Tag: Kodagu

ವೈಭವದ ಶಿರಂಗಾಲ ಶ್ರೀ ಉಮಾಮಹೇಶ್ವರ ರಥೋತ್ಸವ
ಕೊಡಗು

ವೈಭವದ ಶಿರಂಗಾಲ ಶ್ರೀ ಉಮಾಮಹೇಶ್ವರ ರಥೋತ್ಸವ

March 25, 2019

ಕುಶಾಲನಗರ: ಸಮೀಪದ ಶಿರಂಗಾಲ ಗ್ರಾಮದಲ್ಲಿ ಸೋಮವಾರ ಶ್ರೀ ಉಮಾಮಹೇಶ್ವರಸ್ವಾಮಿಯ ಮಹಾ ರಥೋತ್ಸವ ವೈಭವಯುತವಾಗಿ ನಡೆಯಿತು. ಶ್ರೀ ಉಮಾಮಹೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವದಲ್ಲಿ ನೂರಾರು ಭಕ್ತರು ಭಾಗಿಯಾಗಿ ತೇರನ್ನು ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು. ಪುಷ್ಪ ಹಾಗೂ ವಿವಿಧ ಧ್ವಜಗಳಿಂದ ಅಲಂಕೃತ ಗೊಂಡಿದ್ದ ತೇರಿನಲ್ಲಿ ಉಮಾಮಹೇಶ್ವರ ದೇವರ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಸೋಮವಾರಪೇಟೆ ಅರ್ಚಕರಾದ ದಿನೇಶ್, ಗಣೇಶ್ ಶಾಸ್ತ್ರಿ ಹಾಗೂ ದೇವಾ ಲಯದ ಅರ್ಚಕ ಎಸ್.ಎಸ್.ಸಿದ್ದಲಿಂಗಪ್ಪ ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಮಹಾಮಂಗ ಳಾರತಿ ಬಳಿಕ ಮಧ್ಯಾಹ್ನ 12.30 ಗಂಟೆಗೆ…

ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ
ಕೊಡಗು

ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಆನೆ ಶವ ಪತ್ತೆ

March 25, 2019

ಗೋಣಿಕೊಪ್ಪಲು: ಕೆರೆಯಲ್ಲಿ ಗಂಡು ಕಾಡಾನೆಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆನೆಗೆ 13 ವರ್ಷ ವಯಸ್ಸಾಗಿರಬಹುದು ಎಂದು ಅಂದಾಜಿಸಲಾಗಿದೆ. ಕಳತ್ಮಾಡು ಗ್ರಾಮದ ಉತ್ತಪ್ಪ ಎಂಬುವರಿಗೆ ಸೇರಿದ ಕೆರೆಯಲ್ಲಿ ಸೋಮವಾರ ಬೆಳಗ್ಗೆ ಸ್ಥಳೀಯರು ಅತ್ತ ತೆರಳುವಾಗ ಆನೆ ಶವ ಪತ್ತೆಯಾಗಿದೆ. ಸಾವನ್ನಪ್ಪಿ 3-4 ದಿನಗಳು ಕಳೆದಿರಬಹು ದೆಂದು ತಿಳಿದುಬಂದಿದೆ. ಕೊಳೆತು ವಾಸನೆ ಬೀರುತ್ತಿತ್ತು. ನೀರು ಕುಡಿಯಲು ಬಂದ ಸಂದರ್ಭ ಕೆಸರಿನಲ್ಲಿ ಸಿಲುಕಿ ಮೇಲೇಳಲಾ ಗದೆ ಸಾವನ್ನಪ್ಪಿರುವ ಶಂಕೆ ವ್ಯಕ್ತಗೊಂಡಿದೆ. ಸ್ಥಳಕ್ಕೆ ಎಸಿಎಫ್ ಶ್ರೀಪತಿ, ಆರ್‍ಎಫ್‍ಒ ಗೋಪಾಲ್ ಆಗಮಿಸಿ ಪರಿಶೀಲನೆ…

