ರಾಜ್ಯಮಟ್ಟದ ಹಾಕಿ-ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿ ಸಮಾರೋಪ
ಕೊಡಗು

ರಾಜ್ಯಮಟ್ಟದ ಹಾಕಿ-ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿ ಸಮಾರೋಪ

March 31, 2019

ವಿರಾಜಪೇಟೆ: ವಿರಾಜಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಮಾರ್ಚ್ 29 ಮತ್ತು 30ರಂದು ಆಯೋಜಿಸ ಲಾಗಿದ್ದ ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಮತ್ತು ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯ ಸಮಾರೋಪ ಸಮಾರಂಭ ನೆರವೇರಿತು.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಗೋಣಿಕೊಪ್ಪ ಕಾವೇರಿ ವಿದ್ಯಾಸಂಸ್ಥೆಯ ನಿರ್ದೇಶಕÀ ಪ್ರೊ.ಇಟ್ಟೀರ ಬಿದ್ದಪ್ಪ ಗ್ರಾಮೀಣ ವಲಯದ ಪ್ರತಿಭೆ ಅನಾವರಣಕ್ಕೆ ಇಂತಹ ಪಂದ್ಯಾವಳಿಗಳನ್ನು ನಿರಂತರವಾಗಿ ಆಯೋಜಿಸಬೇಕು ಎಂದರು. ನಾಯಡ ವಾಸು ನಂಜಪ್ಪ ಕಾವೇರಿ ಕಾಲೇಜು ಬೆಳೆದು ಬಂದ ದಾರಿಯನ್ನು ಮೆಲುಕು ಹಾಕಿದರು.
ಬುಟ್ಟಿಯಂಡ ಜಿಮ್ಮಿ ಅಚ್ಚಪ್ಪ ಹಾಗೂ ಆಶ್ವಿನಿ ಅಚ್ಚಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಪದವಿ ಕಾಲೇಜಿನ ಪುರುಷರ(ಬಿ)ತಂಡವು ಮೂರ್ನಾಡ್ ಪ್ರಥಮ ದರ್ಜೆ ಕಾಲೇಜಿನ ತಂಡವನ್ನು 6-4 ಗೋಲಿನ ಅಂತರದಿಂದ ಮಣಿಸಿ ವಿಜಯಶಾಲಿಯಾಗಿ ಹೊರಹೊಮ್ಮಿತು. ತೃತೀಯ ಸ್ಥಾನವನ್ನು ವಿರಾಜಪೇಟೆ ಪದವಿ ಕಾಲೇಜಿನ (ಎ)ತಂಡವು ಪಡೆದುಕೊಂಡಿತು.

ಶಿಸ್ತುಬದ್ಧ ತಂಡವಾಗಿ ಮೈಸೂರಿನ ವಿದ್ಯಾಶ್ರಮ ಕಾಲೇಜಿಗೆ ಪ್ರಶಸ್ತಿ ನೀಡಲಾಯಿತು. ಪಂದ್ಯಾವಳಿಯ ಉತ್ತಮ ಗೋಲ್‍ಕೀಪರ್ ಪ್ರಶಸ್ತಿಯನ್ನು ವಿರಾಜಪೇಟೆಯ ಕಾವೇರಿ ಪದವಿ ಪೂರ್ವ ಕಾಲೇ ಜಿನ ಸೋಮಣ್ಣ, ಉತ್ತಮ ರಕ್ಷಣಾತ್ಮಕ ಆಟಗಾರ ಪ್ರಶಸ್ತಿಯನ್ನು ಗೋಣಿಕೊಪ್ಪಲಿವಿನ ವಿದ್ಯಾನಿಕೇತನ್ ಕಾಲೇಜಿನ ಪ್ರತಿಕ್ ಪೊನ್ನಣ್ಣ, ಉತ್ತಮ ಮುನ್ನಡೆ ಆಟಗಾರ ಪ್ರಶಸ್ತಿಯನ್ನು ಗೋಣಿಕೊಪ್ಪಲು ವಿನ ಕಾವೇರಿ ಪದವಿ ಕಾಲೇಜಿನ ಪುರುಷರ (ಬಿ)ತಂಡದ ಕಾರ್ಲ್ ಕಾರ್ಯಪ್ಪ ಹಾಗೂ ಪಂದ್ಯಾವಳಿಯ ಉತ್ತಮ ಆಟಗಾರ ಪ್ರಶಸ್ತಿಯನ್ನು ಮೂರ್ನಾಡ್ ಪ್ರಥಮ ದರ್ಜೆ ಕಾಲೇಜಿನ ಪ್ರಜ್ವಲ್ ಪಡೆದುಕೊಂಡರು.

