ಹಿರಿಯ ನಾಗರಿಕರ ವೇದಿಕೆ ವಾರ್ಷಿಕ ಮಹಾಸಭೆ
ಕೊಡಗು

ಹಿರಿಯ ನಾಗರಿಕರ ವೇದಿಕೆ ವಾರ್ಷಿಕ ಮಹಾಸಭೆ

June 24, 2018

ವಿರಾಜಪೇಟೆ: ವಿರಾಜ ಪೇಟೆಯ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ತಾಲೂಕು ಹಿರಿಯ ನಾಗರೀಕರ ಮಹಾಸಭೆ ನಡೆಯಿತು.

ವೇದಿಕೆ ಅಧ್ಯಕ್ಷ ಬಿ.ಬಿ.ನಾಣಯ್ಯ ಅಧ್ಯ ಕ್ಷತೆ ವಹಿಸಿ ಮಾತನಾಡುತ್ತಾ, ಹಿರಿಯ ನಾಗರಿಕರು ನೆಮ್ಮದಿ ಜೀವನ ನಡೆಸು ವಂತಾಗಲು ಸರ್ಕಾರದಿಂದ ದೊರೆ ಯುವ ಸವಲತ್ತುಗಳನ್ನು ವೇದಿಕೆ ವತಿಯಿಂದ ಪ್ರತಿಯೊಬ್ಬರಿಗೂ ದೊರಕಿಸಿ ಕೊಡಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ನಿರ್ದೇಶಕರುಗಳಾದ ಚೆರುಮಂಡ ನಾಣ್ಯಯ್ಯ, ಅಪ್ಪನೆರವಂಡ ಜೋಯಪ್ಪ, ಪುಲಿಯಂಡ ಪೊನ್ನಪ್ಪ, ಪುಟ್ಟಿಚಂಡ ಅಯ್ಯಣ್ಣ, ಕೂತಂಡ ಪೆಮ್ಮಯ್ಯ, ಸಿ.ಎಸ್.ಮಹ್ಮದ್ ಯೂಸುಫ್, ಖಲೀಲ್ ರೆಹಮಾನ್, ಬೊಳ್ಳಚಂಡ ಕಾಳಪ್ಪ, ಚೇಮೀರ ಭೀಮಯ್ಯ, ನೆಲ್ಲ ಚಂಡ ಭೀಮಯ್ಯ ಮುಂತಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಎಸ್‍ಎಸ್ ಎಲ್‍ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾ ನಿಸಲಾಯಿತು. ಹಾಗೂ ಮುಂದಿನ ಮೂರು ವರ್ಷಗಳ ಅವದಿಗೆ 13 ಮಂದಿ ನಿರ್ದೇ ಶಕರುಗಳನ್ನು ಆಯ್ಕೆ ಮಾಡಲಾಯಿತು.

Translate »