ಕೊಡಗಿಗೆ ಮಾರಕವಾದ ಮಾಧವ ಗಾಡ್ಗೀಲ್ ವರದಿ ಅನುಷ್ಠಾನಕ್ಕೆ ಯತ್ನಿಸಿದ  ಕಾಂಗ್ರೆಸ್‍ಗೆ ಪಾಠ ಕಲಿಸಲು ಕರೆ
ಕೊಡಗು

ಕೊಡಗಿಗೆ ಮಾರಕವಾದ ಮಾಧವ ಗಾಡ್ಗೀಲ್ ವರದಿ ಅನುಷ್ಠಾನಕ್ಕೆ ಯತ್ನಿಸಿದ ಕಾಂಗ್ರೆಸ್‍ಗೆ ಪಾಠ ಕಲಿಸಲು ಕರೆ

March 31, 2019

ಮಡಿಕೇರಿ: ಕೊಡಗು ಜಿಲ್ಲೆಗೆ ಮಾರಕವಾಗಿರುವ ಮಾಧವ ಗಾಡ್ಗೀಲ್ ವರದಿಯನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಕೊಡಗು-ಮೈಸೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರು ತಕ್ಕ ಪಾಠ ಕಲಿಸ ಬೇಕೆಂದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಕರೆ ನೀಡಿದ್ದಾರೆ.

ಗೋಣಿಕೊಪ್ಪದಲ್ಲಿ ಆಯೋಜಿಸಲಾ ಗಿದ್ದ ಚುನಾವಣೆಯ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೊಡಗಿನ ವಿರೋ ಧಿಗಳು ಮಾಜಿ ಮುಖ್ಯಮಂತ್ರಿ ಸಿದ್ದರಾ ಮಯ್ಯ ನೇತೃತ್ವದಲ್ಲಿ ರಾಜ್ಯದಲ್ಲಿ ದರ್ಬಾರ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ತಮ್ಮ ಸ್ವಕ್ಷೇತ್ರದ ಅಭಿವೃದ್ದಿ ಮಾಡುವ ವಿಚಾರ ಬಂದಾಗ ದೇವಾಲಯದ ಹುಂಡಿ ಒಡೆಯುವ ಕೆಲಸ ಮಾಡಿದರು ಎಂದ ಪ್ರತಾಪ್ ಸಿಂಹ, ಚಾಮುಂಡಿ ಬೆಟ್ಟದ ಅಭಿವೃದ್ದಿಗಾಗಿಯೇ ಮೋದಿ ಸರ ಕಾರ 100 ಕೋಟಿ ರೂ.ಗಳ ಅನುದಾನ ನೀಡಿದೆ ಎಂದು ಹೇಳಿದರು.

ಮೈಸೂರು-ಕೊಡಗು ರೈಲ್ವೇ ಮಾರ್ಗ ಅನುಷ್ಠಾನಕ್ಕೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ಅನುದಾನ ಮತ್ತು ಭೂ ಸ್ವಾಧೀನ ಕಾರ್ಯಕ್ಕೂ ಕೇಂದ್ರದೊಂದಿಗೆ ಸ್ಪಂದಿಸಲಿಲ್ಲ. 2004 ರಿಂದ 2014ರ ವರೆಗೆ ವಿಜಯ್ ಶಂಕರ್ ಮತ್ತು ಹೆಚ್. ವಿಶ್ವನಾಥ್ ಸಂಸದರಾದರೂ 10 ವರ್ಷದಲ್ಲಿ ಮೈಸೂರಿಗೆ 1 ರೈಲನ್ನೂ ತರಲಿಲ್ಲ. ಆದರೆ ಕಳೆದ 5 ವರ್ಷ ದಲ್ಲಿ ಮೈಸೂರಿಗೆ 6 ರೈಲನ್ನು ತಂದಿದ್ದೇನೆ ಎಂದು ಪ್ರತಾಪ್ ಸಿಂಹ ಹೇಳಿದರು.