ಮಾ.31, ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ
ಕೊಡಗು

ಮಾ.31, ಜನರಲ್ ತಿಮ್ಮಯ್ಯ ಜನ್ಮ ದಿನಾಚರಣೆ

March 25, 2019

ಮಡಿಕೇರಿ: ಅಪ್ರತಿಮ ಸೇನಾನಿ ಜನರಲ್ ತಿಮ್ಮಯ್ಯ ಅವರ 112ನೇ ಜನ್ಮದಿನವನ್ನು ಮಾ.31ರಂದು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನರಲ್ ತಿಮ್ಮಯ್ಯ ಫೋರಂ, ಜಿಲ್ಲಾಡಳಿತದ ಸಹಭಾಗಿತ್ವದೊಂದಿಗೆ ಆಚರಿಸುತ್ತದೆ ಎಂದು ಫೋರಂನ ಪ್ರಮುಖರು ತಿಳಿಸಿದ್ದಾರೆ. ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ಸ್ ಅವರೊಂದಿಗೆ ಚರ್ಚಿಸಿದ ಫೋರಂನ ಪದಾಧಿಕಾರಿಗಳು, ಸರಕಾರಿ ಕಾರ್ಯಕ್ರಮವಾಗಿ ಜನರಲ್ ತಿಮ್ಮಯ್ಯ ಜನ್ಮದಿನವನ್ನು ಆಚರಿಸಬೇಕೆಂದು ಮನವಿ ಮಾಡಿದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಜನ್ಮದಿನವನ್ನು ಸರಕಾರೀ ಪ್ರಾಯೋಜಕತ್ವದಲ್ಲಿ ಆಚರಿಸಲಾಗುತ್ತಿದೆ. ಜನರಲ್ ತಿಮ್ಮಯ್ಯ ಅವರ ಜನ್ಮದಿನವನ್ನು ಕೂಡ ಸರಕಾರದ ವತಿಯಿಂದ ಆಚರಿಸಬೇಕೆಂದು…

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಕೊಡಗು  ವಲಯ ಮಹಿಳೆಯರ ಗ್ರಾಮೀಣ ಕ್ರೀಡಾಕೂಟ
ಕೊಡಗು

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಕೊಡಗು ವಲಯ ಮಹಿಳೆಯರ ಗ್ರಾಮೀಣ ಕ್ರೀಡಾಕೂಟ

March 25, 2019

ವಿರಾಜಪೇಟೆ: ವಿರಾಜ ಪೇಟೆಯ ಕಾವೇರಿ ಪದವಿ ಕಾಲೇಜಿನಲ್ಲಿ ಕೊಡಗು ವಲಯ ಮಟ್ಟದ ಮಹಿಳೆಯರ ಅಂತರ ಕಾಲೇಜು ಗ್ರಾಮೀಣ ಕ್ರೀಡಾ ಕೂಟವನ್ನು ಅಯೋಜಿಸಲಾಗಿತ್ತು. ಈ ಕ್ರೀಡಾಕೂಟದಲ್ಲಿ ವಾಲಿಬಾಲ್‍ನಲ್ಲಿ ವಿರಾಜಪೇಟೆ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ ಹಾಗು ವಿರಾಜ ಪೇಟೆಯ ಪ್ರಥಮ ದರ್ಜೆ ಕಾಲೇಜು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಹಾಕಿ ಕ್ರೀಡೆಯಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜು ತಂಡ ಪ್ರಥಮ ಹಾಗು ವಿರಾಜ ಪೇಟೆಯ ಕಾವೇರಿ ಕಾಲೇಜು ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಥ್ರೋ ಬಾಲ್ ಕ್ರೀಡೆಯಲ್ಲಿ ಗೋಣಿ ಕೊಪ್ಪದ…

ಕೊಡಗಿನಲ್ಲಿ ನಳನಳಿಸುತ್ತಿವೆ ಫಸಲು ಭರಿತ ಖರ್ಜೂರ ಮರಗಳು..!
ಕೊಡಗು

ಕೊಡಗಿನಲ್ಲಿ ನಳನಳಿಸುತ್ತಿವೆ ಫಸಲು ಭರಿತ ಖರ್ಜೂರ ಮರಗಳು..!

