ಶೇ.61ಕ್ಕೆ ಕುಸಿದ ರೈತರ ಸಂಖ್ಯೆ: ರೈತ ಸಂಘ ಕಳವಳ
ಮೈಸೂರು

ಶೇ.61ಕ್ಕೆ ಕುಸಿದ ರೈತರ ಸಂಖ್ಯೆ: ರೈತ ಸಂಘ ಕಳವಳ

February 17, 2019

ಮೈಸೂರು: ವಿಶ್ವ ವಾಣಿಜ್ಯ ಒಪ್ಪಂದದ ಹಿಂದೆ ಕೃಷಿಕರ ಸಂಖ್ಯೆ ಕಡಿಮೆ ಮಾಡುವ ಹುನ್ನಾರ ಅಡಗಿದ್ದು, ಕೃಷಿ ಕ್ಷೇತ್ರದಿಂದಲೇ ಒಕ್ಕಲೆಬ್ಬಿಸುವ ಸಂಚು ನಡೆ ದಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲ ಪುರ ನಾಗೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನ ಜಯಲಕ್ಷ್ಮಮ್ಮಣ್ಣಿ ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಹಾಗೂ ಮಹಾ ರಾಣಿ ಮಹಿಳಾ ಕಲಾ ಕಾಲೇಜು ಸಂಯು ಕ್ತಾಶ್ರಯದಲ್ಲಿ ಶನಿವಾರ ನಡೆದ ‘ಯುವ ಜನತೆ ಕೃಷಿಯನ್ನು ಲಾಭದಾಯಕ ಉದ್ಯೋಗ ವನ್ನಾಗಿ ಸ್ವೀಕರಿಸಬಹುದೇ?’ ಕೃಷಿ ಕಮ್ಮಟ ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಕೃಷಿಕರ ಬದುಕು ದುಸ್ತರವಾಗುತ್ತಿದೆ. ರೈತರು ಅನೇಕ ಸವಾಲು ಗಳನ್ನು ಎದುರಿಸುವಂತಾಗಿದೆ. ಸರ್ಕಾರ ರೈತರ ನೆರವಿಗೆ ಯಾವುದೇ ಕಾರ್ಯಕ್ರಮ ರೂಪಿಸದೇ ಇರುವುದು ಕೃಷಿಕರನ್ನು ಕಂಗಾ ಲಾಗಿಸಿದೆ. ಹಾಗಿದ್ದೂ ಕೃಷಿ ಮಾಡಿಕೊಂಡು ಬರುತ್ತಿರುವ ರೈತರನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆದಿದೆ ಎಂದು ದೂರಿದರು.

ಈ ಹಿಂದೆ ಶೇ.70ಕ್ಕೂ ಹೆಚ್ಚು ರೈತರು ಕೃಷಿಯನ್ನು ಅವಲಂಬಿಸಿದ್ದರು. ಇದೀಗ ಕೃಷಿಕರ ಸಂಖ್ಯೆ ಶೇ.61ಕ್ಕೆ ಕುಸಿದಿದೆ. ಇದಕ್ಕೆ ವಿಶ್ವ ವಾಣಿಜ್ಯ ಒಪ್ಪಂದದ (ಡಬ್ಲ್ಯೂಟಿಒ) ಕುತಂತ್ರ ಕಾರಣ. ತುಂಡು ಭೂಮಿ ಉಳ್ಳವ ರನ್ನು ಒಕ್ಕಲೆಬ್ಬಿಸುವ ಕುತಂತ್ರ ನಡೆಯುತ್ತಿದೆ. ಇದು ಮುಂದುವರೆದರೆ ಕೃಷಿಕರ ಸಂಖ್ಯೆ ಶೇ.20ಕ್ಕೆ ಕುಸಿಯುತ್ತದೆ. ಕೃಷಿ ಕ್ಷೇತ್ರ ಉಳಿ ಸಲು ಹೋರಾಟ ಅನಿವಾರ್ಯ ಎಂದರು.

