Tag: JD(S)

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾ.ರಾ.ಮಹೇಶ್-ಸಂದೇಶ್ ನಾಗರಾಜ್ ಮಾತಿನ ಚಕಮಕಿ
ಮೈಸೂರು

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಾ.ರಾ.ಮಹೇಶ್-ಸಂದೇಶ್ ನಾಗರಾಜ್ ಮಾತಿನ ಚಕಮಕಿ

July 13, 2018

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರ ಹಾಜರಾತಿಯನ್ನು ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಪ್ರಶ್ನಿಸಿದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು ಎಂದು ಮೂಲಗಳು ತಿಳಿಸಿವೆ. ಶಾಸಕಾಂಗ ಪಕ್ಷದ ಅಂತಿಮ ಕ್ಷಣದಲ್ಲಿ ಸಾ.ರಾ. ಮಹೇಶ್ ಮಾತನಾಡುತ್ತಾ, ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವ ಸಂದೇಶ್ ನಾಗರಾಜ್ ಅವರನ್ನು ಸಭೆಯಿಂದ ಹೊರ ಹಾಕುವಂತೆ ಹೇಳಿದರು. ಅವರಿಗೆ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು ಅವರು ಬೆಂಬಲಿಸಿದರು. ಈ…

ಜೆಡಿಎಸ್ ಕೃಷ್ಣಾರೆಡ್ಡಿ ವಿಧಾನಸಭೆ ಉಪಾಧ್ಯಕ್ಷ
ಮೈಸೂರು

ಜೆಡಿಎಸ್ ಕೃಷ್ಣಾರೆಡ್ಡಿ ವಿಧಾನಸಭೆ ಉಪಾಧ್ಯಕ್ಷ

July 7, 2018

ಬೆಂಗಳೂರು: ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಎಂ. ಕೃಷ್ಣಾ ರೆಡ್ಡಿ ಆಯ್ಕೆಗೊಂಡಿ ದ್ದಾರೆ. ಕೃಷ್ಣಾರೆಡ್ಡಿ ಹೊರತು ಪಡಿಸಿ ಬೇರ್ಯಾರೂ ಅಭ್ಯರ್ಥಿಗಳಾಗಿ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ರಮೇಶ್‍ಕುಮಾರ್, ಉಪ ಸಭಾಧ್ಯಕ್ಷ ಸ್ಥಾನಕ್ಕೆ ರೆಡ್ಡಿ ಅವಿರೋಧ ಆಯ್ಕೆ ಪ್ರಕಟಿಸಿದರು. ಆಯ್ಕೆಗೆ ಕೃಷ್ಣಾರೆಡ್ಡಿ ಅಭಿನಂದನೆ ಸಲ್ಲಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಶೀರ್ವಾದ, ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿ ಯೂರಪ್ಪ ಸಹಕಾರದಿಂದ ಉಪ ಸಭಾಧ್ಯಕ್ಷನಾಗಿ ಆಯ್ಕೆಯಾಗಿರುವು…

ಬಜೆಟ್‍ನಲ್ಲಿ ಸಾಲಮನ್ನಾ ಘೋಷಿಸಿದ ಸಿಎಂ ಕುಮಾರಸ್ವಾಮಿ ಬನ್ನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ
ಮೈಸೂರು

ಬಜೆಟ್‍ನಲ್ಲಿ ಸಾಲಮನ್ನಾ ಘೋಷಿಸಿದ ಸಿಎಂ ಕುಮಾರಸ್ವಾಮಿ ಬನ್ನೂರಿನಲ್ಲಿ ಜೆಡಿಎಸ್ ಕಾರ್ಯಕರ್ತರ ಸಂಭ್ರಮ