7500 ಕೋಟಿ ರೂ. ವೆಚ್ಚದಲ್ಲಿ ಮೈಸೂರು- ಬೆಂಗಳೂರು 10 ಪಥದ ಹೆದ್ದಾರಿ, ಉಡಾನ್ 3ರ ಯೋಜನೆಯಂತೆ ಮೈಸೂರು ವಿಮಾನ ನಿಲ್ದಾಣದಿಂದ 7 ವಿಮಾನಗಳ ಹಾರಾಟ ಮತ್ತು 700 ಕೋಟಿ ವೆಚ್ಚದಲ್ಲಿ ರನ್ ವೇ ವಿಸ್ತರಣೆ ಸೇರಿದಂತೆ ಹಲವು ಯೋಜ ನೆಗಳನ್ನು ಕ್ಷೇತ್ರದಲ್ಲಿ ಜಾರಿಗೊಳಿಸಲಾಗಿದೆ. ಕಾವೇರಿ ನೀರು ನಮ್ಮದು ಎಂದು ಹೇಳುವ ರಾಜ್ಯ ಸರಕಾರ ಕೊಡಗು ಜಿಲ್ಲೆ ಪ್ರವಾಹಕ್ಕೆ ಸಿಲುಕಿದಾಗ ಸೂಕ್ತ ಪರಿಹಾರ ನೀಡುವ ಲ್ಲಿಯೂ ತಾರತಮ್ಯ ಎಸಗಿದೆ. 3500 ಮನೆ ಗಳ ಹಾನಿ, 20 ಜೀವ ಬಲಿ ಪ್ರಕರಣ, ಹೆದ್ದಾರಿ ದುರಸ್ತಿ ಸೇರಿದಂತೆ ಮೋದಿ ಸರಕಾರ ಜಿಲ್ಲೆಗೆ ಹೆಚ್ಚಿನ ಪರಿಹಾರವನ್ನು ನೀಡಿದೆ. ಇದರಲ್ಲಿ ರಾಜ್ಯ ಸರಕಾರದ ಪಾತ್ರ ಕಿಂಚಿತ್ತೂ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಕುಶಾಲನಗರದಿಂದ ಮಡಿಕೇರಿ ವರೆಗೆ 4 ಪಥದ ಹೆದ್ದಾರಿ ಮತ್ತು ಮೈಸೂರಿ ನಿಂದ ರಾಣಿಗೇಟ್‍ವರೆಗೆ ರೈಲು ಮಾರ್ಗದ ಯೋಜನೆಯನ್ನೂ ರೂಪಿಸಲಾಗಿದೆ. ಕೇಂದ್ರ ಸರಕಾರ ಈ ಯೋಜನೆಗಳಿಗೆ ಸಂಪೂರ್ಣ ಅನುದಾನ ನೀಡುತ್ತಿದ್ದು, ಇದರಲ್ಲಿ ರಾಜ್ಯ ಸರಕಾರದ ಚಿಕ್ಕಾಸು ಕೂಡ ಇಲ್ಲ ಎಂದರಲ್ಲದೆ, ಮೋದಿಯಂತಹ ಸಮರ್ಥ ನಾಯಕರ ಅವಶ್ಯಕತೆ ದೇಶಕ್ಕಿದೆ ಎಂಬುದು ದೇಶದ ಮತದಾರರಿಗೆ ಮನದಟ್ಟಾಗಿದೆ. ಇಂತಹ ನಾಯಕರ ಕೈಕೆಳಗೆ ಕೆಲಸ ಮಾಡಲು ತನಗೆ ಮತ್ತೊಮ್ಮೆ ಅವಕಾಶ ನೀಡಬೇಕು. ವಿಜಯಶಂಕರ್ ಅವರಂತಹ ಗೋಮುಖ ವ್ಯಾಘ್ರ ವ್ಯಕ್ತಿಗಳನ್ನು ಮತದಾರರು ತಿರಸ್ಕರಿ ಸಬೇಕೆಂದು ಪ್ರತಾಪ್ ಸಿಂಹ ಕರೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಈ ಬಾರಿಯ ಲೋಕಸಭಾ ಚುನಾವಣೆ ಪ್ರತಿಷ್ಠೆ ಮತ್ತು ಸವಾಲಿನ ಚುನಾವಣೆ ಯಾಗಿದ್ದು, ಜಿಲ್ಲೆಯ ಮತದಾರರು ಇದನ್ನು ಸವಾಲಾಗಿ ಸ್ವೀಕರಿಸಬೇಕೆಂದು ಹೇಳಿದರು. ಭಾರತ ಭಾರತವಾಗಿಯೇ ಉಳಿಯ ಬೇಕೆಂದರೆ, ಭವಿಷ್ಯದ ಪ್ರಧಾನಿಯಾಗಿ ಮೋದಿಯೇ ಆಯ್ಕೆಯಾಗಬೇಕೆಂದು ದೇಶವೇ ಇಚ್ಚಿಸುತ್ತಿದೆ. ಕೊಡಗು ಜಿಲ್ಲೆ ಬಿಜೆಪಿಯ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಮೂಲಕ, ಮುಖ್ಯಮಂತ್ರಿಗಳ ನಾಟಕ ಜಿಲ್ಲೆಯಲ್ಲಿ ನಡೆ ಯೋದಿಲ್ಲ ಎಂಬ ಸಂದೇಶವನ್ನೂ ನೀಡ ಬೇಕೆಂದು ಬೋಪಯ್ಯ ಕರೆ ನೀಡಿದರು.

ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರನ್ನು ಈ ಬಾರಿ ವಿರಾಜಪೇಟೆ ಕ್ಷೇತ್ರದಿಂದ 25 ಸಾವಿರ ಮತ್ತು ಮಡಿಕೇರಿ ಕ್ಷೇತ್ರದಿಂದ 50ಸಾವಿರ ಮತ ನೀಡುವ ಮೂಲಕ ಒಟ್ಟು 75 ಸಾವಿರ ಮತಗಳ ಅಂತರ ಗಳಿಂದ ಗೆಲ್ಲಿಸಬೇಕೆಂದು ಕರೆ ನೀಡಿದರು. ರಾಜ್ಯ ಸರಕಾರ ಕೊಡಗಿಗೆ ಮಲತಾಯಿ ಧೋರಣೆ ತೋರುತ್ತಿದೆ. ಕೊಡಗು ಜಿಲ್ಲೆ 200 ಟಿ.ಎಂ.ಸಿ ಕಾವೇರಿ ನೀರನ್ನು ರಾಜ್ಯಕ್ಕೆ ನೀಡುತ್ತಿದೆ. ಹೀಗಿದ್ದರೂ, ರಾಜ್ಯ ಸರಕಾರ ಪ್ರವಾಹ ಪರಿಸ್ಥಿತಿಯ ಸಮಯದಲ್ಲಿ ಸೂಕ್ತ ಸ್ಪಂದನೆ ನೀಡಲಿಲ್ಲ ಎಂದು ದೂರಿದರು.

