ಕೊಡಗಿನ ಸಮಸ್ಯೆಗಳನ್ನು ಹೆಚ್‍ಡಿಡಿ ಬಳಿ ಕೊಂಡ್ಯೋಯ್ದ ಸಂಕೇತ್
ಕೊಡಗು

ಕೊಡಗಿನ ಸಮಸ್ಯೆಗಳನ್ನು ಹೆಚ್‍ಡಿಡಿ ಬಳಿ ಕೊಂಡ್ಯೋಯ್ದ ಸಂಕೇತ್

June 24, 2018

ಗೋಣಿಕೊಪ್ಪಲು: ಜಿಲ್ಲೆಯ ಕೆಲವು ಸಮಸ್ಯೆಗಳನ್ನು ಮುಖ್ಯಮಂತ್ರಿ ಕುಮಾರಸ್ವಾಮಿಯೊಂದಿಗೆ ಚರ್ಚಿಸಿ ಕೂಡಲೇ ಬಗೆ ಹರಿಸಿಕೊಡುವಂತೆ ಜೆಡಿಎಸ್‍ನ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರವರನ್ನು ಕೊಡಗು ಜಿಲ್ಲಾ ಜೆಡಿಎಸ್ ಜಿಲ್ಲಾಧ್ಯಕ್ಷ ಮೇರಿ ಯಂಡ ಸಂಕೇತ್ ಪೂವಯ್ಯ ಇತ್ತಿಚೇಗೆ ಬೆಂಗಳೂರಿನಲ್ಲಿ ಅಧಿಕೃತವಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹಿಂದುಳಿದ ವರ್ಗದ ವಸತಿ ನಿಲಯ ಗಳಲ್ಲಿ ಬಾಣಸಿಗರಾಗಿ ಹಲವು ವರ್ಷ ಗಳಿಂದ ದುಡಿಯುತ್ತಿದ್ದ ಸಿಬ್ಬಂದಿಯನ್ನು ಇದೀಗ ಏಕಾಎಕಿ ಕೆಲಸದಿಂದ ವಜಾ ಗೊಳಿಸಿ ಈ ಸ್ಥಾನಕ್ಕೆ ಬೇರೆ ಸಿಬ್ಬಂದಿ ಯನ್ನು ಆನ್‍ಲೈನ್ ಮೂಲಕ ಆಯ್ಕೆ ಮಾಡಲಾಗಿದೆ.

ಇದರಿಂದ ನೂರಾರು ಕುಟುಂಬಗಳು ಬೀದಿ ಪಾಲಾಗಿದೆ. ಈ ಬಗ್ಗೆ ಕ್ರಮ ವಹಿಸಿ ಹಲವಾರು ವರ್ಷ ಗಳಿಂದ ಬದುಕು ಕಟ್ಟಿಕೊಂಡಿರುವ ಮಹಿಳೆಯರಿಗೆ ಉದ್ಯೋಗದಲ್ಲಿ ಮುಂದುವ ರೆಸುವಂತೆ ಮನವಿ ಮಾಡಿದ್ದಾರೆ.

ಸಂಪೂರ್ಣ ಕೃಷಿ ಸಾಲ ಮನ್ನಾದ ಬಗ್ಗೆ ಗಮನ ಸೆಳೆದಿರುವ ಇವರು, ಇತ್ತೀಚೆಗೆ ಕರ್ನಾಟಕ ರಾಜ್ಯ ರೈತ ಸಂಘ, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿಯ ಮುಂದೆ ಸಾಲ ಮನ್ನಾದ ವಿಚಾರದಲ್ಲಿ ಪ್ರತಿಭಟನೆ ನಡೆ ಸಿದ್ದು, ಈ ಬಗ್ಗೆ ಮನವಿ ನೀಡಿದ್ದಾರೆ. ಜಿಲ್ಲೆಯಲ್ಲಿನ ಕಾಫಿ ಬೆಳೆಗಾರರ ಸಾಲ ಮನ್ನಾ ಸೇರಿದಂತೆ ರೈತರ ಸಾಲ ಮನ್ನಾ ಮಾಡುವಲ್ಲಿ ಆದಷ್ಟು ಬೇಗನೇ ನಿರ್ಧಾರ ಕೈಗೊಳ್ಳು ವಂತೆ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ 40 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ತಮಿಳು ಸಮುದಾಯ ದವರು ವಾಸವಿದ್ದು ಇವರಿಗೆ ಸಮುದಾ ಯದ ವಿಚಾರದಲ್ಲಿ ಇಲ್ಲಿಯ ತನಕ ಯಾವುದೇ ಸಮುದಾಯ ಭವನ ನೀಡಿರುವುದಿಲ್ಲ. ಇವರಿಗೆ ಸಮುದಾಯ ಭನವ ನಿರ್ಮಿ ಸಲು ಸರ್ಕಾರಿ ಜಾಗ ಮಂಜೂರು ಮಾಡಿ ಕೊಡಲು ಹಾಗೂ ಭವನ ನಿರ್ಮಾಣಕ್ಕೆ ಆಧ್ಯತೆ ಮೇರೆ ಅನುದಾನ ನೀಡಲು ಕೋರಿ ದ್ದಾರೆ.

ಜಿಲ್ಲೆಯ ವಿರಾಜಪೇಟೆ ತಾಲೂ ಕಿನ ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿ ಹುಲಿ ಹಾವಳಿಯಿಂದ ರೈತರ ಜಾನುವಾರು ಗಳು ಬಲಿಯಾಗುತ್ತಿವೆ. ಈ ಬಗ್ಗೆ ಹಲವು ಬಾರಿ ಕೊಡಗಿನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿಗಳಿಗೆ ಈ ಬಗ್ಗೆ ವಿಶೇಷ ಗಮನ ಹರಿಸಲು ಒತ್ತಡ ಹೇರಿದ್ದರು ಈ ಅಧಿ ಕಾರಿಗಳು ಕ್ರಮ ವಹಿಸುತ್ತಿಲ್ಲ.