March 25, 2019

ಮಡಿಕೇರಿ: ಕೊಡಗು ಜಿಲ್ಲೆ ಎಂದರೆ ನೆನಪಿಗೆ ಬರೋದು ದೇಶ ಕಾಯುವ ಸೈನಿಕರು. ಅದರೊಂದಿಗೆ ಉತ್ತಮ ಗುಣ ಮಟ್ಟದ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಸ್ವಾದಿಷ್ಟ ಗುಣವುಳ್ಳ ಕಿತ್ತಳೆಗೂ ಕೊಡಗು ಹೆಸರುವಾಸಿ. ಹಸಿರ ಪ್ರಕೃತಿ, ನಿಸರ್ಗ ರಮಣೀಯ ತಾಣ ದೊಂದಿಗೆ ವಿಶ್ವ ಪ್ರವಾಸೋದ್ಯಮದ ಭೂಪಟ ದಲ್ಲೂ ಪುಟ್ಟ ಕೊಡಗು ತನ್ನನ್ನು ಗುರುತಿಸಿ ಕೊಂಡಿದೆ. ನಿತ್ಯ ಹರಿದ್ವರ್ಣ ಕಾಡುಗಳಿಂದ ಆವೃತವಾಗಿರುವ ಈ ಜಿಲ್ಲೆಯಲ್ಲಿ, ಬಹುತೇಕ ಕಾಲ ತಂಪು ಹವಾಮಾನ ಕಂಡು ಬರುತ್ತದೆ. ಜಿಲ್ಲೆಯ ಹವಾಗುಣಕ್ಕೆ ಅನುಗುಣವಾಗಿ ವಿವಿಧ ತಳಿಯ ಹಣ್ಣುಗಳನ್ನು…

ಸದ್ಭಾವನೆಗಳಿಂದ ಜೀವನ ಸಾರ್ಥಕ
ಕೊಡಗು

ಸದ್ಭಾವನೆಗಳಿಂದ ಜೀವನ ಸಾರ್ಥಕ

March 25, 2019

ನಾಪೆÇೀಕ್ಲು: ಮಾನಸಿಕ ಸಾಮಥ್ರ್ಯವನ್ನು ಸಮಾಜದ ಒಳಿತಿಗೆ ಸದುಪಯೋಗಪಡಿಸಿ ಕೊಡು ಸಮಾಜದಲ್ಲಿ ಸದ್ಭಾವನೆಗಳನ್ನು ಬೆಳೆಸಿಕೊಂಡಾಗ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ‘ಶಕ್ತಿ’ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅಭಿಪ್ರಾಯಪಟ್ಟರು. ಸಮೀಪದ ಕೊಟ್ಟಮುಡಿ ಮರ್ಕಝುಲ್ ಹಿದಾಯ ವಿದ್ಯಾಸಂಸ್ಥೆಯ ವತಿಯಿಂದ ಆಯೋಜಿಸ ಲಾಗಿದ್ದ ಎನಲೈಜ್ó ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮನುಷ್ಯನಿಗೆ ಆತ್ಮ ವಿಶ್ವಾಸ ಅಗತ್ಯ. ಮೊದಲು ನಮ್ಮ ಮೇಲೆ ನಮಗೆ ವಿಶ್ವಾಸವಿರಬೇಕು. ವಿಶ್ವಾಸ ಮತ್ತು ದೃಢತೆಯಿಂದ ಏನನ್ನು ಬೇಕಾದರೂ ಸಾಧಿಸಬಹುದು. ಶಿಕ್ಷಣಕ್ಕೆ ಶಿಸ್ತು ಮುಖ್ಯ. ಕೆಲವು ಚಿಂತನೆಗಳನ್ನು ಮಾಡುವುದರ ಮೂಲಕ…

