Tag: Kodagu floods

ಕೊಡಗಿನ ನೀರು ಪಡೆಯುವ ತಮಿಳುನಾಡು ಅದರ ಹಾನಿಯ  ತುಂಬುವುದು ನ್ಯಾಯವಲ್ಲವೇ?
ಕೊಡಗು, ಮೈಸೂರು

ಕೊಡಗಿನ ನೀರು ಪಡೆಯುವ ತಮಿಳುನಾಡು ಅದರ ಹಾನಿಯ ತುಂಬುವುದು ನ್ಯಾಯವಲ್ಲವೇ?

November 15, 2018

ಮೈಸೂರು: ಸದಾ ಕೊಡಗಿನ ನೀರು ಬಳಸುವ, ಒಂದು ವೇಳೆ ಬೇಡಿಕೆಯಂತೆ ನೀರು ಸಿಗದಿದ್ದರೆ ತಗಾದೆ ತೆಗೆದು ಕೇಂದ್ರ ಸರ್ಕಾರ, ನ್ಯಾಯಾಲಯದ ಮೊರೆ ಹೋಗುವ ತಮಿಳುನಾಡು, ಈಗ ಭಾರೀ ಮಳೆ, ಆ ಮೂಲಕ ನೆರೆಯಿಂದ ಕೊಡಗಿನಲ್ಲಿ ಉಂಟಾಗಿರುವ ಹಾನಿ ಯನ್ನು ತುಂಬಿಕೊಡಬೇಕಲ್ಲವೆ? ಈ ಒಂದು ನೈಸರ್ಗಿಕ ನ್ಯಾಯವನ್ನು ನಾಡಿನ ಖ್ಯಾತ ಸಾಹಿತಿ ಹಾಗೂ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ಎಸ್.ಎಲ್. ಭೈರಪ್ಪನವರು ಮುಂದಿಟ್ಟಿದ್ದಾರೆ. ಈ ಬಾರಿ ಕೊಡಗಿನಲ್ಲಿ ಸುರಿದಿರುವ ಹುಚ್ಚು ಮಳೆ ಹಾಗೂ ಭಾರೀ ಬಿರುಗಾಳಿಯಿಂದ ಅಪಾರ ಪ್ರಮಾಣದ…

ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ
ಮೈಸೂರು

ಸಂತ್ರಸ್ತರಿಗೆ 42 ಎಕರೆ ಪ್ರದೇಶದಲ್ಲಿ ಶೀಘ್ರ ಮಾದರಿ ಮನೆಗಳ ನಿರ್ಮಾಣ

August 24, 2018

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಗ್ರಾಮಸ್ಥರಿಗೆ ಮಡಿಕೇರಿ, ಸೋಮವಾರಪೇಟೆ ತಾಲೂಕಿನ ವಿವಿಧೆಡೆ 42 ಎಕರೆ ಜಾಗವನ್ನು ಗುರುತಿಸಲಾಗಿದ್ದು, ಸಮರೋಪಾದಿಯಲ್ಲಿ ನವ ತಂತ್ರಜ್ಞಾನ ಬಳಸಿ ಮಾದರಿ ಮನೆಗಳನ್ನು ಸರ್ಕಾರ ನಿರ್ಮಿಸಿಕೊಡಲಿದೆ ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಈಗಾಗಲೇ 42 ಎಕರೆ ಜಾಗವನ್ನು ಮಡಿಕೇರಿ ತಾಲೂಕಿನ ಕೆ.ನಿಡುಗಣೆ, 1ನೇ ಮೊಣ್ಣಂಗೇರಿ, ಕರ್ಣಂಗೇರಿ, ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮಗಳಲ್ಲಿ ಗುರುತಿಸಲಾಗಿದೆ. ಪ್ರತಿ ಪಂಚಾಯತ್ ನಿಂದಲೂ ಲಭ್ಯವಿರುವ ಜಮೀನಿನ…

ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರಿನ  ಕೊಡವ ಸಮಾಜದಲ್ಲಿ ನೆರವು
ಮೈಸೂರು

ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರಿನ  ಕೊಡವ ಸಮಾಜದಲ್ಲಿ ನೆರವು

August 23, 2018

ಮೈಸೂರು: -ನೆರೆ ಹಾವಳಿಯಿಂದ ಸಂತ್ರಸ್ತರಾದವರಿಗೆ ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಕೊಡವ ಸಮಾಜದಲ್ಲಿ ನೆರವು ನೀಡಲಾಗುತ್ತಿದೆ. ಮೈಸೂರು ಕೊಡವ ಸಮಾಜದ ಅಧ್ಯಕ್ಷ ಬಿ.ಎಂ.ನಾಣಯ್ಯ, ಉಪಾಧ್ಯಕ್ಷ ಕಂಬೆಯಂಡ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಕಾರ್ಯದರ್ಶಿ ಮಲಚೀರ ಪೊನ್ನಪ್ಪ, ಜಂಟಿ ಕಾರ್ಯದರ್ಶಿ ಜ್ಯೋತಿ ಕಾಶಿಯಪ್ಪ, ಖಜಾಂಚಿ ಮುಕ್ಕಾಟಿರ ಜೀವನ್ ಹಾಗೂ ಮ್ಯಾನೇಜ್‍ಮೆಂಟ್ ಕಮಿಟಿಯ ಎಲ್ಲಾ ಸದಸ್ಯರು ಕೊಡವ ಸಮಾಜದಲ್ಲಿ ಹಾಜರಿದ್ದು, ಕೊಡಗು ಭಾಗದಿಂದ ಬರುವ ಸಂತ್ರಸ್ತರಿಗೆ ಬೇಕಾದ ಸಾಮಗ್ರಿ, ಉಡುಪುಗಳನ್ನು ನೀಡಿ ತಾತ್ಕಾಲಿಕ ಪರಿಹಾರ ಒದಗಿಸುತ್ತಿದ್ದಾರೆ. ಕೊಡಗಿನಲ್ಲಿ ಜಲಪ್ರಳಯ ಉಂಟಾಗಿ ಜನರು…

ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರು
ಮೈಸೂರು

ಕೊಡಗಿನ ಸಂತ್ರಸ್ತರ ಸ್ಥಿತಿ ಕಂಡು ಮರುಗಿದ ರೈತ ಸಂಘ, ಸ್ವರಾಜ್ ಇಂಡಿಯಾ ಪಕ್ಷದ ಮುಖಂಡರು

August 23, 2018

ಮೈಸೂರು: ನೆರೆ ನಿಯಂತ್ರಣಕ್ಕೆ ಬಂದರೂ ಇದರಿಂದ ಸಂಕಷ್ಟಕ್ಕೆ ಸಿಲುಕಿದ ಕೊಡಗಿನ ನೆರೆ ಸಂತ್ರಸ್ತರ ನೇತ್ರದಲ್ಲಿನ ದುಃಖದ ನೀರು ಮಾತ್ರ ನಿಲ್ಲಲು ಇನ್ನದೆಷ್ಟು ದಿನ ಬೇಕೋ ಗೊತ್ತಿಲ್ಲ. ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಯಾತನೆ ಅನುಭವಿಸುತ್ತಿರುವ ನೆರೆ ಸಂತ್ರಸ್ತರ ಈ ಮನಕಲಕುವ ದೃಶ್ಯಗಳನ್ನು ಕಂಡ ಕೊಡಗಿಗೆ ಬುಧವಾರ ಭೇಟಿ ನೀಡಿದ್ದ ರಾಜ್ಯ ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಂಡ ಅತೀವ ಸಂಕಟ ವ್ಯಕ್ತಪಡಿಸಿತು. ರಾಜ್ಯ ರೈತ ಸಂಘ ಹಾಗೂ ಸ್ವರಾಜ್ ಇಂಡಿಯಾ ಪಕ್ಷದ ತಂಡಕ್ಕೆ ಹಲವು ಮನಕಲುಕುವ…

