ಮೈಸೂರು ನಾಗರಿಕರ ವೇದಿಕೆಯಿಂದ ಕೊಡಗಿನ ನೆರೆ ಸಂತ್ರಸ್ತರ ನೈಜ ಸ್ಥಿತಿ ಅವಲೋಕನ
ಕೊಡಗು

ಮೈಸೂರು ನಾಗರಿಕರ ವೇದಿಕೆಯಿಂದ ಕೊಡಗಿನ ನೆರೆ ಸಂತ್ರಸ್ತರ ನೈಜ ಸ್ಥಿತಿ ಅವಲೋಕನ

August 23, 2018

ಮೈಸೂರು:  ಪ್ರಕೃತಿ ವಿಕೋಪ ದಿಂದ ಸಂತ್ರಸ್ತರಾದವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದಿ ರುವ `ಮೈಸೂರು ನಾಗರಿಕ ವೇದಿಕೆ’ ತಂಡ ಇಂದು ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ನೈಜ ಪರಿಸ್ಥಿತಿಯ ಅವಲೋಕನ ನಡೆಸಿತು.

ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ, ವೇದಿಕೆಯ ಕಾರ್ಯದರ್ಶಿ ಮಂಜುನಾಥ್, ಜೆಎಸ್‍ಎಸ್ ಸಂಸ್ಥೆಗಳ ಕಾರ್ಯ ನಿರ್ವಾ ಹಕ ನಿರ್ದೇಶಕ ಸಿ.ಜೆ.ಬೆಟಸೂರ ಮಠ್, ಉದ್ಯಮಿಗಳಾದ ಗಿರಿ, ಜಗದೀಶ್ ಬಾಬು, ನರೇಂದ್ರ ಹಾಗೂ ಸುಮಾರು 15 ಸ್ವಾಮೀಜಿಗಳನ್ನೊಳಗೊಂಡ ತಂಡ ಮೈಸೂರಿನಿಂದ ಕೊಡಗಿಗೆ ಇಂದು ಬೆಳಿಗ್ಗೆ ಪ್ರಯಾಣ ಬೆಳೆಸಿತು.

ಈ ತಂಡವು ಕುಶಾಲನಗರ ಮತ್ತು ಮಾದಾಪುರದಲ್ಲಿ ತಲಾ 1, ಸುಂಟಿಕೊಪ್ಪ ಮತ್ತು ಮಡಿಕೇರಿಯಲ್ಲಿ ತಲಾ 3 ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಿ, ಅಲ್ಲಿ ಆಶ್ರಯ ಪಡೆದಿದ್ದ ನಿರಾಶ್ರಿತರಿಗೆ ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸಿ ದರು. ಈ ವೇಳೆ ಸುತ್ತೂರು ಶ್ರೀಗಳು ಪ್ರವಾಹದಿಂದ ಕಂಗೆಟ್ಟು, ನಿರಾಶ್ರಿತ ಶಿಬಿರ ದಲ್ಲಿರುವವರಿಗೆ ಆತ್ಮಸ್ಥೈರ್ಯ ತುಂಬುವ ಮಾತುಗಳನ್ನಾಡಿದರು. ಅಲ್ಲದೇ ನಿರಾಶ್ರಿತರ ಮಕ್ಕಳನ್ನು ಸುತ್ತೂರಿನ ಶಾಲೆಗೆ ಸೇರಿಸಿದರೆ ಅವರ ಶಿಕ್ಷಣದ ಪೂರ್ಣ ಜವಾಬ್ದಾರಿ ಹೊರುವುದಾಗಿ ತಿಳಿಸಿದರು.

ಅಂತಿಮವಾಗಿ ಮಡಿಕೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಶಿಕ್ಷಣ ಸಚಿವ ಎನ್.ಮಹೇಶ್, ಜಿಲ್ಲಾಧಿಕಾರಿ ಶ್ರೀವಿದ್ಯಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರೊಂದಿಗೆ ಈ ತಂಡ ಚರ್ಚೆ ನಡೆಸಿತು.

Translate »