ಕೋರೋನರಿ ಸ್ಟೆಂಟ್ ಬೆಲೆ ಶೇ.4.2 ಏರಿಕೆ
ಮೈಸೂರು

ಕೋರೋನರಿ ಸ್ಟೆಂಟ್ ಬೆಲೆ ಶೇ.4.2 ಏರಿಕೆ

April 2, 2019

ನವದೆಹಲಿ: ಹೃದಯಕ್ಕೆ ಅಳ ವಡಿಸುವ ಕೋರೋನರಿ ಸ್ಟೆಂಟ್ ಬೆಲೆ ಇಂದಿನಿಂದ ಶೇ.4.2 ಏರಿಕೆಯಾಗಿದೆ. ಕಳೆದ ವರ್ಷದ ಸಗಟು ಬೆಲೆ ಸೂಚಿಗೆ ಅನುಗುಣವಾಗಿ ಶೇ.4.2ರಷ್ಟನ್ನು ಏರಿ ಸಲು ಡ್ರಗ್ ರೆಗ್ಯುಲೇಟರ್ ಅನುಮತಿ ನೀಡಿದೆ. ಬೇರೆ ಮೆಟಲ್ ಸ್ಟೆಂಟ್ (ಬಿಎಂಎಸ್)ನ ಬೆಲೆ ರೂ. 8,261 ಇದ್ದು, ಆದರೆ, ಡ್ರಗ್ ಎಲ್ಯೂಟಿಂಗ್ ಸ್ಟೆಂಟ್ (ಡಿಇಎಸ್) ಬೆಲೆಯನ್ನು ನ್ಯಾಷನಲ್ ಫಾರ್ಮಾಸ್ಯುಟಿಕಲ್ ಪ್ರೈಸಿಂಗ್ ಅಥಾರಿಟಿ (ಎನ್‍ಪಿಪಿಎ) ನೂತನ ದರ ಪಟ್ಟಿ ಪ್ರಕಾರ 30,080 ರೂ. ಗಳಿಗೆ ನಿಗದಿಪಡಿಸಿದೆ. ಡಿಇಎಸ್ ವರ್ಗವು ಮೆಟಾಲಿಕ್ ಡಿಇಎಸ್ ಮತ್ತು ಬಯೋಡೀಗ್ರೇಡಬಲ್ ಸ್ಟೆಂಟ್ಸ್ ಗಳನ್ನು ಒಳಗೊಂಡಿದೆ. ಕಳೆದ ವರ್ಷ ಫೆಬ್ರವರಿಯಲ್ಲಿ, ಬೆಲೆ ಪ್ರಾಧಿಕಾರವು ಸ್ವಲ್ಪ ಮಟ್ಟಿಗೆ ಅಂದರೆ ಬಿಎಂಎಸ್ ಸ್ಟೆಂಟ್ಸ್‍ನ ಬೆಲೆಯನ್ನು 7,260 ರಿಂದ 7,660 ರೂ. ಏರಿಸಿತ್ತು. ಆದರೆ, ಡ್ರಗ್ ಎಲ್ಯೂಟಿಂಗ್ ಅಂಡ್ ಬಯೋ ಡೀಗ್ರೇಡಬಲ್ ಸ್ಟೆಂಟ್ಸ್‍ನ ಬೆಲೆಯನ್ನು 29,600 ರಿಂದ 27,890 ರೂ.ಗಳಿಗೆ ಇಳಿಸಿತ್ತು. ಈ ಪರಿಷ್ಕರಣೆಯನ್ನು ಅಂದಿನ ಪರಿಷ್ಕರಣೆ ಅನಾಲಿಸಿಸ್ ಡೇಟಾ ಆಧಾರದ ಮೇಲೆ ಮಾಡಲಾಗಿತ್ತು. 2017ರಲ್ಲಿ, ಎನ್‍ಪಿಪಿಎ ಸ್ಟೆಂಟ್ಸ್‍ಗಳ ಮೇಲಿನ ಬೆಲೆಯನ್ನು ಸುಮಾರು ಶೇ.85ರಷ್ಟು ಕಡಿತ ಗೊಳಿಸಿ, ಅದನ್ನು ಪ್ರಥಮ ಬಾರಿಗೆ ಬೆಲೆ ಪ್ರಾಧಿಕಾರದ ಅಡಿಗೆ ತರಲಾಯಿತು. ಬೇರ್ ಮೆಟಲ್ ಸ್ಟೆಂಟ್ಸ್‍ಗಳನ್ನು 45,000 ರೂ.ಗಳಿಗೆ ಮಾರಲಾಗಿತ್ತು. ಫೆಬ್ರವರಿ 2017ರಲ್ಲಿ ಕ್ಯಾಪ್ ಹೇರುವ ಮೊದಲು ಎಲ್ಯೂ ಟಿಂಗ್ ಸ್ಟೆಂಟ್ಸ್‍ಗಳ ಬೆಲೆ 1.21 ಲಕ್ಷ ರೂ. ಗರಿಷ್ಠ ಮಟ್ಟವಾಗಿತ್ತು.

Translate »