July 6, 2018

ಬನ್ನೂರು:  ಸಿಎಂ ಕುಮಾರಸ್ವಾಮಿ ಯವರು ರೈತರ ಸಾಲವನ್ನು ಮನ್ನಾ ಮಾಡಿದ್ದ ರಿಂದ ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ ಪಟಾಕಿಯನ್ನು ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೆಡಿಎಸ್ ಮುಖಂಡ ಸಂಜಯ್, ಇಂದು ರಾಜ್ಯದ ರೈತಾಪಿ ಕುಟುಂಬದವರು ಆರ್ಥಿಕ ವಾಗಿ ಜರ್ಜರಿತವಾಗಿದ್ದು, ಅವರು ಬದುಕು ನಡೆಸುವುದು ಕಷ್ಟವಾಗಿದೆ. ರಾಜ್ಯದ ರೈತರ ನೋವನ್ನು ಕಣ್ಣಾರೆ ಕಂಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಚುನಾವಣೆಗೂ ಮೊದಲೇ ನೀಡಿದ್ದ ಆಶ್ವಾಸನೆ ಯಂತೆ ರೈತರ ಸಾಲವನ್ನು ಮನ್ನಾ ಮಾಡುವ ದೃಢ ನಿರ್ಧಾರವನ್ನು ಕೈಗೊಂಡು ನುಡಿ ದಂತೆ…

ಮತದಾರರಿಗೆ ಮರಿತಿಬ್ಬೇಗೌಡ ಕೃತಜ್ಞತೆ ಸಲ್ಲಿಕೆ
ಮಂಡ್ಯ

ಮತದಾರರಿಗೆ ಮರಿತಿಬ್ಬೇಗೌಡ ಕೃತಜ್ಞತೆ ಸಲ್ಲಿಕೆ

June 24, 2018

ಮಂಡ್ಯ:  ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕನೇ ಬಾರಿ ಆಯ್ಕೆ ಯಾಗಲು ಕಾರಣದಾರ ಪಕ್ಷದ ಮುಖಂ ಡರು, ಶಾಸಕರು, ಶಿಕ್ಷಕ ಮತದಾರರು, ಹಿತೈಷಿಗಳಿಗೆ ಕೃತಜ್ಞತೆ ಅರ್ಪಿಸುವುದಾಗಿ ನೂತನ ವಿಧಾನ ಪರಿಷತ್ ಸದಸ್ಯ ಮರಿತಿ ಬ್ಬೇಗೌಡ ಹೇಳಿದರು. ನಗರದ ರೈತ ಸಭಾಂಗಣದಲ್ಲಿ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರದ ಮತದಾರರ ಬಂಧು ಗಳಿಗಾಗಿ ಕೃತಜ್ಞತಾ ಸಭೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತ ನಾಡಿದರು. ಜೂ.21ರವರೆಗೆ ಉಪ ಸಭಾಪತಿ ಯಾಗಿ ಕಾರ್ಯ ನಿರ್ವಹಿಸಿ, ಹಿಂದಿನ ಅವಧಿ ಮುಗಿಸಿ ನಾಲ್ಕನೇ ಅವಧಿಗೆ ನಿನ್ನೆ…

ಕೊಡಗಿನ ಸಮಸ್ಯೆಗಳನ್ನು ಹೆಚ್‍ಡಿಡಿ ಬಳಿ ಕೊಂಡ್ಯೋಯ್ದ ಸಂಕೇತ್
ಕೊಡಗು

ಕೊಡಗಿನ ಸಮಸ್ಯೆಗಳನ್ನು ಹೆಚ್‍ಡಿಡಿ ಬಳಿ ಕೊಂಡ್ಯೋಯ್ದ ಸಂಕೇತ್

June 24, 2018

ಗೋಣಿಕೊಪ್ಪಲು: ಜಿಲ್ಲೆಯ ಕೆಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ಕೂಡಲೇ ಬಗೆ ಹರಿಸಿಕೊಡುವಂತೆ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರವರನ್ನು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಇತ್ತಿಚೇಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು. ಹಿಂದುಳಿದ ವರ್ಗದ ವಸತಿ ನಿಲಯ ಗಳಲ್ಲಿ ಬಾಣಸಿಗರಾಗಿ ಹಲವು ವರ್ಷ ಗಳಿಂದ ದುಡಿಯುತ್ತಿದ್ದ ಸಿಬ್ಬಂದಿಯನ್ನು ಇದೀಗ ಏಕಾಎಕಿ ಕೆಲಸದಿಂದ ವಜಾ ಗೊಳಿಸಿ ಈ ಸ್ಥಾನಕ್ಕೆ ಬೇರೆ ಸಿಬ್ಬಂದಿ ಯನ್ನು ಆನ್‍ಲೈನ್ ಮೂಲಕ ಆಯ್ಕೆ…

