ನೆರೆ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಗತ್ಯ ಸಾಮಗ್ರಿ ವಿತರಣೆ
ಮೈಸೂರು

ನೆರೆ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾದಿಂದ ಅಗತ್ಯ ಸಾಮಗ್ರಿ ವಿತರಣೆ

August 23, 2018

ಮೈಸೂರು: ಕೊಡಗು ಜಿಲ್ಲೆಯ ಮುರುಘಾ ಮಠದ ಶಾಖಾ ಮಠಗಳಾದ ಬೇಳೂರು ಮಠ, ಮಾದಾಪುರ ಮಠ ಹಾಗೂ ಅಬ್ಬಿ ಮಠದಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ಜಾಗತಿಕ ಲಿಂಗಾಯತ ಮಹಾಸಭಾ ವತಿಯಿಂದ ಅಗತ್ಯ ಸಾಮಾಗ್ರಿಗಳನ್ನು ನೀಡಲಾಗುವುದು ಎಂದು ಮಹಾಸಭಾದ ರಾಜ್ಯ ಕಾರ್ಯದರ್ಶಿ ಮಹದೇವಪ್ಪ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಸಭಾ ಪದಾಧಿಕಾರಿಗಳು ಹಾಗೂ ಸದಸ್ಯರು ರಾಜ್ಯಾದ್ಯಂತ ತಮ್ಮ ಮಿತ್ರರಿಂದ ನೆರೆ ಸಂತ್ರಸ್ತರಿಗಾಗಿ ಸಹಾಯಧನ 5 ಲಕ್ಷ ರೂ. ಸಂಗ್ರಹಿಸಿದ್ದು, ಇದರಲ್ಲಿ ಅಗತ್ಯ ಸಾಮಾಗ್ರಿ ಗಳನ್ನು ಖರೀದಿಸಿ ಕೊಡಗು ಜಿಲ್ಲೆಗೆ ಮಹಾಸಭಾದ ತಂಡ ಕೊಂಡೊಯ್ಯಲಿದೆ. ಚಿಕ್ಕಮಗ ಳೂರು ಜಿಲ್ಲೆಯ ನರಸಿಂಹರಾಜಪುರದ ಮುರುಘಾ ಶಾಖಾ ಮಠದ ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ಅವರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಶ್ರೀ ಬಸವಯೋಗಿ ಪ್ರಭು ಸ್ವಾಮೀಜಿ ಮಾತನಾಡಿ, ಕೊಡಗು ಜಿಲ್ಲೆ ದೇಶಕ್ಕೆ ಅತೀ ಹೆಚ್ಚು ಯೋಧರನ್ನು ಕೊಟ್ಟ ನೆಲವಾಗಿದೆ. ಇಂತಹ ಮಣ್ಣಿನಲ್ಲಿ ಇಂದು ಜಲಪ್ರಳಯ ಉಂಟಾಗಿ ಜನ-ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಜೊತೆಗೆ ಅಪಾರ ಪ್ರಮಾ ಣದ ಬೆಳೆ ಹಾನಿಯೂ ಆಗಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಅವರಿಗೆ ನೆರವಾಗು ವುದು ನಮ್ಮ ಕರ್ತವ್ಯ. ಹೀಗಾಗಿ ದಿನಸಿ ಪದಾರ್ಥಗಳು ಸೇರಿದಂತೆ ಅಗತ್ಯ ಸಾಮಾಗ್ರಿ ಗಳನ್ನು ಸಂತ್ರಸ್ತರಿಗೆ ನೀಡಲಾಗುವುದು ಎಂದು ನುಡಿದರು. ಮಹಾಸಭಾದ ಬೆಂಗ ಳೂರು ಶಾಖೆ ಸಂಚಾಲಕ ಶಂಕರಪ್ಪ, ಮೈಸೂರು ಶಾಖೆ ಸಂಚಾಲಕರಾದ ಕುಮಾರ್, ಲೋಕೇಶ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Translate »