ಎಲ್ಲೆಡೆ ಮಹಿಳೆಯರ ಮೇಲೆ ದೌರ್ಜನ್ಯ: ಶ್ರೀನಿವಾಸಪ್ರಸಾದ್ ವಿಷಾದ
ಮೈಸೂರು

ಎಲ್ಲೆಡೆ ಮಹಿಳೆಯರ ಮೇಲೆ ದೌರ್ಜನ್ಯ: ಶ್ರೀನಿವಾಸಪ್ರಸಾದ್ ವಿಷಾದ

February 17, 2019

ಮೈಸೂರು: ಮುಂದುವರೆದ ಹಾಗೂ ಮುಂದು ವರೆಯುತ್ತಿರುವ ರಾಷ್ಟ್ರಗಳಲ್ಲಿ ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ನಡೆ ಯುತ್ತಿರುವುದು ವಿಪರ್ಯಾಸ ಎಂದು ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ವಿಷಾದಿಸಿದ್ದಾರೆ.ಮೈಸೂರಿನ ಜೆ.ಕೆ.ಮೈದಾನದಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಮೃ ತೋತ್ಸವ ಭವನದಲ್ಲಿ ಒಡನಾಡಿ ಸಂಸ್ಥೆ ಶನಿವಾರ ಆಯೋಜಿಸಿದ್ದ `ಮಹಿಳಾ ಸಾಧ ಕರ ಸಮಾವೇಶ’ ಮತ್ತು `ಸತ್ಪುರುಷರ ಆಂದೋಲನ’ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ವಿಶ್ವದ ಎಲ್ಲೆಡೆ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಗಳು ನಡೆಯುತ್ತಿವೆ. ಎಲ್ಲಾ ಕ್ಷೇತ್ರಗಳಲ್ಲೂ ಶೋಷಣೆ ನಡೆಯುತ್ತಿದೆ. ಈ ನಡುವೆ ಮಹಿಳೆಯರು ತಮಗೆ ಅನುಕಂಪ ಬೇಡ, ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಅನುಕಂಪದ ಅಗತ್ಯ ಮಹಿಳೆಯರಿಗಿಲ್ಲ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಸಿಕ್ಕಿರುವ ಅವಕಾಶವನ್ನು ಮಹಿಳೆಯರು ಸದುಪ ಯೋಗಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಮಹಿಳೆಯಲ್ಲಿರುವ ಪ್ರತಿಭೆಗನು ಗುಣವಾಗಿ ಅವಕಾಶಗಳು ದೊರೆತಾಗ ಮಾತ್ರ ಮೇಲ್ಮಟ್ಟಕ್ಕೇರುತ್ತಾರೆ ಎಂದರು.

