿಬಿರ ಯಶಸ್ವಿಯಾಗಿದ್ದು, ಸಾವಿರಾರು ಜನರು ಶಿಬಿರದಲ್ಲಿ ಪಾಲ್ಗೊಂಡು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬೆಂಗಳೂರಿನ ನಿಮಾನ್ಸ್, ಜಯದೇವ ಹೃದ್ರೋಗ ಆಸ್ಪತ್ರೆ, ಕಿದ್ವಾಯಿ ಗ್ರಂಥಿ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಬೆಂಗಳೂರು ದಂತ ಚಿಕಿತ್ಸಾ ಲಯ, ಆದಿಚುಂಚನಗಿರಿ ವೈದ್ಯಕೀಯ ಮಹಾ…
ಹುತಾತ್ಮ ಯೋಧರಿಗೆ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ
February 17, 2019ಹಾಸನ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಫೆ.14ರಂದು ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಹುತಾತ್ಮರಾದ 40 ವೀರ ಯೋಧರಿಗೆ ಜಿಲ್ಲಾ ದ್ಯಂತ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಪಂಚಾಯಿತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಪಂನಿಂದ ವೀರ ಯೋಧರಿಗೆ ಶ್ರದ್ಧಾಂಜಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ದಾಳಿ ಯಿಂದ ಹುತಾತ್ಮರಾದ ಸಿಆರ್‍ಪಿಎಫ್ ವೀರ ಯೋಧರಿಗೆ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಅಧಿಕಾರಿ ಗಳು ಮತ್ತು ಸಿಬ್ಬಂದಿ ವರ್ಗದವರು ಮೌನಾ ಚರಿಸಿ ಗೌರವ ಸಲ್ಲಿಸಿದರು. ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ…
ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗೆ ಡಾಕ್ಟರೇಟ್ ಪ್ರದಾನ
February 17, 2019ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾ ನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 29ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ ಪ್ರದಾನ ಮಾಡಿದ್ದು, ಭಕ್ತ ವೃಂದವು ಹರ್ಷ ವ್ಯಕ್ತಪಡಿಸಿದೆ. ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಸಭಾಂ ಗಣದಲ್ಲಿ ಶುಕ್ರವಾರ ನಡೆದ 29ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ವಿಶ್ವ ವಿದ್ಯಾನಿಲ ಯದ ಸಿಂಡಿಕೇಟ್‍ನಿಂದ ಆಯ್ಕೆ ಮಾಡಲಾದ 12 ಆರ್ಹರಲ್ಲಿ ಶ್ರೀ ಶಿವಾನಂದ ಸ್ವಾಮೀಜಿಯವರು ಒಬ್ಬರಾಗಿದ್ದಾರೆ. ಕುಲಪತಿಯೂ ಆದ ರಾಜ್ಯಪಾಲ ವಜು ಬಾಯಿ ವಾಲಾ…
ಕಾಫಿ ಬೀಜ ಮಾರಾಟ ವಿವಾದ: ತಂದೆಯಿಂದಲೇ ಮಗನ ಕೊಲೆ
