ವಿರಾಜಪೇಟೆ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಿ.ಎಚ್.ವಿಜಯ ಶಂಕರ್ ಅವರು ವಿರಾಜಪೇಟೆ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿ ಚುನಾವಣೆಯ ಮುಂದಿನ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸಿದರು. ಬಳಿಕ ಪಟ್ಟಣದ ತೆಲುಗರ ಬೀದಿಯಲ್ಲಿರುವ ಕೆಲವು ಆಪ್ತರ ಮನೆಗೆ ಭೇಟಿ ನೀಡಿ ಸಹಕಾರ ನೀಡುವಂತೆ ಕೇಳಿಕೊಂಡರು. ತಮ್ಮ ಅಭ್ಯರ್ಥಿ ವಿಜಯ ಶಂಕರ್ ಆಗಮಿಸಿದ್ದ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್.ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್, ಕಾನೂನು ವಿಭಾಗದ…
ನೆಲ್ಯಹುದಿಕೇರಿಯಲ್ಲಿ ಬಿಜೆಪಿ ಚುನಾವಣಾ ಪ್ರಚಾರ
April 3, 2019ಸಿದ್ದಾಪುರ: ಎಲ್ಲಾ ವರ್ಗಕ್ಕೂ ಸಮಾನವಾಗಿ ಯೋಜನೆಯನ್ನು ನೀಡಿದ ಕೇಂದ್ರ ಸರ್ಕಾರದ ಸಾಧನೆಯನ್ನು ಪ್ರತಿ ಮನೆಗಳಿಗೆ ತಲುಪಿಸುವ ಕೆಲಸ ಕಾರ್ಯ ಕರ್ತರು ಮಾಡಬೇಕಾಗಿದೆ ಎಂದು ಕೊಡಗು- ಮೈಸೂರು ಲೋಕಸಭಾ ಅಭ್ಯರ್ಥಿ ಪ್ರತಾ ಪಸಿಂಹ ನೆಲ್ಯಹುದಿಕೇರಿ ಪಟ್ಟಣದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಿದರು. ಕಳೆದ ಹಲವು ವರ್ಷಗಳ ಕಾಲ ದೇಶವ ನ್ನಾಳಿದ ಕಾಂಗ್ರೆಸ್ ಸರಕಾರ ಮಾಡದ ಸಾಧನೆಯನ್ನು 5 ವರ್ಷದಲ್ಲಿ ನರೇಂದ್ರ ಮೋದಿ ಸರಕಾರ ಮಾಡಿದೆ ಎಂದು ಹೇಳಿದ ಅವರು, ಮುಂಬರುವ ಲೋಕಸಭಾ ಚುನಾ ವಣೆಯಲ್ಲಿ…
ಅಭಿವೃದ್ಧಿ ಯೋಜನೆಗಳೇ ಗೆಲುವಿಗೆ ಶ್ರೀರಕ್ಷೆ
April 2, 2019ಕುಶಾಲನಗರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತಂದ ನೂರಾರು ಜನಪರ ಕಲ್ಯಾಣ ಕಾರ್ಯಕ್ರಮಗಳೇ ನನ್ನ ಗೆಲುವಿಗೆ ಶ್ರೀರಕ್ಷೆ ಎಂದು ಬಿಜೆಪಿ ಲೋಕಸಭಾ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು. ಪಟ್ಟಣ ಕಾಳೇಘಾಟ್ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬಿಜೆಪಿ ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದರು. ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಕೇಂದ್ರದ ಮೇಲೆ ಒತ್ತಡ ಹಾಕಿ ಪ್ರಕೃತಿ ವಿಕೋಪ ನಿಧಿಯಿಂದ ರೂ. 525 ಕೋಟಿಗಳ ನೆರವು ನೀಡಲಾಗಿದೆ. ಇದೇ ಹಣದಲ್ಲಿ ರಾಜ್ಯ ಸರ್ಕಾರ ಜೆಲ್ಲೆಯಲ್ಲಿ ವಿವಿಧ…
ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷ ಜಮ್ಮಡ ಎ.ಕರುಂಬಯ್ಯ ನಿಧನ
