Tag: Karnataka Elections 2018

ಚಾಮರಾಜದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ
ಮೈಸೂರು

ಚಾಮರಾಜದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ

April 27, 2018

ಮೈಸೂರು: ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ ಎನ್ನಲಾಗುತ್ತಿದ್ದು, ಅದರಂತೆ ಕಾಂಗ್ರೆಸ್‍ನ ವಾಸು, ಜೆಡಿಎಸ್‍ನ ಪ್ರೊ. ಕೆ.ಎಸ್.ರಂಗಪ್ಪ, ಬಿಜೆಪಿಯ ಎಲ್. ನಾಗೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಹರೀಶ್‍ಗೌಡ ಗೆಲುವಿನ ನಿರೀಕ್ಷೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದ ಸಂಜೆವರೆಗೂ ತಮ್ಮ ಬೆಂಬಲಿಗರೊಂದಿಗೆ ಮತ ಯಾಚನೆಯಲ್ಲಿ ತೊಡಗಿದ್ದಾರೆ. ವಾಸು: ಕಾಂಗ್ರೆಸ್ ಅಭ್ಯರ್ಥಿ ವಾಸು ಅವರು, ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆ ಎದುರಿನ ಕುಂಬಾರಗೇರಿಯಲ್ಲಿ…

ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್, ಸೋಮಶೇಖರ್, ಮಲ್ಲೇಶ್ ಪಾದಯಾತ್ರೆ ಮೂಲಕ ಮತ ಯಾಚನೆ
ಮೈಸೂರು

ಕೆ.ಆರ್. ಕ್ಷೇತ್ರದಲ್ಲಿ ರಾಮದಾಸ್, ಸೋಮಶೇಖರ್, ಮಲ್ಲೇಶ್ ಪಾದಯಾತ್ರೆ ಮೂಲಕ ಮತ ಯಾಚನೆ

April 27, 2018

ಮೈಸೂರು:  ಮೈಸೂರಿನ ಕೆ.ಆರ್.ಕ್ಷೇತ್ರದಲ್ಲಿ ಗುರುವಾರ ಮೂರೂ ಪಕ್ಷಗಳ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ವಿವಿಧ ಬಡಾ ವಣೆಗಳಲ್ಲಿ ಪಾದಯಾತ್ರೆ ನಡೆಸಿ ಬಿರುಸಿನ ಮತ ಯಾಚನೆ ಮಾಡಿದರು. ಮೂರೂ ಪಕ್ಷಗಳ ಅಭ್ಯರ್ಥಿಗಳು ಮತ ದಾರರ ಓಲೈಕೆಗೆ ತೀವ್ರ ಕಸರತ್ತು ನಡೆಸು ತ್ತಿದ್ದು, ತಮ್ಮ ಮುಂದಿನ ಗುರಿಯನ್ನು ವಿವ ರಿಸುವುದರೊಂದಿಗೆ ಈ ಹಿಂದೆ ಕ್ಷೇತ್ರಕ್ಕೆ ಮಾಡಿರುವ ಅಭಿವೃದ್ಧಿ ಕಾರ್ಯಗಳ ಮನ ವರಿಕೆ ಮಾಡಿಕೊಡುವ ಮೂಲಕ ಈ ಬಾರಿ ತಮ್ಮನ್ನು ಬೆಂಬಲಿಸುವಂತೆ ಕೋರಿದರು. ಬಿಜೆಪಿ: ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಎಸ್.ಎ.ರಾಮದಾಸ್ 21ನೇ…

