ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ
ಮೈಸೂರು

ಬಿಜೆಪಿ ಸಭೆಯಲ್ಲಿ ಮಾರಾಮಾರಿ: ತಾಲೂಕು ಪ್ರಧಾನ ಕಾರ್ಯದರ್ಶಿಗೆ ಗಾಯ

April 27, 2018

ಕೆ.ಆರ್.ನಗರ: ಬಿಜೆಪಿಯ ಎರಡು ಬಣಗಳ ನಡುವೆ ನಡೆದ ಮಾರಾಮಾರಿಯಲ್ಲಿ ತಾಲೂಕು ಬಿಜೆಪಿ ಪ್ರಧಾನ ಕಾರ್ಯದಶಿ ಗಾಯಗೊಂಡಿರುವ ಘಟನೆ ನಡೆದಿದೆ.

ಗುರುವಾರ ಪಟ್ಟಣದ ಅಕ್ಷತಾ ಹಾಲ್ ನಲ್ಲಿ ಪಕ್ಷದ ವತಿಯಿಂದ ಚುನಾವಣೆ ಹಿನ್ನೆಲೆ ಯಲ್ಲಿ ಕರೆಯಲಾಗಿದ್ದ ಸಮಾಲೋಚನಾ ಸಭೆಯಲ್ಲಿ ಪಕ್ಷದ ವರಿಷ್ಠರ ಮುಂದೆಯೇ ಎರಡು ಬಣದವರು ಹೊಡೆದಾಡಿಕೊಂಡಿದ್ದು, ಈ ಸಂಧರ್ಭದಲ್ಲಿ ಒಂದು ಗುಂಪು ನಡೆಸಿದ ಹಲ್ಲೆಯಿಂದ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿ ಸಿವಿಗುಡಿ ಜಗದೀಶ್ ತಲೆಗೆ ಪೆಟ್ಟುಬಿದ್ದಿದ್ದು, ಅವರು ಪಟ್ಟಣದ ಆಸ್ಪತ್ರೆಗೆ ದಾಖಲಾಗಿದ್ದಾರೆ, ಹೊಡೆದಾಟ ನಡೆಯುವ ಸಂದರ್ಭದಲ್ಲಿ ಜಗದೀಶ್ ಪರವಾಗಿ ಬಂದ ಎಲೆಮುದ್ದನಹಳ್ಳಿ ಆನಂದ್, ವಕೀಲ ಹರೀಶ್, ಹಾಗೂ ಇನ್ನಿತರರಿಗೂ ತಳ್ಳಾಡಿ ನೂಕಾಡಿದರೆನ್ನಲಾಗಿದೆ. ಈ ಸಂಧರ್ಭದಲ್ಲಿ ಎರಡು ಬಣಗಳ ನಡುವೆ ಅವಾಚ್ಯ ಶಬ್ದಗಳ ನಿಂದನೆ ಹಾಗೂ ಕೈ ಕೈ ಮಿಲಾಯಿಸಿದ ಘಟನೆ ನಡೆಯಿತೆನ್ನಲಾ ಗಿದ್ದು, ಘಟನೆಯಿಂದ ಬೇಸತ್ತ ಪಕ್ಷದ ವರಿಷ್ಠರು ಸಭೆಯನ್ನು ಮೊಟಕುಗೊಳಿಸಿ ಹೊರನಡೆದರೆನ್ನಲಾಗಿದೆ.

