ಇಂದು 160 ಕೆರೆ, 10 ಕಟ್ಟೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ
ಹಾಸನ

ಇಂದು 160 ಕೆರೆ, 10 ಕಟ್ಟೆಗೆ ನೀರು ತುಂಬಿಸುವ ಕಾಮಗಾರಿಗೆ ಚಾಲನೆ

February 15, 2019

ಹಾಸನ: ಕಾವೇರಿ ನಿಗಮ ನಿಯಮಿತ ಹೇಮಾ ವತಿ ಜಲಾಶಯ ಯೋಜನೆ ಗೊರೂರು ವತಿಯಿಂದ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಗ್ರಾಮದ ಹತ್ತಿರ ಹೇಮಾವತಿ ನದಿಯಿಂದ ನೀರನ್ನು ಎತ್ತಿ ಹಾಸನ ತಾಲೂಕಿನ ದುದ್ದ ಹಾಗೂ ಶಾಂತಿಗ್ರಾಮ ಹೋಬಳಿಗಳ 160 ಕೆರೆಗಳು ಹಾಗೂ 10 ಕಟ್ಟೆಗಳಿಗೆ ಕುಡಿಯುವ ನೀರಿಗಾಗಿ ನೀರು ತುಂಬಿಸುವ ಕಾಮಗಾರಿಗೆ ಫೆ.15ರಂದು ದುದ್ದ ಹೋಬಳಿಯ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ.

ಯೋಜನೆಯ ಸಂಕ್ಷಿಪ್ತ ವಿವರ: ತಾಲೂಕಿನ ದುದ್ದ, ಶಾಂತಿಗ್ರಾಮ ಹೋಬಳಿಗಳು ಹಾಗೂ ಹೊಳೆನರಸೀ ಪುರ ತಾಲೂಕಿನ ಹಳೇಕೋಟೆ ಹೋಬಳಿ ಅಡಿಯಲ್ಲಿ ಬರುವ ಸುಮಾರು 112 ಗ್ರಾಮಗಳಲ್ಲಿ ಮಳೆಯ ಪ್ರಮಾ ಣವು ಸರಾಸರಿ ಮಟ್ಟಕ್ಕಿಂತ ಕಡಿಮೆ ಇದ್ದು, ಕುಡಿಯುವ ನೀರಿನ ಅಭಾವವಿರುತ್ತದೆ. ಈ ಗ್ರಾಮಗಳಲ್ಲಿ ಅಂತರ್ಜಲ ಕುಸಿದಿದ್ದು, ಕುಡಿಯುವ ನೀರಿನಲ್ಲಿ ನೈಟ್ರೈಟ್, ಫ್ಲೋರೈಡ್ ಅಂಶ ಹೆಚ್ಚಾಗಿ ಕುಡಿಯಲು ಯೋಗ್ಯವಾಗಿರುವುದಿಲ್ಲ. ಹಾಗಾಗಿ, ಮಾವಿನಕೆರೆ ಗ್ರಾಮದ ಸಮೀಪ ಹೇಮಾವತಿ ನದಿಯಿಂದ 2 ಹಂತಗಳಲ್ಲಿ 88 ಕ್ಯೂಸೆಕ್ ನೀರನ್ನು ಎತ್ತಿ 160 ಕೆರೆಗಳು ಹಾಗೂ 10 ಕಟ್ಟೆಗಳಿಗೆ ನೀರು ತುಂಬಿ ಸಲು ಯೋಜಿಸಲಾಗಿದೆ. ಒಟ್ಟು 333 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಯೋಜನೆಗೆ ಒಳಪಡುವ ಕೆರೆಗಳು ಮತ್ತು ಕಟ್ಟೆಗಳ ವಿವರ: ದುದ್ದ ಹೋಬಳಿ ವ್ಯಾಪ್ತಿಯ ಮೂಲನಹಳ್ಳಿ ಜಿ, ತೆಂಡಿ ಹಳ್ಳಿ, ಗಾಡೇನಹಳ್ಳಿ, ಎಸ್.ಬಂಡಿಹಳ್ಳಿ, ದ್ಯಾವಲಪುರ, ಚಿಟ್ಟನಹಳ್ಳಿ, ಚಿಕ್ಕ ಬೂವನಹಳ್ಳಿ, ಕೊಮ್ಮನಹಳ್ಳಿ, ಹಂಡ್ರಂಗಿ, ಉದ್ದೂರೆಹಳ್ಳಿ, ಚೌರಿಕೊಪ್ಪಲು, ಯೋಗಿಹಳ್ಳಿ, ಹೆಡ್ಡನಹಳ್ಳಿ, ಮಾಕನಹಳ್ಳಿ, ಮಾಯ ಸಮುದ್ರ, ಕೆ.ಹೊನ್ನೇನಹಳ್ಳಿ, ಕಮ್ಮರಿಗೆ, ಕೆ.ಕೃಷ್ಣಾಪುರ, ಗೋಪನಹಳ್ಳಿ, ಮೆಳಗೋಡು, ಡಿ.ದೇವಿಹಳ್ಳಿ, ಆರ್.ಎಸ್.ದುದ್ದ, ಮೂಲದುದ್ದ, ಹಿರೆಕಡ ಲೂರು, ಚಿಕ್ಕಕಡಲೂರು, ಕೋಡಿಹಳ್ಳಿ, ಹೊನ್ನಾವರ, ಪೂಮ ಗಾಮೆ, ಅನುಗಹಳ್ಳಿ, ಕಾರೆಬೋರೆಕಾವಲು, ಚಿಕ್ಕಮ್ಮನಹಳ್ಳಿ, ಚಿಗಟಿಹಳ್ಳಿ, ಮೂಲನಹಳ್ಳಿ ಹೆಚ್.ಕೃಷ್ಣಾಪುರ, ಕೋರ ಮಂಗಲ, ಕೋರಮಂಗಲ ಕಾವಲು, ಜಕ್ಕೇನಹಳ್ಳಿ, ಬೊಮ್ಮನ ಹಳ್ಳಿ, ಹೊನ್ನಮನಹಳ್ಳಿ, ಕಿತ್ತನಕೆರೆ, ಸಿದ್ದಾಪುರ, ಹುಲ್ಲಹಳ್ಳಿ, ತಿಮ್ಮಲಾಪುರ, ಅಟ್ಟಾವರ, ಕಟ್ಟಹಳ್ಳಿ, ಮುದಿಗೆರೆ, ರುದ್ರದೇವರ ಹಳ್ಳಿ, ಎ.ಹೊಸಹಳ್ಳಿ ಕೊಪ್ಪಲು, ಎ.ಹೊಸಹಳ್ಳಿ, ಆನೆಹಳ್ಳಿ, ವಳಗೆರಹಳ್ಳಿ, ವಿ.ಕೊಪ್ಪಲು, ಕೋಡಿ ಕೊಪ್ಪಲು, ಸಾವಂಕನ ಹಳ್ಳಿ, ಮಂಜೇನಹಳ್ಳಿ ಕಾವಲು, ಬಿಟ್ಟಹಳ್ಳಿ, ಅರಸೀಹಳ್ಳಿ, ಗೌಡಗೆರೆ, ವಳಗೇರಹಳ್ಳಿ ಕಾಲೋನಿ, ಹೆರಗು, ಭೈರಾ ಪುರ, ದ್ಯಾಪಲಾಪುರ, ಕೆಂಚನಹಳ್ಳಿ, ಹರಿಹರಪುರ, ಕಣಜನಹಳ್ಳಿ, ಹಾರನಹಳ್ಳಿ, ಹಂಪನಹಳ್ಳಿ.