ಮತದಾನ ಜಾಗೃತಿ; ಮೇಣದ ಬತ್ತಿ ಮೆರವಣಿಗೆ
ಕೊಡಗು

ಮತದಾನ ಜಾಗೃತಿ; ಮೇಣದ ಬತ್ತಿ ಮೆರವಣಿಗೆ

March 25, 2019

ಮಡಿಕೇರಿ: ಮತದಾನದ ಮಹತ್ವ ಕುರಿತು ಹಿರಿಯ ನಾಗರಿಕರು ಹಾಗೂ ವಿಕಲ ಚೇತನರಿಂದ ಮೇಣದ ಬತ್ತಿ ಮೆರವಣಿಗೆ ಜಾಗೃತಿ ಅಭಿಯಾನವು ನಡೆಯಿತು. ನಗರದ ಬಾಲಭವನದಿಂದ ಹೊರಟ ಮೆರ ವಣಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ವೃತ್ತದ ಮೂಲಕ, ಕಾಲೇಜು ರಸ್ತೆ, ಭಾರತೀಯ ಸ್ಟೇಟ್ ಬ್ಯಾಂಕ್ ಮೂಲಕ ಬಾಲಭವನ ತಲುಪಿತು. ಮತದಾನದ ಕುರಿತು ಜಾಗೃತಿ ಮೆರವಣಿಗೆ ಯಲ್ಲಿ ಹಿರಿಯ ನಾಗರಿಕರು ಉತ್ಸ್ಸಾಹದಿಂದ ಪಾಲ್ಗೊಂ ಡಿದ್ದರು. ಮತದಾನ ಮಾಡಿ ಪ್ರಜಾಪ್ರಭುತ್ವ ಬಲ ಪಡಿಸಿ, ಮತದಾನ ಮಾಡಿದವರೇ ಶೂರರು, ನಿಮ್ಮ ಮತ ನಿಮ್ಮ…

ಮಳೆಗಾಗಿ ಇಗ್ಗುತಪ್ಪನ ಮೊರೆ ಹೋದ ತಿತಿಮತಿ ಗ್ರಾಮಸ್ಥರು
ಕೊಡಗು

ಮಳೆಗಾಗಿ ಇಗ್ಗುತಪ್ಪನ ಮೊರೆ ಹೋದ ತಿತಿಮತಿ ಗ್ರಾಮಸ್ಥರು

March 25, 2019

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ತಿತಿಮತಿ ಸುತ್ತಮುತ್ತ ಭಾಗಕ್ಕೆ ಮಳೆ ಕರುಣಿಸುವಂತೆ ತಿತಿಮತಿ ಭಾಗದ ಜನತೆ ಪಾಡಿ ಇಗ್ಗುತ್ತಪ್ಪ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಗ್ರಾಮದಿಂದ ಇಗ್ಗುತ್ತಪ್ಪನ ಕ್ಷೇತ್ರಕ್ಕೆ ತೆರಳಿದ ಗ್ರಾಮದ ಭಕ್ತರು ಮಳೆ ಇಲ್ಲದೆ ಜನತೆ ಪರಿ ತಪಿಸುವಂತಾಗಿದೆ. ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ಹಾಹಾಕಾರ ಎದುರಾಗುವ ಕಾರಣ ಮಳೆಗಾಗಿ ಪೂಜೆ ಸಲ್ಲಿಸಿದರು. ಗ್ರಾಮಸ್ಥರುಗಳಾದ ಚೆಪ್ಪುಡೀರ ಕಾರ್ಯಪ್ಪ, ಮೋಹನ್, ಕಿಸು, ಮದನ್ ಸೇರಿದಂತೆ ಇತರರು ಪ್ರಾರ್ಥನೆ ಸಲ್ಲಿಸಿದರು.