ಮೈಸೂರು ವಿಭಾಗದ ಉಸ್ತುವಾರಿ ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ಸತೀಶ್ ಉಪಾಧ್ಯಾಯ, ಜಿಲ್ಲಾ ಉಸ್ತುವಾರಿ ತಮಿಳು ನಾಡು ರಾಜ್ಯ ಕಾರ್ಯದರ್ಶಿ ರಾಘವನ್ ಹಾಗೂ ರಾಮಕೃಷ್ಣಪ್ಪ ಮತ್ತು ತಮಿಳು ನಾಡಿನಿಂದ ಆಗಮಿಸಿರುವ ಭಾಸ್ಕರನ್, ಸೆಲ್ವಂ ಸೇರಿದಂತೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ವೇತಾ ಗೋಪಾಲ್, ಜಿಲ್ಲಾ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ತಾಲೂಕು ಅಧ್ಯಕ್ಷ ಕೆ.ಸಿ.ಶಿವಕುಮಾರ್ ಸೇರಿದಂತೆ ವಿವಿಧ ಮುಖಂಡರ ಸಮ್ಮುಖದಲ್ಲಿ ಇಂತಹ ಪ್ರಸಂಗ ನಡೆದಿರುವುದು ಪಕ್ಷದ ಮುಖಂಡರು ತಲೆ ತಗ್ಗಿಸುವಂತಾಗಿದೆ. ಈ ಬಗ್ಗೆ ಮಾತನಾ ಡಿದ ಸಿವಿಗುಡಿ ಜಗದೀಶ್, ಸಭೆ ನಡೆಯುವ ಮುನ್ನ ವೇದಿಕೆಯಲ್ಲಿ ವರಿಷ್ಠರು ಕುಳಿತಿದ್ದು, ಈ ಸಂಧರ್ಭದಲ್ಲಿ ಪಕ್ಷದ ಅಧ್ಯಕ್ಷ ಕೆ.ಸಿ.ಶಿವಕುಮಾರ್‍ರಿಗೆ ಸೂಕ್ತವಾದ ಸ್ಥಳಾವಕಾಶ ನೀಡದ ಕಾರಣ ಸ್ಥಳಾವಕಾಶ ಕಲ್ಪಿಸುವಂತೆ ನಾನು ಕೇಳಿದೆ ಅಷ್ಟೆ.

ಈ ಸಂದರ್ಭದಲ್ಲಿ ಮಧ್ಯೆ ಪ್ರವೇಶ ಮಾಡಿದ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ‘ಅವನನ್ನು ಎಳೆದು ಆಚೆ ಹಾಕ್ರಿ’ ಎಂದು ಪ್ರಚೋದನೆ ನೀಡುತ್ತಿದ್ದಂತೆ ಹೆಚ್.ಪಿ.ಗೋಪಾಲ್ ಮತ್ತು ಶ್ರೀನಿ ವಾಸಗೌಡರ ಬೆಂಬಲಿಗರಾದ ಹೊಸೂರು ಅನಿಲ್, ಪ್ರಭಾಕರ ಜೈನ್, ಬಜರಂಗ ದಳದ ಸಂತೋಷ್ ಹಾಗೂ ಇನ್ನಿತರರು ನನ್ನ ಮೇಲೆ ಏಕಾಏಕಿ ಚೇರ್‍ನಿಂದ ಹಲ್ಲೆ ನಡೆಸಿದರು ಎಂದು ಆರೋಪಿಸಿದರು.

ಅಲ್ಲದೇ ಈ ಸಂಧರ್ಭದಲ್ಲಿ ನನ್ನ ಪರ ಮಾತನಾಡಲು ಮುಂದಾದ ಹಾಡ್ಯ ಮಹೇಶ್, ವಕೀಲ ಹರೀಶ್, ಎಲೆಮುದ್ದನ ಹಳ್ಳಿ ಆನಂದ್ ಸೇರಿದಂತೆ ಇತರರ ಮೇಲೆ ಹಲ್ಲೆ ನಡೆಸಿರುವುದಲ್ಲದೆ ಉದ್ದೇಶಪೂರ್ವಕ ವಾಗಿ ಲಿಂಗಾಯತ ವೀರಶೈವ ಕಾರ್ಯ ಕರ್ತರನ್ನು ಟಾರ್ಗೆಟ್ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದರು. ಈ ಬಗ್ಗೆ ಈಗಾಗಲೇ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ತೆರಳುತ್ತಿದ್ದು, ಈ ಬಗ್ಗೆ ಪಟ್ಟಣ ಪೋಲೀಸ ರಿಗೆ ದೂರು ನೀಡಿರುವುದಾಗಿ ತಿಳಿಸಿದರು.

Translate »