ಕೊಡಗು ಸಂತ್ರಸ್ತರ ನೆರವಿಗೆ ಮುಂದಾದ ಮಂಡ್ಯ ಜನತೆ
ಮಂಡ್ಯ

ಕೊಡಗು ಸಂತ್ರಸ್ತರ ನೆರವಿಗೆ ಮುಂದಾದ ಮಂಡ್ಯ ಜನತೆ

August 23, 2018

ಮಂಡ್ಯ: ನೆರೆ ಹಾವಳಿಯಿಂದ ನಲುಗಿರುವ ಕೊಡಗು ಜಿಲ್ಲೆಯ ಜನರ ನೆರವಿಗೆ ಜಿಲ್ಲೆಯ ವಿವಿಧ ಸಂಘ, ಸಂಸ್ಥೆಗಳು, ಸಾರ್ವಜನಿಕರು ಮುಂದಾಗಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಅಗತ್ಯ ವಸ್ತಗಳು ಹಾಗೂ ನಗದುಗಳನ್ನು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ಬಿಎಲ್‍ಎಸ್‍ಇ ಅಂಡ್ ಸಿ ಟ್ರಸ್ಟ್‍ನಿಂದ ನೆರವು: ಜಿಲ್ಲೆಯ ಬಿಎಲ್ ಎಸ್‍ಇ ಅಂಡ್ ಸಿ ಟ್ರಸ್ಟ್ ವತಿಯಿಂದ ಕೊಡಗು ಸಂತ್ರಸ್ತರಿಗೆ ಸುಮಾರು 60 ಸಾವಿರ ರೂ. ಮೌಲ್ಯದ ಅಗತ್ಯ ವಸ್ತುಗಳನ್ನು ಖರೀದಿಸಿ ಪ್ರವಾಹ ಪೀಡಿತರಿಗೆ ಕಳುಹಿಸಿಕೊಡಲಾಗಿದೆ. ಟ್ರಸ್ಟ್‍ನ ಅಧ್ಯಕ್ಷ ಶಿವಲಿಂಗಯ್ಯ ನೇತೃತ್ವದಲ್ಲಿ ಶಾಲಾ-ಕಾಲೇಜು ಶಿಕ್ಷಕರು, ವಿದ್ಯಾರ್ಥಿಗಳು ದೇಣಿಗೆ ಸಂಗ್ರಹ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

10 ಸಾವಿರ ದೇಣಿಗೆ: ನೆರೆ ಸಂತ್ರಸ್ತರಿಗೆ ಸಮಾಜ ಸೇವಕ ಅಪ್ಪು ಪಿ.ಗೌಡ ಅವರ ಕುಟುಂಬದಿಂದ 10 ಸಾವಿರ ರೂ. ಚೆಕ್ ಅನ್ನು ಗ್ರೇಡ್-2 ತಹಶೀಲ್ದಾರ್ ಪ್ರಭಾಕರ್ ಅವರಿಗೆ ನೀಡ ಲಾಯಿತು. ಪುರಸಭಾ ಸದಸ್ಯ ಅಜಯ್‍ಪಿ.ಗೌಡ, ಭ್ರಷ್ಟಾಚಾರ ನಿರ್ಮೂಲನಾ ವೇದಿಕೆಯ ಸಂಚಾಲಕಿ ಪ್ರಿಯಾಂಕ, ಮುಖಂಡ ರಾದ ಸಿದ್ದೇಗೌಡ, ಪಟೇಲ್ ಹಾಜರಿದ್ದರು.
ಕೊಡಗಿನತ್ತ ಮಂಡ್ಯ ರೈತರ ನಿಯೋಗ: ಮಂಡ್ಯ ಜಿಲ್ಲಾ ರೈತ ಸಂಘದ ಕಾರ್ಯಕರ್ತರು ಕೊಡುಗಿನ ಸಂತ್ರಸ್ತÀರಿಗೆ ಆಹಾರ, ಬಟ್ಟೆ ಹಾಗೂ ಔಷಧಿಗಳನ್ನು ಸರಬರಾಜು ಮಾಡಲು ರೈತರ ನಿಯೋಗ ತೆರಳಿತು. ಜಿಲ್ಲಾಧ್ಯಕ್ಷ ಶಂಬೂನಹಳ್ಳಿ ಸುರೇಶ, ಮಹಿಳಾಧ್ಯಕ್ಷೆ ಲತಾ ಇತರರು ಇದ್ದರು.

ಸಂತ್ರಸ್ತರಿಗೆ ಸಮಾಜ ಸೇವಕ ಅಪ್ಪು ಪಿ.ಗೌಡ ಅವರ ಕುಟುಂಬದಿಂದ ನಗದು ನೀಡಲಾಯಿತು.