ಶಾಂತಿಗ್ರಾಮ ಹೋಬಳಿ ವ್ಯಾಪ್ತಿಯ ಅಮ್ಮಗೌಡನ ಕೊಪ್ಪಲು, ಮರ್ಕುಲಿ, ದುಮ್ಮಗೆರೆ, ಮಳಲಿ ಕಾವಲು, ಸಬ್ಬನಹಳ್ಳಿ, ಕರಗನಹಳ್ಳಿ, ಚಾಕೇನಹಳ್ಳಿ, ಕಲ್ಲೇನಹಳ್ಳಿ, ಗವಿಸೋಮನ ಹಳ್ಳಿ, ಪಿಳ್ಳೆನಹಳ್ಳಿ, ಹೊಂಗೆರೆ, ಹೆಚ್.ಬಂಡಿ ಹಳ್ಳಿ, ಹಲಸಿನ ಹಳ್ಳಿ, ಹೂವಿನಹಳ್ಳಿ, ಮಲ್ಲನಾಯಕನಹಳ್ಳಿ, ಬೆನಗಟ್ಟೆ, ದೇವಿ ಹಳ್ಳಿ, ಬೆಳ್ಳಿಕೊಪ್ಪಲು, ಹೊಳಲು, ಜುಂಜನಹಳ್ಳಿ, ಹಿತ್ತಲ ಆಲದಹಳ್ಳಿ, ಮೆಳ್ಳಹಳ್ಳಿ, ಅದ್ದಿಹಳ್ಳಿ, ಚಿಗಹಳ್ಳಿ, ವಡ್ಡರಕೊಪ್ಪಲು, ರಂಗನಾಥಪುರ, ಪೆರುಮನಹಳ್ಳಿ, ತ್ಯಾವಳ್ಳಿ, ಶಾಂತಿಗ್ರಾಮ, ದೊಡ್ಡಚಾಕನಹಳ್ಳಿ, ಚಿಕ್ಕಚಾಕನಹಳ್ಳಿ, ಆಲದಹಳ್ಳಿ ಕೆ.ಬ್ಯಾಡರ ಹಳ್ಳಿ ಕೆ.ಮುದ್ದನಹಳ್ಳಿ, ಮಡೆನೂರು, ಹೂವಿನಹಳ್ಳಿ, ಕಾರೆಕೆರೆ, ಕಾರೆಕೆರೆ ಗೇಟ್, ಉಪ್ಪಾರ ಹೊಸಳ್ಳಿ, ಹೆಗ್ಗಡಿಹಳ್ಳಿ, ಕೆರೆಮೇಗಳ ಕೊಪ್ಪಲು, ಲಕ್ಷ್ಮೀಸಾಗರ. ದಂಡಿಗನಹಳ್ಳಿ ಹೋಬಳಿ ವ್ಯಾಪ್ತಿಯ ದೊಡ್ಡಕರಡೆ, ಚಿಕ್ಕಕರಡೆ, ಮಾದಲಾಪುರ ಕೆರೆಗಳಿಗೆ ನೀರು ತುಂಬಿಸಲು ಯೋಜಿಸಲಾಗಿದೆ.

Translate »