ರಾಜ್ಯಮಟ್ಟದ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ಮಂಡ್ಯದ ಪಿ.ಇ.ಎಸ್ ಕಾಲೇಜು ತಂಡವು ಮೈಸೂರಿನ ಎಂ.ಐ.ಸಿ.ಎ. ತಂಡವನ್ನು 58-52 ಅಂತರದಿಂದ ಸೋಲಿಸಿ ವಿಜಯಶಾಲಿಯಾಗಿ ಹೊರಹೊ ಮ್ಮಿತು. ಪಂದ್ಯಾವಳಿಯ ಉತ್ತಮ ಕ್ರಿಯಾಶೀಲ ಪ್ರಶಸ್ತಿಯನ್ನು ಎಂ.ಐ.ಸಿ.ಎ. ತಂಡದ ಶತಜೀತ್, ಅತ್ಯಂತ ಮೌಲ್ಯಾಧರಿತ ಪ್ರಶಸ್ತಿಯನ್ನು ಪಿ.ಇ.ಎಸ್ ಕಾಲೇಜಿನ ಆನೋಚ್, ಬೆಸ್ಟ್ ಶೂಟರ್ ಪ್ರಶಸ್ತಿಯನ್ನು ಮೈಕ ಕಾಲೇಜಿನ ವಿಜಯ್, ಉತ್ತಮ ಆಲ್‍ರೌಂಡರ್ ಪ್ರಶಸ್ತಿನ ಪಿ.ಇ.ಎಸ್ ಕಾಲೇಜಿನ ಸ್ರುಜನ್ ಹಾಗೂ ರಕ್ಷಣಾತ್ಮಕ ಆಟಗಾರ ಪ್ರಶಸ್ತಿಯನ್ನು ವಿರಾಜಪೇಟೆ ಪದವಿ ಕಾಲೇಜಿನ ಕಿರಣ್ ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ನೆಲಮಕ್ಕಡ ಮೋಹನ್ ಅಯ್ಯಪ್ಪ, ಬಡಕಡ ದೀನ ಪೂವಯ್ಯ, ವಿರಾಜಪೇಟೆಯ ಪಟ್ಟಣ ಪಂಚಾಯಿತಿಯ ಮಾಜಿ ಅದ್ಯಕ್ಷತೆ ಮನೆಯಪಂಡ ದೇಚಮ್ಮ ಹಾಗೂ ಕಾಲೇಜಿನ ಪ್ರಾಂಶುಪಾಲ ರಾದ ಪ್ರೊ.ಎ.ಎಂ. ಕಮಲಾಕ್ಷಿ ಹಾಜರಿದ್ದರು. ಹಾಕಿ ಪಂದ್ಯಾ ವಳಿಯ ತೀರ್ಪುಗಾರರಾಗಿ ಕೋಡಿಮಣಿಯಂಡ ಗಣಪತಿ, ಕುಪ್ಪಂಡ ದಿಲನ್ ಹಾಗೂ ಬೊಳ್ಳಚಂಡ ನಾಣಯ್ಯ ಕಾರ್ಯ ನಿರ್ವ ಹಿಸಿದರು. ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯ ತೀರ್ಪುಗಾರರಾಗಿ ರಾಜರಾಯ್, ಇರ್ಷದ್ ಹಾಗೂ ಆಶ್ವಿನ್ ಕಾರ್ಯನಿರ್ವಹಿಸಿದರು.

Translate »