ವಿಜೃಂಭಣೆಯ ಶ್ರೀಲಕ್ಷ್ಮೀಕಾಂತಸ್ವಾಮಿ ಬ್ರಹ್ಮ ರಥೋತ್ಸವ
ಹಾಸನ

ವಿಜೃಂಭಣೆಯ ಶ್ರೀಲಕ್ಷ್ಮೀಕಾಂತಸ್ವಾಮಿ ಬ್ರಹ್ಮ ರಥೋತ್ಸವ

February 15, 2019

ರಾಮನಾಥಪುರ: ರಾಮನಾಥಪುರ ಹೋಬಳಿ ಬಸವಾ ಪಟ್ಟಣದ ಕೋಟೆ ಬೀದಿಯಲ್ಲಿರುವ ಶ್ರೀಲಕ್ಷ್ಮೀಕಾಂತಸ್ವಾಮಿ ದೇವಸ್ಥಾನದ ಬ್ರಹ್ಮ ರಥೋತ್ಸವವು ಗುರುವಾರ ಸಾವಿ ರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನೆರವೇರಿತು.

ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಅಂಕು ರಾರ್ಪಣ, ಧ್ವಜಾರೋಹಣ, ರುದ್ರಾ ಭಿಷೇಕ ಹಾಗೂ ವಿಶೇಷ ಪೂಜೆಗಳು ಪುರೋಹಿತರಾದ ಸಂಪತ್ ಅಯ್ಯಂ ಗಾರ್, ಋತ್ವಿಕರ ನೇತೃತ್ವದಲ್ಲಿ ನಡೆಯಿತು. ರಥೋತ್ಸವಕ್ಕೂ ಮೊದಲು ಉತ್ಸವ ಮೂರ್ತಿಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಡ್ಡಪಲ್ಲಕ್ಕಿ ಮೆರವಣಿಗೆ ಮಾಡಿ ನಂತರ ಅಲಂಕೃತ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯಿಟ್ಟು ಪೂಜಾ ಕೈಂ ಕರ್ಯ ನೆರವೇರಿಸಿ ಮಧ್ಯಾಹ್ನ 12.40ರಲ್ಲಿ ರಥೋತ್ಸವ ಜರುಗಿತು.

ಗ್ರಾಪಂ ಅಧ್ಯಕ್ಷೆ ನಾಗರತ್ನ ಮಹೇಂದ್ರ ಕುಮಾರ್, ಪಿಡಿಓ ಮಂಜುನಾಥ್ ಸೇರಿದಂತೆ ಇತರೆ ಗಣ್ಯರು ರಥೋತ್ಸವಕ್ಕೆ ಚಾಲನೆ ನೀಡಿದರು.

ಗೋವಿಂದ ಗೋವಿಂದಾ ಎನ್ನುತ್ತಾ ಭಕ್ತರು ತೇರು ಎಳೆದು ಸಂಭ್ರಮಿಸಿದರು. ರಥ ಸಾಗಿದ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು ರಥದತ್ತ ಹಣ್ಣು ಜವನ ಎಸೆದು ಭಕ್ತ ಸಮರ್ಪಿಸಿದರು.

ರಥೋತ್ಸವದ ನಂತರ ಎಲ್ಲಾ ಭಕ್ತರಿಗೂ ಅನ್ನ ದಾಸೋಹವನ್ನೂ ಸಹ ಏರ್ಪಡಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಪಿಎಸ್‍ಐ ಮತ್ತು ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕೈಗೊಂಡಿದ್ದರು.

ಜಾತ್ರೆಯಲ್ಲಿ ಮಕ್ಕಳ ಆಟಿಕೆ ವಸ್ತುಗಳು, ಮಂಡಕ್ಕಿ ಪುರಿ, ಸಿಹಿ ತಿನಿಸುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.ಉಪ ತಹಸೀಲ್ದಾರ್ ಜಿ.ಸಿ.ಚಂದ್ರು, ರಾಜಸ್ವ ನಿರೀಕ್ಷಕ ಸಿ.ಸ್ವಾಮಿ, ಗ್ರಾಮ ಲೆಕ್ಕಿಗರಾದ ಸಂಜೀವ್ ಚೌಹಾಣ್, ಎಸ್.ಎನ್.ಯಾದವ್, ಎಪಿಎಂಸಿ ಮಾಜಿ ಅಧ್ಯಕ್ಷ ಕಂಬೇಗೌಡ ಮುಂತಾ ದವರು ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.

Translate »