ಚಾಮರಾಜದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ
ಮೈಸೂರು

ಚಾಮರಾಜದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಬಿರುಸಿನ ಪ್ರಚಾರ

April 27, 2018

ಮೈಸೂರು: ಮೈಸೂ ರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಹಲವು ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಚತುಷ್ಕೋನ ಸ್ಪರ್ಧೆ ಏರ್ಪಡಲಿದೆ ಎನ್ನಲಾಗುತ್ತಿದ್ದು, ಅದರಂತೆ ಕಾಂಗ್ರೆಸ್‍ನ ವಾಸು, ಜೆಡಿಎಸ್‍ನ ಪ್ರೊ. ಕೆ.ಎಸ್.ರಂಗಪ್ಪ, ಬಿಜೆಪಿಯ ಎಲ್. ನಾಗೇಂದ್ರ ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಹರೀಶ್‍ಗೌಡ ಗೆಲುವಿನ ನಿರೀಕ್ಷೆಯಲ್ಲಿ ಉರಿ ಬಿಸಿಲನ್ನೂ ಲೆಕ್ಕಿಸದೆ ಬೆಳಿಗ್ಗೆಯಿಂದ ಸಂಜೆವರೆಗೂ ತಮ್ಮ ಬೆಂಬಲಿಗರೊಂದಿಗೆ ಮತ ಯಾಚನೆಯಲ್ಲಿ ತೊಡಗಿದ್ದಾರೆ.

ವಾಸು: ಕಾಂಗ್ರೆಸ್ ಅಭ್ಯರ್ಥಿ ವಾಸು ಅವರು, ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆ ಎದುರಿನ ಕುಂಬಾರಗೇರಿಯಲ್ಲಿ ಚುನಾ ವಣಾ ಪ್ರಚಾರ ನಡೆಸಿದರು. ದೇವಸ್ಥಾನ ಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಜಿ ಕಾರ್ಪೊರೇಟರ್, ರವಿ, ಬೋರಪ್ಪರೊಂದಿಗೆ ಮನೆ-ಮನೆಗೆ ತೆರಳಿ ಮತ ಯಾಚಿಸಿದ ನಂತರ ಸಂಜೆ ಟಿ.ಕೆ. ಬಡಾವಣೆಯಲ್ಲೂ ಮತ ಬೇಟೆ ನಡೆಸಿದರು.
ಕಾರ್ಪೊರೇಟರ್ ಪಿ.ಪ್ರಶಾಂತ ಗೌಡ, ಮಾಜಿ ಮೇಯರ್ ಬಿ.ಕೆ.ಪ್ರಕಾಶ, ಪೈ. ಚಿಕ್ಕಪುಟ್ಟಿ, ಚಂದ್ರಶೇಖರ್, ಪುಷ್ಪವಲ್ಲಿ, ಮೋದಾಮಣ , ರವಿ ಎಂ.ಜಿ.ಕೊಪ್ಪಲು ಸೇರಿದಂತೆ ಹಲವರು ವಾಸು ಅವ ರೊಂದಿಗೆ ಪ್ರಚಾರ ಕಾರ್ಯದಲ್ಲಿದ್ದರು.

ಮೈಸೂರು ಚಾಮರಾಜ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆದ ಶಾಸಕ ವಾಸು ಅವರು ಪರಕಾಲ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯ ಪ್ರಶಾಂತ್‍ಗೌಡ, ಪಡುವಾರಹಳ್ಳಿ ಮಂಜು, ಪುಷ್ಪಲತಾ ಜಗನ್ನಾಥ್, ಯೋಗ ನರಸಿಂಹೇಗೌಡ, ಶ್ರೀಕಂಠಮೂರ್ತಿ ಇದ್ದಾರೆ.

ಪ್ರೊ. ಕೆ.ಎಸ್.ರಂಗಪ್ಪ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 20 ತಿಂಗಳ ಆಡಳಿತ ಹಾಗೂ ಪಕ್ಷದ ಧ್ಯೇಯೋದ್ದೇಶ ಗಳನ್ನು ಮುಂದಿಟ್ಟುಕೊಂಡು ಚಾಮರಾಜ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರೊ. ಕೆ.ಎಸ್. ರಂಗಪ್ಪ ಅವರು ಇಂದು ಮಂಜುನಾಥಪುರ, ಬೃಂದಾವನ ಬಡಾವಣೆ ಹಾಗೂ ಅಕ್ಕ-ಪಕ್ಕದ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮತ ಯಾಚನೆ ನಡೆಸಿದರು.