ಮಂಡ್ಯ ಅಭಿವೃದ್ಧಿಗೆ 500 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ
ಮಂಡ್ಯ

ಮಂಡ್ಯ ಅಭಿವೃದ್ಧಿಗೆ 500 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಕೆ

June 19, 2018

ಮಂಡ್ಯ:  ಮಂಡ್ಯ ಅಭಿವೃದ್ಧಿಗೆ 500 ಕೋಟಿ, ಮೈಷುಗರ್ ಸಕ್ಕರೆ ಕಾರ್ಖಾನೆ ಅಭಿವೃದ್ಧಿ, ಹಳೇ ಮಿಲ್ ತೆಗೆದು ಹೊಸ ಮಿಲ್ ಅಳವಡಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಎಂ. ಶ್ರೀನಿವಾಸ್ ತಿಳಿಸಿದರು. ಮಂಡ್ಯ ವಿಧಾನಸಭಾ ಕ್ಷೇತ್ರದಿಂದ 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎಂ.ಶ್ರೀನಿವಾಸ್ ಅವರು ನಗರದ ತಾಪಂ ಕಚೇರಿ ಆವರಣದಲ್ಲಿ ತಮ್ಮ ನೂತನ ಶಾಸಕರ ಕಚೇರಿ ಉದ್ಘಾಟಿಸಿ ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಶಾಸಕರ ಕಚೇರಿ ಉದ್ಘಾಟಿಸುತ್ತಿ ದ್ದೇನೆ. ನನ್ನ ಶಾಸಕರ ಕಚೇರಿ ಸರ್ವರಿಗೂ…

ಲೋಕಸಭಾ ಉಪಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ  ಜೆಡಿಎಸ್‍ನಿಂದ ಲಕ್ಷ್ಮಿಅಶ್ವಿನ್‍ಗೌಡ ಸ್ಪರ್ಧೆ, ಕಾಂಗ್ರೆಸ್‍ನಿಂದ ಟಿಕೆಟ್ ಯಾರಿಗೆ..?
ಮಂಡ್ಯ

ಲೋಕಸಭಾ ಉಪಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ  ಜೆಡಿಎಸ್‍ನಿಂದ ಲಕ್ಷ್ಮಿಅಶ್ವಿನ್‍ಗೌಡ ಸ್ಪರ್ಧೆ, ಕಾಂಗ್ರೆಸ್‍ನಿಂದ ಟಿಕೆಟ್ ಯಾರಿಗೆ..?

June 18, 2018

ಮಂಡ್ಯ: ಸಚಿವ ಸಿ.ಎಸ್. ಪುಟ್ಟರಾಜು ರಾಜೀನಾಮೆಯಿಂದ ತೆರ ವಾಗಿರುವ ಮಂಡ್ಯ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾಗಿ ಲಕ್ಷ್ಮಿ ಅಶ್ವಿನ್‍ಗೌಡ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ನಿಂದ ಯಾರು ಎಂಬ ಚರ್ಚೆ ಈಗ ಎಲ್ಲೆಡೆ ಶುರುವಾಗಿದೆ. ಇತ್ತೀಚೆಗಷ್ಟೇ ತಮ್ಮ ಐಆರ್‍ಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಲಕ್ಷ್ಮಿ ಅಶ್ವಿನ್‍ಗೌಡ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿ ಕೊಂಡಿದ್ದಾರೆ. ಲೋಕಸಭೆ ಉಪಚುನಾ ವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ನನಗೇ ಎಂಬ ವಿಶ್ವಾಸ…

ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು
ಹಾಸನ

ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು

June 18, 2018

ಅರಸೀಕೆರೆ: ತಾಲೂಕಿನ ಬಾಣಾವರ ಜಿಪಂ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಬಿಳಿಚೌಡಯ್ಯ ಗೆಲುವು ಸಾಧಿಸಿದ್ದು, ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರ ಭದ್ರ ಕೋಟೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ವಿಧಾನ ಸಭಾ ಚುನಾವಣೆ ಪೂರ್ವ ದಲ್ಲಿ ನಡೆದ ನಾಟಕೀಯ ಬೆಳವಣ ಗೆಯಲ್ಲಿ ಹಾಸನ ಜಿಪಂನ ಬಾಣಾವರ ಕ್ಷೇತ್ರದ ಸದಸ್ಯರಾಗಿದ್ದ ಬಿ.ಎಸ್. ಅಶೋಕ್ ಕಾಂಗ್ರೆಸ್ `ಬಿ’ ಫಾರಂ ಬಹುತೇಕ ಖಚಿತ ಎಂಬ ಆಸೆಯೊಂದಿಗೆ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದು ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಪಂ ಸದಸ್ಯತ್ವ…