ಕ್ಷಣಕ್ಷಣಕ್ಕೂ ಜೀವ ಭಯ…. ಬದುಕುಳಿಯುವ ನಂಬಿಕೆಯೂ ಇರಲಿಲ್ಲ… ಮಗು ಉಳಿಸಿಕೊಳ್ಳಲಾಗಿಲ್ಲ…
ಕೊಡಗು

ಕ್ಷಣಕ್ಷಣಕ್ಕೂ ಜೀವ ಭಯ…. ಬದುಕುಳಿಯುವ ನಂಬಿಕೆಯೂ ಇರಲಿಲ್ಲ… ಮಗು ಉಳಿಸಿಕೊಳ್ಳಲಾಗಿಲ್ಲ…

August 23, 2018

ನೂರು ನಿರಾಶ್ರಿತರೊಂದಿಗೆ ಪಾರಾಗಿ ಬಂದ ಜಿಪಂ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪರ ಕಹಿ ಅನುಭವ ಮಡಿಕೇರಿ: ಕೊಡಗಿನಲ್ಲಿ ಜಲ ಪ್ರಳಯವನ್ನು ಸೃಷ್ಟಿಸಿದ ಮಹಾಮಳೆ ಯಿಂದ ಮುಕ್ಕೋಡ್ಲು, ಮಕ್ಕಂದೂರು, ಕಾಲೂರು ಗ್ರಾಮಗಳು ಅಪಾರ ಹಾನಿಗೆ ಒಳಗಾ ಗಿದ್ದು, ಈ ಗ್ರಾಮಗಳಲ್ಲಿ ಕಳೆದ ಮೂರು ದಿನಗಳಿಂದ ಸಿಲುಕಿಕೊಂಡಿದ್ದ ಗ್ರಾಮಸ್ಥರು ಜಲ ದಿಗ್ಬಂಧನದಿಂದ ಬಿಡಿಸಿಕೊಂಡು ಬಂದ ಸಾಹಸವೇ ರೋಚಕ. ಜೀವ ಉಳಿಸಿಕೊಳ್ಳುವುದಕ್ಕಾಗಿ ಗ್ರಾಮದ ಬೆಟ್ಟ, ಗುಡ್ಡಗಳಲ್ಲಿ ಪರಿಚಯದವರ ಸುರಕ್ಷಿತ ಮನೆಗಳಲ್ಲಿ ಆಶ್ರಯ ಪಡೆದರೂ ಕ್ಷಣ ಕ್ಷಣಕ್ಕೂ ಜೀವ ಭಯ ಕಾಡುತ್ತಿತ್ತು…. ಬದುಕಿ…

ಮೈಸೂರು ನಾಗರಿಕರ ವೇದಿಕೆಯಿಂದ ಕೊಡಗಿನ ನೆರೆ ಸಂತ್ರಸ್ತರ ನೈಜ ಸ್ಥಿತಿ ಅವಲೋಕನ
ಕೊಡಗು

ಮೈಸೂರು ನಾಗರಿಕರ ವೇದಿಕೆಯಿಂದ ಕೊಡಗಿನ ನೆರೆ ಸಂತ್ರಸ್ತರ ನೈಜ ಸ್ಥಿತಿ ಅವಲೋಕನ

August 23, 2018

ಮೈಸೂರು:  ಪ್ರಕೃತಿ ವಿಕೋಪ ದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿ ರುವ `ಮೈಸೂರು ನಾಗರಿಕ ವೇದಿಕೆ’ ತಂಡ ಇಂದು ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೈಜ ಪರಿಸ್ಥಿತಿಯ ಅವಲೋಕನ ನಡೆಸಿತು. ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ವೇದಿಕೆಯ ಕಾರ್ಯದರ್ಶಿ ಮಂಜುನಾಥ್, ಜೆಎಸ್‍ಎಸ್ ಸಂಸ್ಥೆಗಳ ಕಾರ್ಯ ನಿರ್ವಾ ಹಕ ನಿರ್ದೇಶಕ ಸಿ.ಜೆ.ಬೆಟಸೂರ ಮಠ್, ಉದ್ಯಮಿಗಳಾದ ಗಿರಿ, ಜಗದೀಶ್ ಬಾಬು, ನರೇಂದ್ರ ಹಾಗೂ ಸುಮಾರು…

