ಅರಸೀಕೆರೆ: ತಾಲೂಕಿನ ಹಾರನಹಳ್ಳಿ ಕೋಡಿಮಠದ ಶ್ರೀ ಶಿವಾ ನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು 29ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟ ರೇಟ್ ಪ್ರದಾನ ಮಾಡಿದ್ದು, ಭಕ್ತ ವೃಂದವು ಹರ್ಷ ವ್ಯಕ್ತಪಡಿಸಿದೆ.
ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದ ಸಭಾಂ ಗಣದಲ್ಲಿ ಶುಕ್ರವಾರ ನಡೆದ 29ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದ್ದು, ವಿಶ್ವ ವಿದ್ಯಾನಿಲ ಯದ ಸಿಂಡಿಕೇಟ್‍ನಿಂದ ಆಯ್ಕೆ ಮಾಡಲಾದ 12 ಆರ್ಹರಲ್ಲಿ ಶ್ರೀ ಶಿವಾನಂದ ಸ್ವಾಮೀಜಿಯವರು ಒಬ್ಬರಾಗಿದ್ದಾರೆ. ಕುಲಪತಿಯೂ ಆದ ರಾಜ್ಯಪಾಲ ವಜು ಬಾಯಿ ವಾಲಾ ಅವರಿಗೆ ವಿಶ್ವವಿದ್ಯಾನಿಲಯದ ಸಿಂಡಿಕೇಟ್‍ನಿಂದ ಆಯ್ಕೆ ಪಟ್ಟಿಯನ್ನು ಸಲ್ಲಿಸಿ ಶಿಫಾರಸ್ಸು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಶ್ರೀಗಳ ಹೆಸರನ್ನು ಅಂತಿಮಗೊಳಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಸ್ವಾಮೀಜಿಗಳ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿನ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಪ್ರದಾನ ಸಮಾರಂಭ ದಲ್ಲಿ ಕುಲಪತಿ ಪ್ರೋ.ಜೋಗನ್ ಶಂಕರ್, ಬೆಂಗಳೂರಿನ ರಾಷ್ಟ್ರೀಯ ಮೌಲ್ಯೀಕರಣ ಮತ್ತು ಮಾನ್ಯತಾ ಪರಿಷತ್‍ನ ನಿರ್ದೇಶಕ ಡಾ.ಎಸ್.ಸಿ.ಶರ್ಮ, ಮಠದ ಉತ್ತರಾಧಿಕಾರಿ ಮರಿದೇವರು, ಯಳನಾಡು ಜ್ಞಾನಪ್ರಭು ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.