April 2, 2019ಗೋಣಿಕೊಪ್ಪಲು: ಕೊಡಗು ಜಿಲ್ಲಾ ಪರಿಷತ್‍ನ ಪ್ರಥಮ ಅಧ್ಯಕ್ಷರಾಗಿದ್ದ ಜಮ್ಮಡ ಎ.ಕರುಂಬಯ್ಯ (84) ಅವರು ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಎ. ಕರುಂಬಯ್ಯ ಅವರು, ಕೈಕೇರಿ ಗ್ರಾಮ ದಲ್ಲಿರುವ ಸ್ವಗೃಹದಲ್ಲಿ ಸೋಮವಾರ ಬೆಳಿಗ್ಗೆ 8.45 ರಲ್ಲಿ ನಿಧನರಾದರು. ಮೃತರು ಪತ್ನಿ, ಒಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ಸೋಮವಾರ ಸಾಯಂಕಾಲ 3 ಗಂಟೆ ಸುಮಾರಿಗೆ ಜಮ್ಮಡ ಕುಟುಂಬದ ಸ್ಮಶಾನದಲ್ಲಿ ನೆರವೇರಿತು. ಈ ಸಂದರ್ಭ ವಿವಿಧ ಪಕ್ಷದ ಮುಖಂಡರುಗಳು ಹಾಗೂ ಅಭಿಮಾನಿಗಳು ಪಾಲ್ಗೊಂಡು ಅಂತಿಮ ನಮನ…
ವಿದ್ಯುತ್ ಸ್ಪರ್ಶ: ಮೂವರ ಸಾವು ತೆಂಗಿನಕಾಯಿ ಕೀಳುವಾಗ ದುರಂತ
April 2, 2019ಗೋಣಿಕೊಪ್ಪಲು:ತೋಟದಲ್ಲಿ ತೆಂಗಿನಕಾಯಿ ಕೊಯ್ಲು ಮಾಡುತ್ತಿದ್ದ ಸಂದರ್ಭ ವಿದ್ಯುತ್ ತಂತಿ ಮೇಲೆ ಕಬ್ಬಿಣದ ಏಣಿ ಜಾರಿ ಬಿದ್ದು ಮೂವರು ಸಾವನಪ್ಪಿರುವ ಘಟನೆ ಅರ್ವತೋಕ್ಲು ಗ್ರಾಮದಲ್ಲಿ ನಡೆದಿದೆ. ಕಾವಡಿ ಗ್ರಾಮದ ಇಗ್ಗುಡ ಸತೀಶ್ (50), ಇಗ್ಗುಡ ರವಿ (45) ಹಾಗೂ ಮೊಟ್ಟೇರ ಧರ್ಮಜ (50) ಮೃತಪಟ್ಟವರು. ರಾಮಜನ್ಮ ಎಂಬುವರ ತೋಟದಲ್ಲಿ ತೆಂಗಿನ ಕಾಯಿ ಕೊಯ್ಲು ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿ ಜಾರಿ ಈ ದುರ್ಘಟನೆ ನಡೆದಿದೆ. ಮೂವರ ದೇಹಗಳು ಸಂಪೂರ್ಣ ವಾಗಿ ಕರಕಲಾಗಿವೆ. ಸ್ಥಳಕ್ಕೆ ಡಿವೈಎಸ್ಪಿ ನಾಗಪ್ಪ, ಸೆಸ್ಕ್ ಎಇಇ ಅಂಕಯ್ಯ,…
ಬಂದೂಕು ಕಳವು ಪ್ರಕರಣ: ಪ್ರಮುಖ ಆರೋಪಿ ಬಂಧನ
April 2, 2019ಮಡಿಕೇರಿ: ಬಂದೂಕು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ನಗರ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ಓರ್ವ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆರೋಪಿಯಿಂದ ವಿದೇಶಿ ನಿರ್ಮಿತ 2 ಮತ್ತು ದೇಶಿ ನಿರ್ಮಿತ 1 ಬಂದೂಕು ಗಳನ್ನು ವಶಕ್ಕೆ ಪಡೆಯಲಾಗಿದೆ. ಕಕ್ಕಬ್ಬೆ ನಾಲಾಡಿ ನಿವಾಸಿಯಾದ ಅಶೋಕ.ಕೆ.ಸಿ.(29) ಎಂಬಾತ ಬಂಧಿತ ಆರೋಪಿ. ಆರೋಪಿ ಅಶೋಕ ಮಾರ್ಚ್ 8ರಂದು ಮಡಿಕೇರಿ ಮೈಸೂರು ರಸ್ತೆ ನಿವಾಸಿ ನಿವೃತ್ತ ಸೇನಾಧಿಕಾರಿ ಕೆ.ಜಿ. ಉತ್ತಯ್ಯ ಎಂಬುವರ ಮನೆಯಿಂದ ವಿದೇಶಿ ನಿರ್ಮಿತ 1 ಒಂಟಿ ನಳಿಗೆ…
ಒಂಟಿ ಮಹಿಳೆ ಕೊಲೆ: ದಂಪತಿ ಬಂಧನ
April 2, 2019ಮಡಿಕೇರಿ ಬಳಿ ಘಟನೆ ಕೆಲವೇ ಗಂಟೆಯಲ್ಲಿ ಆರೋಪಿಗಳ ಬಂಧನ ಮಡಿಕೇರಿ: ಮೇಕೇರಿ ಗ್ರಾಮದ ಬಿಳಿಗೇರಿ ಜಂಕ್ಷನ್ ಬಳಿಯ ಮನೆಯೊಂದ ರಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆ ಯೋರ್ವರನ್ನು ಉಸಿರಿಗಟ್ಟಿಸಿ ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ನಡೆದಿದ್ದು, ಅಪ ರಾಧ ನಡೆದ 24 ಗಂಟೆ ಒಳಗಾಗಿ ಆರೋಪಿ ಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂ ತರ ಪೊಲೀಸರು ಯಶಸ್ವಿಯಾಗಿದ್ದಾರೆ. ಕೆಳಗಿನ ಮೇಕೇರಿ ನಿವಾಸಿ ಎಂ.ಸಿ. ಉಷಾ(48) ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದು, ಆಕೆಯ ಸಂಬಂಧಿಯೇ ಕೊಲೆ ಮಾಡಿರುವುದು ಬಹಿರಂಗವಾಗಿದೆ….