ಕೊಡಗು ಸಂತ್ರಸ್ತರ ನೆರವಿಗೆ ಮುಂದಾದ ಮಂಡ್ಯ ಜನತೆ
ಮಂಡ್ಯ

ಕೊಡಗು ಸಂತ್ರಸ್ತರ ನೆರವಿಗೆ ಮುಂದಾದ ಮಂಡ್ಯ ಜನತೆ

August 23, 2018

ಮಂಡ್ಯ: ನೆರೆ ಹಾವಳಿಯಿಂದ ನಲುಗಿರುವ ಕೊಡಗು ಜಿಲ್ಲೆಯ ಜನರ ನೆರವಿಗೆ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು, ಸಾರ್ವಜನಿಕರು ಮುಂದಾಗಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ವಸ್ತಗಳು ಹಾಗೂ ನಗದುಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ. ಬಿಎಲ್‍ಎಸ್‍ಇ ಅಂಡ್ ಸಿ ಟ್ರಸ್ಟ್‍ನಿಂದ ನೆರವು: ಜಿಲ್ಲೆಯ ಬಿಎಲ್ ಎಸ್‍ಇ ಅಂಡ್ ಸಿ ಟ್ರಸ್ಟ್ ವತಿಯಿಂದ ಕೊಡಗು ಸಂತ್ರಸ್ತರಿಗೆ ಸುಮಾರು 60 ಸಾವಿರ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಖರೀದಿಸಿ ಪ್ರವಾಹ ಪೀಡಿತರಿಗೆ ಕಳುಹಿಸಿಕೊಡಲಾಗಿದೆ. ಟ್ರಸ್ಟ್‍ನ ಅಧ್ಯಕ್ಷ ಶಿವಲಿಂಗಯ್ಯ ನೇತೃತ್ವದಲ್ಲಿ ಶಾಲಾ-ಕಾಲೇಜು ಶಿಕ್ಷಕರು,…

ನೆರೆ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಗತ್ಯ ಸಾಮಗ್ರಿ ವಿತರಣೆ
ಮೈಸೂರು

ನೆರೆ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಗತ್ಯ ಸಾಮಗ್ರಿ ವಿತರಣೆ

August 23, 2018

ಮೈಸೂರು: ಕೊಡಗು ಜಿಲ್ಲೆಯ ಮುರುಘಾ ಮಠದ ಶಾಖಾ ಮಠಗಳಾದ ಬೇಳೂರು ಮಠ, ಮಾದಾಪುರ ಮಠ ಹಾಗೂ ಅಬ್ಬಿ ಮಠದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಅಗತ್ಯ ಸಾಮಾಗ್ರಿಗಳನ್ನು ನೀಡಲಾಗುವುದು ಎಂದು ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹದೇವಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾ ಪದಾಧಿಕಾರಿಗಳು ಹಾಗೂ ಸದಸ್ಯರು ರಾಜ್ಯಾದ್ಯಂತ ತಮ್ಮ ಮಿತ್ರರಿಂದ ನೆರೆ ಸಂತ್ರಸ್ತರಿಗಾಗಿ ಸಹಾಯಧನ 5 ಲಕ್ಷ ರೂ. ಸಂಗ್ರಹಿಸಿದ್ದು, ಇದರಲ್ಲಿ ಅಗತ್ಯ ಸಾಮಾಗ್ರಿ ಗಳನ್ನು…

ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ
ಕೊಡಗು, ಮೈಸೂರು

ಕೊಡಗಿನ ಪ್ರವಾಹದಿಂದ ಪಾರಾಗಿ ಬಂದವರ ಕಥೆ-ವ್ಯಥೆ

August 20, 2018

ಮನೆ ಕುಸಿಯಿತು… ಜಮೀನು ಕೊಚ್ಚಿ ಹೋಯಿತು… ಕಾಡು-ಗುಡ್ಡಗಳಲ್ಲಿ ನಡೆದೇ ಬಂದೆವು ಮೈಸೂರು: ಮಹಾಮಾರಿ ಮಳೆಯಿಂದಾಗಿ ದಕ್ಷಿಣ ಕಾಶ್ಮೀರ ಕೊಡಗಿನ ಚಿತ್ರಣ ಭಾಗಶಃ ಬದಲಾಗಿ ಹೋಗಿದೆ. ನಿಸರ್ಗದ ಮಡಿಲಲ್ಲಿ ನೆಮ್ಮದಿಯ ಜೀವನ ಕಟ್ಟಿಕೊಂಡಿದ್ದ ಜನರ ಬದುಕು ಅಕ್ಷರಶಃ ನೆರೆಯಲ್ಲೇ ಕೊಚ್ಚಿ ಹೋಗಿದೆ. ಗುಡ್ಡ ಕುಸಿತದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರ ದಲ್ಲಿ ಆಶ್ರಯ ಪಡೆದಿದ್ದಾರೆ. ನೂರಾರು ಮಂದಿ, ಮಳೆಯ ಆರ್ಭಟದ ನಡುವೆ ಯೇ ಹತ್ತಾರು ಕಿಮೀ ನಡೆದುಕೊಂಡು ಬಂದು ಜೀವ ಉಳಿಸಿಕೊಂಡಿದ್ದಾರೆ. ಹೀಗೆ ಬದುಕುಳಿದ ಕುಟುಂಬಗಳು ಬೇರೆ ಊರುಗಳಲ್ಲಿರುವ…

Translate »