Tag: Hassan

ಇನ್ನೂ 3 ತಿಂಗಳು ಪ್ರಕೃತಿ ಆತಂಕ ಮತ್ತೆ ಭವಿಷ್ಯ ನುಡಿದ ಕೋಡಿಶ್ರೀ
ಮೈಸೂರು

ಇನ್ನೂ 3 ತಿಂಗಳು ಪ್ರಕೃತಿ ಆತಂಕ ಮತ್ತೆ ಭವಿಷ್ಯ ನುಡಿದ ಕೋಡಿಶ್ರೀ

August 22, 2018

ಹಾಸನ: ಕರ್ನಾಟಕ ಮತ್ತು ಕೇರಳದಲ್ಲಿ ನೈಸರ್ಗಿಕ ವಿಕೋಪ ಕುರಿತು ಮತ್ತೊಮ್ಮೆ ಭವಿಷ್ಯ ನುಡಿದಿರುವ ಅರಸೀಕೆರೆ ತಾಲೂಕಿನ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಇನ್ನೂ 3 ತಿಂಗಳು ಪ್ರಕೃತಿ ವಿಕೋಪಗಳು ಮುಂದುವರಿ ಯಲಿವೆ ಎಂದು ತಿಳಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮಳೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಕೋಪಗಳು ಇನ್ನೂ ಮೂರು ತಿಂಗಳು ಮುಂದುವರಿಯಲಿದೆ. ಜನರಿಗೆ ಇದರಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದಿದ್ದಾರೆ. ಮುಂದಿನ ಕಾರ್ತಿಕ ಮಾಸದವರೆಗೂ ಮಳೆ ಆರ್ಭಟಿಸಲಿದೆ. ಇದರಿಂದ ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಕೋಪದಿಂದ…

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ
ಹಾಸನ

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

August 22, 2018

ಹಾಸನ:  ಕಾರ್ಮಿಕರಿಗೆ ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್‍ರನ್ನು ಕೂಡಲೇ ಬೇರೆಡೆಗೆ ವರ್ಗಾಯಿಸುವಂತೆ ಒತ್ತಾಯಿಸಿ ನಗರಸಭೆ ಪೌರಕಾರ್ಮಿಕರು ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟಿಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಆವರಣ ದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಸ್ಟೀಫನ್ ಪ್ರಕಾಶ್ 20 ವರ್ಷಗಳಿಂದ ನಗರಸಭೆ ಆರೋಗ್ಯ ನಿರೀಕ್ಷಕನಾಗಿ ಕೆಲಸ ಮಾಡು ತ್ತಿದ್ದು, ಪೌರ ಕಾರ್ಮಿಕರನ್ನು ಅಮಾನವೀಯ ವಾಗಿ ನಡೆಸಿಕೊಳ್ಳುತ್ತಿದ್ದಾರೆ. ಈ ಪ್ರಶ್ನಿ ಸುವವರನ್ನು ಕಠಿಣ ಕೆಲಸಕ್ಕೆ ನಿಯೋಜಿಸಿ ಸರ್ವಾಧಿಕಾರಿಯಂತೆ ವರ್ತಿಸುತ್ತಾರೆ. ಇವ ರಿಂದ ಸಾಕಷ್ಟು…

ಸಹಜ ಸ್ಥಿತಿಯತ್ತ ರಾಮನಾಥಪುರ
ಹಾಸನ

ಸಹಜ ಸ್ಥಿತಿಯತ್ತ ರಾಮನಾಥಪುರ

August 21, 2018

ರಾಮನಾಥಪುರ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಪ್ರಮಾಣ ಕುಂಠಿತಗೊಂಡ ಹಿನ್ನೆಲೆ ಇಲ್ಲಿನ ನದಿ ಪ್ರವಾಹ ತಗ್ಗಿದ್ದು, ಜನ-ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ ಕೆಲ ದಿನಗಳಲ್ಲಿ ರಾಮನಾಥಪುರ ಗ್ರಾಮ ಜಲಾವೃತಗೊಂಡ ಪರಿಣಾಮ ಜನತೆ ಸಂಕಷ್ಟಕ್ಕೆ ಸಿಲುಕಿದ್ದರು. ಶುಕ್ರವಾರದಿಂದ ನದಿ ನೀರು ಹರಿಯುವಿನ ಪ್ರಮಾಣ ಸಾಕಷ್ಟು ಇಳಿದಿದ್ದು, ಮನೆ ತೊರೆದು ನೆರೆ ಪರಿಹಾರ ಕೇಂದ್ರದಲ್ಲಿರುವ ನಿರಾಶ್ರಿತರಿಗೆ ಕೊಂಚ ಮಟ್ಟಿಗೆ ನೆಮ್ಮದಿ ತಂದಿದೆ. ನೆರವಿನ ಮಹಾಪೂರ: ರಾಮನಾಥ ಪುರದ ಸರ್ಕಾರಿ ಶಾಲೆಯಲ್ಲಿ ತಾಲೂಕು ಆಡಳಿತ ನಿರಾಶ್ರಿತರಿಗೆ ತೆರೆದಿರುವ ನೆರೆ ಪರಿಹಾರ…

ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ
ಹಾಸನ

ನಿರಾಶ್ರಿತರ ಶಿಬಿರದಲ್ಲಿ ಸಚಿವ ಹೆಚ್.ಡಿ.ರೇವಣ್ಣ ನಡೆಗೆ ವ್ಯಾಪಕ ಟೀಕೆ

August 21, 2018

ರಾಮನಾಥಪುರ: ಇಲ್ಲಿನ ನೆರೆ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಪ್ರಾಣಿಗಳಿಗೆ ನೀಡುವಂತೆ ನಿರಾಶ್ರಿತರಿಗೆ ಬಿಸ್ಕೆಟ್ ಎಸೆದಿರುವ ನಡೆಗೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ರಾಮನಾಥಪುರದ ಸರ್ಕಾರಿ ಶಾಲೆಯೊಂದರಲ್ಲಿ ತೆರೆದಿದ್ದ ನೆರೆ ಪರಿಹಾರ ಕೇಂದ್ರಕ್ಕೆ ನಿರಾಶ್ರಿತ ಸಮಸ್ಯೆ ಆಲಿಸಲು ಶಾಸಕ ಎ.ಟಿ.ರಾಮಸ್ವಾಮಿ ಆವರೊಡನೆ ಸಚಿವ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ನಿರಾಶ್ರಿತರಿಗೆ ಬಿಸ್ಕೆಟ್ ಪ್ಯಾಕ್‍ಗಳನ್ನು ನೀಡಲು ಮುಂದಾದರು. ಆದರೆ ಇವರ ಬಿಸ್ಕೆಟ್ ವಿತರಿಸಿದ ಪರಿ ನೋಡುಗರನ್ನು ಮುಜುಗರಕ್ಕೀಡು ಮಾಡಿತು. ನಿರಾಶ್ರಿತರ ಕೈಗೆ…

ಹಾಸನ ಹಾಲು ಒಕ್ಕೂಟದಿಂದ ಸಂತ್ರಸ್ತರಿಗೆ ನೆರವು
ಹಾಸನ

ಹಾಸನ ಹಾಲು ಒಕ್ಕೂಟದಿಂದ ಸಂತ್ರಸ್ತರಿಗೆ ನೆರವು

August 19, 2018

ಹಾಸನ: ಸತತ ಮಳೆ, ಗಾಳಿ, ಪ್ರವಾಹದಿಂದ ತತ್ತರಿಸಿರುವ ಕೊಡಗಿನ ಸಂತ್ರಸ್ತರಿಗೆ ಹಾಸನ ಹಾಲು ಒಕ್ಕೂಟದಿಂದ ಅಗತ್ಯ ನೆರವು ನೀಡುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಡಿ.ರೇವಣ್ಣ ಆಹಾರ ಸಾಮಾಗ್ರಿ ತುಂಬಿದ 3 ಲಾರಿಗಳಿಗೆ ಹಸಿರು ನಿಶಾನೆ ತೋರಿದರು. ನಗರದ ಹಾಲು ಒಕ್ಕೂಟದ ಆವರಣದಲ್ಲಿ 3 ಲಾರಿಗಳಲ್ಲಿ 30,000ಲೀ. ಹಾಲು, 5,000 ಬಿಸ್ಕತ್, 200 ಕ್ವಿಂಟಾಲ್ ಅಕ್ಕಿ, 5 ಕ್ವಿಂಟಾಲ್ ಬೇಳೆ ಹಾಗೂ ಬಟ್ಟೆ ಸೇರಿದಂತೆ ಅಗತ್ಯ ವಸ್ತುಗಳು ತುಂಬಿ ಕಳುಹಿಸಲಾಯಿತು. ಅಗತ್ಯಬಿದ್ದರೆ ಮತ್ತಷ್ಟು ನೆರವು ಒದಗಿಸಲಾ ಗುವುದು…