ಎ.ಹೆಚ್.ವಿಶ್ವನಾಥ್‍ರಿಗೆ ಸಚಿವ ಸ್ಥಾನ ನೀಡಲು ಆಗ್ರಹ
ಮೈಸೂರು

ಎ.ಹೆಚ್.ವಿಶ್ವನಾಥ್‍ರಿಗೆ ಸಚಿವ ಸ್ಥಾನ ನೀಡಲು ಆಗ್ರಹ

June 14, 2018

ಮೈಸೂರು: ಕರ್ನಾಟಕ ರಾಜ್ಯ ಭಾರತ ಮಾತ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಮಾಜಿ ಸಚಿವರೂ ಹಾಗೂ ಸಂಸದರಾದ ಅಡಗೂರು ಹೆಚ್. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ಕಾರ್ಮಿಕರು ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧವಿರುವುದಾಗಿ ಸಂಘದ ರಾಜ್ಯಾಧ್ಯಕ್ಷ ಜಿ. ಸಿದ್ದರಾಜು ಮನವಿ ಮಾಡಿದ್ದಾರೆ. ಉಚಿತ ತರಬೇತಿ ಮೈಸೂರು, ಜೂ. 13- ನಗರದ ನೇತಾಜಿ ಎಜುಕೇಷನ್ ಫೌಂಡೇಶನ್ ವತಿಯಿಂದ ಪೊಲೀಸ್ ಕಾನ್‍ಸ್ಟೇಬಲ್, ಪೊಲೀಸ್ ಸಬ್ ಇನ್ಸ್‍ಪೆಕ್ಟರ್, ರೈಲ್ವೆ ಕಾನ್‍ಸ್ಟೇಬಲ್, ಸಬ್ ಇನ್ಸ್‍ಪೆಕ್ಟರ್ ನೇಮಕಾತಿ…

ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇಗೌಡ ಜಯಭೇರಿ
ಮೈಸೂರು

ವಿಧಾನ ಪರಿಷತ್ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‍ನ ಮರಿತಿಬ್ಬೇಗೌಡ ಜಯಭೇರಿ

June 13, 2018

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಜೆಡಿಎಸ್ ಬೆಂಬಲಿತ ಮರಿತಿಬ್ಬೇಗೌಡ ಅವರು ಸತತ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ.ಮೈಸೂರಿನ ವಿನಾಯಕನಗರ(ಪಡುವಾರ ಹಳ್ಳಿ) ಬಳಿ ವಾಲ್ಮೀಕಿ ರಸ್ತೆಯಲ್ಲಿರುವ ಮಹಾ ರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಜೆಡಿಎಸ್‍ನ ಮರಿ ತಿಬ್ಬೇಗೌಡ ಹಾಗೂ ಕಾಂಗ್ರೆಸ್‍ನ ಎಂ.ಲಕ್ಷ್ಮಣ ನಡುವೆ ರೋಚಕ ಪೈಪೋಟಿ ಏರ್ಪಟ್ಟಿತ್ತು. ಒಟ್ಟು 16696 ಚಲಾಯಿತ ಮತಗಳಲ್ಲಿ ಮೊದಲ ಪ್ರಾಶಸ್ತ್ಯದ ಮತ ಎಣ ಕೆಯಲ್ಲಿ ಯಾವೊಬ್ಬ ಅಭ್ಯರ್ಥಿಯೂ ಶೇ.50ರಷ್ಟು ಮತಗಳನ್ನು ಗಳಿಸುವಲ್ಲಿ ವಿಫಲ ರಾದ ಹಿನ್ನೆಲೆಯಲ್ಲಿ 2ನೇ…

1 3 4 5 6 7 9
Translate »