ಮಾಜಿ ಮೇಯರ್ ಆರ್.ಲಿಂಗಪ್ಪ, ನಗರ ಜೆಡಿಎಸ್ ಅಧ್ಯಕ್ಷ ಕೆ.ಟಿ.ಚೆಲುವೇ ಗೌಡ, ಕಾರ್ಪೊರೇಟರ್ ಎಸ್‍ಬಿಎಂ ಮಂಜು, ಕಾರ್ಯಕರ್ತರಾದ ಲಕ್ಷ್ಮಿ, ಮಂಜುನಾಥ್ ಸೇರಿದಂತೆ ಹಲವರು ಪ್ರೊ. ರಂಗಪ್ಪ ಅವರಿಗೆ ಸಾಥ್ ನೀಡಿದರು.

ಎಲ್.ನಾಗೇಂದ್ರ: ಮುಡಾ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ ಸಹ ಪಡುವಾರ ಹಳ್ಳಿ, ಕುಂಬಾರಕೊಪ್ಪಲು ಹಾಗೂ ಹೆಬ್ಬಾ ಳಿನ ಕಾವೇರಿ ಸರ್ಕಲ್ ಬಳಿ ಬಿಜೆಪಿ ಮುಖಂ ಡರು ಹಾಗೂ ಕಾರ್ಯಕರ್ತರೊಂದಿಗೆ ಚುನಾವಣಾ ಪ್ರಚಾರ ನಡೆಸಿದರು. ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಮಾದೇ ಗೌಡರೊಂದಿಗೆ ಕುಂಬಾರಕೊಪ್ಪಲಿನಲ್ಲಿ ಮನೆ-ಮನೆಗೆ ತೆರಳಿ ಪಾದಯಾತ್ರೆಯಲ್ಲಿ ಮತ ಯಾಚಿಸಿದ ನಾಗೇಂದ್ರ, ಪಡುವಾರ ಹಳ್ಳಿಯಲ್ಲಿ ಚಿಕ್ಕವೆಂಕಟು, ಗುರುದತ್, ಬಸವ ರಾಜು, ಮಂಜು ಜೊತೆ ಪ್ರಚಾರ ನಡೆಸಿದರು.

ಮೈಸೂರು ಚಾಮರಾಜ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಹರೀಶ್ ಗೌಡ ಅವರು ಗುರುವಾರ ಸುತ್ತೂರು ಮಠಕ್ಕೆ ಭೇಟಿ ನೀಡಿ, ಶ್ರೀ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

ಕೆ.ಹರೀಶಗೌಡ: ಪಕ್ಷೇತರ ಅಭ್ಯರ್ಥಿ ಕೆ.ಹರೀಶಗೌಡರು ಗೋಕುಲಂ, ವಿವಿ ಮೊಹಲ್ಲಾಗಳಲ್ಲಿ ಪಾದಯಾತ್ರೆ ನಡೆಸಿ, ತಮ್ಮ ಬೆಂಬಲಿಗರೊಂದಿಗೆ ಮತ ಪ್ರಚಾರ ನಡೆಸಿದರು. ಜನ ಸೇವೆ ಮಾಡಲು ಅವಕಾಶ ಕಲ್ಪಿಸಿ ಎಂಬ ಮನವಿಯೊಂದಿಗೆ ಪ್ರಚಾರ ಕೈಗೊಂಡಿರುವ ಅವರಿಗೆ ಬಸವರಾಜು, ಕಪನೀಗೌಡ, ನಿಂಗೇಗೌಡ, ಪರಮೇಶ್ ಹಾಗೂ ಇತರರು ಸಾಥ್ ನೀಡಿದರು.

ಮೈಸೂರಿನ ಎನ್‍ಆರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂದೇಶ್‍ಸ್ವಾಮಿ (ಸತೀಶ್) ಗಾಂಧಿನಗರದಲ್ಲಿ ಮತ ಯಾಚನೆ ಮಾಡಿದರು. ಸಂಸದ ಪ್ರತಾಪ್ ಸಿಂಹ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದಾರೆ.

Translate »