ರಾಜ್ಯದಲ್ಲಿ 1994ರ ಫಲಿತಾಂಶ ಪುನರಾವರ್ತನೆ ಕಾಂಗ್ರೆಸ್ ಧೂಳೀಪಟ: ಜಾವ್ಡೇಕರ್ ಭವಿಷ್ಯ
ಮೈಸೂರು

ರಾಜ್ಯದಲ್ಲಿ 1994ರ ಫಲಿತಾಂಶ ಪುನರಾವರ್ತನೆ ಕಾಂಗ್ರೆಸ್ ಧೂಳೀಪಟ: ಜಾವ್ಡೇಕರ್ ಭವಿಷ್ಯ

April 27, 2018

ಬೆಂಗಳೂರು: ರಾಜ್ಯದ ಜನತೆ ಕಾಂಗ್ರೆಸ್‍ಗೆ 1994ರ ಫಲಿತಾಂಶ ವನ್ನು ಮರುಕಳಿಸಲಿ ದ್ದಾರೆ ಎಂದು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಭವಿಷ್ಯ ನುಡಿದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ಭ್ರಮೆಯಲ್ಲಿದೆ. ಆದರೆ ಆ ಪಕ್ಷದ ಮುಖಂಡರಿಗೆ ರಾಜ್ಯದ ಜನತೆಯ ನಾಡಿ ಮಿಡಿತದ ಅರಿವಿಲ್ಲ. ಸಿದ್ದರಾಮಯ್ಯ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ನಡೆದ ಆಡಳಿತ ರಾಜ್ಯದ ಜನತೆಗೆ ಬೇಸರ ತರಿಸಿದೆ. ಮತದಾರರು ಎಂದು ಚುನಾವಣೆ ಬರುತ್ತದೆ ಎಂದು…

ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ
ಮೈಸೂರು

ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ

April 27, 2018

ಕೆ.ಆರ್.ನಗರ: ಬಿಜೆಪಿಯ ಎರಡು ಬಣಗಳ ನಡುವೆ ನಡೆದ ಮಾರಾಮಾರಿಯಲ್ಲಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದಶಿ ಗಾಯಗೊಂಡಿರುವ ಘಟನೆ ನಡೆದಿದೆ. ಗುರುವಾರ ಪಟ್ಟಣದ ಅಕ್ಷತಾ ಹಾಲ್ ನಲ್ಲಿ ಪಕ್ಷದ ವತಿಯಿಂದ ಚುನಾವಣೆ ಹಿನ್ನೆಲೆ ಯಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಪಕ್ಷದ ವರಿಷ್ಠರ ಮುಂದೆಯೇ ಎರಡು ಬಣದವರು ಹೊಡೆದಾಡಿಕೊಂಡಿದ್ದು, ಈ ಸಂಧರ್ಭದಲ್ಲಿ ಒಂದು ಗುಂಪು ನಡೆಸಿದ ಹಲ್ಲೆಯಿಂದ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿವಿಗುಡಿ ಜಗದೀಶ್ ತಲೆಗೆ ಪೆಟ್ಟುಬಿದ್ದಿದ್ದು, ಅವರು ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೊಡೆದಾಟ ನಡೆಯುವ ಸಂದರ್ಭದಲ್ಲಿ ಜಗದೀಶ್…

ಮತದಾನ ಬಹಿಷ್ಕಾರಕ್ಕೆ ನಂ.ಗೂಡು ತಾಲೂಕು ಹೊರಳವಾಡಿ, ಹೊಸೂರು ಗ್ರಾಮಸ್ಥರ ನಿರ್ಧಾರ
ಮೈಸೂರು

ಮತದಾನ ಬಹಿಷ್ಕಾರಕ್ಕೆ ನಂ.ಗೂಡು ತಾಲೂಕು ಹೊರಳವಾಡಿ, ಹೊಸೂರು ಗ್ರಾಮಸ್ಥರ ನಿರ್ಧಾರ

April 27, 2018

ನಂಜನಗೂಡು: ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಚುನಾಯಿತ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸ್ಥಳೀಯ ಗ್ರಾಮಸ್ಥರು ಮೇ 12 ರಂದು ನಡೆಯಲಿ ರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸು ವುದಾಗಿ ನಂಜನಗೂಡು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ಲಿಖಿತ ಪತ್ರ ನೀಡಿದ್ದಾರೆ. ತಾಲೂಕಿನ ಹೊರಳವಾಡಿ ಹೊಸೂರು ಗ್ರಾಮದಲ್ಲಿ 400ಕ್ಕೂ ಹೆಚ್ಚು ಮತದಾರರಿದ್ದು ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಕಾಂಕ್ರಿಟ್ ರಸ್ತೆ, ಚರಂಡಿ ಸೌಲಭ್ಯ ಹಾಗೂ ಬಸ್ ನಿಲ್ದಾಣದ ಸೌಕರ್ಯಗಳಿಲ್ಲದೇ ಜನರು ಪರದಾಡು ತ್ತಿದ್ದರೂ…

ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ
ಕೊಡಗು

ಇಂದು ಗೋಣ ಕೊಪ್ಪದಲ್ಲಿ ರಾಹುಲ್ ಗಾಂಧಿ ಪ್ರಚಾರ

April 27, 2018

ಗೋಣ ಕೊಪ್ಪಲು: ರಾಷ್ಟ್ರೀಯ ಕಾಂಗ್ರೆಸ್‍ನ ಅಧ್ಯಕ್ಷ ಗೋಣ ಕೊಪ್ಪ ನಗರಕ್ಕೆ ಆಗಮಿಸುವ ಹಿನ್ನಲೆಯಲ್ಲಿ ಕಾಂಗ್ರೆಸ್‍ನ ನಾಯಕರು ರಾಹುಲ್ ಅದ್ಧೂರಿ ಸ್ವಾಗತಕ್ಕೆ ಸಜ್ಜಾಗಿದ್ದಾರೆ. ಮೊಟ್ಟಮೊದಲ ಬಾರಿಗೆ ಕೊಡಗು ಜಿಲ್ಲೆಯ ಗೋಣ ಕೊಪ್ಪಲುವಿಗೆ ರಾಹುಲ್‍ಗಾಂಧಿಯವರು ಚುನಾವಣಾ ಪ್ರಚಾರಕ್ಕೆ ಆಗಮಿಸುತ್ತಿದ್ದಾರೆ. ಸ್ಥಳೀಯ ಕಾವೇರಿ ಕಾಲೇಜು ಆವರಣದಿಂದ ಬಹಿರಂಗ ಸಭೆಯ ವೇದಿಕೆಯ ವರೆಗೂ ಡಿ ಜೋನ್ ನಿರ್ಮಾಣ ಮಾಡಲಾಗಿದೆ. ಬೃಹತ್ ವೇದಿಕೆ ನಿರ್ಮಾಣಗೊಂಡಿದ್ದು, 8 ಸಾವಿರ ಆಸನ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 60 ಮಂದಿ ಪಕ್ಷದ ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರುಗಳು ಕುಳಿತುಕೊಳ್ಳುವ…

ಹೆಚ್.ಡಿ.ರೇವಣ್ಣ ಏನೇ ಪಿತೂರಿ ಮಾಡಿದ್ರೂ ನನ್ನ ಸೋಲಿಸಲು ಆಗಲ್ಲ ಬ್ಲಾಕ್‍ಮೇಲ್ ತಂತ್ರಕ್ಕೆ ನಾ ಹೆದರಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ: ಬಿ.ಪಿ. ಮಂಜೇಗೌಡ ಸವಾಲು
ಹಾಸನ

ಹೆಚ್.ಡಿ.ರೇವಣ್ಣ ಏನೇ ಪಿತೂರಿ ಮಾಡಿದ್ರೂ ನನ್ನ ಸೋಲಿಸಲು ಆಗಲ್ಲ ಬ್ಲಾಕ್‍ಮೇಲ್ ತಂತ್ರಕ್ಕೆ ನಾ ಹೆದರಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ: ಬಿ.ಪಿ. ಮಂಜೇಗೌಡ ಸವಾಲು

April 27, 2018

ಹಾಸನ: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಏನೇ ಪಿತೂರಿ ಮಾಡಿದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಇಂತಹ ಬ್ಲಾಕ್‍ಮೇಲ್ ತಂತ್ರಕ್ಕೆ ನಾನು ಹೆದರುವುದಿಲ್ಲ, ನೇರ ಸ್ಪರ್ಧೆಗೆ ಸಿದ್ಧರಾಗಿ ಎಂದು ಹೊಳೆನರಸೀಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಗೂರು ಮಂಜೇ ಗೌಡ ಸವಾಲು ಹಾಕಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ಆರ್‍ಟಿಓ ಇಲಾಖೆಯಿಂದ 700 ಕೋಟಿ ರೂ. ಆಸ್ತಿ ಮಾಡಿದ್ದಾರೆ ಎಂದು ರೇವಣ್ಣ ಅವರು ನನ್ನ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ನನ್ನ ಮೇಲೆ ಸುಳ್ಳು ಹೇಳುವ ಇವರ ಆಸ್ತಿ ಕಾಣುತ್ತಿಲ್ಲವೇ?…

ಮತಬೇಟೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಅಭ್ಯರ್ಥಿಗಳ ಬೆಂಬಲಿಗರು
ಚಾಮರಾಜನಗರ