ಕೋವಿ ಕಳವು ಆರೋಪಿಗಳ ಬಂಧನ
ಕೊಡಗು

ಕೋವಿ ಕಳವು ಆರೋಪಿಗಳ ಬಂಧನ

March 25, 2019

ಮಡಿಕೇರಿ: ಮಡಿಕೇರಿಯಲ್ಲಿ ಮನೆ ಬೀಗ ಮುರಿದು ಕೋವಿ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿರಾಜಪೇಟೆ ತಾಲೂಕು ರುದ್ರಬೀಡು ಗ್ರಾಮದ ಸುಳ್ಳಿಮಾಡ ದೀಪು ಕುಮಾರ್, ಹೆಗ್ಗಳ ಗ್ರಾಮದ ಅಚ್ಚಪಂಡ ಮೊಣ್ಣಪ್ಪ ಅಲಿಯಾಸ್ ದೀಪು, ಟಿ.ಎಂ.ಸುಬೀರ್ ಹಾಗೂ ಮಡಿಕೇರಿ ತಾಲೂಕು ತಾಳತ್ತಮನೆಯ ಕಂಬೆಯಂಡ ಪೊನ್ನಪ್ಪ ಅಲಿಯಾಸ್ ಹರೀಶ ಬಂಧಿತ ಆರೋಪಿಗಳು. ಆರೋಪಿಗಳು ಕಳೆದ ಮಾ.8ರಂದು ಮಡಿಕೇರಿಯ ಉತ್ತಯ್ಯ ಎಂಬುವರ ಮನೆಯ ಬಾಗಿಲು ಮುರಿದು ಎರಡು ಕೋವಿಗಳನ್ನು ಕಳವು ಮಾಡಿದ್ದರು. ಈ ಬಗ್ಗೆ ಮಡಿಕೇರಿ ನಗರ…

ನೇಣು ಹಾಕಿದ ಸ್ಥಿತಿಯಲ್ಲಿ ಜೆ.ಕೆ.ಟೈರ್ಸ್ ಕಾರ್ಮಿಕನ ಶವ ಪತ್ತೆ: ಕೊಲೆ ಶಂಕೆ
ಮಂಡ್ಯ

ನೇಣು ಹಾಕಿದ ಸ್ಥಿತಿಯಲ್ಲಿ ಜೆ.ಕೆ.ಟೈರ್ಸ್ ಕಾರ್ಮಿಕನ ಶವ ಪತ್ತೆ: ಕೊಲೆ ಶಂಕೆ

March 23, 2019

ಶ್ರೀರಂಗಪಟ್ಟಣ: ಮೈಸೂರಿನ ಜೆ.ಕೆ.ಟೈರ್ಸ್ ಕಾರ್ಮಿಕನ ಮೃತದೇಹ ನೇಣು ಹಾಕಿದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ತಾಲೂಕಿನ ಎಂ.ಶೆಟ್ಟಿಹಳ್ಳಿ ಗ್ರಾಮದ ಕೆಂಪೇಗೌಡ ಎಂಬುವರ ಪುತ್ರ ಜೆ.ಕೆ.ಟೈರ್ಸ್ ಕಾರ್ಮಿಕ ಸುರೇಶ್(38) ಮೃತಪಟ್ಟವನಾಗಿದ್ದು, ಈತ ಗುರುವಾರ ಬೆಳಿಗ್ಗೆ ಕೆಲಸಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದ. ಆದರೆ ಇಂದು ಬೆಳಿಗ್ಗೆ ಗ್ರಾಮದಲ್ಲಿರುವ ಅವರ ಜಮೀನಿನ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮೃತನ ಕಾಲುಗಳು ನೆಲಕ್ಕೆ ತಾಗುತ್ತಿದ್ದು, ಆತನನ್ನು ಯಾರೋ ದುಷ್ಕರ್ಮಿಗಳು ಹತ್ಯೆ ಮಾಡಿ ನೇಣು ಹಾಕಿರಬಹು…

1 18 19 20 21 22 84
Translate »