ಕಾಡಿನಿಂದ ನಾಡಿಗೆ ಕಾಡಾನೆಗಳ ಪ್ರವೇಶದಿಂದ ರೈತರ, ಕಾಫಿ ಬೆಳೆಗಾರರ ತೋಟಗಳು ನಷ್ಟಗೊಂಡಿದ್ದು ಸಕಾಲದಲ್ಲಿ ಇವರಿಗೆ ಪರಿಹಾರ ಸಿಗುತ್ತಿಲ್ಲ. ಕಾಡಾನೆ ಯನ್ನು ಹತ್ತಿಕ್ಕುವ ಪ್ರಯತ್ನಕ್ಕೆ ಇಲಾ ಖೆಯು ಮೀನಾ ಮೇಷ ಎಣಿಸುತ್ತಿದೆ. ಕೊಡಗು ಜಿಲ್ಲೆಯ ಮುಖ್ಯ ಸಂರಕ್ಷಣಾಧಿ ಕಾರಿಗಳು ಆನೆ ಮಾನವ ಸಂಘರ್ಷ ಹಾಗೂ ಹುಲಿ ಹಾವಳಿಯಿಂದ ಕಂಗೆಟ್ಟಿ ರುವ ರೈತರ ಸಂಕಷ್ಟಕ್ಕೆ ಹಾಗೂ ಸಾವು ನೋವಿಗೆ ಸಿಲುಕಿದಲ್ಲಿ ಸ್ಥಳಕ್ಕೆ ಆಗಮಿಸು ತ್ತಿಲ್ಲ.ಇವುಗಳಿಗೆ ಶಾಶ್ವತ ಪರಿಹಾರ ಒದಗಿ ಸುವ ನಿಟ್ಟಿನಲ್ಲಿ ಸುಧೀರ್ಘವಾದ ವರದಿ ಯನ್ನುಸರಕಾರಕ್ಕೆ ಒದಗಿಸಿಕೊಡುವಂತೆ ಹಲವು ಬಾರಿ ಮನವಿ ಮಾಡಿದರು ಸ್ಪಂಧಿ ಸುತ್ತಿಲ್ಲ ಎಂಬುದಾಗಿ ಮನವಿಯಲ್ಲಿ ವಿವರಿ ಸಿದ್ದಾರೆ. ರಾಜ್ಯದಲ್ಲೆಡೆ ಪಟ್ಟಣ ಪಂಚಾಯ್ತಿ ಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರಿಗೆ ಸಂಭಳವಿಲ್ಲದೆ 5 ತಿಂಗಳಿಗೂ ಹೆಚ್ಚಿನ ಸಮಯ ಕಳೆದಿದೆ. ಕೊಡಗು ಜಿಲ್ಲೆಯ ಲ್ಲಿಯೂ ಇರುವ ಪಟ್ಟಣ ಪಂಚಾಯ್ತಿಯ ಪೌರ ಕಾರ್ಮೀಕರ ಸಮಸ್ಯೆ ಉಲ್ಭಣ ಗೊಂಡಿದೆ. ಕಷ್ಟದಲ್ಲಿರುವ ಪೌರ ಕಾರ್ಮಿ ಕರ ಸಮಸ್ಯೆಗೆ ಸರ್ಕಾರ ತಕ್ಷಣ ಪರಿಹಾರ ನೀಡುವಂತೆ ಕೇಳಿಕೊಂಡಿದ್ದಾರೆ. ಬೆಂಗ ಳೂರಿನ ಪಧ್ಮನಾಭ ನಗರದ ದೇವೆಗೌಡರ ನಿವಾಸದಲ್ಲಿ ಸುಧೀರ್ಘವಾಗಿ ಜಿಲ್ಲೆಯ ಹಲವು ಸಮಸ್ಯೆಗಳ ಬಗ್ಗೆ ವಿವರಣೆ ನೀಡಿದ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಈ ಬಾರಿ ಸುರಿದ ಮಳೆಯಿಂದ ರಸ್ತೆ, ಸೇತುವೆ, ರಾಜ್ಯ ಹೆದ್ದಾರಿಗಳು ಹಾನಿ ಯಾಗಿವೆ. ನೂರಾರು ಕುಟುಂಬದ ಮನೆಗಳು ಮಳೆಯಿಂದ ಜಖಂಗೊಂಡಿದೆ. ಸೂಕ್ತ ಪರಿಹಾರ ನೀಡಲು ಈ ಸಂದರ್ಭ ಮನವಿ ಮಾಡಿಕೊಂಡರು.

ಭೇಟಿ ಸಂದರ್ಭ ಜಿಲ್ಲೆಯ ರಾಜಕಾರಣದ ಬಗ್ಗೆಯು ಸಂಕೇತ್ ಪೂವಯ್ಯ ವಿವರಿಸಿದರು. ಸಂದರ್ಭ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರಾದ್ಯಕ್ಷ ಎಸ್.ಎಚ್.ಮತೀನ್, ವಿರಾಜಪೇಟೆ ನಗರ ಅಧ್ಯಕ್ಷ ಪಿ.ಎ. ಮಂಜುನಾಥ್ ಹಾಗೂ ಪಕ್ಷದ ಕೆಲವು ಮುಖಂಡರು ಹಾಜರಿದ್ದರು.

Translate »