ಮೃತದೇಹ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ತಾಯಿ, ಪತ್ನಿ
ಹಾಸನ

ಮೃತದೇಹ ಹುಡುಕಿಕೊಡುವಂತೆ ಡಿಸಿ ಕಾಲಿಗೆರಗಿದ ತಾಯಿ, ಪತ್ನಿ

August 18, 2018

ಹಾಸನ: – ನನ್ನ ಮಗನ ನೋಡಿ ನಾಲ್ಕು ದಿನಗಳಾಗಿವೆ. ಮಗನ ಮುಖ ತೋರಿಸವ್ವಾ….. ಎಂದು ಹೆತ್ತಕರುಳೊಂದು ಗೋಳಾಡುತ್ತಾ ಕಾಲಿಗೆರುವ ದೃಶ್ಯ ಒಂದೆಡೆಯಾದರೆ, ನನ್ನ ಕಂದನಿಗೆ ಅಪ್ಪನ ಮುಖ ತೋರಿಸಿ ಎಂದು ಕಣ್ಣೀರಿಡುತ್ತಾ ಹಸುಗೂಸಿನೊಂದಿಗೆ ಮಹಿಳೆ ಅಂಗಲಾ ಚುತ್ತಿದ್ದ ದೃಶ್ಯ ಮತ್ತೊಂದೆಡೆ. ಒಬ್ಬರ ನ್ನೊಬ್ಬರು ಸಮಾಧಾನ ಪಡಿಸುತ್ತಿದ್ದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ಇದು ಜಿಲ್ಲಾಡಳಿತ ಕಚೇರಿ ಆವರಣ ದಲ್ಲಿ ಇಂದು ಕಂಡು ಬಂದ ಚಿತ್ರಣ. ಇದರಿಂದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕಣ್ಣೂ ತುಂಬಿ ಬಂತು ಸಕಲೇಶಪುರ…

ಜಿಲ್ಲಾದ್ಯಂತ ಸಂಭ್ರಮ-ಸಡಗರದ 72ನೇ ಸ್ವಾತಂತ್ರ್ಯ ದಿನಾಚರಣೆ
ಹಾಸನ

ಜಿಲ್ಲಾದ್ಯಂತ ಸಂಭ್ರಮ-ಸಡಗರದ 72ನೇ ಸ್ವಾತಂತ್ರ್ಯ ದಿನಾಚರಣೆ

August 17, 2018

ಧ್ವಜಾರೋಹಣ ನೆರವೇರಿಸಿದ ಸಚಿವ ಹೆಚ್.ಡಿ.ರೇವಣ್ಣ, ಎಲ್ಲೆಡೆ ರಾರಾಜಿಸಿದ ತ್ರಿವರ್ಣ ಧ್ವಜ ಹಾಸನ:  ನಗರ ಸೇರಿದಂತೆ ಜಿಲ್ಲಾದ್ಯಂತ ಬುಧವಾರ 72ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಸಂಭ್ರಮ- ಸಡಗರ ದಿಂದ ಆಚರಿಸಲಾಯಿತು. ಎಲ್ಲೆಡೆ ತ್ರಿವರ್ಣ ಧ್ವಜ ರಾರಾಜಿಸಿತ್ತು. ಮಕ್ಕಳು, ಅಧಿಕಾರಿ ಗಳು, ಸಂಘ-ಸಂಸ್ಥೆಗಳ ಪದಾಧಿಕಾರಿ ಗಳು ಸೇರಿದಂತೆ ಜನಪ್ರತಿನಿಧಿಗಳು ರಾಷ್ಟ್ರ ಧ್ವಜಕ್ಕೆ ಗೌರವ ಸಲ್ಲಿಸಿದರು. ಹಾಸನ ವರದಿ: ನಗರದ ಜಿಲ್ಲಾ ಕ್ರೀಡಾಂ ಗಣದಲ್ಲಿ ಜಿಲ್ಲಾಡಳಿತ ವತಿಯಿಂದ 72ನೇ ವರ್ಷದ ಸ್ವಾತಂತ್ರ್ಯ ದಿನವನ್ನು ಅರ್ಥ ಪೂರ್ಣವಾಗಿ ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವರು…