ಪಾಂಡವಪುರ ವರದಿ: ಪಟ್ಟಣದ ವಿಸಿ ಕಾಲೊನಿಯ ನಿವಾಸಿಗಳು, ವಿಸಿಸಿ ಬಾಯ್ಸ್‍ನ ಯುವಕರು ಕೊಡಗಿನ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ನೀಡಲು ಅಗತ್ಯ ದಿನಬಳಕೆ ವಸ್ತುಗಳು, ಆಹಾರ ಪದಾರ್ಥಗಳು, ಸಮ ವಸ್ತ್ರಗಳನ್ನು ತೆಗೆದುಕೊಂಡು ಬುಧವಾರ ಕೊಡಗಿಗೆ ತೆರಳಿದರು.ಸಂದರ್ಭದಲ್ಲಿ ಹಲವಾರು ನಿವಾಸಿಗಳು, ಯುವಕರಿದ್ದರು.

ಕೆ.ಆರ್.ಪೇಟೆ ವರದಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಯಲ್ಲಿ ನಡೆಯುತ್ತಿರುವ ಸಂತೆಯಲ್ಲಿ ಕೊಡಗು ಸಂತ್ರಸ್ತರಿಗಾಗಿ ನಿಧಿ ಸಂಗ್ರಹಿಸಲಾಯಿತು. ಈ ವೇಳೆ ಸಾರ್ವಜನಿಕರು ನಗದು ಹಾಗೂ ಅಗತ್ಯ ಸಾಮಗ್ರಿಗಳನ್ನು ನೀಡಿದರು. ಸಂಗ್ರಹ ಕಾರ್ಯಕ್ಕೆ ಚಾಲನೆ ನೀಡಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಎಂ.ಪಿ.ಲೋಕೇಶ್ ಮಾತನಾಡಿ, ಕೊಡಗಿನ ಜನತೆಯ ಕಷ್ಟದಲ್ಲಿ ಭಾಗಿಯಾಗಲೇಬೇಕಾಗಿದೆ. ಇದಕ್ಕಾಗಿ ನಮ್ಮ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ತರಕಾರಿ ವರ್ತಕರ ಸಂಘದ ಪದಾ ಧಿಕಾರಿಗಳು ಪಾದಯಾತ್ರೆ ಮೂಲಕ ಸುಮಾರು 50ಸಾವಿರ ದೇಣಿಗೆ ಸಂಗ್ರಹಿಸಿದ್ದಾರೆ. ಇದನ್ನು ತಹಶೀಲ್ದಾರ್ ಅವರ ಮೂಲಕ ಕೊಡಗಿನ ಸಂತ್ರಸ್ತರ ನಿಧಿಗೆ ಕಳುಹಿಸಿಕೊಡಲು ಕ್ರಮ ವಹಿಸಲಾಗುವುದ ಎಂದು ತಿಳಿಸಿದರು. ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕ ಹಾಗೂ ತರಕಾರಿ ವರ್ತಕರ ಸಂಘದ ಅಕ್ಕಿಹೆಬ್ಬಾಳು ನಾಗಣ್ಣ, ಆರ್.ನಟರಾಜ್, ಯೂಸೂಫ್, ಸದಾನಂದ್, ಶ್ರೀಧರ್, ಎ.ವಿ.ಮಹೇಶ್, ನರಸೇಗೌಡ, ಎಪಿಎಂಸಿ ನಿರ್ದೇಶಕರಾದ ಶಶಿಧರ್ ಸಂಗಾಪುರ, ಚಂದ್ರಹಾಸ, ಐನೋರ ಹಳ್ಳಿ ಮಲ್ಲೇಶ್, ನಾಗರಾಜೇಗೌಡ, ಅಶೋಕ್ ಇದ್ದರು.

ಹೊದಿಕೆ ದೇಣಿಗೆ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ.ಎಸ್. ಕೃಷ್ಣಮೂರ್ತಿ ಅವರು ಕೊಡಗು ಸಂತ್ರಸ್ತರಿಗಾಗಿ ಹೊದಿಕೆಗಳು ಹಾಗೂ ಕೊಡೆಗಳನ್ನು ಸೇವಾ ಭಾರತೀ ಸ್ವಯಂ ಸೇವಕರಿಗೆ ದೇಣಿಗೆಯಾಗಿ ನೀಡಿದರು. ಈ ಸಂಧರ್ಭದಲ್ಲಿ ಸೇವಾ ಭಾರ ತೀಯ ಸ್ವಯಂ ಸೇವಕರಾದ ಮಣಿಕಂಠ, ಯೋಗೇಶ್, ಕುಚೇಲ, ವಿಕಾಸ್‍ಗೌಡ ಇತರರು ಹಾಜರಿದ್ದರು.

Translate »