ವಿವಿಧ ರೂಪದಲ್ಲಿ ದೌರ್ಜನ್ಯಕ್ಕೊಳಗಾ ದವರಿಗೆ ಆಶ್ರಯ ನೀಡಲು ಹಲವು ಪುನ ರ್ವಸತಿ ಕೇಂದ್ರಗಳಿವೆ. ಬಹುತೇಕ ಕೇಂದ್ರ ಗಳು ಕೇವಲ ಆಶ್ರಯ ನೀಡಲಷ್ಟೇ ಸೀಮಿತ ವಾಗಿರುತ್ತವೆ. ಆದರೆ ಒಡನಾಡಿ ಸಂಸ್ಥೆ ದೌರ್ಜನ್ಯಕ್ಕೊಳಗಾದವರ ಹಾಗೂ ಮಾನವ ಸಾಗಣೆಗೆ ಒಳಗಾಗಿ ರಕ್ಷಿಸಲ್ಪಟ್ಟವರಿಗೆ ಪುನರ್ವಸತಿ ಕಲ್ಪಿಸುವುದರೊಂದಿಗೆ ಜೀವನ ರೂಪಿಸಿಕೊಳ್ಳಲು ಕೌಶಲವನ್ನು ಕಲಿಸುವ ಮೂಲಕ ಗಮನ ಸೆಳೆಯುತ್ತಿದೆ ಎಂದು ಶ್ಲಾಘಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ದೌರ್ಜ ನ್ಯಕ್ಕೆ ಒಳಗಾದವರಿಗೆ ಆಶ್ರಯ ನೀಡಿರುವ ಒಡನಾಡಿ ಸಂಸ್ಥೆ `ಮಹಿಳೆಯರು ಅಬಲೆ ಯರಲ್ಲ. ದೌರ್ಜನ್ಯಕ್ಕೊಳಗಾದವರು ಆತಂಕ ಪಡಬೇಕಾಗಿಲ್ಲ’ ಎಂಬ ಸಂದೇಶ ನೀಡು ವುದರೊಂದಿಗೆ ಬದುಕುವ ಬಗೆಯನ್ನು ಕಲಿಸುತ್ತಿದೆ. ಧ್ವನಿ ಇಲ್ಲದವರಿಗೆ ಧ್ವನಿಯಾಗಿ, ಶಿಕ್ಷಣ ಇಲ್ಲದವರಿಗೆ ಶಿಕ್ಷಣ ಕೊಡಿಸುವ ಜವಾಬ್ದಾರಿಯೊಂದಿಗೆ ಒಡನಾಡಿ ಕಾರ್ಯ ನಿರ್ವಹಿಸುತ್ತಿರುವುದು ಕಂಡು ಸಂತೋಷ ವಾಗಿದೆ. ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಡಿಸುವುದೇ ನಮ್ಮ ಆದ್ಯತೆಯಾಗಿದೆ. ದೌರ್ಜನ್ಯಕ್ಕೊಳಗಾದವರಿಗಾಗಿ ಆರು ವಿಶ್ವವಿದ್ಯಾನಿಲಯಗಳಲ್ಲಿ ಶಿಕ್ಷಣ ಪಡೆ ಯಲು ಮೀಸಲಾತಿ ನೀಡುವಂತೆ ಒಡ ನಾಡಿ ಸಂಸ್ಥೆ ಮನವಿ ಮಾಡಿದೆ. ಇದಕ್ಕೆ ಪೂರಕವಾದ ಅಂಶವನ್ನು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕವಯತ್ರಿ ಪ್ರೊ.ಚ.ಸರ್ವಮಂಗಳ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ರಕ್ತ ಹಾಗೂ ಅಧಿಕಾರದ ದಾಹ ಹೆಚ್ಚಾಗುತ್ತಿದೆ. ಇದರಿಂದ ಶಾಂತಿಯುತ ಜೀವನ ನಡೆ ಸಲು ಸಾಧ್ಯವಾಗದಂತಹ ಸ್ಥಿತಿ ಸೃಷ್ಟಿಯಾ ಗಿದೆ. ದೌರ್ಜನ್ಯ ಪ್ರಕರಣ ಹೆಚ್ಚಾಗುತ್ತಿದೆ. ಎಚ್ಚೆತ್ತುಕೊಳ್ಳುವ ಅಗತ್ಯವಿದೆ ಎಂದರು.

ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಶೇ.100ರಷ್ಟು ಮತದಾನ ಪ್ರಕ್ರಿಯೆ ನಡೆಯುತ್ತಿಲ್ಲ. ಸ್ವಿಜûರ್ ಲೆಂಡ್‍ನಲ್ಲಿ ಮಹಿಳೆಯರಿಗೆ ಮತದಾನ ಹಕ್ಕನ್ನು ತಡವಾಗಿ ನೀಡಲಾಯಿತು. ಅಮೆ ರಿಕಾ ಅಧ್ಯಕ್ಷ ಸ್ಥಾನವನ್ನು ಇಂದಿಗೂ ಮಹಿಳೆ ಅಲಂಕರಿಸದೇ ಇರುವುದು ದುರದೃಷ್ಟಕರ. ತಮ್ಮ ಹಕ್ಕುಗಳಿಗಾಗಿ ಮಹಿಳೆಯರು ಇನ್ನೂ ಹೋರಾಡುತ್ತಿದ್ದಾರೆ. ಇದಕ್ಕೆ ಸತ್ಪುರುಷರು ಸಾಥ್ ನೀಡುತ್ತಿರುವುದು ಒಳ್ಳೆ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೈಲೆಂಟ್ ಎಕ್ಸ್‍ಪೆಡಿಷನ್ ಸಂಸ್ಥಾಪಕಿ, ಬೈಕ್ ರೈಡರ್ ಅರ್ಚನಾ ತಿಮ್ಮರಾಜು, ಅಂತಾರಾಷ್ಟ್ರೀಯ ಕ್ರೀಡಾಪಟು ಧನುಷಾ ಗೌಡರನ್ನು ಸನ್ಮಾನಿಸಲಾಯಿತು.

ಹೈಕೋರ್ಟ್ ವಕೀಲ ಡಿ.ಸಿ.ಶ್ರೀನಿವಾಸ್, ಪಾಲಿಕೆ ಸದಸ್ಯೆ ಶೋಭಾ ಮೋಹನ್, ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶು ಹಾಗೂ ಇನ್ನಿತ ರರು ಉಪಸ್ಥಿತರಿದ್ದರು.

Translate »