ಮತಬೇಟೆಗೆ ಸಾಮಾಜಿಕ ಜಾಲತಾಣಗಳ ಮೊರೆ ಹೋದ ಅಭ್ಯರ್ಥಿಗಳ ಬೆಂಬಲಿಗರು

April 27, 2018

ಚಾಮರಾಜನಗರ: ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಇನ್ನು ಕೇವಲ 15 ದಿನ ಬಾಕಿ ಇದೆ. ಜಿಲ್ಲೆಯ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳು ಹಾಗೂ ರಾಜಕೀಯ ಮುಖಂಡರು ಉರಿ ಬಿಸಿಲನ್ನು ಲೆಕ್ಕಿಸದೇ ಮನೆ ಮನೆಗೆ ಭೇಟಿ ನೀಡಿ ಪ್ರಚಾರದಲ್ಲಿ ನಿರತರಾಗಿ ದ್ದಾರೆ. ಇದಲ್ಲದೇ ಮತಬೇಟೆಗೆ ಅಭ್ಯರ್ಥಿ ಗಳ ಬೆಂಬಲಿಗರು ಹಾಗೂ ರಾಜಕೀಯ ಮುಖಂಡರು ಸಾಮಾಜಿಕ ಜಾಲ ತಾಣಗಳ ಮೊರೆ ಹೋಗಿದ್ದಾರೆ. ಕೆಲವು ಅಭ್ಯರ್ಥಿಗಳ ಬೆಂಬಲಿಗರು ತಮಗೆ ಮತ ನೀಡುವಂತೆ ಫೇಸ್‍ಬುಕ್, ವಾಟ್ಸ್‍ಆಪ್…

ಸೌಲಭ್ಯ ಕಲ್ಪಿಸುವಲ್ಲಿ ಕಾಂಗ್ರೆಸ್ ವಿಫಲ
ಚಾಮರಾಜನಗರ

ಸೌಲಭ್ಯ ಕಲ್ಪಿಸುವಲ್ಲಿ ಕಾಂಗ್ರೆಸ್ ವಿಫಲ

April 27, 2018

ಗುಂಡ್ಲುಪೇಟೆ: ಕಳೆದ ಇಪ್ಪತ್ತೈದು ವರ್ಷಗಳಿಂದ ತಾಲೂಕಿನಲ್ಲಿ ಆಡಳಿತ ನಡೆಸಿದವರು ಸಾಮಾನ್ಯ ಜನತೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನಕುಮಾರ್ ಆರೋಪಿಸಿದರು. ತಾಲೂಕಿನ ಕೆಲಸೂರು ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡುತ್ತ, ಈಗಾಗಲೇ ಕ್ಷೇತ್ರವನ್ನು ಸಂಪೂರ್ಣವಾಗಿ ಅಭಿವೃದ್ದಿಪಡಿಸಿರುವುದಾಗಿ ಹೇಳಿಕೊಳ್ಳುತ್ತಿರುವ ಸಚಿವರಿಗೆ ತಾಲೂಕಿನ ಗ್ರಾಮೀಣ ಪ್ರದೇಶಗಳ ರಸ್ತೆಗಳ ಅವ್ಯವಸ್ಥೆ ಕಣ ್ಣಗೆ ಬಿದ್ದಿಲ್ಲ ಎನಿಸುತ್ತದೆ ಎಂದರು. ಕೇವಲ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಾಣ ಮಾಡಿದರೆ ಬಡ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ಆದಂತೆ ಎಂದು ಭಾವಿಸಿದ್ದಾರೆ. ಬಹುತೇಕ…

ಅಂಚೆ ಮತಪತ್ರ ವಿತರಣೆಗೆ ನೋಡಲ್ ಅಧಿಕಾರಿಗಳ ನೇಮಕ
ಚಾಮರಾಜನಗರ

ಅಂಚೆ ಮತಪತ್ರ ವಿತರಣೆಗೆ ನೋಡಲ್ ಅಧಿಕಾರಿಗಳ ನೇಮಕ

April 27, 2018

ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಕರ್ತವ್ಯ ನಿರ್ವಹಿಸಲು ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಅಂಚೆ ಮತಪತ್ರದ ಮೂಲಕ ಮತ ಚಲಾಯಿಸಲು ಅನುಕೂಲವಾಗುವಂತೆ ಅಂಚೆ ಮತಪತ್ರ ಸೌಲಭ್ಯ ಕೇಂದ್ರ ಹಾಗೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ. ಕಾವೇರಿ ತಿಳಿಸಿದ್ದಾರೆ. ಅಂಚೆ ಮತಪತ್ರಕ್ಕೆ ಸಂಬಂಧಿಸಿದಂತೆ ನೋಡಲ್ ಅಧಿಕಾರಿಗಳಾಗಿ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಮಹೇಶ್ ಕುಮಾರ್ ಎಸ್.ಎಲ್. ಅವರನ್ನು ನೇಮಕ ಮಾಡಲಾಗಿದ್ದು ಅವರ ಮೊಬೈಲ್ ಸಂಖ್ಯೆ 9945629106 ಆಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರಕ್ಕೆ ನೋಡಲ್…

1 6 7 8 9 10 14
Translate »