ಮಣ್ಣಿನ ಮಕ್ಕಳೆಂದು ಕರೆದುಕೊಳ್ಳು ವವರಿಗೆ ಇಂಧನ, ಲೋಕೋಪಯೋಗಿ ಖಾತೆಗಳೇ ಏಕೆ ಬೇಕು ಎಂದು ಪ್ರಶ್ನಿಸಿದ ರಂಜನ್, ಇದರ ಬದಲು ಕೃಷಿ ಖಾತೆ ನಿಭಾಯಿಸಲಿ ಎಂದು ಸಲಹೆ ನೀಡಿದರು. ದೇವೇಗೌಡ, ಕುಮಾರಸ್ವಾಮಿ, ರೇವಣ್ಣ, ನಿಖಿಲ್ ಕುಮಾರಸ್ವಾಮಿ, ಪ್ರಜ್ವಲ್ ಸೇರಿದಂತೆ ಇವರ ಕುಟುಂಬ ಸದಸ್ಯರ ಆಸ್ತಿ ಸಾವಿರ ಕೋಟಿಗೂ ಮೀರಿದೆ. ಈ ಪ್ರಮಾಣದ ಹಣವನ್ನು ಇವರು ವ್ಯಾಪಾರ ವ್ಯವಹಾರದಿಂದ ಸಂಪಾದನೆ ಮಾಡಿಲ್ಲ. ಬದಲಾಗಿ ರಾಜಕೀಯ ವ್ಯವಹಾರದಿಂದ ಸಂಪಾದಿಸಿದ್ದಾರೆ ಎಂದು ಶಾಸಕ ರಂಜನ್ ಆರೋಪಿಸಿದರು. ಇಂತಹ ಲೂಟಿಕೋರರ ವಿರುದ್ದ ಜನರು ಎಚ್ಚೆತ್ತುಕೊಂಡು ತಕ್ಕ ಪಾಠ ಕಲಿಸಬೇಕೆಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ರಾಹುಲ್ ಗಾಂಧಿ ಪಾಲ್ಗೊಳ್ಳುವ ಪ್ರತಿ ಸಭೆಯಲ್ಲೂ ಜನರು ಮೋದಿ ಹೆಸರಿನಲ್ಲಿ ಘೋಷಣೆ ಕೂಗುತ್ತಾರೆ. ಇದರಿಂದ ಹತಾಶರಾಗಿ ಕಾಂಗ್ರೆಸ್ ಪೊಲೀಸರ ಮೂಲಕ ಲಾಠಿ ಚಾರ್ಜ್ ಮಾಡಿಸುತ್ತದೆ ಎಂದು ಅವರು ಕುಟುಕಿದರು. ಕೊಡಗು ಜಿಲ್ಲೆಯಲ್ಲಿ ದೇವಾಲಯಗಳನ್ನು ಧ್ವಂಸ ಮಾಡಿದ ಟಿಪ್ಪುವಿನ ಜಯಂತಿ ಆಚರಿಸುವ ಮೂಲಕ ರಾಜ್ಯ ಸರಕಾರ ಕೊಡಗು ಜಿಲ್ಲೆಗೆ ಅಪ ಮಾನ ಮಾಡಿದೆ ಎಂದು ಸುನೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ಕೇಂದ್ರ ಸರಕಾರದ 206 ಮಹತ್ವದ ಯೋಜನೆಗಳು ಜನ ಕಲ್ಯಾಣದ ಯೋಜನೆಗಳಾಗಿ ದೇಶದ ಜನರ ಮನಸೆಳೆದಿದ್ದು, ಇದರ ಕೀರ್ತಿ ಪ್ರಧಾನಿ ಮೋದಿ ಅವರಿಗೆ ಸೇರುತ್ತದೆ. ಇಂತಹ ಯೋಜನೆಗಳನ್ನು ಬಿಜೆಪಿಯಿಂದ ಮಾತ್ರ ತರಲು ಸಾಧ್ಯ ಎಂದು ಸಾಮಾನ್ಯ ಜನರೇ ಹೇಳುತ್ತಿದ್ದಾರೆ. 5 ವರ್ಷದಲ್ಲಾದ ಬದಲಾ ವಣೆಯೇ ಇದಕ್ಕೆ ಕಾರಣವೆಂದ ಭಾರ ತೀಶ್, ಬಿಜೆಪಿ ಕಾರ್ಯಕರ್ತರು ಪ್ರತಿ ಮನೆಮನೆಗಳಿಗೆ ತೆರಳಿ ಕೇಂದ್ರ ಸರಕಾರದ ಮಹತ್ವದ ಯೋಜನೆಗಳನ್ನು ಮತದಾ ರರಿಗೆ ತಿಳಿಸಬೇಕೆಂದು ಕರೆ ನೀಡಿದರು. ಪ್ರಚಾರ ಸಭೆಯ ಕುರಿತು ವಿರಾಜಪೇಟೆ ತಾಲೂಕು ಬಿಜೆಪಿ ಪ್ರಮುಖರಾದ ಅರುಣ್ ಭೀಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ರಾಜ್ಯ ಮಹಿಳಾ ಮೋರ್ಛಾದ ರೀನಾ ಪ್ರಕಾಶ್, ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಸುಜಾ ಕುಶಾಲಪ್ಪ, ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಮಾಜಿ ಜಿ.ಪಂ. ಅಧ್ಯಕ್ಷ ರವಿ ಕುಶಾಲಪ್ಪ, ಮಹಿಳಾ ಮೋರ್ಛಾದ ಜಿಲ್ಲಾಧ್ಯಕ್ಷೆ ಯಮುನಾ ಚಂಗಪ್ಪ, ರಾಬೀನ್ ದೇವಯ್ಯ, ಗಾಂಧಿ ಮತ್ತಿತ್ತರರು ಹಾಜರಿದ್ದರು.

Translate »