February 17, 2019ಬೇಲೂರು: ಕಾಫಿ ಬೀಜ ಮಾರಾಟ ಮಾಡುವ ವಿಚಾರಕ್ಕೆ ಸಂಬಂಧಿಸಿ ದಂತೆ ತಂದೆ ಮತ್ತು ಮಗನ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ ತಂದೆಯೇ ಮಗನನ್ನು ಗುಂಡಿಟ್ಟು ಕೊಂದ ಘಟನೆ ತಾಲೂಕಿನ ಅರೇಹಳ್ಳಿ ಹೋಬಳಿ ಸುಳು ಗಳಲೆ ಗ್ರಾಮದಲ್ಲಿ ಶನಿವಾರ ನಡೆದಿದೆ. ಉಮೇಶ್(42), ತನ್ನ ತಂದೆ ಬಸಪ್ಪಗೌಡ (60) ಅವರಿಂದ ಕೊಲೆಯಾದವರು. ಉಮೇಶ್ ಅವರಿಗೆ ಪತ್ನಿ ನಂದಿನಿ ಹಾಗೂ 7 ವರ್ಷದ ಪುತ್ರಿ ಇದ್ದಾರೆ. ಹತ್ಯೆ ಮಾಡಿರುವ ಆರೋಪಿ ಬಸಪ್ಪಗೌಡ ತಲೆಮರೆಸಿಕೊಂಡಿದ್ದಾರೆ. ವಿವರ: ಆರೋಪಿ ಬಸಪ್ಪಗೌಡನಿಗೆ 10 ಎಕರೆಯಷ್ಟು…
ಶಿಕ್ಷಣದಿಂದ ಮಾತ್ರ ಸಾಮಾಜಿಕ ಪ್ರಗತಿ ಸಾಧ್ಯ
February 17, 2019ಜಿಪಂ ಅಧ್ಯಕ್ಷೆ ಶ್ವೇತಾದೇವರಾಜ್ ಅಭಿಮತ ಹಾಸನ: ಸಮಾಜದಲ್ಲಿ ಪ್ರತಿ ಯೊಬ್ಬರಿಗೂ ಶಿಕ್ಷಣ ಮುಖ್ಯವಾಗಿದೆ. ಶಿಕ್ಷಣ ದಿಂದಲೇ ಸಾಮಾಜಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾದೇವರಾಜು ಹೇಳಿದರು. ನಗರದಲ್ಲಿ ಶನಿವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಸಂತ ಸೇವಾಲಾಲ್ ಜಯಂತಿ ಉದ್ಘಾಟಿಸಿ ಮಾತನಾಡಿದರು. ತಾಂಡ್ಯಗಳಲ್ಲಿ ಇಂದಿಗೂ ಮೂಲ ಸೌಕರ್ಯಗಳ ಕೊರತೆಯಿದ್ದು, ಶಿಕ್ಷಣದ ಮೂಲಕ ಅವುಗಳಲ್ಲಿ ಸುಧಾರಣೆ ತರ ಬಹುದು. ಸರ್ಕಾರ ನೀಡುತ್ತಿರುವ ಮೂಲ ಸೌಕರ್ಯಗಳನ್ನು ಪಡೆದು ಸಮರ್ಪಕ ವಾಗಿ ಬಳಸಿಕೊಂಡು ಅಭಿವೃದ್ಧಿಯೆಡೆಗೆ…
ಶಾಸಕ ಪ್ರೀತಂ ಜೆ.ಗೌಡ ಮನೆ ಮೇಲೆ ಕಲ್ಲು ತೂರಾಟಕ್ಕೆ ಖಂಡನೆ ಜೆಡಿಎಸ್ ವಿರುದ್ಧ ಬಿಜೆಪಿ ಪ್ರತಿಭಟನೆ
February 15, 2019ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರ ಮನೆಗೆ ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಲ್ಲು ತೂರಾಟ ನಡೆಸಿದ ಘಟನೆಯನ್ನು ಖಂಡಿಸಿ ನಗರದಲ್ಲಿ ಗುರುವಾರ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಡೆಯಿತು. ನಗರದ ಹೇಮಾವತಿ ಪ್ರತಿಮೆ ಬಳಿ ಯಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಎನ್.ಆರ್.ವೃತ್ತಕ್ಕೆ ತೆರಳಿ ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿದರು. ಜೆಡಿಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ದರು. ಬಳಿಕ, ಬಿ.ಎಂ.ರಸ್ತೆ ಮೂಲಕ ಜಿಲ್ಲಾ ಧಿಕಾರಿ…
ಶ್ರೀಜೇನುಕಲ್ಲು ಸಿದ್ದೇಶ್ವರಸ್ವಾಮಿ ರಾಜಗೋಪುರ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ
February 15, 2019ಅರಸೀಕೆರೆ: ತಾಲೂಕಿನ ಯಾದಾಪುರ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ನೂತನ ರಾಜ ಗೋಪುರ ಉದ್ಘಾಟನಾ ನಿಮಿತ್ತ ಎರಡು ದಿನಗಳ ಕಾಲ ನಡೆಯಲಿರುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಶ್ರೀ ಕ್ಷೇತ್ರ ದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಪ್ರಾತಃಕಾಲ ಧ್ವಜಾರೋಹಣದೊಂದಿಗೆ ಪ್ರಾರಂಭವಾದ ಧಾರ್ಮಿಕ ಕಾರ್ಯಕ್ರಮ ಗಳು ಗಣಪತಿ ಹೋಮ, ಗಂಗಾ ಪೂಜೆ, 108 ಪೂರ್ಣಕುಂಭ ಸ್ಥಾಪನೆ, ಶ್ರೀಯವರ ಗೋಪುರ ಪ್ರವೇಶ, ಪುಣ್ಯಾಹ, ನಾಂದಿ, ಪಂಚಕಳಸ, ಸಪ್ತಸಭಾ ದೇವತಾ, ಅಷ್ಠಾದಿ ಕ್ಪಾಲಕ, ನವಗ್ರಹ ಸ್ಥಾಪನೆ, ಮೃತ್ಯುಂಜಯ ಮತ್ತು ಪಾರ್ವತಿ ಕಳಸ ಸ್ಥಾಪನೆ…
ಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿಯಾಗಿ ಎಂ.ವಿ.ಗೋಪಾಲಸ್ವಾಮಿ ಪ್ರಮಾಣ ವಚನ ಸ್ವೀಕಾರ
February 15, 2019ಹಾಸನ: ಮುಖ್ಯಮಂತ್ರಿ ಅವರ ಸಂಸದೀಯ ಕಾರ್ಯದರ್ಶಿಯಾಗಿ (ಜಲ ಸಂಪ ನ್ಮೂಲ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ವಿಧಾನ ಪರಿಷತ್ ಸದಸ್ಯರಾದ ಜಿಲ್ಲೆಯ ಎಂ.ವಿ.ಗೋಪಾಲಸ್ವಾಮಿ ಅವರು ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಜಿ.ಟಿ.ದೇವೇಗೌಡ, ಕೃಷ್ಣಭೈರೇಗೌಡ, ಪ್ರಿಯಾಂಕ ಖರ್ಗೆ, ಡಾ.ಜಯಮಾಲ ಸೇರಿದಂತೆ 20 ಮಂದಿ ಶಾಸಕರು ಹಾಜರಿದ್ದು, ಎಂ.ವಿ.ಗೋಪಾಲಸ್ವಾಮಿ ಅವರನ್ನು ಅಭಿನಂದಿಸಿದರು.
ವಿಜೃಂಭಣೆಯ ಶ್ರೀಲಕ್ಷ್ಮೀಕಾಂತಸ್ವಾಮಿ ಬ್ರಹ್ಮ ರಥೋತ್ಸವ
February 15, 2019ರಾಮನಾಥಪುರ: ರಾಮನಾಥಪುರ ಹೋಬಳಿ ಬಸವಾ ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವವು ಗುರುವಾರ ಸಾವಿ ರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಅಂಕು ರಾರ್ಪಣ, ಧ್ವಜಾರೋಹಣ, ರುದ್ರಾ ಭಿಷೇಕ ಹಾಗೂ ವಿಶೇಷ ಪೂಜೆಗಳು ಪುರೋಹಿತರಾದ ಸಂಪತ್ ಅಯ್ಯಂ ಗಾರ್, ಋತ್ವಿಕರ ನೇತೃತ್ವದಲ್ಲಿ ನಡೆಯಿತು. ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ಮಾಡಿ ನಂತರ ಅಲಂಕೃತ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯಿಟ್ಟು ಪೂಜಾ ಕೈಂ…
ಇಂದು 160 ಕೆರೆ, 10 ಕಟ್ಟೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ
February 15, 2019ಹಾಸನ: ಕಾವೇರಿ ನಿಗಮ ನಿಯಮಿತ ಹೇಮಾ ವತಿ ಜಲಾಶಯ ಯೋಜನೆ ಗೊರೂರು ವತಿಯಿಂದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಹಾಸನ ತಾಲೂಕಿನ ದುದ್ದ ಹಾಗೂ ಶಾಂತಿಗ್ರಾಮ ಹೋಬಳಿಗಳ 160 ಕೆರೆಗಳು ಹಾಗೂ 10 ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಕಾಮಗಾರಿಗೆ ಫೆ.15ರಂದು ದುದ್ದ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ. ಯೋಜನೆಯ ಸಂಕ್ಷಿಪ್ತ ವಿವರ: ತಾಲೂಕಿನ ದುದ್ದ, ಶಾಂತಿಗ್ರಾಮ ಹೋಬಳಿಗಳು ಹಾಗೂ…










