ಲೋಕಸಭಾ ಉಪಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ  ಜೆಡಿಎಸ್‍ನಿಂದ ಲಕ್ಷ್ಮಿಅಶ್ವಿನ್‍ಗೌಡ ಸ್ಪರ್ಧೆ, ಕಾಂಗ್ರೆಸ್‍ನಿಂದ ಟಿಕೆಟ್ ಯಾರಿಗೆ..?
ಮಂಡ್ಯ

ಲೋಕಸಭಾ ಉಪಚುನಾವಣೆಗೆ ಸದ್ದಿಲ್ಲದೆ ಸಿದ್ಧತೆ  ಜೆಡಿಎಸ್‍ನಿಂದ ಲಕ್ಷ್ಮಿಅಶ್ವಿನ್‍ಗೌಡ ಸ್ಪರ್ಧೆ, ಕಾಂಗ್ರೆಸ್‍ನಿಂದ ಟಿಕೆಟ್ ಯಾರಿಗೆ..?

June 18, 2018

ಮಂಡ್ಯ: ಸಚಿವ ಸಿ.ಎಸ್. ಪುಟ್ಟರಾಜು ರಾಜೀನಾಮೆಯಿಂದ ತೆರ ವಾಗಿರುವ ಮಂಡ್ಯ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆಗೆ ಸದ್ದಿಲ್ಲದೆ ತಯಾರಿ ನಡೆಯುತ್ತಿದೆ. ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾಗಿ ಲಕ್ಷ್ಮಿ ಅಶ್ವಿನ್‍ಗೌಡ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಕಾಂಗ್ರೆಸ್ ನಿಂದ ಯಾರು ಎಂಬ ಚರ್ಚೆ ಈಗ ಎಲ್ಲೆಡೆ ಶುರುವಾಗಿದೆ.

ಇತ್ತೀಚೆಗಷ್ಟೇ ತಮ್ಮ ಐಆರ್‍ಎಸ್ ಹುದ್ದೆಗೆ ರಾಜೀನಾಮೆ ನೀಡಿದ್ದ ಲಕ್ಷ್ಮಿ ಅಶ್ವಿನ್‍ಗೌಡ ಜೆಡಿಎಸ್ ಪಕ್ಷದಲ್ಲಿ ಸಕ್ರಿಯವಾಗಿ ಗುರುತಿಸಿ ಕೊಂಡಿದ್ದಾರೆ. ಲೋಕಸಭೆ ಉಪಚುನಾ ವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ನನಗೇ ಎಂಬ ವಿಶ್ವಾಸ ವ್ಯಕ್ತಪಡಿಸಿರುವ ಲಕ್ಷ್ಮಿ ಅಶ್ವಿನ್‍ಗೌಡ, ಈ ಬಗ್ಗೆ ಪಕ್ಷದ ವರಿಷ್ಠರ ಅಧಿಕೃತ ಘೋಷಣೆ ಯೊಂದೇ ಬಾಕಿಯಿದೆ ಎಂದು ಅವರು ಇತ್ತೀಚೆಗೆ ಮದ್ದೂರಿನಲ್ಲಿ ತಿಳಿಸಿದ್ದರು.

ಕಳೆದೆರೆಡು ಬಾರಿಯಿಂದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ರಮ್ಯಾ, ಜೆಡಿಎಸ್‍ನಿಂದ ಪುಟ್ಟರಾಜು ಎದುರಾಳಿಗಳಾಗಿದ್ದರು. ಉಪಚುನಾ ವಣೆಯಲ್ಲಿ ರಮ್ಯಾ ವಿರುದ್ದ ಸೋತಿದ್ದ ಪುಟ್ಟರಾಜು ಸಾರ್ವತ್ರಿಕ ಚುನಾವಣೆ ಯಲ್ಲಿ ರಮ್ಯಾರನ್ನೇ ಸೋಲಿಸಿದ್ದರು. ಆದರೆ ಈ ಭಾರಿಯ ವಿಧಾನಸಭಾ ಚುನಾವಣೆ ಯಲ್ಲಿ ಸಿ.ಎಸ್.ಪುಟ್ಟರಾಜು ಶಾಸಕ ರಾಗಿ ಆಯ್ಕೆಯಾಗಿದ್ದು, ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರಿಂದಾಗಿ ಸಹಜ ವಾಗಿಯೇ ಲೋಕ ಸಭಾ ಕ್ಷೇತ್ರ ಮಂಡ್ಯಕ್ಕೀಗ ಉಪಚುನಾವಣೆ ಎದುರಾಗಿದೆ.

