ಒಂಟಿ ಮಹಿಳೆ ಕೊಲೆ: ದಂಪತಿ ಬಂಧನ
ಕೊಡಗು

ಒಂಟಿ ಮಹಿಳೆ ಕೊಲೆ: ದಂಪತಿ ಬಂಧನ

April 2, 2019
  • ಮಡಿಕೇರಿ ಬಳಿ ಘಟನೆ
  • ಕೆಲವೇ ಗಂಟೆಯಲ್ಲಿ ಆರೋಪಿಗಳ ಬಂಧನ

ಮಡಿಕೇರಿ: ಮೇಕೇರಿ ಗ್ರಾಮದ ಬಿಳಿಗೇರಿ ಜಂಕ್ಷನ್ ಬಳಿಯ ಮನೆಯೊಂದ ರಲ್ಲಿ ಒಂಟಿಯಾಗಿ ವಾಸವಿದ್ದ ಮಹಿಳೆ ಯೋರ್ವರನ್ನು ಉಸಿರಿಗಟ್ಟಿಸಿ ಕೊಲೆಗೈದು ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿರುವ ಘಟನೆ ನಡೆದಿದ್ದು, ಅಪ ರಾಧ ನಡೆದ 24 ಗಂಟೆ ಒಳಗಾಗಿ ಆರೋಪಿ ಗಳನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂ ತರ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆಳಗಿನ ಮೇಕೇರಿ ನಿವಾಸಿ ಎಂ.ಸಿ. ಉಷಾ(48) ಎಂಬಾಕೆಯೇ ಕೊಲೆಯಾದ ಮಹಿಳೆಯಾಗಿದ್ದು, ಆಕೆಯ ಸಂಬಂಧಿಯೇ ಕೊಲೆ ಮಾಡಿರುವುದು ಬಹಿರಂಗವಾಗಿದೆ. ಸೋಮವಾರಪೇಟೆಯ ಅಬ್ಬೂರುಕಟ್ಟೆಯ ನಿವಾಸಿ ಲಿಖಿತ(30) ಮತ್ತು ಆಕೆಯ ಪತಿ ಎಂ.ಎಸ್.ರವಿ(37) ಎಂಬುವರೇ ಹತ್ಯೆ ಮಾಡಿದ್ದಾರೆ ಎಂದು ಪೊಲೀಸ್ ವರಿ ಷ್ಠಾಧಿಕಾರಿ ಡಾ.ಸುಮನ ತಿಳಿಸಿದ್ದಾರೆ.

ಘಟನೆ ವಿವಿರ: ಕೆಳಗಿನ ಮೇಕೇರಿ ನಿವಾಸಿ ಯಾದ ಎಂ.ಸಿ.ಉಷಾ ಮೂಳೆಗೆ ಸಂಬಂ ಧಿಸಿದ ಖಾಯಿಲೆಯಿಂದ ಬಳಲುತ್ತಿದ್ದು, ಅವಿವಾಹಿತರಾಗಿದ್ದರು. ನಡೆದಾಡಲು ಕೂಡ ಕಷ್ಟಪಡುತ್ತಿದ್ದ ಉಷಾ ಮನೆಯ ಒಳಗೆ ಒಂಟಿಯಾಗಿ ವಾಸಿಸುತ್ತಿದ್ದರು. ಉಷಾ ಅವರ ಸಂಬಂಧಿ ಲಿಖಿತ ಮಾರ್ಚ್ 30 ರಂದು ಉಷಾ ಅವರ ಮನೆಯಲ್ಲಿ ಮನೆ ಕೆಲಸ ಮಾಡಿ ಸಂಜೆ ಕಿಟಕಿಯಲ್ಲಿ ಕೀಯ ನ್ನಿಟ್ಟು ಮನೆಗೆ ತೆರಳಿದ್ದಳು. ಮಾರ್ಚ್ 31ರಂದು ಮಧ್ಯಾಹ್ನ ವೇಳೆಯಲ್ಲಿ ಉಷಾ ಅವರ ಮನೆಗೆ ಬಂದ ಲಿಖಿತ ಎಂದಿನಂತೆ ಉಷಾ ಅವರನ್ನು ಕೂಗಿ ಕರೆದಿದ್ದಾರೆ. ಆದರೆ ಉಷಾ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಪಕ್ಕದ ಮನೆಯವರಿಗೆ ವಿಷಯ ತಿಳಿಸಿದ್ದಾಳೆ. ಪಕ್ಕದ ಮನೆಯ ವರು ಉಷಾ ಅವರು ಮಲಗುವ ಕೋಣೆಯ ಕಿಟಕಿಯಲ್ಲಿ ನೋಡಿದಾಗ ಆಕೆಯ ಬಾಯಲ್ಲಿ ರಕ್ತ ಉಕ್ಕಿರುವುದು ಕಂಡು ಬಂದಿದ್ದಲ್ಲದೇ ಆಕೆ ಮೃತಪಟ್ಟಿರುವುದು ಖಚಿತವಾಗಿದೆ.

ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕಾಗಮಿಸಿದ ಮಡಿಕೇರಿ ಗ್ರಾಮಾಂ ತರ ಠಾಣಾ ವೃತ್ತ ನಿರೀಕ್ಷಕ ಸಿದ್ದಯ್ಯ ಮತ್ತು ಸಿಬ್ಬಂದಿಗಳು ಮನೆಯನ್ನು ಪರಿಶೀಲಿಸಿ ದಾಗ, ಮನೆಯೊಳಗೆ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಹರಡಿಕೊಂಡಿರುವುದು ಕಂಡು ಬಂದಿದೆ. ಮಾತ್ರವಲ್ಲದೆ, ಉಷಾ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಚೈನು, ಉಂಗುರ, ಕಿವಿಓಲೆ ಹಾಗೂ ಮನೆಯಲ್ಲಿದ್ದ ನಗದು ಕೂಡ ಕಳುವಾಗಿರುವುದು ಕಂಡು ಬಂದಿದೆ. ಈ ಕುರಿತು ಐ.ಪಿ.ಸಿ.ಸೆಕ್ಷನ್ 302 ಮತ್ತು 392 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಉಷಾ ಮನೆಯಲ್ಲಿ ಒಂಟಿಯಾಗಿ ವಾಸವಿರುವುದು ಮತ್ತು ಆಕೆಯ ಬಗ್ಗೆ ತಿಳಿದವರಿಂದಲೇ ಈ ಕೃತ್ಯ ಎಸಗಿರುವ ಸಾಧ್ಯತೆಯನ್ನು ಮನಗಂಡು ಲಿಖಿತ ಮತ್ತು ಆಕೆಯ ಪತಿ ರವಿ ಅವರನ್ನು ಸೋಮವಾರಪೇಟೆಯ ಬಸ್ ನಿಲ್ದಾಣ ದಲ್ಲಿ ವಶಕ್ಕೆ ಪಡೆದು ವಿಚಾರಣೆ ನಡೆಸಿ ದಾಗ ತಾವೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಆರೋಪಿಗಳು ಅಬ್ಬೂರುಕಟ್ಟೆ ಗ್ರಾಮ ದಲ್ಲಿ ಸ್ವಸಹಾಯ ಸಂಘದಲ್ಲಿ ಲಕ್ಷಾಂತರ ರೂ. ಸಾಲ ಮಾಡಿದ್ದರು. ಮಾತ್ರವಲ್ಲದೇ, 4 ಎಕರೆ ಪ್ರದೇಶದಲ್ಲಿ ಕೆಸುವಿನ ಗೆಡ್ಡೆ ಕೃಷಿ ಮಾಡಿ ನಷ್ಟ ಹೊಂದಿದ್ದರು. ಈ ಹಿನ್ನಲೆಯಲ್ಲಿ ಕಳೆದ 15 ದಿನದ ಹಿಂದೆ ಉಷಾ ಅವರನ್ನು ಕೊಂದು ಚಿನ್ನಾಭರಣ ಕಳವು ಮಾಡಲು ಸಂಚು ರೂಪಿಸಿದ್ದರು ಎಂದು ಎಸ್.ಪಿ. ಡಾ.ಸುಮನ ತಿಳಿಸಿದರು. ಆರೋಪಿಗಳಿಂದ ಕೆ.ಎ.12-ಕೆ-9605 ದ್ವಿಚಕ್ರ ವಾಹನ, ಒಂದು ಜೊತೆ ಚಿನ್ನದ ಓಲೆ, 50 ಸಾವಿರ ರೂ.ಮೌಲ್ಯದ 1 ಚಿನ್ನದ ಸರವನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಾಚರಣೆಯಲ್ಲಿ ಮಡಿಕೇರಿ ಉಪ ಅಧೀಕ್ಷಕ ಸುಂದರ್ ರಾಜ್, ಗ್ರಾಮಾಂ ತರ ಠಾಣಾ ವೃತ್ತ ನಿರೀಕ್ಷಕ ಸಿದ್ದಯ್ಯ, ಉಪನಿರೀ ಕ್ಷಕ ಚೇತನ್, ಪಿಎಸೈ ಶ್ರವಣ, ಅಲೆ ಕ್ಸಾಂಡರ್, ಸಿಬ್ಬಂದಿಗಳಾದ ದಿನೇಶ್, ಮಂಜು ನಾಥ್, ಕಾಳಿಯಪ್ಪ, ರವಿ ಕುಮಾರ್, ಪ್ರತಿಭಾ,ರಾಧ, ರಾಜೇಶ್, ಗಿರೀಶ್, ಸುನೀಲ್ ಮತ್ತು ಅರುಣ ಪಾಲ್ಗೊಂಡಿದ್ದರು.

Translate »