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ
ಹಾಸನ

ನಗರಸಭೆ ಪೌರಕಾರ್ಮಿಕರ ಪ್ರತಿಭಟನೆ

August 15, 2018

ಹಾಸನ: ಕಿರುಕುಳ ನೀಡುತ್ತಿರುವ ನಗರಸಭೆ ಆರೋಗ್ಯ ನಿರೀಕ್ಷಕ ಸ್ಟೀಫನ್ ಪ್ರಕಾಶ್ ರನ್ನು ಅಮಾನತುಗೊಳಿಸುವಂತೆ ಆಗ್ರಹಿಸಿ ನಗರಸಭೆ ಪೌರ ಕಾರ್ಮಿಕರು ಕರ್ತವ್ಯ ಬಹಿಷ್ಕರಿಸಿ ನಗರಸಭೆ ಆವರಣದಲ್ಲಿಂದು ದಿಢೀರ್ ಪ್ರತಿಭಟನೆ ನಡೆಸಿದರು. ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಪ್ರತಿಭಟಿಸಿದ ಪೌರ ಕಾರ್ಮಿಕರು ಸ್ಟೀಫನ್ ಪ್ರಕಾಶ್ ವಿರುದ್ಧ ಘೋಷಣೆ ಕೂಗಿ ಅವರನ್ನು ಆಕ್ರೋಶ ವ್ಯಕ್ತ ಪಡಿಸಿದರಲ್ಲದೆ, ಸ್ಥಳಕ್ಕೆ ಆಯುಕ್ತರು ಬರಬೇಕೆಂದು ಪಟ್ಟು ಹಿಡಿದದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಆಯುಕ್ತ ಬಿ.ಎ. ಪರಮೇಶ್…

ಕರುಳಕುಡಿ ನೋಡಲು ಉಸಿರು ಬಿಗಿ ಹಿಡಿದ ತಾಯಿ
ಹಾಸನ

ಕರುಳಕುಡಿ ನೋಡಲು ಉಸಿರು ಬಿಗಿ ಹಿಡಿದ ತಾಯಿ

August 13, 2018

ಹಾಸನ: ಕಿಡ್ನಿ ವೈಫಲ್ಯದಿಂದ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಪತ್ನಿಯನ್ನು ಬಿಟ್ಟು ಮಗುವಿನೊಂದಿಗೆ ಪತಿ ಪರಾರಿಯಾಗಿದ್ದು, ಉಸಿರು ಬಿಡುವ ಮುನ್ನ ಕಂದನ ಮುಖ ನೋಡಲು ತಾಯಿ ಜೀವವನ್ನು ಭದ್ರವಾಗಿ ಹಿಡಿದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತಾಲೂಕಿನ ಕೋರಳ್ಳಿ ಗ್ರಾಮದಲ್ಲಿರುವ ಗಂಗಾ ಅವರ ಪುತ್ರಿ ರೂಪಶ್ರೀ(24) ಕಿಡ್ನಿ ವೈಫಲ್ಯಕ್ಕೆ ತುತ್ತಾದ ತಾಯಿ. ಈಕೆನ್ನು 2 ವರ್ಷಗಳ ಹಿಂದೆ ಆಲೂರು ತಾಲೂಕು ರಾಜನಹಳ್ಳಿ ನಿವಾಸಿ ಭುವನೇಶ್(ಮಹೇಶ್) ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಲಿಕ್ಕರ್ಸ್ ಶಾಪೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ನಗರದ ಸಮೀಪ…

ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು
ಹಾಸನ

ಕಾಲು ಜಾರಿ ಕೆರೆಗೆ ಬಿದ್ದು ರೈತ ಸಾವು

August 12, 2018

ಚನ್ನರಾಯಪಟ್ಟಣ: ಕೆರೆ ಯಲ್ಲಿ ರಾಸುಗಳಿಗೆ ನೀರು ಕುಡಿಸಲು ಹೋದ ರೈತ ಕಾಲು ಜಾರಿ ಮುಳುಗಿ ಮೃತಪಟ್ಟಿರುವ ಘಟನೆ ತಾಲೂಕಿನ ಗೆಜಗಾರನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಭೈರೇಗೌಡ (41) ಮೃತ ರೈತ. ಜಮೀನಿಂದ ಮನೆಗೆ ಬರುವಾಗ ಗ್ರಾಮದ ಹಿರೀಕೆರೆಯಲ್ಲಿ ರಾಸುಗಳಿಗೆ ನೀರು ಕುಡಿಸಲು ತೆರಳಿದ್ದ ಸಂದರ್ಭ ದಲ್ಲಿ ಕಾಲುಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 83 84 85 86 87 103
Translate »