ಮಂಡ್ಯ ಕಡೆ ತಲೆ ಹಾಕದ ರಮ್ಯಾ: ಮಂಡ್ಯ ಲೋಕಸಭಾ ಉಪಚುನಾವಣೆ ಮುಖಾಂತರವೇ ರಾಜಕೀಯ ಪ್ರವೇಶಿಸಿದ್ದ ರಮ್ಯಾ ಕಳೆದ ಒಂದೂವರೆ ವರ್ಷದಿಂದ ಮಂಡ್ಯ ಕಡೆ ತಲೆ ಹಾಕಿಲ್ಲ. ಕಾಂಗ್ರೆಸ್ ನಾಯಕರ ಕಿತ್ತಾಟ, ಕುತಂತ್ರದಿಂದ ಬೇಸತ್ತಿ ರುವ ರಮ್ಯಾ ಮಂಡ್ಯ ರಾಜಕಾರಣದಿಂದ ದೂರಾನೇ ಉಳಿದಿದ್ದು, ಎಐಸಿಸಿ ಸೋಷಿ ಯಲ್ ಮೀಡಿಯಾ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಡ್ಯದಲ್ಲಿ ನೆಲಕಚ್ಚಿರುವ ಕಾಂಗ್ರೆಸ್: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಯಲ್ಲಿ ಮಂಡ್ಯ ಜಿಲ್ಲೆಯ 7 ಕ್ಷೇತ್ರದಲ್ಲಿಯೂ ಜೆಡಿಎಸ್ ಜಯಭೇರಿ ಬಾರಿಸಿದ್ದು, ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿದೆ. ಕೈ ಪಾಳಯ ದೊಳಗೂ ಒಳಜಗಳ, ಕಿತ್ತಾಟದಿಂದಾಗಿ ಮಾಜಿ ಶಾಸಕ ಅಂಬರೀಶ್ ಕೂಡ ಮಂಡ್ಯ ದಿಂದ ದೂರವೇ ಉಳಿದಿದ್ದು ನಾವಿಕ ನಿಲ್ಲದ ದೋಣ ಯಂತಾಗಿದೆ ಜಿಲ್ಲಾ ಕಾಂಗ್ರೆಸ್‍ನ ಸ್ಥಿತಿ. ಕಾಂಗ್ರೆಸ್ ನೊಳ ಗಿನ ಇಂತಹ ಅತಂತ್ರ ಸ್ಥಿತಿ ವಾತಾವರಣ ದಿಂದಾಗಿ ರಮ್ಯಾ ಅವರು ಮಂಡ್ಯ ಲೋಕಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲು ಧೈರ್ಯ ಮಾಡುತ್ತಾರಾ? ಎನ್ನುವ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಮತ್ತೊಂದೆಡೆ ಜೆಡಿಎಸ್‍ನಿಂದ ಬಂಡೆದ್ದು ಕಾಂಗ್ರೆಸ್ ಕೈಹಿಡಿದು ಈ ಬಾರಿಯ ಚುನಾ ವಣೆಯಲ್ಲಿ ಸೋತಿರುವ ನಾಗ ಮಂಗಲದ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಅವರನ್ನು ಕೈ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸುವ ಬಗ್ಗೆಯೂ ಕೈ ಪಾಳಯದಲ್ಲಿ ಚರ್ಚೆ ಯಾಗುತ್ತಿದೆ. ಇದರ ನಡುವೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಲೋಕಸಭೆ ಚುನಾವಣೆಯಲ್ಲೂ ಒಮ್ಮತದ ಅಭ್ಯರ್ಥಿ ನಿಲ್ಲಿಸಲಿದ್ದಾರೆ. ಬಿಜೆಪಿಯನ್ನು ಲೋಕ ಸಭಾ ಚುನಾವಣೆಯಲ್ಲೂ ಶತಾಯ ಗತಾಯ ಸೋಲಿಸಲೇಬೇಕೆಂದು ದೊಸ್ತಿ ಗಳಾಗಿರುವ ಜೆಡಿಎಸ್-ಕಾಂಗ್ರೆಸ್ ನಾಯಕರು ಪ್ರತ್ಯೇಕ ಸ್ಪರ್ಧೆ ಅನುಮಾನ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.

Translate »