ಕೊಡಗಿಗೆ ಮಾರಕವಾದ ಮಾಧವ ಗಾಡ್ಗೀಲ್ ವರದಿ ಅನುಷ್ಠಾನಕ್ಕೆ ಯತ್ನಿಸಿದ ಕಾಂಗ್ರೆಸ್‍ಗೆ ಪಾಠ ಕಲಿಸಲು ಕರೆ
March 31, 2019ಮಡಿಕೇರಿ: ಕೊಡಗು ಜಿಲ್ಲೆಗೆ ಮಾರಕವಾಗಿರುವ ಮಾಧವ ಗಾಡ್ಗೀಲ್ ವರದಿಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಕೊಡಗು-ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರು ತಕ್ಕ ಪಾಠ ಕಲಿಸ ಬೇಕೆಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ. ಗೋಣಿಕೊಪ್ಪದಲ್ಲಿ ಆಯೋಜಿಸಲಾ ಗಿದ್ದ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿನ ವಿರೋ ಧಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಮ್ಮ ಸ್ವಕ್ಷೇತ್ರದ ಅಭಿವೃದ್ದಿ…
ರಾಜ್ಯಮಟ್ಟದ ಹಾಕಿ-ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿ ಸಮಾರೋಪ
March 31, 2019ವಿರಾಜಪೇಟೆ: ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಮಾರ್ಚ್ 29 ಮತ್ತು 30ರಂದು ಆಯೋಜಿಸ ಲಾಗಿದ್ದ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಮತ್ತು ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನೆರವೇರಿತು. ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕÀ ಪ್ರೊ.ಇಟ್ಟೀರ ಬಿದ್ದಪ್ಪ ಗ್ರಾಮೀಣ ವಲಯದ ಪ್ರತಿಭೆ ಅನಾವರಣಕ್ಕೆ ಇಂತಹ ಪಂದ್ಯಾವಳಿಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದರು. ನಾಯಡ ವಾಸು ನಂಜಪ್ಪ ಕಾವೇರಿ ಕಾಲೇಜು ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು. ಬುಟ್ಟಿಯಂಡ…
ಸುಂಟಿಕೊಪ್ಪ ಬಳಿ ಕಾರಿಗೆ ಲಾರಿ ಡಿಕ್ಕಿ: ಓರ್ವ ಸಾವು
March 31, 2019ಮಡಿಕೇರಿ: ಕಾಂಕ್ರೆಟ್ ಮಿಕ್ಸರ್ ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸುಂಟಿಕೊಪ್ಪ ಬಳಿಯ ಏಳನೇ ಹೊಸಕೋಟೆಯಲ್ಲಿ ಸಂಭವಿಸಿದೆ. ಕೊಡಗರಹಳ್ಳಿಯ ಸ್ಕೂಲ್ ಬಾಣೆ ನಿವಾಸಿಯಾದ ಉಮ್ಮರ್ ಎಂಬು ವರ ಪುತ್ರ ಇರ್ಫಾನ್(21) ಮೃತಪಟ್ಟಿದ್ದು, ಕಾರಿನಲ್ಲಿದ್ದ ಮತ್ತೋರ್ವ ಯುವಕ ಸಮದ್ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಶಾಲನಗರ ಸಮೀಪದ ಕೊಪ್ಪದ ಭಾರತಮಾತಾ ಕಾಲೇಜಿನಲ್ಲಿ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ಇರ್ಫಾನ್ ತನ್ನ ಸ್ನೇಹಿತ…