ಜೆಡಿಎಸ್ ಕೃಷ್ಣಾರೆಡ್ಡಿ ವಿಧಾನಸಭೆ ಉಪಾಧ್ಯಕ್ಷ
ಮೈಸೂರು

ಜೆಡಿಎಸ್ ಕೃಷ್ಣಾರೆಡ್ಡಿ ವಿಧಾನಸಭೆ ಉಪಾಧ್ಯಕ್ಷ

July 7, 2018

ಬೆಂಗಳೂರು: ವಿಧಾನಸಭೆಯ ಉಪ ಸಭಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‍ನ ಎಂ. ಕೃಷ್ಣಾ ರೆಡ್ಡಿ ಆಯ್ಕೆಗೊಂಡಿ ದ್ದಾರೆ. ಕೃಷ್ಣಾರೆಡ್ಡಿ ಹೊರತು ಪಡಿಸಿ ಬೇರ್ಯಾರೂ ಅಭ್ಯರ್ಥಿಗಳಾಗಿ ಕಣಕ್ಕಿಳಿಯದ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ರಮೇಶ್‍ಕುಮಾರ್, ಉಪ ಸಭಾಧ್ಯಕ್ಷ ಸ್ಥಾನಕ್ಕೆ ರೆಡ್ಡಿ ಅವಿರೋಧ ಆಯ್ಕೆ ಪ್ರಕಟಿಸಿದರು.

ಆಯ್ಕೆಗೆ ಕೃಷ್ಣಾರೆಡ್ಡಿ ಅಭಿನಂದನೆ ಸಲ್ಲಿಸಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಶೀರ್ವಾದ, ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿ ಯೂರಪ್ಪ ಸಹಕಾರದಿಂದ ಉಪ ಸಭಾಧ್ಯಕ್ಷನಾಗಿ ಆಯ್ಕೆಯಾಗಿರುವು ದಾಗಿ ತಿಳಿಸಿದರು.

Translate »