ಹುತಾತ್ಮ ಯೋಧರಿಗೆ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ
ಹಾಸನ

ಹುತಾತ್ಮ ಯೋಧರಿಗೆ ಜಿಲ್ಲಾದ್ಯಂತ ಭಾವಪೂರ್ಣ ಶ್ರದ್ಧಾಂಜಲಿ

February 17, 2019

ಹಾಸನ: ಜಮ್ಮು- ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಫೆ.14ರಂದು ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಹುತಾತ್ಮರಾದ 40 ವೀರ ಯೋಧರಿಗೆ ಜಿಲ್ಲಾ ದ್ಯಂತ ವಿವಿಧ ಸಂಘಟನೆಗಳು ಹಾಗೂ ಜಿಲ್ಲಾ ಪಂಚಾಯಿತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಜಿಪಂನಿಂದ ವೀರ ಯೋಧರಿಗೆ ಶ್ರದ್ಧಾಂಜಲಿ: ಜಮ್ಮು ಕಾಶ್ಮೀರದಲ್ಲಿ ಉಗ್ರಗಾಮಿಗಳ ದಾಳಿ ಯಿಂದ ಹುತಾತ್ಮರಾದ ಸಿಆರ್‍ಪಿಎಫ್ ವೀರ ಯೋಧರಿಗೆ ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಅಧಿಕಾರಿ ಗಳು ಮತ್ತು ಸಿಬ್ಬಂದಿ ವರ್ಗದವರು ಮೌನಾ ಚರಿಸಿ ಗೌರವ ಸಲ್ಲಿಸಿದರು. ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.
ಕಾಂಗ್ರೆಸ್ ಭವನದಲ್ಲಿ ಶ್ರದ್ಧಾಂಜಲಿ: ಕಳೆದ ಎರಡು ದಿನಗಳ ಹಿಂದೆ ವೀರ ಯೋಧರ ಹತ್ಯಾಕಾಂಡ ನಡೆದಿದ್ದು, ಭಾರತದ ಹೆಮ್ಮೆಯ 40 ಯೋಧರು ಹುತಾತ್ಮರಾಗಿದ್ದಾರೆ. ದೇಶ ರಕ್ಷಣೆಗೆ ಬಲಿದಾನ ಮಾಡಿದ ಯೋಧರಿಗೆ ನಗರದಲ್ಲಿರುವ ಜಿಲ್ಲಾ ಕಾಂಗ್ರೆಸ್ ಭವನ ದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮೊದಲು ಮೇಣದ ಬತ್ತಿ ಹಿಡಿದು ಎರಡು ನಿಮಿಷ ಮೌನ ಆಚರಿಸಿದರು. ನಂತರ ವೀರ ಯೋಧರ ಬಗ್ಗೆ ಕಾಂಗ್ರೆಸ್ ಮುಖಂಡರು ತಮ್ಮ ಮಾತುಗಳ ಮೂಲಕ ತ್ಯಾಗ ಬಲಿದಾನದ ಬಗ್ಗೆ ನೆನಪಿಸಿಕೊಂಡರು. ಪಾಕಿಸ್ತಾನದ ಉಗ್ರಗಾಮಿಗಳು ಭಾರತೀಯ ಸೇನೆಯ ವಾಹನಕ್ಕೆ ಬಾಂಬ್ ದಾಳಿ ನಡೆಸಿ 45 ಸೈನಿಕರನ್ನು ವಾಮಮಾರ್ಗದ ಮೂಲಕ ಹತ್ಯೆ ಮಾಡಿದ್ದಾರೆ. ಅದರಲ್ಲಿ ನಮ್ಮ ರಾಜ್ಯದ ಮಂಡ್ಯ ಜಿಲ್ಲೆಯ ಓರ್ವರು ಮೃತಪಟ್ಟಿದ್ದಾರೆ ಎಂದರು. ಈ ಕೃತ್ಯವನ್ನು ರಾಜ್ಯಾದ್ಯಂತ ಖಂಡಿಸಲಾಗಿದೆ.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಜಾವಗಲ್ ಮಂಜುನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾದೇವರಾಜು, ಉಪಾಧ್ಯಕ್ಷ ನಾರಾಯಣಗೌಡ, ವಕೀಲ ಸಂಘದ ಮಾಜಿ ಅಧ್ಯಕ್ಷ ದೇವರಾಜೇ ಗೌಡ, ಮುಖಂಡರಾದ ಹೆಚ್.ಕೆ.ಜವರೇ ಗೌಡ, ಹೆಚ್.ಕೆ. ಮಹೇಶ್, ಎಸ್‍ಸಿ ಘಟಕದ ಉಪಾಧ್ಯಕ್ಷ ನಾಯಕರಹಳ್ಳಿ ಅಶೋಕ್, ತಂಬ್ಲಾಪುರ ಹಣೇಶ್, ರವಿ ಜನ್ನೇನಹಳ್ಳಿ, ಮುನಿಸ್ವಾಮಿ, ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.

ರಾಮನಾಥಪುರ ವರದಿ- ಪಾಕಿಸ್ತಾನದ ಗಡಿ ಭಾಗದ ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಯಿಂದ ವೀರಮರಣವನ್ನಪ್ಪಿದ ಯೋಧರಿಗೆ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನಾ ಸಮಿತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ನಾಗರಿಕರು, ಮಕ್ಕಳು ಸೇರಿದಂತೆ ನೂರಾರು ಜನರು ಮೇಣದ ಬತ್ತಿ ಹಚ್ಚಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.

ಸಮಿತಿಯ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, ಉಗ್ರರಿಗೆ ತಕ್ಕ ಪಾಠ ಕಲಿಸ ಬೇಕು. ದೇಶದ ಗಡಿಯಲ್ಲಿ ಮತ್ತೊಮ್ಮೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರ ಸಂಘ ಟನೆಯನ್ನು ಸಂಪೂರ್ಣವಾಗಿ ನಾಶಪಡಿಸ ಬೇಕು. ಉಗ್ರರ ಅಂತ್ಯಕ್ಕೆ ರಾಜ ತಾಂತ್ರಿಕ ಒತ್ತಡ ತರಬೇಕು ಎಂದು ಒತ್ತಾಯಿಸಿದರು.

ಭಾರತ ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಂಡು ಉಗ್ರರ ನಾಶಕ್ಕೆ ವ್ಯವಸ್ಥಿತ ಕಾರ್ಯಾಚರಣೆ ನಡೆಸಬೇಕು. ಉಗ್ರರ ಈ ಕೃತ್ಯಕ್ಕೆ ಪ್ರತೀಕಾರ ತೀರಿಸಿಕೊಳ್ಳಲೇ ಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ್, ಶಿಕ್ಷಕ ನಾಗರಾಜು, ತೇಜಾ ಮುಂತಾದವರಿದ್ದರು.

Translate »