ಬಿಜೆಪಿ, ಜೆಡಿಎಸ್ ದೂರವಿಟ್ಟು ಕಾಂಗ್ರೆಸ್‍ಗೆ ಮತ ನೀಡಿ
ಮೈಸೂರು

ಬಿಜೆಪಿ, ಜೆಡಿಎಸ್ ದೂರವಿಟ್ಟು ಕಾಂಗ್ರೆಸ್‍ಗೆ ಮತ ನೀಡಿ

April 27, 2018

ತಿ.ನರಸೀಪುರ: ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವು ದಿಲ್ಲ. ಜಾತ್ಯಾತೀತತೆಗೆ ಧಕ್ಕೆ ತಂದು ಕೋಮು ಸಾಮರಸ್ಯವನ್ನು ಕದಡುವ ಕೋಮುವಾದಿ ಪಕ್ಷ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಾಗಿದ್ದರಿಂದ ಈ ಚುನಾವಣೆ ಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿ ಕಾರಕ್ಕೆ ತರಬೇಕೆಂದು ಯುವ ಮುಖಂಡ ಸುನೀಲ್ ಬೋಸ್ ಹೇಳಿದರು.

ತಾಲೂಕಿನ ಹೊಸಪುರ ಗ್ರಾಮದಲ್ಲಿ ಗುರುವಾರ ನಾಯಕ ಸಮುದಾಯದ ಮುಖಂಡರು ಹಾಗೂ ಮಹಿಳಾ ಸಂಘಗಳ ಪ್ರತಿನಿಧಿಗಳನ್ನು ಕಾಂಗ್ರೆಸ್‍ಗೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ಐದು ವರ್ಷಗಳ ಕಾಲ ಆಡಳಿತವನ್ನು ನಡೆಸಿರುವ ಕಾಂಗ್ರೆಸ್ ಸರ್ಕಾರ ಗ್ರಾಮೀಣಾ ಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ, ಸಾಲ ಮನ್ನಾ ಮಾಡುವ ಮೂಲಕ ರೈತಪರ ಮತ್ತು ಬಡವರ ಪರವಾದ ಯೋಜನೆಗಳನ್ನು ಜಾರಿಗೆ ತಂದಿರುವುದರಿಂದ ಎಲ್ಲಾ ವರ್ಗದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿ ಸಬೇಕೆಂದು ಮನವಿ ಮಾಡಿದರು.

ಜನರು ನೀಡಿದ ಅಧಿಕಾರವನ್ನು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಅವರು ಬಳಕೆ ಮಾಡಿದ್ದಾರೆ. ಸರ್ಕಾರದ ಸೌಲಭ್ಯಗಳ ಹಂಚಿಕೆಯಲ್ಲಿ ಹಲವು ಲೋಪದೋಷಗಳಾಗಿದ್ದು, ಚುನಾವಣೆ ನಂತರ ಸರಿಪಡಿಸಿಕೊಂಡು ವಂಚಿತರಿಗೆ ಮೊದಲ ಪ್ರಾಶಸ್ತ್ಯವನ್ನು ಕೊಟ್ಟು ಸಮಸ್ಯೆ ಗಳನ್ನು ಸರಿಪಡಿಸಲಾಗುವುದು. ಕೇಂದ್ರ ಸರ್ಕಾರದ ಸಾಧನೆಗಳು ಮತ್ತು ರಾಜ್ಯ ಸರ್ಕಾರದ ಸಾಧನೆಗಳು ಎರಡನ್ನೂ ವಿಶ್ಲೇಷಿಸಿ ಮತವನ್ನು ನೀಡಬೇಕು. ಅವಕಾಶವಾದಿ ರಾಜಕಾರಣ ಮಾಡುವ ಜೆಡಿಎಸ್ ಪಕ್ಷ ವನ್ನು ಬೆಂಬಲಿಸಬಾರದೆಂದು ಸುನೀಲ್ ಬೋಸ್ ಸಲಹೆ ನೀಡಿದರು.

ನಂತರ ಸ್ವ ಸಮುದಾಯ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಸಿ.ಮಹದೇವಪ್ಪ ಅವರ ಪರ ಮತ ಯಾಚಿಸಿದರು. ಪಕ್ಷದಿಂದ ದೂರವಿದ್ದ ಕೆಲವು ಮುಖಂಡರನ್ನು ನೇರವಾಗಿ ಭೇಟಿ ಮಾಡಿ ಬೆಂಬಲಿ ಸುವಂತೆ ಮನವೊಲಿಸಿದರು. ಕಾಡಾ ನಿರ್ದೇಶಕ ಹಿರಿಯೂರು ವಿರೇಂದ್ರ (ನವೀನ), ತಾಪಂ ಮಾಜಿ ಸದಸ್ಯ ಬಸವರಾಜು, ಪುರಸಭೆ ಸದಸ್ಯ ರಾಘವೇಂದ್ರ, ಯಜಮಾನ್ ಮಹದೇವನಾಯಕ, ಮುಖಂಡರಾದ ನಿಲಸೋಗೆ ಮರಿಸ್ವಾಮಿ, ಹಿರಿಯೂರು ಸೋಮಣ್ಣ, ಚೌಹಳ್ಳಿ ಮರಿಸ್ವಾಮಿ, ಮೂರ್ತಿ, ವಾಲ್ಮೀಕಿ ನಾಯಕ ಯುವಕರ ಮುಖಂಡರು ಹಾಗೂ ಇನ್ನಿತರರು ಹಾಜರಿದ್ದರು.

Translate »