ಹೊಸ ಆರ್ಥಿಕ ನೀತಿ ಹಾಗೂ ಮುಕ್ತ ಮಾರುಕಟ್ಟೆ ನೀತಿಯಿಂದ ಕೃಷಿ ಸಂಕಷ್ಟಕ್ಕೆ ಸಿಲುಕಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳು ತ್ತಿದ್ದಾರೆ. ಭೂಮಿ ಬಂಡವಾಳಶಾಹಿಗಳ ಕೈ ಸೇರುತ್ತಿದೆ. ಕೃಷಿ ವಿವಿಗಳಲ್ಲಿ ಕಾರ್ಪೊರೇಟ್ ಕಂಪೆನಿಗಳಿಗೆ ಪೂರಕವಾದ ಪಠ್ಯ ಕ್ರಮವಿರು ತ್ತದೆ. ಸ್ವಾಯತ್ತ ವಿವಿಗಳು ಬಂಡವಾಳಶಾಹಿ ಗಳ ಕಪಿಮುಷ್ಟಿಯಲ್ಲಿ ಸಿಲುಕಿವೆ. ಕೃಷಿ ಮತ್ತು ಶಿಕ್ಷಣಕ್ಕೆ ಸಂಬಂಧವಿಲ್ಲ ಎನ್ನುವ ವ್ಯವಸ್ಥೆ ಸೃಷ್ಟಿಯಾಗಿದೆ. ಕೈಗಾರಿಕೆ ವಸ್ತುಗಳಿಗೆ ಮಾತ್ರ ಬೆಲೆ ನೀತಿ ಇದೆ. ಸ್ವಾತಂತ್ರ್ಯ ಬಂದು 7 ದಶಕ ಕಳೆದರೂ ಕೃಷಿಗೆ ಬೆಲೆ ನೀತಿ ಇಲ್ಲ. ಕೇಂದ್ರ ಸರ್ಕಾರ ಬೆಲೆ ನಿಗದಿ ಮಾಡುವುದು ಕಾನೂನಾತ್ಮಕವಾಗಿರಬೇಕು. ಈ ಸಂಬಂಧ ರೈತ ಸಂಘದಿಂದ ಕೇಂದ್ರಕ್ಕೆ ಮನವಿ ಸಲ್ಲಿಸಿ ದ್ದೇವೆ. ಸಾಲ ಇಲ್ಲದ ವ್ಯವಸ್ಥೆ ನಿರ್ಮಾಣ ವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ಪ್ರಾಧ್ಯಾಪಕಿ ಡಿ.ಎಸ್.ಲೀಲಾವತಿ ಮಾತ ನಾಡಿ, ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿ ಕಾಣಲು ಹಳ್ಳಿಗಳಲ್ಲಿ ಕೃಷಿ ಶಾಲೆಗಳನ್ನು ತೆರೆದು ಕೃಷಿ ಅಭಿವೃದ್ಧಿ ಕುರಿತು ಮಾಹಿತಿ ನೀಡುವಂತಾ ಗಬೇಕು. ಈಗಿನ ಯುವ ಸಮುದಾಯ ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಪೋಷಕರೂ ಕಾರಣ. ನಮ್ಮಂತೆ ಮಕ್ಕಳು ಕಷ್ಟ ಪಡಬಾರದು ಎಂದು ಕೃಷಿಯಿಂದ ವಿಮುಖರಾಗುವಂತೆ ಮಾಡುತ್ತಿದ್ದಾರೆ. ಇಬ್ಬರ ಮನೋಭಾವವೂ ಬದಲಾಗಬೇಕು. ಕೃಷಿಗೆ ಸಂಬಂಧಿಸಿದಂತೆ ಸರ್ಕಾರಗಳ ನೀತಿ, ನಿರೂಪಣೆ, ಯೋಜನೆ ಗಳಲ್ಲಿ ಬದಲಾವಣೆ ಆಗಬೇಕು ಎಂದರು.
ಕೃಷಿಕರಾದ ರಾಜಶೇಖರ ನಿಂಬರಗಿ, ವಸಂತ ಕೇಶವ ಕಜೆ, ಲಕ್ಷ್ಮಿ ದೇವಮ್ಮ, ರಮೇಶ್ ‘ಯಶಸ್ವಿ ರೈತರ ಬೇಸಾಯದ’ ಕುರಿತು ಅನುಭವ ಹಂಚಿಕೊಂಡರು. ಪ್ರಸಾರ ಮಾಧ್ಯಮ ಮತ್ತು ಇಲಾಖೆ ಅಧಿಕಾರಿಗಳ ಜತೆ ಸಂವಾದ ಕಾರ್ಯಕ್ರಮ ನಡೆಯಿತು. ಕಾಲೇಜು ಪ್ರಾಂಶುಪಾಲ ಪ್ರೊ.ಸಿ.ಹೆಚ್. ಪ್ರಕಾಶ್, ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥೆ ಕೆ.ಎನ್.ರೂಪಾ ಉಪಸ್ಥಿತರಿದ್ದರು.

Translate »